HOME » NEWS » State » KOLAR YARAGOL DAM WILL BE COMPLETED IN FEW DAYS AFTER 13 YEARS LG

13 ವರ್ಷಗಳ ಬಳಿಕ ಯರಗೋಳ್ ಡ್ಯಾಂ ಕಾಮಗಾರಿ ಬಹುತೇಕ ಪೂರ್ಣ; ಜನವರಿಯಲ್ಲಿ ಲೋಕಾರ್ಪಣೆಗೆ ಸಿದ್ದತೆ

2008 ರಲ್ಲಿ ಆರಂಭವಾಗಿದ್ದ ಕಾಮಗಾರಿ ತಡವಾಗಿದ್ದಕ್ಕೆ, ಗುತ್ತಿಗೆ ಪಡೆದಿರುವ ಹೈದರಾಬಾದ್ ಮೂಲದ ಇಂಜಿನಿಯರಿಗ್ ಪ್ರಾಜೆಕ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 1 ಕೋಟಿ 53 ಲಕ್ಷ ದಂಡ ವಿಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

news18-kannada
Updated:August 20, 2020, 9:23 AM IST
13 ವರ್ಷಗಳ ಬಳಿಕ ಯರಗೋಳ್ ಡ್ಯಾಂ ಕಾಮಗಾರಿ ಬಹುತೇಕ ಪೂರ್ಣ; ಜನವರಿಯಲ್ಲಿ ಲೋಕಾರ್ಪಣೆಗೆ ಸಿದ್ದತೆ
ನಿರ್ಮಾಣ ಹಂತದಲ್ಲಿರುವ ಯರಗೋಳ್ ಡ್ಯಾಂ
  • Share this:
ಕೋಲಾರ(ಆ.20): 2007ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಚ್‍.ಡಿ. ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಅನುಮೋದನೆಗೊಂಡಿದ್ದ, ಕೋಲಾರ ಜಿಲ್ಲೆಯ ಬಹುನಿರೀಕ್ಷಿತ ಯರಗೋಳ್ ಕುಡಿಯುವ ನೀರಿನ ಕಾಮಗಾರಿ, 2021 ರ ಜನವರಿ ತಿಂಗಳಲ್ಲಿ ಮುಗಿಯುವ ವಿಶ್ವಾಸ ವ್ಯಕ್ತವಾಗಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ ಗ್ರಾಮದ ಹೊರಭಾಗದಲ್ಲಿ ತಮಿಳುನಾಡಿಗೆ ವ್ಯರ್ಥವಾಗಿ ಹರಿದುಹೋಗುತ್ತಿದ್ದ ಮಳೆ‌ ನೀರನ್ನ ತಡೆದು, ಕೋಲಾರ, ಮಾಲೂರು, ಬಂಗಾರಪೇಟೆ ನಗರಗಳು ಮತ್ತು ಸುತ್ತಮುತ್ತ 45 ಹಳ್ಳಿಗಳಿಗೆ ಕುಡಿಯುವ ನೀರನ್ನು ಪೂರೈಸುವ ಉದ್ದೇಶವನ್ನ ಈ ಯೋಜನೆ ಹೊಂದಿದೆ. 2008 ರಲ್ಲಿ ಆರಂಭವಾಗಿದ್ದ ಯೋಜನೆ ಕುಂಟುತ್ತಾ ಸಾಗಿ, ಬರೋಬ್ಬರಿ 13 ವರ್ಷಗಳ ನಂತರ ಅಂತಿಮ ಹಂತದ ಸನಿಹಕ್ಕೆ ಬಂದಿದೆ.

ಯರಗೋಳ್ ಅಣೆಕಟ್ಟು ಕುರಿತ ಮಾಹಿತಿ

2006 ರಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದ ಯರಗೋಳ್ ಕಾಮಗಾರಿಯ ಜವಾಬ್ದಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕೋಲಾರ ವಿಭಾಗ ಹೊಂದಿದೆ.  ಕಾಮಗಾರಿಗೆ 2008 ರಲ್ಲಿ ಅಂದಾಜು 160 ಕೋಟಿ ಎಂದು ಅಂದಾಜಿಸಲಾಗಿತ್ತು, ಆದರೆ ಪರಿಷ್ಕೃತ ಅಂದಾಜು ಮೊತ್ತ 240 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಮಾಡಲಾಗುತ್ತಿದೆ. 100 ಅಡಿಗಿಂತ ಹೆಚ್ಚು ಎತ್ತರದ ಡ್ಯಾಂ ನಿರ್ಮಾಣಕ್ಕಾಗಿ 160 ಕೋಟಿ ರೂಪಾಯಿ ವೆಚ್ಚ ಎಂದು ಅಂದಾಜಿಸಲಾಗಿದೆ.

ಇನ್ನು ಯೋಜನೆಗೆ ಸಂಬಂದಿಸಿದಂತೆ ಕೋಲಾರ, ಬಂಗಾರಪೇಟೆ, ಮಾಲೂರು ಪಟ್ಟಣಗಳಲ್ಲಿ ಕೈಗೊಂಡ ಹಲವು ಕಾಮಗಾರಿಗೆ ಮೊದಲು 79 ಕೋಟಿ ವೆಚ್ಚವೆಂದು ಅಂದಾಜಿಸಲಾಗಿತ್ತು, ಆದರೆ ಈಗ 128 ಕೋಟಿ ವೆಚ್ಚದಲ್ಲಿ ಕಾಮಗಾರಿ ಬರದಿಂದ ಸಾಗುತ್ತಿದೆ.  ನೀರು ಪೂರೈಸಲು ಜಲಸಂಗ್ರಹಗಾರಗಳನ್ನು ನಿರ್ಮಿಸುತ್ತಿದ್ದು ಕೆಲವೊಂದು ಪೂರ್ಣಗೊಂಡಿವೆ. ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ.

ಇನ್ನು ಅಣೆಕಟ್ಟು ನಿರ್ಮಾಣ ಕಾಮಗಾರಿಯು ಶೇ 95 ರಷ್ಟು ಪೂರ್ಣಗೊಂಡಿದ್ದು, 813 ಎಂಎಂ ವ್ಯಾಸದ ಏರು ಕೊಳವೆ ಮಾರ್ಗ 9.15 ಕಿಮೀ ನಲ್ಲಿ ಶೇ 95 ರಷ್ಟು ಕಾಮಗಾರಿ ಪೂರ್ಣಗೊಂಡು ಉಳಿದ ಕಾಮಗಾರಿ ಪ್ರಗತಿಯಲ್ಲಿದೆ. ಜಾಕ್ ವೆಲ್ ನಿರ್ಮಾಣ ಕಾಮಗಾರಿ ಶೇ 85 ರಷ್ಟು ಪೂರ್ಣಗೊಂಡಿದೆ, ಯಾರಗೋಳ್ ಡ್ಯಾಂ 500 ಎಂ.ಸಿ.ಎಪ್.ಟಿ ಸಾಮರ್ಥ್ಯವನ್ನು ಹೊಂದಿದ್ದು, ಡ್ಯಾಂ ತುಂಬಿದರೆ ಸುತ್ತಮುತ್ತಲ 375 ಎಕರೆಯಷ್ಟು ಭೂಮಿ ಮುಳುಗಡೆಯಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

2008 ರಲ್ಲಿ ಆರಂಭವಾಗಿದ್ದ ಕಾಮಗಾರಿ ತಡವಾಗಿದ್ದಕ್ಕೆ, ಗುತ್ತಿಗೆ ಪಡೆದಿರುವ ಹೈದರಾಬಾದ್ ಮೂಲದ ಇಂಜಿನಿಯರಿಗ್ ಪ್ರಾಜೆಕ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗೆ 1 ಕೋಟಿ 53 ಲಕ್ಷ ದಂಡ ವಿಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ತುಮಕೂರು: ದ್ವೇಷದ ದಳ್ಳುರಿಗೆ ಫಸಲು ಬಿಡಬೇಕಿದ್ದ ಅಡಿಕೆ-ತೆಂಗಿನ ಸಸಿಗಳೇ ನಾಶಜನವರಿ ತಿಂಗಳಾಂತ್ಯಕ್ಕೆ ಕಾಮಗಾರಿ ಪೂರ್ಣ; ಶ್ರೀನಿವಾಸಗೌಡ

ಡ್ಯಾಂ ಕಾಮಗಾರಿ ಬಹುತೇಕ ಪೂರ್ಣ ಹಿನ್ನಲೆ ಸ್ತಳಕ್ಕೆ ಕೋಲಾರ ಶಾಸಕ ಶ್ರೀನಿವಾಸಗೌಡ, ನಗರಸಭೆ ಅಧಿಕಾರಿಗಳು, ನಗರಸಭೆ ಸದಸ್ಯರು ಭೇಟಿ ನೀಡಿ ಕಾಮಗಾರಿಯನ್ನ ಪರಿಶೀಲನೆ ನಡೆಸಿದರು, ಯೋಜನೆಯಿಂದ ನೀರನ್ನ ಶುದ್ದೀಕರಿಸಿ ಪೂರೈಸುತ್ತಿದ್ದು, ಹೆಚ್ಚು ಜನಸಂಖ್ಯೆ ಹೊಂದಿರುವ ಕೋಲಾರ, ಮಾಲೂರು, ಬಂಗಾರಪೇಟೆ ನಗರದ ನಿವಾಸಿಗಳು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ.

ಇನ್ನು ಯೋಜನೆ ನಡೆಯುತ್ತಿರುವ ಸ್ಥಳದ ಹಿಂಭಾಗದಲ್ಲೆ ಮಾರ್ಕಂಡೇಯ ಜಲಾಶಯವಿದ್ದು, ಜಲಾಶಯ ತುಂಬಿದ ನಂತರ ನೀರು ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿತ್ತು.  ಇದರಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲೂ ಅಂತರ್ಜಲ ವೃದ್ದಿಯಾಗದೆ, ನೀರಾವರಿ ಸಮಸ್ಯೆ ಎದುರಾಗಿತ್ತು. ಇದೀಗ ಡ್ಯಾಂಗೆ ನೀರು ಹರಿದು ಬಂದಲ್ಲಿ ಭರ್ತಿಯಾದರೆ, ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಜೊತೆಗೆ, ಅಂತರ್ಜಲ ಮಟ್ಟವು ಏರಿಕೆಯಾಗಿ ರೈತರಿಗೆ ಅನುಕೂಲವಾಗಲಿದೆ.
Youtube Video

ಒಟ್ಟಿನಲ್ಲಿ ಕಳೆದ 13 ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಯರಗೋಳ್ ಡ್ಯಾಂ ಕಾಮಗಾರಿ ಇನ್ನೇನು ಮುಗಿಯುತ್ತಾ ಬಂದಿದ್ದು, ಮಳೆಬಂದು ನೀರು ಸಂಗ್ರಹಣೆಯಾಗದರೆ, ನೀರಿನ ಬವಣೆ ನೀಗುವುದರ ಜೊತೆಗೆ, ಇದೊಂದು  ಪ್ರವಾಸಿ ತಾಣವಾಗಿ ರೂಪುಗೊಳ್ಳುವುದರಲ್ಲಿ ಎರಡು ಮಾತಿಲ್ಲ, ಇನ್ನು ಎಲ್ಲವು ಅಂದುಕೊಂಡಂತಾದರೆ ಜನವರಿ ತಿಂಗಳಾಂತ್ಯಕ್ಕೆ ಸಿಎಂ ಯಡಿಯೂರಪ್ಪ ಅಣೆಕಟ್ಟು ಲೋಕಾರ್ಪಣೆ ಮಾಡುವರು ಎಂಬ ಮಾಹಿತಿಯಿದೆ.
Published by: Latha CG
First published: August 20, 2020, 8:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories