Pramod Muthalik: ಕೋಲಾರ ಪಾಕಿಸ್ತಾನದಲ್ಲಿ ಇಲ್ಲ: ಕೇಸರಿ ಬಾವುಟ ಹಾರಿಸಿ ಕಿಡಿಕಾರಿದ ಪ್ರಮೋದ್ ಮುತಾಲಿಕ್

ಏಕಾಏಕಿ ಪ್ರಮೋದ್ ಮುತಾಲಿಕ್ ಪ್ರತ್ಯಕ್ಷರಾಗಿದ್ದು ಪೊಲೀಸ್ ಇಲಾಖೆ ಗರಂ ಆಗಲು ಕಾರಣವಾಯಿತು. ಕೋಲಾರ ನಗರ ದ ಎಂ.ಜಿ.ರಸ್ತೆಯಲ್ಲಿ ಛತ್ರಪತಿ ಶಿವಾಜಿಗೆ ಹಾರ ಹಾಕಿದ ಪ್ರಮೋದ್ ಮುತಾಲಿಕ್ ಕೇಸರಿ ಬಾವುಟ ಹಾರಿಸಿದರು. 

ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್

  • Share this:
ಕೋಲಾರ: ನಗರದಲ್ಲಿ ಆಯೋಜಿಸಿದ್ದ ಶೋಭಾಯಾತ್ರೆಗೆ ಪೊಲೀಸ್ ಹಾಗೂ ಗುಪ್ತದಳಕ್ಕೂ ತಿಳಿಯದೆ ಪ್ರಮೋದ್ ಮುತಾಲಿಕ್ (Pramod Muthalik) ಆಗಮಿಸಿದ್ದರು. ಇದು ಪೊಲೀಸ್ ಇಲಾಖೆ (Police Department) ತಬ್ಬಿಬ್ಬಾಗಲು ಕಾರಣವಾಯಿತು. ಏಕಾಏಕಿ ಪ್ರಮೋದ್ ಮುತಾಲಿಕ್ ಪ್ರತ್ಯಕ್ಷರಾಗಿದ್ದು ಪೊಲೀಸ್ ಇಲಾಖೆ ಗರಂ ಆಗಲು ಕಾರಣವಾಯಿತು. ಕೋಲಾರ ನಗರದ (Kolar) ಎಂ.ಜಿ.ರಸ್ತೆಯಲ್ಲಿ ಛತ್ರಪತಿ ಶಿವಾಜಿಗೆ (Chhatrapati Shivaji) ಹಾರ ಹಾಕಿದ ಪ್ರಮೋದ್ ಮುತಾಲಿಕ್ ಕೇಸರಿ ಬಾವುಟ ಹಾರಿಸಿದರು. ಶ್ರೀರಾಮಸೇನೆ ಹಾಗೂ ಹಿಂದೂ ಕಾರ್ಯಕರ್ತರು ಪ್ರಮೋದ್ ಮುಕಾಲಿಕ್​ಗೆ ಜೈಕಾರ ಹಾಕಿ ಘೋಷವಾಕ್ಯ ಕೂಗಿದರು. ಇದರಿಂದ ಸಿಟ್ಟಿಗೆದ್ದ ಪೊಲೀಸ್ ಎಸ್​ಪಿ   ಶ್ರೀರಾಮಸೇನೆಗೆ ಎಚ್ಚರಿಕೆ ಕೊಟ್ಟು 20 ನಿಮಿಷದಲ್ಲಿ ಪ್ರಮೋದ್ ಮುತಾಲಿಕ್ ಅವರನ್ನು ಹೊರ ಕಳುಹಿಸುವಂತೆ ಅಯೋಜಕರಿಗೆ ಖಡಕ್ ಎಚ್ಚರಿಕೆ ನೀಡಿದರು.

ಅನುಮತಿ ಇಲ್ಲದೆ ಪ್ರಮೋದ್ ಮುತಾಲಿಕ್ ಕೋಲಾರಕ್ಕೆ ಆಗಮಿಸಿರುವುದಕ್ಕೆ ಕೋಲಾರ ಎಸ್​ಪಿ ದೇವರಾಜ್ ಖಡಕ್ ಎಚ್ಚರಿಕೆ ನೀಡಿದರು.

ಪ್ರಮೋದ್ ಮುತಾಲಿಕ್ ಏನಂದ್ರು?
ಈಕುರಿತು ಪ್ರತಿಕ್ರಿಯೆ ನೀಡಿದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಕೋಲಾರವೇನು ಪಾಕಿಸ್ತಾನದಲ್ಲಿ ಇಲ್ಲ. ಇದು ಬಹುದೊಡ್ಡ ಸೂಕ್ಷ್ಮ ಪ್ರದೇಶವು ಸಹ ಅಲ್ಲ. ನಾನು ಭಟ್ಕಳದಂತಹ ಪ್ರದೇಶದಲ್ಲೇ ಸಭೆ ಮಾಡಿದ್ದೇನೆ  ಎಂದು ಕೋಲಾರಕ್ಕೆ ಆಗಮಿಸಿದ ಕುರಿತು ಸಮರ್ಥಿಸಿಕೊಂಡರು.

ದಾದಾಗಿರಿಯ ಮನಸ್ಥಿತಿ ಸರಿಯಲ್ಲ
ಕೋಲಾರದಲ್ಲಿ‌ ನನ್ನನ್ನು ತಡೆಯುವುದರ ಹಿಂದೆ ಯಾವುದೋ ಶಕ್ತಿ ಕೆಲಸ ಮಾಡುತ್ತಿದೆ. ಪೋಲೀಸ್ ಇಲಾಖೆ ಏಕಪಕ್ಷೀಯವಾಗಿ ನಡೆದುಕೊಂಡಿದೆ. ಈ ರೀತಿ ವರ್ತನೆ ಸರಿಯಲ್ಲ. ಇದು ಮುಂದಿನ ದಿನಗಳಲ್ಲಿ ನಿಮ್ಮನ್ನ ನುಂಗಿ ಹಾಕುತ್ತದೆ. ನೀವು ದೇಶ ಭಕ್ತಿಯನ್ನು ತಡೆಯುತ್ತಿದ್ದೀರಾ. ನಮ್ಮ ಸ್ವಾತಂತ್ರ್ಯವನ್ನ ತಡಿತಾ ಇದ್ದೀರಾ, ಸಂವಿಧಾನವನ್ನು ಸಹ ತಡೆಯುತ್ತಿದ್ದೀರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Ram Navami: ಕರ್ನಾಟಕದಲ್ಲಿ ರಾಮರಾಜ್ಯ ನಿರ್ಮಾಣ ನಮ್ಮ ಗುರಿ: ಸಚಿವ ಆರ್ ಅಶೋಕ್

ಈ ರೀತಿಯ ದಾದಾಗಿರಿಯ ಮನಸ್ಥಿತಿ ಸರಿಯಲ್ಲ. ಮುಂದಿನ ದಿನಗಳಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡ್ತೇವೆ  ಎಂದು ಕೋಲಾರದ ಶೋಭಾಯಾತ್ರೆ ರದ್ದುಗೊಂಡ ನಂತರ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದರು.

ಕೆಲಹೊತ್ತು ಶೋಭಾಯಾತ್ರೆ ಗೊಂದಲದ ಗೂಡಾಗಿ ಮಾರ್ಪಟ್ಟಿತ್ತು. ಕೋಲಾರ ಶೋಭಾಯಾತ್ರೆ ಕಾರ್ಯಕ್ರಮಕ್ಕೆ ನಿನ್ನೆ ಹಾಗೂ ಇಂದು ಶ್ರೀರಾಮ ಶೋಭಾಯಾತ್ರೆ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದ ಪೊಲೀಸ್ ಇಲಾಖೆ ಡಿ.ಜೆ ವಾಹನವನ್ನು ವಶಕ್ಕೆ ಪಡೆದಿತ್ತು.

ಇದನ್ನೂ ಓದಿ: Harsha Murder: ಹರ್ಷನ ಕನಸಿನಂತೆ ಬಡ ಮಕ್ಕಳಿಗೆ ನೆರವು, ಗೋಶಾಲೆ ನಿರ್ಮಾಣ, ಚಾರಿಟೇಬಲ್ ಟ್ರಸ್ಟ್ ಸ್ಥಾಪನೆ

ಆದರೆ ಕೊನೆಗೆ ಗೊಂದಲದ ಮಧ್ಯೆಯೇ ಶೋಭಾಯಾತ್ರೆ, ಡಿ.ಜೆ ಗೆ ಎಸ್​ಪಿ ದೇವರಾಜ್ ಅನುಮತಿ ನೀಡಿದರು. ಕೋಲಾರದ ಗಾಂಧೀವೃತ್ತದಿಂದ ಶ್ರೀರಾಮ ಶೋಭಾಯಾತ್ರೆ ಆರಂಭವಾಗಿದ್ದು ಸಾವಿರಾರು ಹಿಂದೂ ಯುವಕರು ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಸ್​ಪಿ ದೇವರಾಜ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್  ಕೈಗೊಂಡಿದ್ದಾರೆ.
Published by:guruganesh bhat
First published: