ಜೆಡಿಎಸ್​ ಅಧಿಕಾರ ಕುಟುಂಬಕ್ಕೆ ಮಾತ್ರ ಸೀಮಿತ; ಎಚ್​ಡಿಕೆ ವಿರುದ್ಧ ಹರಿಹಾಯ್ದ ಜೆಡಿಎಸ್‌ ಶಾಸಕ ಶ್ರೀನಿವಾಸಗೌಡ

ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ದೊಡ್ಡ ಗೌಡರು ಇಚ್ಚಿಸಿದ್ದಾರೆ, ಹಾಗಾಗಿ ನಾನು ಪಕ್ಷ ಬಿಡಲು ಮುಂದಾಗಿದ್ದೇನೆ.

ಜೆಡಿಎಸ್​ ಶಾಸಕ ಶ್ರೀನಿವಾಸಗೌಡ

ಜೆಡಿಎಸ್​ ಶಾಸಕ ಶ್ರೀನಿವಾಸಗೌಡ

  • Share this:
ಕೋಲಾರ (ಸೆ. 18):   ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡ (Srinivasagowda) ತಮ್ಮ ಪಕ್ಷದ ಸಹವಾಸವೇ ಬೇಡವೆಂದು ಪಕ್ಷಕ್ಕೆ ಕೈ ಮುಗಿದು ಹೊರನಡೆದಿದ್ದಾರೆ, ಮಾಜಿ ಸಚಿವ ಜಿಟಿ ದೇವೇಗೌಡ ಅವರು ಮೊದಲು ಪಕ್ಷದಿಂದ ಅಂತರ ಕಾಯ್ದುಕೊಂಡು, ಜೆಡಿಎಸ್ ಬಿಡುವ ಮುನ್ಸೂಚನೆ ನೀಡಿದ್ದರು. ಇದಾದ ಬಳಿಕ ಆದರೆ ಜೆಡಿಎಸ್​ ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ರನ್ನು ಹಾಡಿ ಹೊಗಳುವ ಮೂಲಕ ಶ್ರೀನಿವಾಸಗೌಡ ಪಕ್ಷದಿಂದ ಹೊರ ಬಂದಿದ್ದಾರೆ. ಕೋಲಾರದ ತಮ್ಮ ನಿವಾಸದಲ್ಲಿ ಮಾತನಾಡಿದ ಶಾಸಕರು, ಜೆಡಿಎಸ್ ಪಕ್ಷದ ಸಹವಾಸವೇ ಬೇಡ ಎಂದಿದ್ದು, ಇದೇ ಮೊದಲ ಬಾರಿಗೆ  ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತೇನೆ ಎಂದುಬಹಿರಂಗವಾಗಿ ಘೋಷಿಸಿದ್ದಾರೆ. 

ಪಕ್ಷ ತೊರೆಯಲು ಮುಂದಾಗಿರುವ ಅವರು  ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.  ಕೋಲಾರ ಜಿಲ್ಲೆಗೆ ವರದಾನವಾಗಿರೊ ಕೆಸಿ ವ್ಯಾಲಿ ಯೋಜನೆಯ ನೀರು ಹರಿಯಲು ಕೃಷ್ಣಬೈರೇಗೌಡ ಹಾಗೂ ರಮೇಶ್ ಕುಮಾರ್ ಅವರ ಪಾತ್ರ ದೊಡ್ಡದಿದೆ, ಆದರೆ ಅವರನ್ನ ನಾನು ಹೊಗಳಿದ್ದಕ್ಕೆ , ಕುಮಾರಸ್ವಾಮಿ ಬೇಸರದಿಂದ ಕೆಸಿ ವ್ಯಾಲಿ ಯೋಜನೆಯ ನೀರನ್ನ ಕೊಚ್ಚೆ ನೀರು ಎಂದು ನನ್ನ ಎದುರೇ ರಮೇಶ್ ಕುಮಾರ್ ರನ್ನ ಟೀಕಿಸಿದ್ದರು. ಅದು ನನ್ನ ಮನಸ್ಸಿಗೆ ಸಾಕಷ್ಟು ನೋವಾಯಿತು, ನಾನು ಕೆಸಿ ವ್ಯಾಲಿ ನೀರು ಕುಡಿದು ಬದುಕಿದ್ದೇನೆ. ಇಲ್ಲಿನ ರೈತರ ನೀರಿನ ಸಂಕಷ್ಟ ನನಗೂ ಗೊತ್ತು, ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದವರು, ಜಿಲ್ಲೆಯ ಬಗ್ಗೆ ಅಷ್ಟು ಕಾಳಜಿ ಇದ್ದಲ್ಲಿ ಕೆ ಆರ್ ಎಸ್ ಜಲಾಶಯದಿಂದಲೇ ನೀರು ಹರಿಸಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.

ಇದನ್ನು ಓದಿ: ಹೆಂಡತಿಯ ಹಠಕ್ಕೆ ಇಡೀ ಕುಟುಂಬವೇ ನಾಶವಾಯಿತು; ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟ ಶಂಕರ್​

ಜೆಡಿಎಸ್ ನಲ್ಲಿ ಅಧಿಕಾರ ಒಂದು ಪಕ್ಷಕ್ಕೆ ಸೀಮಿತವಾ ? 

ನನ್ನನ್ನ ಪಕ್ಷದಿಂದ ಉಚ್ಚಾಟನೆ ಮಾಡುವ ಮಾಹಿತಿ ತಿಳಿದು ನಾನೇ ಪಕ್ಷದಿಂದ ಹೊರಬಂದಿದ್ದೇನೆ ಎಂದಿರುವ ಶ್ರೀನಿವಾಸಗೌಡ, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ನಾಯಕರ ನಡೆಯ ಬಗ್ಗೆಯೂ ತೀವ್ರವಾಗಿ ಕಿಡಿಕಾರಿದ್ದಾರೆ, ಜೆಡಿಎಸ್ ಪಕ್ಷವು ರೈತರ ಪಕ್ಷವೆಂದು ಬಿಂಬಿಸಲ್ಪಟ್ಟಿದೆ.   ದೇವೇಗೌಡರ ಕುಟುಂಬಕ್ಕೆ ಒಳ್ಳೊಳ್ಳೆ ಅಧಿಕಾರವೇಬೇಕು,  ದೇವೇಗೌಡರು ಪ್ರಧಾನಮಂತ್ರಿ ಆದವರು, ಅವರ ಮಗ ಕುಮಾರಸ್ವಾಮಿ ಸರ್ಕಾರದಲ್ಲಿ, ಹೆಚ್ ಡಿ ರೇವಣ್ಣ ಲೋಕೋಪಯೋಗಿ ಸಚಿವ,  ಸಂಪುಟದಲ್ಲಿ ಅವರ ಬೀಗರಿಗೂ ಸಚಿವ ಸ್ಥಾನ ಕೊಟ್ಟಿದ್ದರು. ನಾನು ಕಾಂಗ್ರೆಸ್ ನಲ್ಲಿದ್ದಾಗ ಸಚಿವನಾಗಿದ್ದೆ, ಆದರೆ ಮಾಜಿ ಸಂಸದ ಕೆಎಚ್ ಮುನಿಯಪ್ಪ ಕುತಂತ್ರದಿಂದ ನನ್ನ ಕಾಂಗ್ರೆಸ್ ಪಕ್ಷದಿಂದ ಹೊರಹಾಕಿದ್ದರು. ಬಳಿಕ ಜೆಡಿಎಸ್ ಪಕ್ಷ ಸೇರ್ಪಡೆಯಾದೆ, ನಮಗೂ ಅಧಿಕಾರದ ಆಸೆಯಿರುತ್ತೆ,  ಜೆಡಿಎಸ್ ಅನ್ನೋದು ಇವರ ಕುಟುಂಬಕ್ಕೆ ಮಾತ್ರ ಸೀಮಿತನಾ ಎಂದು ನೇರವಾಗಿ ಕೇಳಿದ್ದಾರೆ.

ಡಿಕೆ ಶಿವಕುಮಾರ್ ಗೆ‌ ಕಾಂಗ್ರೆಸ್ ಸೇರುವ ಮಾಹಿತಿ ನೀಡಿದ್ದೇನೆ

ಎರಡು ದಿನದ ಹಿಂದಷ್ಟೆ ಕೆಪಿಸಿಸಿ  ಅಧ್ಯಕ್ಷ್ಯ ಡಿಕೆ ಶಿವಕುಮಾರ್ ರನ್ನ ಬೆಂಗಳೂರಲ್ಲಿ ಭೇಟಿಯಾದಾಗ, ಕಾಂಗ್ರೆಸ್ ಸೇರಲಿದ್ದೇನೆ ಎಂದು ತಿಳಿಸಿರೊದಾಗಿ ಶಾಸಕ ಶ್ರೀನಿವಾಸಗೌಡ ಮಾಹಿತಿ ನೀಡಿದ್ದಾರೆ, ಇದಕ್ಕೆ ಡಿಕೆಶಿ ಸಹ ಪ್ರತಿಕ್ರಿಯೆ ನೀಡಿದ್ದು,  ರಾಜ್ಯ ಹಾಗೂ ಜಿಲ್ಲಾ ನಾಯಕರೊಂದಿಗೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುವ ಭರವಸೆ ನೀಡಿದ್ದು, ಜೊತೆಗೆ  ನನ್ನ ಮಗನಿಗು ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ, ನಾನಿಲ್ಲ ಎಂದ ಮಾತ್ರಕ್ಕೆ ಜೆಡಿಎಸ್ ಪಕ್ಷಕ್ಕೆ ಏನೂ ತೊಂದರೆಯಾಗಲ್ಲ ಎಂದು ಹೇಳುವ ಮೂಲಕ ಪಕ್ಷ ತೊರೆಯುವುದು ಖಚಿತ ಎಂದಿದ್ದಾರೆ.

ಮೊದಲು ನಾನು ಕಾಂಗ್ರೆಸ್ ಬಿಟ್ಟು  ಜೆಡಿಎಸ್ ಸೇರಿದ್ದೆ, ಕುಮಾರಸ್ವಾಮಿಗೆ ಬೇರೆ ಜಿಲ್ಲೆಯ ರೈತರ ಬಗ್ಗೆ ಕಾಳಜಿ ಇಲ್ಲ, ಅವರ ಜಿಲ್ಲೆಗೆ  ಮಾತ್ರ ಅವರ ಕಾಳಜಿ ಸೀಮಿತ, ಮಾತ್ತೆತ್ತಿದರೆ,  ನಮ್ಮದು ರೈತರ ಕುಟುಂಬ ಅಂತ ಹೇಳಿಕೊಳ್ಳುತ್ತಾರೆ. ಸಿಎಂ ಆಗಿ ಎರಡು ಬಾರಿ ಅಧಿಕಾರಕ್ಕೆ ಬಂದ  ಅವರು ಯಾಕೆ ಕೊಚ್ಚೆ ನೀರು ಬದಲು ಒಳ್ಳೆ ನೀರು ಕೊಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
Published by:Seema R
First published: