Kolar: ಸರ್ಕಾರಿ ಶಾಲೆಯಲ್ಲಿ Namazಗೆ ಅವಕಾಶ: ಶಾಲಾ ಶಿಕ್ಷಕಿ ಅಮಾನತು; ತನಿಖೆಗೆ ಆದೇಶ

ನಮಾಜ್ ಮಾಡಲು ಅವಕಾಶ ನೀಡಿದ್ದಕ್ಕೆ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಇದೀಗ ನಮಾಜ್ ಮಾಡಲು ಅನುಮತಿ ನೀಡಿದ್ದ ಶಿಕ್ಷಕಿ ಉಮಾದೇವಿ ಅವರನ್ನು ಅಮಾನತು ಮಾಡಲಾಗಿದೆ.

ಶಾಲೆ

ಶಾಲೆ

  • Share this:
ಕೋಲಾರ ಜಿಲ್ಲೆಯ ಮುಳಬಾಗಿಲು (Mulubagilu, Kolar) ಪಟ್ಟಣದಲ್ಲಿರುವ ಸೋಮೇಶ್ವರ ಪಾಳ್ಯದ ಬಳೇಚಂಗಪ್ಪ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (Government School) ಮುಸ್ಲಿಂ ವಿದ್ಯಾರ್ಥಿ(Muslim Students)ಗಳಿಗೆ ನಮಾಜ್ (Namaz) ಮಾಡಲು ಅವಕಾಶ ನೀಡಿದ್ದು,  ವಿವಾದಕ್ಕೆ ಗುರಿಯಾಗಿತ್ತು. ಪ್ರತಿ ಶುಕ್ರವಾರ ಸರ್ಕಾರಿ ಶಾಲೆಯ ಪ್ರತ್ಯೇಕ ಕೊಠಡಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ನಮಾಜ್ ಮೂಲಕ ಪ್ರಾರ್ಥನೆ ಮಾಡುತ್ತಿದ್ದರು. ನಮಾಜ್ ಮಾಡಲು ವಿದ್ಯಾರ್ಥಿಗಳಿಗೆ  ಪ್ರತ್ಯೇಕ ಕೊಠಡಿಯನ್ನು ಶಿಕ್ಷಕರು (Teachers) ನೀಡಿದ್ದರು. ನಮಾಜ್ ಮಾಡಲು ಅವಕಾಶ ನೀಡಿದ್ದಕ್ಕೆ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಇದೀಗ ನಮಾಜ್ ಮಾಡಲು ಅನುಮತಿ ನೀಡಿದ್ದ ಶಿಕ್ಷಕಿ ಉಮಾದೇವಿ ಅವರನ್ನು ಅಮಾನತು ಮಾಡಲಾಗಿದೆ.

ಕಳೆದ ಎರಡು ತಿಂಗಳಿಂದ ಶಾಲಾ ಮಕ್ಕಳ ಪ್ರಾರ್ಥನೆಗೆ ಅವಕಾಶ ನೀಡಲಾಗಿತ್ತು. ಒಂದು  ಧರ್ಮದವರಿಗೆ ಮಾತ್ರ ಪ್ರಾರ್ಥನೆಗೆ ಅವಕಾಶ ನೀಡಿದ್ದಕ್ಕೆ,  ಮುಳಬಾಗಿಲು ತಾಲೂಕಿನ ಹಿಂದೂಪರ ಸಂಘಟನೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ಪ್ರತಿ ಶುಕ್ರವಾರ ಮಧ್ಯಾಹ್ನ 12 ರಿಂದ 1.30 ವರೆಗೂ ನಮಾಜ್ ಗೆ ಅವಕಾಶ ನೀಡಲಾಗಿತ್ತು. ಆದರೆ ಶಾಲಾ ಮಕ್ಕಳಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚುತ್ತಿದ್ದರೂ, ಕೊಠಡಿಯಲ್ಲಿ  ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೇ ವಿದ್ಯಾರ್ಥಿಗಳ  ನಮಾಜ್ ಮಾಡಿದ್ದು ಕೊರೊನಾ ನಿಯಮಗಳನ್ನು ಬ್ರೇಕ್ ಮಾಡಲಾಗಿತ್ತು.

ಇದನ್ನೂ ಓದಿ:  Bengaluru: ಕಳೆದು ಹೋದ ಪ್ರೀತಿ ಪುನಃ ಪಡೆಯಲು ಪ್ರೇಯಸಿ ಸೋದರನ Kidnap: ಇದು ಭಗ್ನ ಪ್ರೇಮಿಯ ವಿಚಿತ್ರ ಕಥೆ

ಶಿಕ್ಷಕಿ ಉಮಾದೇವಿ ಅಮಾನತು

ಈ ಬಗ್ಗೆ ಮೊದಲು ಪ್ರತಿಕ್ರಿಯೆ ನೀಡಿದ ಮುಳಬಾಗಿಲು ಕ್ಷೇತ್ರ ಶಿಕ್ಚಣಾಧಿಕಾರಿ ಗಿರಿಜೇಶ್ವರಿ ದೇವಿ,  ಪ್ರಾರ್ಥನೆಗೆ ಅವಕಾಶ ನೀಡಿರುವ ಬಗ್ಗೆ ಮಾಹಿತಿಯೇ ಇಲ್ಲ ಅಂತ ಹೇಳಿದ್ದರು. ಘಟನೆಯನ್ನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಖಂಡಿಸಿದ್ದು, ಶಾಲೆಯಲ್ಲಿ ಭಾವೈಕ್ಯತೆ ಮೂಡುವಂತಹ ವಾತಾವರಣ ಸೃಷ್ಟಿಸಬೇಕು. ಇದು ಶಿಕ್ಷಕರ ಕರ್ತವ್ಯವಾಗಿದೆ.

ಒಂದೇ ಧರ್ಮದವರಿಗೆ ನಮಾಜ್ ಗೆ ಅವಕಾಶ ನೀಡುವ ಪ್ರಮೇಯ ಇಲ್ಲ. ನಮಾಜ್ ಗೆ ಅನುಮತಿ ನೀಡಿದ ಶಾಲಾ ಶಿಕ್ಷಕಿ ಉಮಾದೇವಿ ರನ್ನ ತಕ್ಷಣವೇ ಅಮಾನತು ಮಾಡುವುದಾಗಿ  ಮುಳಬಾಗಿಲು ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜೇಶ್ಚರಿ ದೇವಿ ನ್ಯೂಸ್ 18 ಗೆ ಪ್ರತಿಕ್ರಿಯೆ ನೀಡಿದ್ದಾರೆ‌.

ವಿದ್ಯಾರ್ಥಿಗಳ ಶಾಲಾ ರಜೆ ತಪ್ಪಿಸಲು ಶಿಕ್ಷಕರಿಂದಲೇ ನಮಾಜ್ ಗೆ ಅವಕಾಶ!

ಮುಳಬಾಗಿಲು ಪಟ್ಟಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಜನರು ವಾಸವಿದ್ದು, ಎಂದಿನಂತೆ ಪ್ರತಿ ಶುಕ್ರವಾರ ಸಾಮೂಹಿಕ ಪ್ರಾರ್ಥನೆ ನಡೆಸುವುದು ವಾಡಿಕೆ. ಹೀಗಾಗಿಯೇ  ವಿದ್ಯಾರ್ಥಿಗಳು ನಮಾಜ್ ಮಾಡಲೆಂದು, ಶುಕ್ರವಾರ ಇಡೀ ದಿನ  ಶಾಲೆಗೆ ಬರುತ್ತಿಲ್ಲ.  ಹಾಗಾಗಿ ವಿದ್ಯಾರ್ಥಿಗಳ ಗೈರು ತಪ್ಪಿಸಲು  ಶಾಲೆಯಲ್ಲೆ ನಮಾಜ್ ಗೆ ಅನುಮತಿ ನೀಡಿರೊದಾಗಿ ಶಾಲಾ ಶಿಕ್ಷಕರು ತಮ್ಮ ನಡೆಯನ್ನ ಸಮರ್ಥನೆ ಮಾಡಿಕೊಂಡಿದ್ದರು.

ಅಲ್ಲದೆ  ಮಧ್ಯಾಹ್ನ ನಮಾಜ್ ಬಳಿಕ ಶಾಲೆಯಲ್ಲೆ ಊಟ ಸೇವಿಸಿ, ಎಂದಿನಂತೆ ಮಕ್ಕಳು  ಪಾಠ ಪ್ರವಚನದಲ್ಲಿ ಭಾಗಿಯಾಗುತ್ತಿದ್ದಾರೆ‌ ಎಂದು ಶಿಕ್ಷಕರು ತಿಳಿಸಿದ್ದಾರೆ.

ಹಿಂದೂಪರ ಸಂಘಟನೆಗಳ ಆಕ್ರೋಶ.

ಮುಳಬಾಗಿಲು ಪಟ್ಟಣದಲ್ಲಿನ ಸರ್ಕಾರಿ ಶಾಲೆಯಲ್ಲಿ ಒಂದು ಧರ್ಮದ ಪ್ರಾರ್ಥನೆಗೆ ಆಚರಣೆಗೆ ಅವಕಾಶ ನೀಡಿರುವ ಕ್ರಮವನ್ನ ಹಿಂದೂಪರ ಸಂಘಟನೆಗಳು ಖಂಡಿಸಿವೆ. ಈ ಬಗ್ಗೆ ಮುಳಬಾಗಿಲು ನಗರ ಪೊಲೀಸ್ ಠಾಣೆಗೆ ದೂರು ನೀಡಿರುವ ಸಂಘಟನೆಗಳ ಮುಖಂಡರು, ಕೂಡಲೇ ಶಿಕ್ಷಕರ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು.

ಇದನ್ನೂ ಓದಿ:  ಓದಿದ್ದು Engineering, ಮಾಡಿದ್ದು ಬ್ಯಾಂಕ್ Robbery: ಪೇಪರ್ ನಲ್ಲಿ ಬಂದ ಸುದ್ದಿ ನೋಡಿ ಪ್ಲಾನ್; ಅರೆಸ್ಟ್ ಆದ್ಮೇಲೆ ಹೇಳಿದ್ದು ಪಾಪರ್ ಕಥೆ!

ಶಾಲೆಯಲ್ಲಿ ಇತರ ಧರ್ಮಗಳ ಮಕ್ಕಳು ಪಾಠ ಕೇಳಲು ಬರುತ್ತಿದ್ದು ಎಂದೂ ಪ್ರತ್ಯೇಕವಾಗಿ ಧರ್ಮದ ಆಚರಣೆಗೆ ಅವಕಾಶ ನೀಡಿಲ್ಲ. ಆದರೆ ಶಿಕ್ಷಕರೇ ಅನುಮತಿ ನೀಡಿ ಒಂದು ಪ್ರತ್ಯೇಕ ಕೊಠಡಿ ನೀಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಶಾಸಕ ಎಚ್.ನಾಗೇಶ್ ಪ್ರತಿಕ್ರಿಯೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಳಬಾಗಿಲು ಶಾಸಕರಾದ ಎಚ್ ನಾಗೇಶ್, ಶಾಲೆಯಲ್ಲಿ ಮುಸ್ಲಿಂ ಸಮುದಾಯದ ಮಕ್ಕಳ ಪ್ರಾರ್ಥನೆಗೆ ಅವಕಾಶ ನೀಡಿದ ವಿಚಾರ ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ಕೂಲಕುಂಶವಾಗಿ ತನಿಖೆ ನಡೆಸಿ ಮಾಹಿತಿ ನೀಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಶಾಸಕ ನಾಗೇಶ್ ಸೂಚನೆ ನೀಡಿದ್ದಾರೆ.

ಒಟ್ಟಿನಲ್ಲಿ ಶಾಲಾ ಕೊಠಡಿಯಲ್ಲಿ ಮಕ್ಕಳ ನಮಾಜ್ ವಿಚಾರವಾಗಿ ಪರ ವಿರೋಧದ ಮಾತುಗಳು ಕೇಳಿಬಂದಿದೆ. ಈ ಬಗ್ಗೆ ಇನ್ನೂ ಮುಸ್ಲಿಂ ಧರ್ಮಗುರುಗಳು ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದಾರೆ.
Published by:Mahmadrafik K
First published: