ವ್ಯಾಕ್ಸಿನ್​ ಕೊರತೆಗೆ ವಿರೋಧ ಪಕ್ಷಗಳೇ ಕಾರಣ ಎಂದ ಕೋಲಾರ ಸಂಸದ ಮುನಿಸ್ವಾಮಿ

ಇದೇ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ ಮಾಧ್ಯಮಗಳ ಮೇಲೆ ಗೂಬೆ ಕೂರಿಸಲು ಯತ್ನಿಸಿದರು. ಕೊರೋನಾ ವಿಚಾರದಲ್ಲಿ ಮಾಧ್ಯಮಗಳಲ್ಲಿ ಭಯ ಹುಟ್ಟಿಸುವ ಕೆಲಸ ಆಗ್ತಿದೆ. ಇದನ್ನ ಕಡಿಮೆ ಮಾಡುವ ಕೆಲಸವನ್ನು ಮೀಡಿಯಾಗಳು ಮಾಡಬೇಕು ಎಂದರು.

ಸಂಸದ ಮುನಿಸ್ವಾಮಿ

ಸಂಸದ ಮುನಿಸ್ವಾಮಿ

 • Share this:
  ಕೋಲಾರ(ಮೇ 13): ಈ ಸಂದರ್ಭದಲ್ಲಿ ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲೆಡೆ ಲಸಿಕೆ ಕೊರತೆ ಎದ್ದು ಕಾಣುತ್ತಿದೆ. ವ್ಯಾಕ್ಸಿನ್​ಗಾಗಿ ಜನರು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೋಲಾರದ ಸಂಸದ ಮುನಿಸ್ವಾಮಿ ವ್ಯಾಕ್ಸಿನ್​ ಕೊರತೆಗೆ ವಿರೋಧ ಪಕ್ಷಗಳೇ ಕಾರಣ ಎಂಬ ಹೇಳಿಕೆ ನೀಡಿದ್ದಾರೆ. 

  ಹೌದು,  ಆರೋಗ್ಯ ಸಚಿವ ಸುಧಾಕರ್​ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ಇದೆ. ಇದಕ್ಕೆ ವಿಪಕ್ಷಗಳೇ ಕಾರಣ. ಆವತ್ತು ವ್ಯಾಕ್ಸಿನ್ ತಗೊಳ್ಳಿ ಅಂದ್ರೆ, ವಿಪಕ್ಷಗಳು ಇದು ಬಿಜೆಪಿ ವ್ಯಾಕ್ಸಿನ್ ಅಂದ್ರು. ಕೆಲ ಸಮುದಾಯಕ್ಕೆ ಭಯ ಹುಟ್ಟಿಸಿದರು. ಹೀಗಾಗಿ ವ್ಯಾಕ್ಸಿನ್​ನ್ನು ಹೊರ ದೇಶಗಳಿಗೆ ಕಳುಹಿಸಲಾಯಿತು ಎಂದು ಹೇಳಿದರು.

  ಕೊರೋನಾ ಎರಡನೇ ಅಲೆಯಲ್ಲಿ ಬೆಂದವರಿಗೆ ನೆರವು; ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕ್ಕೆ ಮೆಚ್ಚುಗೆ

  ಸಾವಿನ ಮನೆಯಲ್ಲಿ ರಾಜಕೀಯ ಮಾಡೋದು ಬಿಡಿ. ಸಿಎಂ ಆಗೋಕೆ ಬಟ್ಟೆ ಹೊಲಿಸಿಕೊಂಡು‌ ಇರೋರು ರಾಜಕೀಯ ಮಾಡಬೇಡಿ. ಸರ್ಕಾರಕ್ಕೆ ಸಹಕಾರ ಕೊಟ್ಟು ವಿಪಕ್ಷಗಳು ಕೆಲಸ‌ ಮಾಡಬೇಕು. ರಾಜಕೀಯ ಬಿಟ್ಟು ಸಹಕಾರ ಕೊಡಿ ಎಂದು ವಾಗ್ದಾಳಿ ನಡೆಸಿದರು.

  ಇದೇ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ ಮಾಧ್ಯಮಗಳ ಮೇಲೆ ಗೂಬೆ ಕೂರಿಸಲು ಯತ್ನಿಸಿದರು. ಕೊರೋನಾ ವಿಚಾರದಲ್ಲಿ ಮಾಧ್ಯಮಗಳಲ್ಲಿ ಭಯ ಹುಟ್ಟಿಸುವ ಕೆಲಸ ಆಗ್ತಿದೆ. ಇದನ್ನ ಕಡಿಮೆ ಮಾಡುವ ಕೆಲಸವನ್ನು ಮೀಡಿಯಾಗಳು ಮಾಡಬೇಕು ಎಂದರು.

  ಸಂಸದರು ಯಾಕೆ ಮೌನವಾಗಿದ್ದೀರಾ.? ಕೇಂದ್ರದ ಬಳಿ ಯಾಕೆ ಕೇಳುತ್ತಿಲ್ಲ, ಮೂರೂವರೆ ತಿಂಗಳಿನಿಂದ ಏನು ಮಾಡ್ತಿದ್ದೀರಾ? ಎಂದು ಮಾಧ್ಯಮದವರು ಪ್ರಶ್ನಿಸುತ್ತಿದ್ದಂತೆ, ಸಂಸದ ಮುನಿಸ್ವಾಮಿ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅಲ್ಲಿಂದ ಕಾಲ್ಕಿತ್ತರು.

  ಕೋಲಾರದಲ್ಲಿ ಕೇಸ್ ಜಾಸ್ತಿ ಆಗ್ತಿದೆ. ಗಡಿ ಭಾಗದಲ್ಲಿ ಇರೋದ್ರಿಂದ ಕೆಲಸಕ್ಕೆ ಹೋಗೋರು ಜಾಸ್ತಿ.  ಹೀಗಾಗಿ ಕೇಸ್ ಜಾಸ್ತಿ ಆಗ್ತಿದೆ. ಆಕ್ಸಿಜನ್ ಪ್ಲ್ಯಾಂಟ್ ಗೊಂದಲ‌ ಇತ್ತು. ಇದನ್ನ ಸರಿ ಮಾಡಬೇಕು ಅಂತ ಮನವಿ ಮಾಡಿದೆ. ಈಗ ಒಂದು ಪ್ಲಾಂಟ್ ರೆಡಿ ಇದೆ, ಅದನ್ನ ಉದ್ಘಾಟನೆ ಮಾಡಲಾಗ್ತಿದೆ. ಕೋಲಾರದಲ್ಲಿ ನಾವು ಟಾಸ್ಕ್ ಫೋರ್ಸ್ ರಚನೆ ಮಾಡಿ ಕೆಲಸ ಮಾಡುತ್ತಿದ್ದೇವೆ ಎಂದರು.
  Published by:Latha CG
  First published: