Kolar: ರೈಲ್ವೆ ಕೋಚ್ ಫ್ಯಾಕ್ಟರಿಯೂ ಇಲ್ಲ ರೈಲ್ವೆ ವರ್ಕ್ ಶಾಪ್ ಕೈಗಾರಿಕೆಯೂ ಇಲ್ಲ! ಎಲ್ಲವೂ ಘೋಷಣೆಯಲ್ಲಿ ಮಾತ್ರ

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯದರೂರು ಬಳಿ ಗುದ್ದಲಿ ಪೂಜೆ ನೆರವೇರಿದ್ದ, ರೈಲ್ವೆ ಕೋಚ್ ಫ್ಯಾಕ್ಟರಿಯನ್ನ ಕೇಂದ್ರ ಸರ್ಕಾರ ಮರೆತಿದ್ದು, ಇದೀಗ ರೈಲ್ವೆ ಕೋಚ್ ಪ್ಯಾಕ್ಟರಿಯ ಅವಶ್ಯಕತೆ ಇಲ್ಲ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ತಾಪಕ ಸಂಜೀವ್ ಕಿಶೋರ್ ಅವರು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕೋಲಾರ(ಜೂ.01): ಜಿಲ್ಲೆಗೆ 2012 - 13 ನೇ ಸಾಲಿನ ಕೇಂದ್ರ ರೈಲ್ವೆ ಬಜೆಟ್‍ನಲ್ಲಿ, ಅಂದಿನ ರೈಲ್ವೇ ಮಂತ್ರಿ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಘೋಷಿಸಿದ್ದ ರೈಲ್ವೆ ಕೋಚ್ ಪ್ಯಾಕ್ಟರಿಯನ್ನ (Factory) ಕೇಂದ್ರ ಹಾಗು ರಾಜ್ಯ ಸರ್ಕಾರ ಸಂಪೂರ್ಣವಾಗಿ ಮರೆತಂತಿದೆ. 2014 ರ ಲೋಕಸಭೆ ಚುನಾವಣೆ ಘೋಷಣೆಗೆ ಕೆಲವೇ ಗಂಟೆಗಳಿಗು ಮುನ್ನ, ಕೋಲಾರ (Kolar) ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯದರೂರು ಬಳಿ,  ರಾಜ್ಯದ ಅಂದಿನ ಸಿಎಂ ಸಿದ್ದರಾಮಯ್ಯ (Siddaramaiah), ಕೇಂದ್ರ ರೈಲ್ವೆ ಮಂತ್ರಿ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ರಾಜ್ಯ ಖಾತೆ ಸಚಿವ ಕೆಎಚ್ ಮುನಿಯಪ್ಪ , 1400 ಕೋಟಿ ವೆಚ್ಚದ ಬೃಹತ್ ರೈಲ್ವೆ ಕೋಚ್ ಪ್ಯಾಕ್ಟರಿಗೆ ಭೂಮಿ ಪೂಜೆ ನೆರವೇರಿಸಿದ್ದರು.

ಒಪ್ಪಂದದಂತೆ ಯೋಜನೆಗೆ ರಾಜ್ಯ ಸರ್ಕಾರ 1100 ಎಕರೆ ಜಮೀನನ್ನ ನೀಡುವುದಾಗಿ ಹೇಳಿತ್ತು, ಆದರೆ 600 ಎಕರೆ ಸರ್ಕಾರಿ ಜಮೀನನ್ನ ಮಾತ್ರ ಗುರ್ತಿಸಿದ್ದು, ಹೀಗಾಗಿ ಯೋಜನೆಗೆ ಗ್ರಹಣ ಹಿಡಿದಿದೆ, ಉಳಿದ ಖಾಸಗಿ ಭೂಮಿಯನ್ನ ಖರೀದಿಸಲು ಕೇಂದ್ರ ಸರ್ಕಾರ ಹಾಗು ರಾಜ್ಯ ಸರ್ಕಾರದ ಅನುದಾನದಲ್ಲೆ ಭೂ ಸ್ವಾದೀನ ಪ್ರಕ್ರಿಯೆಗೆ ಅವಕಾಶ ಇದ್ದರು, ಭೂ ಸ್ವಾದೀನಕ್ಕೆ ರಾಜ್ಯ ಸರ್ಕಾರಗಳು ಮುಂದಾಗಲಿಲ್ಲ.

ಸಾವಿರಾರು ಜನರಿಗೆ ಉದ್ಯೋಗ ವ್ಯವಸ್ಥೆ

ಭೂ ಸ್ವಾದೀನ ನಡೆದಿದ್ದರೆ ಇಂದು ಕೋಲಾರದಲ್ಲಿ ಕೋಚ್ ಪ್ಯಾಕ್ಟರಿ ನಿರ್ಮಾಣವಾಗಿ ಸಾವಿರಾರು ಜನರಿಗೆ ಕೆಲಸ ಸಿಗುತ್ತಿತ್ತು, ಆದರೆ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಇಂದಿಗೂ ಭೂ ಸ್ವಾದೀನ ಪ್ರಕ್ರಿಯೆ ನಡೆಯದಿರುವುದು ಕೋಚ್ ಪ್ಯಾಕ್ಟರಿ ವಿಳಂಬಕ್ಕೆ ಮೊದಲ ಕಾರಣವಾಗಿದೆ, ಇನ್ನು 2015 ಕೇಂದ್ರ ರೈಲ್ವೆ ಬಜೆಟ್‍ನಲ್ಲು ಕೋಲಾರದ ಕೋಚ್ ಪ್ಯಾಕ್ಟರಿ ಬಗ್ಗೆ ಬಿಜೆಪಿ ಸರ್ಕಾರವು ನಿರ್ಲಕ್ಷ್ಯ ಮಾಡಿದ್ದು, ದೇಶದಲ್ಲಿ ಇರೊ ಪ್ಯಾಕ್ಟರಿಗಳೆ ನಷ್ಟದಲ್ಲಿದೆ ಎಂದು ಕೋಚ್ ಪ್ಯಾಕ್ಟರಿ ಬೇಡ ಎಂದಿದ್ದರು.

ಗುದ್ದಲಿ ಪೂಜೆ ನಂತ್ರ ಏನೂ ನಡೆಯಲಿಲ್ಲ

ಆದರೆ 2014 ರಲ್ಲಿ  ಸಂಸದರಾಗಿ 7 ನೇ ಬಾರಿಗೆ ಆಯ್ಕೆಯಾಗಿದ್ದ ಕೆಎಚ್ ಮುನಿಯಪ್ಪ, ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸುವಲ್ಲಿ ಇದ್ದ ಉತ್ಸಾಹವನ್ನ, ನಂತರ ತೋರಿಸಲು ವಿಫಲವಾಗಿದರು, ಹೀಗಾಗಿ ಕೋಚ್ ಪ್ಯಾಕ್ಟರಿ ಯೋಜನೆ ಸಂಪೂರ್ಣವಾಗಿ ನೆನೆಗುದಿಗೆ ಬೀಳಲು ಇದು ಸಹ ಮತ್ತೊಂದು ಕಾರಣವಾಯಿತು.

ಆದರೆ 2019- 20 ನೇ ಸಾಲಿನ ಬಜೆಟ್ ನಲ್ಲಿ ಕೋಚ್ ಪ್ಯಾಕ್ಟರಿ ಬದಲಾಗಿ, ಸದ್ಯ ಇರುವ 600 ಎಕರೆ ಜಾಗದಲ್ಲೆ 495 ಕೋಟಿ ವೆಚ್ಚದಲ್ಲಿ ರೈಲ್ವೆ ವರ್ಕ್ ಶಾಪ್ ತೆರೆಯೋದಾಗಿ ಕೇಂದ್ರದ ರೈಲ್ವೆ ಬಜೆಟ್‍ನಲ್ಲಿ ಘೋಷಿಸಲಾಗಿತ್ತು, ವರ್ಕ್ ಶಾಪ್ ಕೈಗಾರಿಕೆ ಆದಷ್ಟು ಬೇಗ ತೆರೆಯುವುದಾಗಿ ಹಾಲಿ ಸಂಸದ ಮುನಿಸ್ವಾಮಿ ಹಲವು ಬಾರಿ ಹೇಳಿದ್ದರು,  ಆದರೆ  ಕೆಎಚ್ ಮುನಿಯಪ್ಪ ರೈಲು ಬಿಟ್ಟಂತೆ, ಸಂಸದ ಮುನಿಸ್ವಾಮಿ ಸಹ ಅವರನ್ನೆ ಅನುಕರಿಸಿದ್ದು, ಮುಂದೆ ಮಾಡುವ ಭರವಸೆಯನ್ನ, ಮಾತ್ರ ನೀಡಿದ್ದಾರೆ.

ಇದನ್ನೂ ಓದಿ: Second PUC ಪರೀಕ್ಷಾ & ಮೌಲ್ಯಮಾಪನ ಕಾರ್ಯನಿರತ ಸಿಬ್ಬಂದಿಗೆ ಗುಡ್ ನ್ಯೂಸ್

ಎರಡೂ ಘೋಷಣೆಗಳೂ ಬಾಕಿ

ಎರಡೂ ಘೋಷಣೆಗಳು ಇನ್ನೂ ಘೋಷಣೆಯಾಗೆ ಉಳಿದಿದ್ದು, ಕೋಲಾರ ಜಿಲ್ಲೆಯನ್ನ  ನಿರ್ಲಕ್ಷ್ಯ ಮಾಡಲಾಗಿದೆ ಎಂದು ಕಾರ್ಮಿಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಈ ಬಗ್ಗೆ ಮಾತನಾಡಿರುವ ಮಾಜಿ ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ಕೇಂದ್ರದ ಯೋಜನೆಗಳಿಗೆ ಈಗಿನ ರಾಜ್ಯ ಸರ್ಕಾರ ಮುನ್ನಣೆ ನೀಡದಿರುವುದು ಯೋಜನೆ ವಿಳಂಬಕ್ಕೆ ಕಾರಣವೆಂದು ಟೀಕಿಸಿದ್ದಾರೆ, ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಾಲಿ ಸಂಸದ ಮುನಿಸ್ವಾಮಿ ಆದಷ್ಟು ಶೀಘ್ರದಲ್ಲೆ ರೈಲ್ವೆ ವರ್ಕ್ ಶಾಪ್ ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ.

ಸದ್ಯಕ್ಕೆ ರೈಲ್ವೆ ಕೋಚ್ ಪ್ಯಾಕ್ಟರಿ ಅವಶ್ಯವಿಲ್ಲ - ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ತಾಪಕ ಸಂಜೀವ್ ಕಿಶೋರ್.

ಕೋಲಾರಕ್ಕೆ ಘೋಷಣೆಯಾಗಿದ್ದ ರೈಲ್ವೆ ಕೋಚ್ ಪ್ಯಾಕ್ಟರಿ ಹಾಗು ರೈಲ್ವ್ ವರ್ಕ್ ಶಾಪ್ ಜಾರಿಯಲ್ಲಿ, ವಿಳಂಬ ಕುರಿತು, ಕೋಲಾರದ  ಬಂಗಾರಪೇಟೆಯಲ್ಲಿ ಪ್ರತಿಕ್ರಿಯೆ ನೀಡಿದ, ನೈರುತ್ಯ ರೈಲ್ವೆ ವಿಭಾಗದ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಅವರು, ಈ ವರ್ಷ ಕೋಲಾರದಲ್ಲಿ ಪ್ಯಾಕ್ಟರಿ ತೆರೆಯುವ ಯಾವುದೇ ಯೋಚನೆ ಇಲ್ಲ ಎಂದು ನ್ಯೂಸ್ 18 ಗೆ ಹೇಳಿಕೆ ನೀಡಿದ್ದಾರೆ, ಹೊಸ ರೈಲುಗಳ ಅಂದಾಜಿನಲ್ಲಿ ಪ್ಯಾಕ್ಟರಿಗಳನ್ನ ತೆರೆಯಲಾಗುತ್ತೆ.

ಇದನ್ನೂ ಓದಿ: Congress Crisis: ಮುಖ್ಯಮಂತ್ರಿ ಚಂದ್ರು ಬಳಿಕ ಕಾಂಗ್ರೆಸ್ ಗೆ ಗುಡ್ ಬೈ ಹೇಳಿಕ ಬ್ರಿಜೇಶ್ ಕಾಳಪ್ಪ

ಆದರೆ ಈಗ ಅಂತಹ ಆಲೋಚನೆ ಇಲ್ಲ, ಸದ್ಯ ಇರುವ ರೈಲ್ವೆ ನಿಲ್ದಾಣಗಳ ಸುಧಾರಣೆ ನಮ್ಮ ಗುರಿ ಎಂದಿದ್ದಾರೆ, ಇನ್ನು ಈ ಬಗ್ಗೆ ಹಾರಿಕೆ ಉತ್ತರ ನೀಡಿರುವ ಸಂಸದ ಮುನಿಸ್ವಾಮಿ, ನಾನು ಕೆಎಚ್  ಮುನಿಯಪ್ಪ ಹಾಗೆ ರೈಲು ಬಿಡೊನಲ್ಲ, ರೈಲ್ವೆ ಕೋಚ್ ಪ್ಯಾಕ್ಟರಿ ಬದಲಾಗಿ, ವರ್ಕ್  ಶಾಪ್ ತೆರೆಯುವುದಾಗಿ ಕೇಂದ್ರ ರೈಲ್ವೆ ಮಂತ್ರಿ ಮಾತು ಕೊಟ್ಟಿದ್ದಾರೆ, ಕೇಂದ್ರ ಸಚಿವರನ್ನ ಕೋಲಾರಕ್ಕೆ ಕರೆತಂದು ಜಾಗದ ಸಮಸ್ಯೆಯನ್ನ ಬಗೆಹರಿಸುವುದಾಗಿ ತಿಳಿಸಿದ್ದಾರೆ.
Published by:Divya D
First published: