ಕೊರೋನಾ ಸಂಕಷ್ಟದಲ್ಲಿ ಜನಪ್ರತಿನಿಧಿಗಳ ಕಿತ್ತಾಟ; ಸಂಸದ ಎಸ್ ಮುನಿಸ್ವಾಮಿ-ನಾರಾಯಣಸ್ವಾಮಿ ಮಧ್ಯೆ ಜಟಾಪಟಿ

ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರು, ಇದೀಗ, ಮುನಿಸ್ವಾಮಿ ವಿರುದ್ದವೇ ಹಿರಿಯ ಶಾಸಕರಿಗೆ ದೂರು ನೀಡಿದ್ದಾರೆ.

ಸಂಸದ ಎಸ್ ಮುನಿಸ್ವಾಮಿ-ನಾರಾಯಣಸ್ವಾಮಿ

ಸಂಸದ ಎಸ್ ಮುನಿಸ್ವಾಮಿ-ನಾರಾಯಣಸ್ವಾಮಿ

 • Share this:
  ಕೋಲಾರ (ಜೂ, 1) : ಕೊರೋನಾ  ಸಂಕಷ್ಟದ ಸಮಯದಲ್ಲಿ ಸಮನ್ವಯತೆ ಮೂಲಕ ಕಾರ್ಯ ನಿರ್ವಹಿಸಬೇಕಿದ್ದ ಸಂಸದರು ಹಾಗೀ ಶಾಸಕರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.  ಮಹಾಮಾರಿ ಕೊರೋನಾ ಸೋಂಕು ನಿರ್ವಹಣೆ ವಿಚಾರ ಪಕ್ಕಕ್ಕೆ ಸರಿಸಿ, ಆಸ್ತಿ, ಭ್ರಷ್ಟಾಚಾರ, ಹಾಗೂ ಇತರೆ ಆರೋಪಗಳಿಂದ ಚರ್ಚೆ ನಡೆಸಿದ್ದಾರೆ. ಕೋಲಾರ  ಸಂಸದ ಎಸ್ ಮುನಿಸ್ವಾಮಿ ಹಾಗು ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಮಧ್ಯೆಯಿದ್ದ ಉತ್ತಮ ಸಂಬಂಧ ಹಳಸಿದಂತೆ ಕಾಣುತ್ತಿದೆ, ಸಂಸದರಾಗಿ ಆಯ್ಕೆಯಾದ ಮೊದಲ ದಿನಗಳಲ್ಲಿ ಮುನಿಸ್ವಾಮಿ ಅವರನ್ನು  ಹಾಡಿ ಹೊಗಳಿದ್ದರು.  ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರು, ಇದೀಗ, ಮುನಿಸ್ವಾಮಿ ವಿರುದ್ದವೇ ಹಿರಿಯ ಶಾಸಕರಿಗೆ ದೂರು ನೀಡಿದ್ದಾರೆ.

  ಕಳೆದ ನಾಲ್ಕು ದಿನದ‌ ಹಿಂದೆ ಖಾಸಗಿ ಲೇಔಟ್ ಒಂದರಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಮ್ಮುಖದಲ್ಲಿ, ಜಿಲ್ಲೆಯ ಶಾಸಕರಾದ ಎಸ್ ಎನ್ ನಾರಾಯಣಸ್ವಾಮಿ, ಕೆವೈ ನಂಜೇಗೌಡ, ಜೆಡಿಎಸ್ ಶಾಸಕ ಶ್ರೀನಿವಾಸಗೌಡ, ಪರಿಷತ್ ಶಾಸಕರಾದ ನಾಸೀರ್ ಅಹಮದ್, ಗೋವಿಂದರಾಜು ಕುಳಿತಿದ್ದ ಪೋಟೋಗಳು ವೈರಲ್ ಆಗಿದ್ದವು, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಅವರೆ ಸಭೆ ಆಯೋಜಿಸಿದ್ದು, ತಾಲೂಕಿನ ಆಡಳಿತದಲ್ಲಿ ಸಂಸದ ಮುನಿಸ್ವಾಮಿ ಅವರು ಹಸ್ತಕ್ಷೇಪ ಮಾಡಿ, ಕೆಲ ಕಾರ್ಯಗಳಿಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಕೆಲ ಶಾಸಕರು ಆರೋಪಿಸಿದ್ದಾರೆ.  ಲೋಕಸಭೆ ಚುನಾವಣೆಯಲ್ಲಿ ರಮೇಶ್ ಕುಮಾರ್ , ಶ್ರೀನಿವಾಸಗೌಡ ಹಾಗು ಎಸ್ ಎನ್ ನಾರಾಯಣಸ್ವಾಮಿ ಅವರು ಮುನಿಸ್ವಾಮಿ ಅವರ ಪರವಾಗಿ ಕೆಲಸ ಮಾಡಿದ್ದು, ಇದೀಗ ಅವರ ಕ್ಷೇತ್ರದಲ್ಲಿ ಸಂಸದರ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಏನು ಎಂದು ಚರ್ಚೆ ಮಾಡಿದ್ದಾರೆ.  ಆದರೆ ಸಭೆಯ ಬಗ್ಗೆ ಭಿನ್ನ ಹೇಳಿಕೆಗಳು ಕೇಳಿಬರುತ್ತಿದೆ. ಇದಕ್ಕೆ ಉತ್ತರ ನೀಡಿರೊ ಕೋಲಾರ ಸಂಸದ ಎಸ್ ಮುನಿಸ್ವಾಮಿ ಸಿಡಿಮಿಡಿಗೊಂಡಿದ್ದಾರೆ.

  ಮೂರು ಕೆರೆಗಳನ್ನು ಒತ್ತುವರಿ ಮಾಡಿ ಅಕ್ರಮವಾಗಿ ಲೇಔಟ್ ನಿರ್ಮಾಣ ಆರೋಪ

  ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಅವರ ಹೆಸರೇಳದೆ  ಸಂಸದ ಎಸ್ ಮುನಿಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ, ಜಿಲ್ಲೆಯಲ್ಲಿ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಕೆಲವರು ಕೊರೊನಾ ಗೆ ಹೆದರಿ ರೆಸಾರ್ಟ್,  ಹೊಟೆಲ್ ಗಳಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ, ಆದರೆ ನಾನು ಮಾತ್ರ ಜನರಿಂದಲೇ ಆಯ್ಕೆಯಾಗಿದ್ದೇನೆ, ಯಾರೋ ಕೆಲವರಿಂದ ನಾನು ಆಯ್ಕೆಯಾಗಿಲ್ಲ ಎಂದರು,

  ಇನ್ನು  ಎಸ್ ಎನ್ ನಾರಾಯಣಸ್ವಾಮಿ ಸರ್ಕಾರದ ಎಷ್ಟೆಷ್ಟು ಜಮೀನು ಕಬಳಿಸಿದ್ದಾರೆ ಯಾವ ಯಾವ ಗುಂಡುತೋಪು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ,  ಅವರ ಒಡೆತನದ ಗಾಲ್ಫ್ ನಿರ್ಮಾಣಕ್ಕೆ  ಸರ್ಕಾರದ ಎಷ್ಟೊಂದು ಜಮೀನು ನುಂಗಿದ್ದಾರೆ, ಎಸ್ಎನ್ ಸಿಟಿ ನಿರ್ಮಾಣಕ್ಕೆ ಮೂರು ಕೆರೆಗಳನ್ನು ಒತ್ತುವರಿ ಮಾಡಿಕೊಂಡು ದೇವಾಲಯ ಒಂದನ್ನು ನಿರ್ಮಾಣ ಮಾಡಿರುವ ಎಲ್ಲಾ ದಾಖಲೆಗಳು ಕೂಡ ನನ್ನ ಹತ್ತಿರ ಇದೆ, ಶಾಸಕರು ನನ್ನನ್ನು ಕೆಣುಕಿದರೆ ಅದಕ್ಕೆ 50 ರಷ್ಟು ಅವರ ಅಕ್ರಮಗಳನ್ನು ಬಯಲಿಗೆ ಎಳೆಯತ್ತೇನೆ ಎಂದು,   ಗುಡುಗಿದರು.

  ಕೆರೆಜಾಗ ಕಬಳಿಕೆ ಆರೋಪ ಸಾಬೀತಾದರೆ ಸಂಸದರ ಮನೆಯಲ್ಲಿ ಜೀತಕ್ಕಿರುವೆ - ನಾರಾಯಣಸ್ವಾಮಿ ಸವಾಲು

  ಸಂಸದರ ಭೂಕಬಳಕಿಗೆ ಆರೋಪಕ್ಕೆ ತಿರುಗೇಟು ನೀಡಿರುವ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ, ಸಂಸದ ಮುನಿಸ್ವಾಮಿ ಅವರು ಮಾಹಿತಿ ತಿಳಿಯದೇ ಏನೇನೊ ಹೇಳುತ್ತಿದ್ದಾರೆ, ನಾನು ಕೆರೆ ಜಾಗ ಒತ್ತುವರಿ ಮಾಡಿ ಲೇಔಟ್ ನಿರ್ಮಿಸಿದ ಆರೋಪ ಸಾಬೀತಾದರೆ,  ಅವರ ಮನೆಯಲ್ಲೆ ಜೀತದಾಳಾಗಿ ದುಡಿಯುವೆ,  ನಾನು ಕೆಳಹಂತದಿಂದ ಮೇಲಕ್ಕೆ ಬೆಳೆದವನು, ಕಷ್ಟಪಟ್ಟು ನನ್ನ ಸ್ವಂತ ಹಣದಿಂದ ಆಸ್ತಿ ಪಾಸ್ತಿ ಸಂಪಾದನೆ ಮಾಡಿದ್ದೇನೆ, ನಾನು ಅವರಂತೆ  ಯಾರನ್ನು ಹೆದರಿಸಿ ಬೆದರಿಸಿ ಹಣ ವಸೂಲಿ ಮಾಡೊಲ್ಲ ಎಂದು ತಿರುಗೇಟು ನೀಡಿದ್ದಾರೆ.
  Published by:Seema R
  First published: