HOME » NEWS » State » KOLAR TOMATO GROWERS IN DIRE STRAITS AS HUJI DISEASE CREATE HAVOC SESR

ಟೊಮೆಟೋಗೆ ಹೂಜಿ ರೋಗ; 3 ರೂ.ಗೆ ಇಳಿದ ಬೆಲೆ; ಆತಂಕದಲ್ಲಿ ಕೋಲಾರ ಬೆಳೆಗಾರರು

ಟೊಮೆಟೋ ಬೆಳೆಗಳಿಗೆ ಹೂಜಿ ರೋಗ ಕಾಡುತ್ತಿರುವ ಹಿನ್ನೆಲೆ ಬೇಡಿಕೆ ಕಡಿಮೆಯಾಗಿದ್ದು, ಕೊಳ್ಳುವವರಿಲ್ಲದೇ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕೆಜಿಗೆ ಮೂರರಿಂದ ನಾಲ್ಕು ರೂ ವರೆಗೆ ಟೊಮೆಟೋ ಮಾರಾಟವಾಗುತ್ತಿದ್ದು, ರೈತರು ಬೆಳೆದ ಬೆಳೆಗೆ ಸೂಕ್ತ ದರ ಸಿಗದಂತೆ ಆಗಿದೆ. 

Seema.R | news18-kannada
Updated:March 3, 2020, 5:01 PM IST
ಟೊಮೆಟೋಗೆ ಹೂಜಿ ರೋಗ; 3 ರೂ.ಗೆ ಇಳಿದ ಬೆಲೆ; ಆತಂಕದಲ್ಲಿ ಕೋಲಾರ ಬೆಳೆಗಾರರು
ಹೂಜಿ ರೋಗಕ್ಕೆ ತುತ್ತಾಗಿರುವ ಟೊಮಟೋ
  • Share this:
ಕೋಲಾರ(ಮಾ. 03): ರಾಜ್ಯದಲ್ಲಿ ಅತಿಹೆಚ್ಚು ಟೊಮೆಟೋ ಬೆಳೆಯುವ ಜಿಲ್ಲೆ ಎಂಬ ಹೆಗ್ಗಳಿಕೆ ಕೋಲಾರಕ್ಕೆ ಇದೆ. ಆದರೆ, ಈಗ ಇಲ್ಲಿನ ಬೆಳೆಗಳಿಗೆ ಹೂಜಿ ರೋಗದ ಕಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

 

ಬೆಳೆಗಳಿಗೆ ಹೂಜಿ ರೋಗ ಕಾಡುತ್ತಿರುವ ಹಿನ್ನೆಲೆ ಬೇಡಿಕೆ ಕಡಿಮೆಯಾಗಿದ್ದು, ಟೊಮಟೊ ಕೊಳ್ಳುವವರಿಲ್ಲದೇ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕೆಜಿಗೆ ಮೂರರಿಂದ ನಾಲ್ಕು ರೂ ವರೆಗೆ ಟೊಮಟೋ ಮಾರಾಟವಾಗುತ್ತಿದ್ದು, ರೈತರು ಬೆಳೆದ ಬೆಳೆಗೆ ಸೂಕ್ತ ದರ ಸಿಗದಂತೆ ಆಗಿದೆ.ಟೊಮಟೋವನ್ನು ಅತಿ ಹೆಚ್ಚು ಬೆಳೆಯುವ ಹಿನ್ನೆಲೆ ಜಿಲ್ಲೆಯ ವಡ್ಡಹಳ್ಳಿ ಗ್ರಾಮದ ಹೆದ್ದಾರಿ ಬದಿ ಸುಸಜ್ಜಿತವಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಉಪ ಮಾರುಕಟ್ಟೆ ತೆರೆಯಲಾಗಿದೆ. ಇಲ್ಲಿಂದಲೇ ನೆರೆಯ ಆಂಧ್ರ, ತಮಿಳುನಾಡಿಗೂ ಟೊಮಟೋ ರಫ್ತಾಗುತ್ತದೆ. ಆದರೆ, ಈಗ ಹೂಜಿ ರೋಗದಿಂದಾಗಿ ಮಾರುಕಟ್ಟೆಯಲ್ಲಿ ಟೊಮಟೋ ಕೇಳುವವರಿಲ್ಲದಂತೆ ಆಗಿದೆ.ಪ್ರತಿ ನಿತ್ಯ 15 ಸಾವಿರಕ್ಕೂ ಹೆಚ್ಚು ಟೊಮಟೋ ಬಾಕ್ಸ್​ ಮಾರಾಟವಾಗುತ್ತಿದ್ದ ಮಾರುಕಟ್ಟೆಯಲ್ಲಿ ಈಗ ದಿನಕ್ಕೆ ಕೇವಲ 5 ಸಾವಿರ ಬಾಕ್ಸ್​ ಮಾರಾಟವಾಗುತ್ತಿದೆ. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಮಾರುಕಟ್ಟೆಗೆ ಬೀಗ ಜಡಿಯುವ ಸ್ಥಿತಿ ನಿರ್ಮಾಣವಾಗುವ ಸಂದರ್ಭ ದೂರ ಇಲ್ಲ ಎನ್ನುತ್ತಾರೆ ರೈತರು.ಇದನ್ನು ಓದಿ: ತಹಶೀಲ್ದಾರ್​ ಹೆಸರಿನಲ್ಲಿ ಅಕ್ರಮವಾಗಿ ಹಣ ವಸೂಲಿ; ಮೂವರು ಅಧಿಕಾರಿಗಳ ಅಮಾನತ್ತು

ಏಪ್ರಿಲ್‍ನಿಂದ ಟೊಮಟೋ ಇಳುವರಿ ಬರಲು ಆರಂಭವಾಗುತ್ತದೆ. ಈ ಸಂದರ್ಭದಲ್ಲಿಯೇ ರೈತರು ಉತ್ತಮ ಬೆಲೆ ಪಡೆಯಲು ಸಾಧ್ಯ. ಈ ಹಿನ್ನೆಲೆ ರೋಗಬಾಧೆ ತಡೆಗೆ ಮುಂದಾಬೇಕು. ಈ ರೋಗವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಕೃಷಿ ಇಲಾಖೆ ಅಧಿಕಾರಿಗಳು ರೋಗ ನಿಯಂತ್ರಣಕ್ಕೆ ಮುಂದಾಬೇಕು. ಈ ಮೂಲಕ ರೈತರ ನೆರವಿಗೆ ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.

(ವರದಿ: ರಘುರಾಜ್​)
First published: March 3, 2020, 4:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories