Kolar: ಕ್ಲಾಕ್ ಟವರ್ ಮೇಲೆ ಹಾರಿದ ತ್ರಿವರ್ಣ ಧ್ವಜ

 ಕ್ರೇನ್ ಮೂಲಕ ಧ್ವಜಾರೋಹಣ ಹಿನ್ನಲೆ ಮೂವರು ಮುಸ್ಲಿಂ ಧರ್ಮ ಗುರುಗಳು ಹಾಗೂ ಡಿಸಿ, ಎಸ್ ಪಿ ಮಾತ್ರ ಧ್ವಜಾರೋಹಣದಲ್ಲಿ ಭಾಗಿಯಾದರು. ಧ್ವಜಾರೋಹಣ ನೆರವೇರುತ್ತಿದ್ದಂತೆ, ಸ್ಥಳದಲ್ಲಿದ್ದ ಮುಸ್ಲಿಂ ಮುಖಂಡರು ಹಿಂದೂಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಹಾಕಿದರು.

ಕ್ಲಾಕ್ ಟವರ್

ಕ್ಲಾಕ್ ಟವರ್

  • Share this:
ಕೋಲಾರ ನಗರದ ಕ್ಲಾಕ್ ಟವರ್ ವೃತ್ತದಲ್ಲಿ (Clock tower Circle)  ಶನಿವಾರ ಅಕ್ಷರಶಃ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಶುಕ್ರವಾರ ರಾತ್ರಿಯಿಂದಲೇ ಪೊಲೀಸ್ (Police) ನಿಯೋಜನೆ ಮಾಡಿದ್ದ ಜಿಲ್ಲಾಡಳಿತ, ಬೆಳ್ಳಂ ಬೆಳಗ್ಗೆ 5 ಗಂಟೆಗೆ ರಸ್ತೆಗಿಳಿದು ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜ (National Flag) ಹಾರಿಸುವ ಪ್ರಕ್ರಿಯೆಗೆ ಆರಂಭಿಸಿತು. ಮೊದಲು ಕ್ಲಾಕ್ ಟವರ್ ಮೇಲಿನ ಹಸಿರು ಧ್ಜಜ (Green Flag) ತೆರವು ಮಾಡಿದ ಅಧಿಕಾರಿಗಳು, ಟವರ್ ಮೇಲಿನ ಹಸಿರು ಬಣ್ಣದ ಮೇಲೆ ಬಿಳಿ ಬಣ್ಣದ ಪೇಂಟಿಂಗ್ ಹಾಕಿ ಅಳಿಸಿ ಹಾಕಿದ್ರು. ಬಳಿಕ ಟವರ್ ಮೇಲೆ ಕೇಸರಿ ಬಿಳಿ ಹಸಿರು ಬಣ್ಣವನ್ನ ನಾಲ್ಕು ಕಡೆ ಹಾಕಲಾಯಿತು.  ಡಿಸಿ ವೆಂಕಟರಾಜ (DC Venkataraja) ಹಾಗೂ ಎಸ್ ಪಿ ದೇವರಾಜ್ (SP Devaraj) ನೇತೃತ್ವದಲ್ಲಿ 500 ಕ್ಕೂ ಹೆಚ್ಚು ಪೊಲೀಸರನ್ನ ಕ್ಲಾಕ್ ಟವರ್ ವೃತ್ತದ ಸುತ್ತಲೂ ನಿಯೋಜನೆ ಮಾಡಲಾಗಿತ್ತು.

ಒರ್ವ SP, ಮೂವರು DySP, 10 ಸರ್ಕಲ್ ಇನ್ಸ್ ಪೆಕ್ಟರ್, 15ಕ್ಕೂ ಹೆಚ್ಚು ಸಬ್ ಇನ್ಸ್ ಪೆಕ್ಟರ್  ಗಳು ಬಂದೋಬಸ್ತ್ ನಲ್ಲಿ ಭಾಗಿಯಾಗಿದ್ದರು. ಹಸಿರು ಬಾವುಟ ಕೆಳಗಿಳಿಸೊ ವೇಳೆ ಮಾದ್ಯಮಗಳ ಚಿತ್ರೀಕರಣಕ್ಕೆ ಮುಸ್ಲಿಂ ಮುಖಂಡರು ವಿರೋಧಿಸಿದ್ದು, ಜಿಲ್ಲಾಡಳಿತದ ಕಾರ್ಯಾಚರಣೆಗೆ ಮುಸ್ಲಿಂ ಮುಖಂಡರು ಹಾಗೂ ಧರ್ಮ ಗುರುಗಳು ಬೆಂಬಲ ಸೂಚಿಸಿ, ಸ್ಥಳದಲ್ಲೆ ಮೊಕ್ಕಾ ಹಾಕಿ ಕಾರ್ಯಾಚರಣೆ ವೀಕ್ಷಿಸಿದರು.

ಮಧ್ಯಾಹ್ನ ಹಾರಿದ ತಿರಂಗ, ಮೊಳಗಿದ ರಾಷ್ಟ್ರಗೀತೆ.

ಮಧ್ಯಾಹ್ನ 2.40 ವೇಳೆಗೆ ಕ್ಲಾಕ್ ಟವರ್ ಮೇಲೆ ಪ್ರತ್ಯೇಕ ಧ್ವಜ ಸ್ಥಂಭ ನಿರ್ಮಿಸಿದ ಜಿಲ್ಲಾಡಳಿತ, ಬಳಿಕ ಪೊಲೀಸ್ ಗೌರವದೊಂದಿಗೆ, ಜಿಲ್ಲಾಧಿಕಾರಿ ವೆಂಕಟರಾಜಾ ಧ್ವಜಾರೋಹಣ ಮಾಡಿದರು. ಧ್ವಜಾರೋಹಣದ ರಾಷ್ಟ್ರಗೀತೆ ಹಾಡುವ ವೇಳೆ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು.

ಇದನ್ನೂ ಓದಿ: Bengaluru: ಹುಡುಗಿಯರು ಸೆಕ್ಸ್ ಮೆಟಿರೀಯಲ್ ಗಳಲ್ಲ: ಡೆತ್ ನೋಟ್ ಬರೆದಿಟ್ಟು ನವವಿವಾಹಿತೆ ಆತ್ಮಹತ್ಯೆ

ಕ್ರೇನ್ ಮೂಲಕ ಧ್ವಜಾರೋಹಣ ಹಿನ್ನಲೆ ಮೂವರು ಮುಸ್ಲಿಂ ಧರ್ಮ ಗುರುಗಳು ಹಾಗೂ ಡಿಸಿ, ಎಸ್ ಪಿ ಮಾತ್ರ ಧ್ವಜಾರೋಹಣದಲ್ಲಿ ಭಾಗಿಯಾದರು. ಧ್ವಜಾರೋಹಣ ನೆರವೇರುತ್ತಿದ್ದಂತೆ, ಸ್ಥಳದಲ್ಲಿದ್ದ ಮುಸ್ಲಿಂ ಮುಖಂಡರು ಹಿಂದೂಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಹಾಕಿದರು.

ಇದೇ ವೇಳೆ ಮಾತನಾಡಿದ ಡಿಸಿ ಹಾಗೂ ಎಸ್ ಪಿ, ಕ್ಲಾಕ್ ಟವರ್ ಸ್ಥಳ ನಗರಸಭೆಗೆ ಸೇರಿದ್ದು, ಯಾವದೇ ಅಹಿತಕರ ಘಟನೆ ನಡೆಯದಂತೆ, ಒಂದು ವಾರದ ಕಾಲ ಕೋಲಾರ ನಗರದಲ್ಲಿ ಮಾತ್ರ 144 ಸೆಕ್ಷನ್ ಜಾರಿ ಮಾಡುವುದಾಗಿ ತಿಳಿಸಿದರು.

ಪಟ್ಟು ಹಿಡಿದು ಸಾಧಿಸಿದ ಸಂಸದ ಮುನಿಸ್ವಾಮಿ

74 ವರ್ಷಗಳ ನಂತರ ಕ್ಲಾಕ್ ಟವರ್‍ ನಲ್ಲಿ ರಾಷ್ಟ್ರ ಧ್ವಜಾರೋಹಣಕ್ಕೆ ಪ್ರಮುಖ ಕಾರಣ, ಕೋಲಾರ ಸಂಸದ ಮುನಿಸ್ವಾಮಿ ಅವರ ಏಕಾಂಗಿ ಹೋರಾಟದ ನಿರ್ಧಾರ. ನಾಲ್ಕು ದಿನದ ಹಿಂದೆ ಸುದ್ದಿಗೋಷ್ಠಿ ನಡೆಸಿ, ಕ್ಲಾಕ್ ಟವರ್ ನಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡೋವರೆಗೂ ಏಕಾಂಗಿ ಪ್ರತಿಭಟನೆ ನಡೆಸೋದಾಗಿ ಹೇಳಿದ್ದರು.

ಈ ಹಿನ್ನಲೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಸಿಎಂ ಕಚೇರಿ ಹಾಗು ಗೃಹ ಇಲಾಖೆ ಬಳಿ ಚರ್ಚೆ ನಡೆಸಿ ಧ್ವಜಾರೋಹಣ ನೆರವೇರಿಸಿದೆ. ಈ ಬಗ್ಗೆ ಮಾತನಾಡಿದ ಸಂಸದ ಮುನಿಸ್ವಾಮಿ, ಇದು ಎಲ್ಲರ ಸಾಧನೆ ಎಂದು ತಿಳಿಸಿದರು,

ಕ್ಲಾಕ್ ಟವರ್ ಇತಿಹಾಸ ಏನು?

ಇನ್ನೂ ಕ್ಲಾಕ್ ಟವರ್‍ ನಲ್ಲಿ ರಾಷ್ಟ್ರ ಧ್ವಜಾರೋಹಣಕ್ಕೆ ಈ ಮಟ್ಟಿಗೆ ಭದ್ರತೆ ಕೈಗೊಳ್ಳಲು, ಕೋಮು ಸೌಹಾರ್ಧತೆಗೆ ಧಕ್ಕೆ ಉಂಟಾಗುವ ವಾತಾವರಣ ಕಾರಣವಾಗಿದೆ. 1930ರ ಆಸುಪಾಸಿನಲ್ಲಿ ಗುತ್ತಿಗೆದಾರರಾಗಿದ್ದ ಕೋಲಾರದ ಶ್ರೀಮಂತ ವ್ಯಕ್ತಿ ಹಾಜಿ ಮೊಹಮದ್ ಮುಸ್ತಾಫಾ ಸಾಬ್, ನರಸಿಂಹರಾಜ ಒಡೆಯರ್ ಸೂಚನೆಯಂತೆ, ಕ್ಲಾಕ್ ಟವರ್ ನಿರ್ಮಾಣ ಮಾಡಿದ್ದಾರೆ. ಇದಲ್ಲದೆ ಹಳೇ ಬಸ್ ನಿಲ್ದಾಣ ಬಳಿಯು ಮತ್ತೊಂದು ಕ್ಲಾಕ್ ಟವರ್ ಕಟ್ಟಿಸಿದ್ದು, ಖುದ್ದು ನರಸಿಂಹರಾಜ ಒಡೆಯವರ್ ಅವರೇ ಎರಡನ್ನು ಉದ್ಘಾಟಿಸಿದ್ದು ವಿಶೇವಾಗಿದೆ.

ಇದನ್ನೂ ಓದಿ:  Koppala: ಅಪ್ಪು​ ಬ್ಯಾನರ್​ ಕಿತ್ತು ಹಾಕಿದ್ದಕ್ಕೆ ಅಭಿಮಾನಿಗಳ ಆಕ್ರೋಶ; ಇಬ್ಬರ ಬಂಧನ, ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ

ಜನರಿಗೆ ಸಮಯದ ಅರಿವಿಗೆ ಸಹಕಾರಿ ಎಂಬ ಉದ್ದೇಶ ಇದಾಗಿದೆ, ಆದರೆ ಕಾಲ ಕ್ರಮೇಣ ಕ್ಲಾಕ್ ಟವರ್ ಕೋಮು ಭಾವನೆಗಳನ್ನು ಕದಡುವ ಪ್ರದೇಶವಾಗಿ ರೂಪುಗೊಂಡಿತ್ತು. ಹಿಂದೂಗಳ ಆಚರಣೆಯನ್ನ ಇಲ್ಲಿ ನಡೆಸಲು ಪ್ರತಿರೋಧ ವ್ಕಕ್ತವಾಗಿದೆ.

ಟವರ್ ಮೇಲಿನ ಒಂದು ಧರ್ಮಕ್ಕೆ ಹೋಲುವ ಬಾವುಟ ಹಾಕಾಲಾಗಿತ್ತು. ಇದುವರೆಗೂ ಟವರ್ ಮೇಲೆ ರಾಷ್ಟ್ರ ಧ್ವಜಾರೋಹಣ ನಡೆಸಿಲ್ಲ. ಹೀಗಾಗಿ ಕ್ಲಾಕ್ ಟವರ್ ಮೇಲಿನ ಧ್ವಜಾರೋಹಣ ಜಿಲ್ಲಾಡಳಿತಕ್ಕೆ ಸವಾಲಾಗಿದ್ದು, ಜೇನು ಗೂಡಿಗೆ ಕೈ ಹಾಕಲು ಜಿಲ್ಲಾಡಳಿತ ಈವರೆಗೆ ಪ್ರಯತ್ನ ಮಾಡಿರಲಿಲ್ಲ.

ಒಟ್ಟಿನಲ್ಲಿ ಕೋಲಾರದ ಸೂಕ್ಷ್ಮ ಪ್ರದೇಶ ಕ್ಲಾಕ್ ಟವರ್‍ ನಲ್ಲಿ ತ್ರಿವರ್ಣ ಧ್ವಜ ರಾರಾಜಿಸಿದ್ದು, ಮುಂದಿನ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲು ಧ್ವಜಾರೋಹಣ ನಡೆಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದ್ದು, ಒಂದು ಸಮುದಾಯಕ್ಕೆ ಸೀಮಿತವೆಂಬ ಪ್ರದೇಶದಲ್ಲಿ ಜಿಲ್ಲಾಡಳಿತದ ಕ್ರಮಕ್ಕೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
Published by:Mahmadrafik K
First published: