ಕೋಲಾರ(ಜ.02): ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದೆ. ಇದಕ್ಕೆ ತಕ್ಕಂತೆ ರಾಜಕೀಯ ನಾಯಕರ ಮಾತುಗಳೂ ಜೋರಾಗುತ್ತಿವೆ. ರಾಜಕೀಯ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಅನೇಕ ನಾಯಕರು ಪಕ್ಷವನ್ನೂ ಬದಲಾಯಿಸುತ್ತಿದ್ದಾರೆ. ಸದ್ಯ ಈ ಸಾಲಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್ (Former Minister Varthur Prakash) ಕೂಡಾ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ನಿಂದ ಬಿಜೆಪಿಗೆ ಸೇರ್ಪಡೆಗೊಂಡಿರುವ ವರ್ತೂರು ಸದ್ಯ ತಮ್ಮ ಹೇಳಿಕೆಯಿಂದಾಗಿ ವಿವಾದ ಸೃಷ್ಟಿಸಿದ್ದಾರೆ.
ಹೌದು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ವರ್ತೂರು ಪ್ರಕಾಶ್ ಎಷ್ಟು ಅಭಿವೃದ್ದಿ ಮಾಡಿದ್ರು, ಕಾಸು ಕೊಟ್ಟಿಲ್ಲ ಅಂದ್ರೆ ಜನ ವೋಟ್ ಹಾಕಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದಾರೆ. ಕೋಲಾರ ತಾಲೂಕಿನ ಸೀತಿ ಹೊಸೂರು ಗ್ರಾಮದಲ್ಲಿ ನಿನ್ನೆ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ವರ್ತೂರು ಪ್ರಕಾಶ್ ಅಭಿವೃದ್ದಿ ಮಾಡಿದ್ರೂ, ಎಲೆಕ್ಷನ್ ಹಿಂದಿನ ದಿನ ಹಣ ಕೊಡಲೇಬೇಕು. ಕಳೆದ ಎಲೆಕ್ಷನ್ ನಲ್ಲಿ ನಾನು ಹಣ ಕೊಟ್ಟಿಲ್ಲ. ಆದ್ರೆ 2023 ಎಲೆಕ್ಷನ್ ನಲ್ಲಿ ಹಾಗೆ ಆಗಲ್ಲ. ಎಲ್ಲಾ ವ್ಯವಸ್ತೆ ಮಾಡ್ತೀನಿ, ಮದ್ದು ಗುಂಡು ಕೊಡ್ತೀನಿ ಸುಟ್ಟು ಬಿಸಾಕಿ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮತದಾರರಿಗೆ ಹಣ ಕೊಡ್ತೀನಿ ಎಂದು ಕೋಲಾರ ಬಿಜೆಪಿ ಟಿಕೆಟ್ ಆಕಾಂಕ್ಷಿ ವರ್ತೂರು ಪ್ರಕಾಶ್ ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ವರ್ತೂರು ಪ್ರಕಾಶ್ ಇವತ್ತಿನ ಕಾಂಗ್ರೆಸ್ ಹೀನಾಯ ಸ್ಥಿತಿಗೆ ಸಿದ್ದರಾಮಯ್ಯ ಕಾರಣ. ಸಿದ್ದರಾಮಯ್ಯ ಇನ್ನೂ ಕೋಲಾರ ಸ್ಪರ್ಧೆ ಫೈನಲ್ ಮಾಡಿಲ್ಲ, ಅದರ ಬಗ್ಗೆ ಮುಂದೆ ಮಾತಾಡುವೆ. ಕಾಂಗ್ರೆಸ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್. ಆಸ್ಕರ್ ಫರ್ನಾಂಡಿಸ್, ಜನಾರ್ದನ ಪೂಜಾರಿ, ಎಸ್ ಎಂ ಕೃಷ್ಣರನ್ನ ಜೀವಂತ ಸಮಾಧಿ ಮಾಡಿದ್ದು ಸಿದ್ದರಾಮಯ್ಯ ಎಂದು ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ