HOME » NEWS » State » KOLAR STUDENT SUFFERS FROM HEART ATTACK WHILE DANCE PRACTICE IN SCHOOL KANNADA NEWS TODAY SESR

ನೃತ್ಯಾಭ್ಯಾಸ ಮಾಡುತ್ತಲೇ ಜೀವಬಿಟ್ಟ ವಿದ್ಯಾರ್ಥಿನಿ; ಬಾಲಕಿ ಕುಸಿದು ಬಿದ್ದರೂ ಸುಮ್ಮನೆ ಕುಳಿತ ಶಿಕ್ಷಕ

ಶಾಲಾ ವಾರ್ಷಿಕೋತ್ಸವ ಹಿನ್ನೆಲೆ ಗುರುವಾರ ಮಧ್ಯಾಹ್ನ ವಿದ್ಯಾರ್ಥಿಗಳು ನೃತ್ಯಾಭ್ಯಾಸದಲ್ಲಿ ತೊಡಗಿದ್ದರು. ಈ ವೇಳೆ ಆಯಾಸದಿಂದ ಬಳಲಿದ್ದ ವಿದ್ಯಾರ್ಥಿನಿ ಹೃದಯಘಾತಕ್ಕೆ ತುತ್ತಾಗಿದ್ದಾರೆ.

Seema.R | news18-kannada
Updated:January 24, 2020, 3:43 PM IST
ನೃತ್ಯಾಭ್ಯಾಸ ಮಾಡುತ್ತಲೇ ಜೀವಬಿಟ್ಟ ವಿದ್ಯಾರ್ಥಿನಿ; ಬಾಲಕಿ ಕುಸಿದು ಬಿದ್ದರೂ ಸುಮ್ಮನೆ ಕುಳಿತ ಶಿಕ್ಷಕ
ಸಾವನ್ನಪ್ಪಿದ ವಿದ್ಯಾರ್ಥಿನಿ
  • Share this:
ಕೋಲಾರ (ಜ.24): ಶಾಲಾ ವಾರ್ಷಿಕೋತ್ಸವ ಹಿನ್ನೆಲೆ ಶಾಲೆಯಲ್ಲಿ ನೃತ್ಯಾಭ್ಯಾಸ ತೊಡಗಿದ್ದ ವಿದ್ಯಾರ್ಥಿನಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಜಿಲ್ಲೆಯ ಬೇತಮಂಗಲ ಹೋಬಳಿಯ ಟಿ ಗೊಲ್ಲಹಳ್ಳಿ ಗ್ರಾಮದ ವಿಮಲ ಹೃದಯ ಶಿಕ್ಷಣ ಸಂಸ್ಥೆಯಲ್ಲಿ ನಡೆದಿದೆ. 

ಈ ವೇಳೆ ವಿದ್ಯಾರ್ಥಿನಿ ಕುಸಿದು ಬಿದ್ದರೂ ಕೂಡ ಅಲ್ಲಿಯೆ ಇದ್ದ ಶಿಕ್ಷಕ ಮಾತ್ರ ತಕ್ಷಣಕ್ಕೆ ನೆರವಿಗೆ ಬಾರದೇ, ಏನು ನಡೆಯದಂತೆ ಹಾಗೇ ಕುಳಿತುಕೊಂಡು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಪರಿಣಾಮ ತಕ್ಷಣ ಚಿಕಿತ್ಸೆ ಲಭಿಸದೇ ಯುವತಿ ಸಾವನ್ನಪ್ಪಿದ್ದಾಳೆ.

9ನೆ ತರಗತಿ ವಿದ್ಯಾರ್ಥಿನಿ ಪೂಜಿತ ಸಾವನ್ನಪ್ಪಿದ ವಿದ್ಯಾರ್ಥಿನಿ. ಶನಿವಾರ ಶಾಲಾ ವಾರ್ಷಿಕೋತ್ಸವ ಹಿನ್ನೆಲೆ ಗುರುವಾರ ಮಧ್ಯಾಹ್ನ ವಿದ್ಯಾರ್ಥಿಗಳು ನೃತ್ಯಾಭ್ಯಾಸದಲ್ಲಿ ತೊಡಗಿದ್ದರು. ಈ ವೇಳೆ ಆಯಾಸದಿಂದ ಬಳಲಿದ್ದ ವಿದ್ಯಾರ್ಥಿನಿ ಹೃದಯಘಾತಕ್ಕೆ ತುತ್ತಾಗಿದ್ದಾರೆ.

ನೃತ್ಯ ಮಾಡುತ್ತಲೇ  ವಿದ್ಯಾರ್ಥಿನಿ ಕುಸಿದು ಬೀಳುತ್ತಿದ್ದಂತೆ ಆಕೆಯ ಸಹಾಯಕ್ಕೆ ಬಾರದ ಶಿಕ್ಷಕ, ಉಳಿದ ವಿದ್ಯಾರ್ಥಿಗಳಿಗೆ ನೀರು ತಂದು ಕೊಡುವಂತೆ ಸೂಚನೆ ಮಾಡುತ್ತಾ ಅಸಡ್ಡೆವಹಿಸಿರುವ ಸಿಸಿಟಿವಿ ದೃಶ್ಯಾವಳಿಗಳು ನ್ಯೂಸ್​ 18 ಕನ್ನಡಕ್ಕೆ ಲಭ್ಯವಾಗಿದೆ.

ಘಟನೆ ತಿಳಿದಾಕ್ಷಣ ಮಹಿಳಾ ಶಿಕ್ಷಕರು ಆಕೆಯ  ಕೈಯೆಲ್ಲಾ ಉಜ್ಜಿದ 10 ನಿಮಿಷದ  ಬಳಿಕ  ಬೇತಮಂಗಲ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಬಾಲಕಿ ಸಾವನ್ನಪ್ಪಿದ್ದಾಳೆ.

ಇದನ್ನು ಓದಿ: ಸಾಮೂಹಿಕ ನಕಲಿನಿಂದ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಹಾಸನಕ್ಕೆ ಮೊದಲ ಸ್ಥಾನ; ರಹಸ್ಯ ಬಿಚ್ಚಿಟ್ಟ ನೊಂದ ಶಿಕ್ಷ

ಇನ್ನು ಈ ಘಟನೆ ತಿಳಿಯುತ್ತಿದ್ದಂತೆ, ಬಂಗಾರಪೇಟೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.  ಶಾಲಾ  ಮಕ್ಕಳ ಆರೋಗ್ಯ ತಪಾಸಣೆ ಹಾಗು ಶಿಕ್ಷಕರಿಗೆ ಪ್ರಥಮ ಚಿಕಿತ್ಸಾ ವಿಧಾನದ ಕುರಿತು ಮಾಹಿತಿ ಒದಗಿಸಿ ಎಂದು ಸಲಹೆ ನೀಡಿದ್ದಾರೆ. ಬಾಲಕಿ ಸಾವಿನ ಹಿನ್ನೆಲೆ ಶಾಲಾ ವಾರ್ಷಿಕೋತ್ಸವವನ್ನು ರದ್ದು ಮಾಡಿರುವ ಶಾಲೆ, ವಿದ್ಯಾರ್ಥಿನಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ.(ವರದಿ: ರಘು ರಾಜ್​)
Youtube Video
First published: January 24, 2020, 3:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories