ಮಾಜಿಗಳಾದ ಮೇಲೆ ಕೋಲಾರ ಜಿಲ್ಲೆಯತ್ತ ಮುಖಮಾಡದೆ ದೂರ ಉಳಿದ ನಾಯಕರು?

ಕೋಲಾರ ಜಿಲ್ಲೆ ಮೊದಲಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಸದ್ಯ ಜಿಲ್ಲೆಯಲ್ಲೀಗ ನಾಲ್ಕು ಕಾಂಗ್ರೆಸ್ ಶಾಸಕರಿದ್ದಾರೆ. ಆದರೆ ಜಿಲ್ಲೆಯಲ್ಲಿ ಬಿಜೆಪಿ ಸಂಸದರು, ಸರ್ಕಾರದಲ್ಲಿ ಸಚಿವರಾಗಿರುವ ಉಸ್ತುವಾರಿ ಮಂತ್ರಿಗಳ ವಿರುದ್ದ ಮಾತನಾಡುವ ಮನಸ್ಸು ಯಾವೊಬ್ಬರು ಮಾಡುತ್ತಿಲ್ಲ, ಜಿಲ್ಲೆಯ ಆಡಳಿತ ನಡೆಸುವ ಅಧಿಕಾರಿಗಳ ಮಧ್ಯೆಯೇ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದೆ.

news18-kannada
Updated:August 10, 2020, 8:13 AM IST
ಮಾಜಿಗಳಾದ ಮೇಲೆ ಕೋಲಾರ ಜಿಲ್ಲೆಯತ್ತ ಮುಖಮಾಡದೆ ದೂರ ಉಳಿದ ನಾಯಕರು?
ಕೆ.ಎಚ್.ಮುನಿಯಪ್ಪ
  • Share this:
ಕೋಲಾರ(ಆ.10): ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರನಂತೆ ಗುರ್ತಿಸಿಕೊಂಡು ಸತತ 7 ಬಾರಿ ಸಂಸದರಾಗಿದ್ದ ಕೆಎಚ್ ಮುನಿಯಪ್ಪ, ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ಮುನಿಸ್ವಾಮಿ ವಿರುದ್ದ ಸೋಲುಂಡ ನಂತರ, ಜಿಲ್ಲೆಯತ್ತ ಕೆಎಚ್ ಮುನಿಯಪ್ಪ ಅಷ್ಟಾಗಿ ಗಮನಹರಿಸಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ.

ಚುನಾವಣೆ ಸೋಲಿನ ನಂತರ ಕೆಲವು ಬಾರಿ ಮಾತ್ರ ಪತ್ರಿಕಾಗೋಷ್ಟಿ ನಡೆಸಿದ್ದ ಅವರು, ತಿಂಗಳಿಗೊಮ್ಮೆಯಾದರೂ, ಮಾಧ್ಯಮಗಳ ಮುಂದೆ ಬರುವುದಾಗಿ ಹೇಳಿದ್ದರು. ಆದರೆ ಅಧಿಕಾರದಿಂದ ವಂಚಿತರಾದ ಮೇಲೆ ಮುನಿಯಪ್ಪ ಅದ್ಯಾಕೋ ಜಿಲ್ಲೆಯತ್ತ ಮುಖ ಮಾಡುವ ಮನಸ್ಸೇ ಮಾಡುತ್ತಿಲ್ಲ, ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳು ಇಂದಿಗೂ ಸಾರ್ವಜನಿಕರನ್ನ ಪೀಡಿಸುತ್ತಿದ್ದು, ಆಡಳಿತ ಚುಕ್ಕಾಣಿ ಹಿಡಿದ ನಾಯಕರನ್ನ ಪ್ರಶ್ನೆ ಮಾಡುವ ನಾಯಕತ್ವಕ್ಕೆ ಕೊರತೆ ಉಂಟಾಗಿದೆ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪರ್ಧಿಸುವ ಹುಮ್ಮಸ್ಸು ಹೊಂದಿರುವ ಮುನಿಯಪ್ಪನವರು, ಚುನಾವಣೆ ಸೋಲನ್ನು ಇನ್ನು ಅರಗಿಸಿಕೊಂಡಂತೆ ಕಾಣುತ್ತಿಲ್ಲ, ಜಿಲ್ಲೆಯಲ್ಲಿ ಮುಂದಿನ ದಿನಗಳನ್ನ ಕಾದು ನೋಡುವ ತಂತ್ರಕ್ಕೆ ಅವರು ಮೊರೆಹೋಗಿದ್ದು, ಸಮಯ ಬಂದಾಗಲೇ ಎಲ್ಲವನ್ನು ಮಾಡೋಣ ಎಂದಿರುವುದಾಗಿ ತಿಳಿದುಬಂದಿದೆ.

Karnataka Rain Updates: ಮಲೆನಾಡಲ್ಲಿ ತಗ್ಗಿದ ಮಳೆ; ನಿಟ್ಟುಸಿರು ಬಿಟ್ಟ ಕಾಫಿನಾಡಿನ ಜನ

ಚುನಾವಣೆ ನಂತರ ಕಾಣೆಯಾದ ಮಾಜಿ ಶಾಸಕರು, ಘಟಾನುಘಟಿ ಅಭ್ಯರ್ಥಿಗಳು

ಲೋಕಸಭೆ ಚುನಾವಣೆಗೂ ಮೊದಲು ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದ 6 ಕ್ಷೇತ್ರಗಳಲ್ಲಿಯು ಜಿದ್ದಾ ಜಿದ್ದಿನ ಪೈಪೋಟಿ ಉಂಟಾಗಿತ್ತು, ಶ್ರೀನಿವಾಸಪುರ ಕ್ಷೇತ್ರದಿಂದ ರಮೇಶ್‍ಕುಮಾರ್ ಎದುರು ಸ್ಪರ್ಧಿಸಿದ್ದ ಜಿಕೆ ವೆಂಕಟಶಿವಾರೆಡ್ಡಿ, ಕೋಲಾರ ಕ್ಷೇತ್ರದಿಂದ ಶ್ರೀನಿವಾಸಗೌಡ ಎದುರು ಸ್ಪರ್ಧಿಸಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಲೂರು ಕ್ಷೇತ್ರದಲ್ಲಿ ನಂಜೇಗೌಡ ಎದುರು ಸ್ಪರ್ಧಿಸಿದ್ದ ಮಾಜಿ ಶಾಸಕ ಮಂಜುನಾಥಗೌಡ, ಘಟಾನುಘಟಿ ಅಭ್ಯರ್ಥಿಗಳಾದ ಸಮೃದ್ದಿ ಮಂಜುನಾಥ್, ಎಂ ನಾರಾಯಣಸ್ವಾಮಿ, ಕೃಷ್ಣಯ್ಯಶೆಟ್ಟಿ ಇವರೆಲ್ಲರು ಹಾಲಿ ಶಾಸಕರಿಗೆ ತೀವ್ರ ಪೈಪೋಟಿಯನ್ನ ನೀಡಿದ್ದವರು. ಆದರೆ ಚುನಾವಣೆಯಲ್ಲಿ ಸೋತನಂತರ ಕ್ಷೇತ್ರಗಳತ್ತ ಅಷ್ಟಾಗಿ ಮುಖಮಾಡದೇ ದೂರವೇ ಉಳಿದಿದ್ದಾರೆ, ಹೀಗಾಗಿ ಹಾಲಿ ಶಾಸಕರ ಕ್ಷೇತ್ರಗಳಲ್ಲಿ ಕಂಡುಬರುವ ವೈಪಲ್ಯಗಳನ್ನು ಪ್ರಶ್ನಿಸುವ, ಹಾಗು ಅಧಿಕಾರದ ಚುಕ್ಕಾಣಿ ಹಿಡಿದಿರುವ ನಾಯಕರ ನಡೆಯನ್ನು ಪ್ರಶ್ನಿಸದೆ ದೂರವೇ ಉಳಿದಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ.

ವಿರೋಧ ಪಕ್ಷದ ಸ್ಥಾನ  ನಿಭಾಯಿಸುವುದರಲ್ಲಿ ಕಾಂಗ್ರೆಸ್ ಶಾಸಕರು ವಿಫಲ ?ಕೋಲಾರ ಜಿಲ್ಲೆ ಮೊದಲಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಸದ್ಯ ಜಿಲ್ಲೆಯಲ್ಲೀಗ ನಾಲ್ಕು ಕಾಂಗ್ರೆಸ್ ಶಾಸಕರಿದ್ದಾರೆ. ಆದರೆ ಜಿಲ್ಲೆಯಲ್ಲಿ ಬಿಜೆಪಿ ಸಂಸದರು, ಸರ್ಕಾರದಲ್ಲಿ ಸಚಿವರಾಗಿರುವ ಉಸ್ತುವಾರಿ ಮಂತ್ರಿಗಳ ವಿರುದ್ದ ಮಾತನಾಡುವ ಮನಸ್ಸು ಯಾವೊಬ್ಬರು ಮಾಡುತ್ತಿಲ್ಲ, ಜಿಲ್ಲೆಯ ಆಡಳಿತ ನಡೆಸುವ ಅಧಿಕಾರಿಗಳ ಮಧ್ಯೆಯೇ ಸಮನ್ವಯತೆ ಕೊರತೆ ಎದ್ದು ಕಾಣುತ್ತಿದೆ. ಇದನ್ನು ಹಾಲಿ ಶಾಸಕರು ಪ್ರಶ್ನಿಸದೇ ಮೌನಕ್ಕೆ ಶರಣಾಗಿದ್ದಾರೆ. ಇನ್ನು ಕೆಲ ಶಾಸಕರು ಆಡಳಿತ ಪಕ್ಷದ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಕಾರಣ ಪ್ರಶ್ನಿಸಲಾಗದ ಸ್ಥಿತಿಯಲ್ಲಿದ್ದಾರೆ. ಒಟ್ಟಿನಲ್ಲಿ ಆಡಳಿತ ಪಕ್ಷದ ವೈಫಲ್ಯವನ್ನು ಎತ್ತಿತೋರಿಸುವುದನ್ನು ಮಾಡದಿದ್ದರೂ, ಸಾರ್ವಜನಿಕರ ಸಮಸ್ಯೆಗಳು ಆಲಿಸಲು ಮಾಜಿ ನಾಯಕರು ಮುಂದಾಗುತ್ತಿಲ್ಲ, ಇದನ್ನು ವಿರೋಧ ಪಕ್ಷದ ವೈಫಲ್ಯ ಎಂದರು ತಪ್ಪಾಗಲಾರದು.

ಒಟ್ಟಿನಲ್ಲಿ ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ನೀರಾವರಿಯಂತಹ ಜ್ವಲಂತ ಸಮಸ್ಯೆಗಳಿದ್ದು, ಇನ್ನು ಬಗೆಹರಿಯದೆ ಉಳಿದಿದೆ.  ಇದರ ಜೊತೆಗೆ ಸರ್ಕಾರಿ ಕಚೇರಿಗಳಲ್ಲಿ ಮಿತಿಮೀರಿದ ಭ್ರಷ್ಟಾಚಾರ ನಡೆಯುತ್ತಿರುವ ಆರೋಪಗಳು ಯಥೇಚ್ಚವಾಗಿ ಕೇಳಿಬರುತ್ತಿದೆ.  ಇದು ಆಡಳಿತ ಪಕ್ಷದ ವೈಫಲ್ಯವೋ, ಅಥವಾ ವಿರೋಧ ಪಕ್ಷದ ವೈಫಲ್ಯವೋ ಸಾರ್ವಜನಿಕರೇ ನಿರ್ಧರಿಸಬೇಕು.
Published by: Latha CG
First published: August 10, 2020, 8:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading