• Home
  • »
  • News
  • »
  • state
  • »
  • Kolara: ಮದ್ವೆಗೆ ಹೆಣ್ಣು ಸಿಗ್ತಿಲ್ಲ, ಬೇರೆ ಜಿಲ್ಲೆಗಳಿಗೆ ಹೆಣ್ಣು ಕೊಡೋದು ಬ್ಯಾನ್ ಮಾಡಿ! ಎಚ್‌ಡಿಕೆಗೆ ನೊಂದ ಯುವಕನ ಪತ್ರ

Kolara: ಮದ್ವೆಗೆ ಹೆಣ್ಣು ಸಿಗ್ತಿಲ್ಲ, ಬೇರೆ ಜಿಲ್ಲೆಗಳಿಗೆ ಹೆಣ್ಣು ಕೊಡೋದು ಬ್ಯಾನ್ ಮಾಡಿ! ಎಚ್‌ಡಿಕೆಗೆ ನೊಂದ ಯುವಕನ ಪತ್ರ

ಕುಮಾರಸ್ವಾಮಿಗೆ ಪತ್ರ

ಕುಮಾರಸ್ವಾಮಿಗೆ ಪತ್ರ

ನೀವು ಮುಖ್ಯಮಂತ್ರಿ ಆದ ಕೂಡಲೇ ನಮ್ಮ ಜಿಲ್ಲೆಯ ವಧುಗಳು ಬೇರೆ ಜಿಲ್ಲೆಯ ವರಗಳನ್ನು ಮದುವೆಯಾಗುವುದನ್ನು ನಿಷೇಧಿಸಿ ನಿಯಮ ಜಾರಿಗೆ ತರಬೇಕು ಎಂದು ಕುಮಾರಸ್ವಾಮಿಗೆ ಯುವಕ ಪತ್ರ ಬರೆದಿದ್ದಾನೆ.

  • News18 Kannada
  • Last Updated :
  • Karnataka, India
  • Share this:

ಕೋಲಾರ (ನ.21): ರಾಜಕೀಯ ನಾಯಕರ (Political Leaders) ಬಳಿ ಅನೇಕರು ತಮ್ಮ ಕೌಟುಂಬಿಕ ಸಮಸ್ಯೆ (Family Problem), ಊರಿನ ಸಮಸ್ಯೆಗಳನ್ನು ಹೇಳಿ ಪರಿಹಾರ (Solution) ಕೇಳ್ತಾರೆ. ಆದ್ರೆ ಇಲ್ಲೊಬ್ಬ ಯುವಕ ಮಾಜಿ ಮುಖ್ಯಮಂತ್ರಿ ಎಚ್.​ಡಿ ಕುಮಾರಸ್ವಾಮಿ (Kumaraswamy) ಅವರ ಮುಂದೆ ವಿಚಿತ್ರ ಮನವಿ ಮಾಡಿಕೊಂಡಿದ್ದಾನೆ. ಮದುವೆಯಾಗಲು ಹುಡುಗಿ ಸಿಗ್ತಿಲ್ಲ ವಧುವಿನ ಕೊರತೆ ನೀಗಿಸುವಂತೆ ಪತ್ರದ ಮೂಲಕ ಕೇಳಿಕೊಂಡಿದ್ದಾನೆ. 


ಯುವಕರಿಗೆ ಮದುವೆಗೆ ವಧುಗಳ ಕೊರತೆ


ಕುಮಾರಸ್ವಾಮಿ ಅವರ ಬಳಿ ಜನರು ಕೆಲಸ ಕೊಡಿಸಿ, ಚಿಕಿತ್ಸೆ ಕೊಡಿಸಿ ಇಲ್ಲ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಅಂತ ಕೇಳಿಕೊಂಡು ಅವರ ಮನೆ ಬಾಗಿಲಿಗೆ ಹೋಗ್ತಾರೆ. ಆದ್ರೆ ಕೋಲಾರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ವೇಳೆ ಕುಮಾರಸ್ವಾಮಿ ಗ್ರಾಮಸ್ಥರು ಮತ್ತು ರೈತರ ಕಷ್ಟಗಳನ್ನು ಆಲಿಸುವ ಸಂದರ್ಭದಲ್ಲಿ ಮುದುವತ್ತಿ ಗ್ರಾಮದ ಯುವಕ ಧನಂಜಯ ಎನ್ನುವ ಯುವಕ, ಒಕ್ಕಲಿಗ ರೈತ ಯುವಕರಿಗೆ ಮದುವೆಗೆ ವಧುಗಳ ಕೊರತೆ ಬಗ್ಗೆ ಮಾತಾಡಿದ್ದಾನೆ.




ರೈತ ಯುವಕರಿಗೆ ಸಿಗ್ತಿಲ್ಲ ಹುಡುಗಿ


ಒಕ್ಕಲಿಗ ರೈತ ಯುವಕರಿಗೆ ಮದುವೆ ವಯಸ್ಸು ಮೀರುತ್ತಿದ್ದರೂ ವಧು ದೊರೆಯುತ್ತಿಲ್ಲ ಈ ಹಿನ್ನೆಲೆಯಲ್ಲಿ ಒಕ್ಕಲಿಗ ಯುವಕರಿಗೆ ವಧುಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳುವಂತೆ ಪತ್ರದ ಮೂಲಕ ಕುಮಾರಸ್ವಾಮಿಗೆ ಮನವಿ ಮಾಡಿದ್ದಾನೆ.


ವಧುಗಳು ಬೇರೆ ಜಿಲ್ಲೆ ವರನನ್ನು ಮದುವೆಯಾಗುವುದನ್ನು ನಿಷೇಧಿಸಿ


ಕೋಲಾರದಲ್ಲಿ ಒಕ್ಕಲಿಗ ರೈತ ಯುವಕರಿಗೆ ವಧುಗಳ ಕೊರತೆ ಎದುರಾಗಿದೆ. ನೀವು ಮುಖ್ಯಮಂತ್ರಿ ಆದ ಕೂಡಲೇ ನಮ್ಮ ಜಿಲ್ಲೆಯ ವಧುಗಳು ಬೇರೆ ಜಿಲ್ಲೆಯ ವರಗಳನ್ನು ಮದುವೆಯಾಗುವುದನ್ನು ನಿಷೇಧಿಸಿ ನಿಯಮ ಜಾರಿಗೆ ತರಬೇಕು. ನಮಗೆ ನೀವೇ ವಧುಗಳನ್ನು ಹುಡುಕಿಕೊಡಬೇಕು ಎಂದು ಕುಮಾರಸ್ವಾಮಿಗೆ ಧನಂಜಯ ಅವಲತ್ತುಕೊಂಡಿದ್ದಾನೆ.


ಕುಮಾರಸ್ವಾಮಿಗೆ ಪತ್ರ


ಕುಮಾರಸ್ವಾಮಿ ಸಿಎಂ ಆಗುವುದು ಖಚಿತವಾಗಿದ್ದು, ಜೆಡಿಎಸ್ ಸರ್ಕಾರದಲ್ಲಿ ನಿಯಮ ಜಾರಿಗೆ ತರಲು ಕ್ರಮ ಕೈಗೊಳ್ಳುವಂತೆ ಧನಂಜಯ ಮನವಿ ಮಾಡಿದ್ದಾರೆ. ಮದುವೆ ವಯಸ್ಸು ಮೀರುತ್ತಿದ್ದರೂ ವಧು ದೊರೆಯದಿರುವ ಜಟಿಲ ಸಮಸ್ಯೆಯಾಗಿದೆ. ವಿಚಿತ್ರ ಆದರೂ ಸಾಮಾಜಿಕ ಸಮಸ್ಯೆ ಬಗ್ಗೆ ಧನಂಜಯ ಪತ್ರ ಮೂಲಕ ಎಲ್ಲರ ಗಮನಕ್ಕೆ ತಂದಿದ್ದಾರೆ.


200 ಹುಡುಗಿಯರಿಗೆ 10 ಸಾವಿರ ಯುವಕರು

ಇತ್ತೀಚಿಗಷ್ಟೇ ರಾಜ್ಯ ಮಟ್ಟದ ಒಕ್ಕಲಿಗರ ವಧು-ವರರ ಸಮಾವೇಶದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಸಾವಿರಾರು ಒಕ್ಕಲಿಗ ಹುಡುಗರು ಇಲ್ಲಿ ವಧುವಿಗಾಗಿ ಮುಗಿಬಿದ್ದಿದ್ದರು. ರಾಜ್ಯ ಮಟ್ಟದ ಸಮಾವೇಶಕ್ಕೆ 200 ಒಕ್ಕಲಿಗ ಹುಡುಗಿಯರು ಬಂದಿದ್ದರೆ, 10 ಸಾವಿರಕ್ಕೂ ಅಧಿಕ ಗಂಡು ಮಕ್ಕಳು ಬಾಳ ಸಂಗಾತಿಯನ್ನು ಅರಸಿ ಬಂದಿದ್ದರು.




ನಾಗಮಂಗಲ ತಾಲೂಕಿನ ಚುಂಚನಗಿಯಲ್ಲಿ ಇಂತಹ ದೃಶ್ಯ ಹಾಗೂ ಹುಡುಗರ ಅರ್ಜಿ ಸಂಖ್ಯೆ ನೋಡಿ ಸಮಾವೇಶ ಆಯೋಜಿಸಿದ್ದ ಸುಸ್ತಾಗಿದ್ದಾರೆ. ಹುಡುಗಿಯರಿಗಾಗಿ ಸಮಾವೇಶದಲ್ಲಿ ಸಾವಿರಾರು ಹುಡುಗರು ತಮ್ಮ ಹೆತ್ತವರೊಂದಿಗೆ ಕ್ಯೂ ನಿಂತಿದ್ದರು. ಮತ್ತೊಂದೆಡೆ ಈ ಹೆಚ್ಚಿನ ಜಮಸ್ತೋಮದಿಂದಾಗಿ ಚುಂಚನಗಿರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ವಾಹನ ಸವಾರರು ಪರದಾಡಿದ್ದಾರೆ.


ಇದನ್ನೂ ಓದಿ: Assembly Election: ಕಾಂಗ್ರೆಸ್​ ಟಿಕೆಟ್​ಗಾಗಿ ಸಿದ್ದರಾಮಯ್ಯ ಅರ್ಜಿ; ಕ್ಷೇತ್ರದ ಹೆಸರು ಖಾಲಿ ಖಾಲಿ!


ರೈತ ಯುವಕರನ್ನು ಮದುವೆಯಾಗಲು ಯುವತಿಯರ ಹಿಂದೇಟು


ಇನ್ನು ಸಮಾವೇಶಕ್ಕೆ ಆಗಮಿಸಿದ್ದ ಬಹುತೇಕ ಒಕ್ಕಲಿಗ ಗಂಡು ಮಕ್ಕಳು ರೈತರು ಅಥವಾ ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡವರು. ರೈತರೇ ನಾಡಿನ ಜೀವನಾಡಿ ಎನ್ನುವ ಈ ದಿನಗಳಲ್ಲಿ ರೈತರೊಂದಿಗೆ ಮದುವೆಯಾಗಲು ಹೆಣ್ಮಕ್ಕಳು ಹಿಂದೇಟು ಹಾಕುತ್ತಿದ್ದಾರೆ. ಏನೇ ಆದರೂ ಇಂಜಿನಿಯರ್, ಡಾಕ್ಟರ್​ ವೃತ್ತಿ ಆರಿಸಿಕೊಂಡಿರುವ ಹುಡುಗರೇ ಇಂದು ಬಹುತೇಕ ಹೆಣ್ಮಕ್ಕಳ ಪ್ರಥಮ ಆದ್ಯತೆಯಾಗಿದೆ ಎಂಬುವುದು ಕಹಿ ಸತ್ಯ.


Published by:ಪಾವನ ಎಚ್ ಎಸ್
First published: