HOME » NEWS » State » KOLAR NEWS FORMER MINISTER VARTURU PRAKASH TRY TO JOIN CONGRESS PARTY RRK LG

ಕೋಲಾರ: ಕಾಂಗ್ರೆಸ್​ ಸೇರಲು ಲಾಬಿ ಮುಂದುವರೆಸಿದ ವರ್ತೂರು ಪ್ರಕಾಶ್‌

ಶತಾಯ ಗತಾಯ ಜಿಲ್ಲೆಯಲ್ಲಿ ಮತ್ತೊಮ್ಮೆ ರಾಜಕೀಯವಾಗಿ ನೆಲೆಯೂರಲು ಹವಣಿಸುತ್ತಿರುವ ವರ್ತೂರು ಪ್ರಕಾಶ್ ರಿಗೆ, ಕೈ ನಾಯಕರೇ ವಿರೋಧ ವ್ಯಕ್ತಪಡಿಸುತ್ತಿದ್ದರೂ ಸಿದ್ದರಾಮಯ್ಯರನ್ನ ಭೇಟಿ ಮಾಡಿ ತಮ್ಮ ನೋವು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

news18-kannada
Updated:March 3, 2021, 4:01 PM IST
ಕೋಲಾರ: ಕಾಂಗ್ರೆಸ್​ ಸೇರಲು ಲಾಬಿ ಮುಂದುವರೆಸಿದ ವರ್ತೂರು ಪ್ರಕಾಶ್‌
ಮಾಜಿ ಸಚಿವ ವರ್ತೂರು ಪ್ರಕಾಶ್
  • Share this:
ಕೋಲಾರ(ಮಾ.03): ಮಾಜಿ ಸಚಿವ ವರ್ತೂರು ಪ್ರಕಾಶ್ ಕಾಂಗ್ರೆಸ್ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಮಧ್ಯೆ ಮಾಜಿ ಸಿಎಂ  ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ಪಕ್ಷಕ್ಕೆ ಸೇರಿಸಿಕೊಂಡು , ಮುಂದಿನ ಚುನಾವಣೆಯಲ್ಲಿ ಕೋಲಾರ ವಿಧಾನಸಭೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ವರ್ತೂರು ದುಂಬಾಲು ಬಿದ್ದಿದ್ದಾರೆ. ಈಗಾಗಲೇ ಕಾಂಗ್ರೆಸ್ ಬಾಗಿಲು ವರ್ತೂರು ಪ್ರಕಾಶ್ ಪಾಲಿಗೆ ಮುಚ್ಚಿದೆಯೆಂದು, ಕೆಎಚ್ ಮುನಿಯಪ್ಪ ಕಿಡಿಕಾರಿದ್ದು ಅವರ ಸಹವಾಸವೇ ಬೇಡವೆಂದಿದ್ದಾರೆ.

ಕೆಎಚ್ ಮುನಿಯಪ್ಪ ಮಾತಿಗೆ ತಿರುಗೇಟು ನೀಡಿದ್ದ ವರ್ತೂರು,  ಕೋಗಿಲಹಳ್ಳಿ ನಿವಾಸದ ಬಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೂತನ ಅಧ್ಯಕ್ಷ - ಉಪಾಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದ್ಯ ಕಾಂಗ್ರೆಸ್​ ಸೇರ್ಪಡೆಗೆ ಸಿದ್ದರಾಮಯ್ಯ, ರಮೇಶ್ ಕುಮಾರ್ ಅಡ್ಡಗಾಲು ಹಾಕಿಲ್ಲ. ಅಡ್ಡಗಾಲಾಗಿರುವುದು ಕೆ.ಎಚ್.ಮುನಿಯಪ್ಪ ಎಂದಿದ್ದು, ಕಟುಕರು ಕೂಡ ನೀರು ಹಾಕಿ ಕುರಿ ಕೊಯ್ಯುತ್ತಾರೆ. ಆದರೆ ಕೆ.ಎಚ್.ಮುನಿಯಪ್ಪ ನೀರಿಲ್ಲದೇ ಕತ್ತು ಕೊಯ್ಯುತ್ತಾರೆ ಎಂದು ಆರೋಪಿಸಿದರು.

ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ವರ್ತೂರು ಪ್ರಕಾಶ್ ಅವರು,  ತಮ್ಮ ಭಾಷಣದ ಉದ್ದಕ್ಕೂ ಮುನಿಯಪ್ಪ ವಿರುದ್ದ ವಾಗ್ದಾಳಿ ನಡೆಸಿದ್ದು ವಿಶೇಷ ಬೆಳವಣಿಗೆ ಆಗಿತ್ತು, ಕೊಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡರಿಗೆ ಬುದ್ದಿ ಭ್ರಮಣೆ ಇಲ್ಲ, ಕೆ.ಎಚ್.ಮುನಿಯಪ್ಪಗೆ ಬುದ್ದಿ ಭ್ರಮಣೆ ಎಂದ ಅವರು, 7 ಪಂಚಾಯಿತಿಯಲ್ಲಿ ಕಾಂಗ್ರೆಸ್​ ಗೆದ್ದಿದೆ ಅಂತಾರೆ. ಎಲ್ಲಿದೆ ತೋರಿಸಲಿ  ಎಂದು ಕಾಂಗ್ರೆಸ್ ಗೆ ಸವಾಲು ಹಾಕಿದರು.

ವರ್ತೂರು ಪ್ರಕಾಶ್ ಸೇರ್ಪಡೆಗೆ ಕಾಂಗ್ರೆಸ್ ನಾಯಕರ ವಿರೋಧ

ಮಾಜಿ ಸಚಿವ ವರ್ತೂರು ಪ್ರಕಾಶ್ ಕಾಂಗ್ರೆಸ್ ಸೇರ್ಪಡೆಗೆ ಈಗಾಗಲೆ ರಾಜ್ಯ ನಾಯಕರು  ವಿರೋಧ ವ್ಯಕ್ತಪಡಿಸುಲಿರುವ, ಮಾಹಿತಿಯನ್ನು ಕೆಎಚ್ ಮುನಿಯಪ್ಪ ಬಹಿರಂಗವಾಗಿ ಹೇಳಿಕೆ ನೀಡಿದ್ದರು, ಈ ಹಿಂದೆಯು ಸಿದ್ದರಾಮಯ್ಯ ವಿರುದ್ದವಾಗಿ ಮಾತನಾಡಿದ್ದ ವರ್ತೂರು ಪ್ರಕಾಶ್ , ಸಿದ್ದರಾಮಯ್ಯ ಅವರಿಂದ ಅಂತರವನ್ನು ಕಾಯ್ದುಕೊಂಡಿದ್ದರು, ಆದರೀಗ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲು‌ ಹಿನ್ನಲೆ, ರಾಜಕಿಯ ಸ್ಥಾನಮಾನ ಪಡೆಯಲು ಮತ್ತೊಮ್ಮೆ ಕಾಂಗ್ರೆಸ್ ಕದ ತಟ್ಟಲು ಆಗಾಗ್ಗ ಪ್ರಯತ್ನ ನಡೆಸುತ್ತಲೆ ಇದ್ದಾರೆ, ಆದರೆ ವರ್ತೂರು ಸೇರ್ಪಡೆಗೆ ಕೋಲಾರ ಜಿಲ್ಲೆಯ ಕಾಂಗ್ರೆಸ್  ನಾಯಕರೇ ವಿರೋದ ಮಾಡುತ್ತಿರುವ ಹಿನ್ನಲೆ, ಹೈ ಕಮಾಂಡ್ ಸಹ ವರ್ತೂರು ಪ್ರಕಾಶ್ ಸೇರ್ಪಡೆ ಬಗ್ಗೆ ಚರ್ಚೆ ನಡೆಸಿಲ್ಲ ಎನ್ನಲಾಗಿದೆ.

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಇಂದು ಬೀದಿಗಿಳಿದ ಬಿಸಿಯೂಟ ಕಾರ್ಯಕರ್ತೆಯರು; ನಾಳೆ ಕಾರ್ಮಿಕ ಸಂಘಟನೆಯಿಂದ ಬೃಹತ್ ಪ್ರತಿಭಟನೆ

ಶತಾಯ ಗತಾಯ ಜಿಲ್ಲೆಯಲ್ಲಿ ಮತ್ತೊಮ್ಮೆ ರಾಜಕೀಯವಾಗಿ ನೆಲೆಯೂರಲು ಹವಣಿಸುತ್ತಿರುವ ವರ್ತೂರು ಪ್ರಕಾಶ್ ರಿಗೆ, ಕೈ ನಾಯಕರೇ ವಿರೋಧ ವ್ಯಕ್ತಪಡಿಸುತ್ತಿದ್ದರೂ ಸಿದ್ದರಾಮಯ್ಯರನ್ನ ಭೇಟಿ ಮಾಡಿ ತಮ್ಮ ನೋವು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಸಿದ್ದರಾಮಯ್ಯ ರನ್ನ ಭೇಟಿಯಾಗಿ ಪಕ್ಷಕ್ಕೆ ಕರೆಸಿಕೊಂಡು, ವಿಧಾನಸಭೆ ಟಿಕೆಟ್ ಕೊಡಿಸುವಂತೆ,  ವರ್ತೂರು ಇನ್ನಿಲ್ಲದ ಕಸರತ್ತಿಗೆ ಕೈ ಹಾಕಿದ್ದು ಮುಂದಿನ ಬೆಳವಣಿಗೆ ಕಾದುನೋಡಬೇಕು.

ಒಟ್ಟಿನಲ್ಲಿ ಮೂರು ಬಾರಿ ಪಕ್ಷೇತರವಾಗಿ ಚುನಾವಣೆ ಎದುರಿಸಿ ಎರಡು ಬಾರಿ ಶಾಸಕರಾಗಿದ್ದ ವರ್ತೂರು ಪ್ರಕಾಶ್ ಗೆ, ಸದ್ಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯೇ ದೊಡ್ಡ ಸವಾಲಾಗಿದೆ.
Published by: Latha CG
First published: March 3, 2021, 3:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories