ನಾನು ಸತ್ತ ಮೇಲೆ ಬ್ಯಾನರ್ ಹಾಕಿ, Sorry.. I AM GOING TO RIP:  ಪಿಯು ವಿದ್ಯಾರ್ಥಿ ಆತ್ಮಹತ್ಯೆ

ಆತ್ಮಹತ್ಯೆಗೂ ಮುನ್ನ ವಾಟ್ಸಪ್ ಗ್ರೂಪ್ ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದ ಕಿಶೋರ್ ಕುಮಾರ್ ಕೆಲ ಸಾಲುಗಳನ್ನು ಬರೆದುಕೊಂಡಿದ್ದನು. : ನಾನು ಸತ್ತ ಮೇಲೆ ನನ್ನ ಫೋಟೋ ಇರೋ ಬ್ಯಾನರ್ ಹಾಕಿ. ನಾನು ಸಾಯಲು ಹೋಗುತ್ತಿದ್ದೇನೆ. I am going to RIP, I miss You Friends ಎಂದು ಬರೆದಿದ್ದಾನೆ.

ವಿದ್ಯಾರ್ಥಿ ಕಿಶೋರ್ ಕುಮಾರ್

ವಿದ್ಯಾರ್ಥಿ ಕಿಶೋರ್ ಕುಮಾರ್

  • Share this:
ಕೋಲಾರ: ನಾನು ಸತ್ತ ಮೇಲೆ ನನ್ನ ಫೋಟೋ ಇರೋ ಬ್ಯಾನರ್ ಹಾಕಿ. ನಾನು ಸಾಯಲು ಹೋಗುತ್ತಿದ್ದೇನೆ ಎಂದು ಮೆಸೇಜ್ ಹಾಕಿ 17 ವರ್ಷದ ವಿದ್ಯಾರ್ಥಿ (PU Student) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ (Srinivasapur, Kolar)ಪಟ್ಟಣದ ಹೊರವಲಯದ ಕಾಲೋನಿಯಲ್ಲಿ ನಡೆದಿದೆ. ಮೆಸೇಜ್ ಕಳಿಸಿದ ವಿದ್ಯಾರ್ಥಿ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ. ಇಂದು ಬೆಳಗ್ಗೆ ಅಗ್ನಿಶಾಮಕದಳದ ಸಿಬ್ಬಂದಿ ವಿದ್ಯಾರ್ಥಿಯ ಶವ ಹೊರ ತೆಗೆದಿದ್ದಾರೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಿಶೋರ್ ಕುಮಾರ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.

ವಾಟ್ಸಪ್ ಗ್ರೂಪ್ ನಲ್ಲಿ ಕೆರೆ ಫೋಟೋ ಕಳಿಸಿದ

ಮೃತ ಕಿಶೋರ್ ಕುಮಾರ್ ಶ್ರೀನಿವಾಸಪುರದ ಗಂಗೋತ್ರಿ ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿದ್ದನು. ಮಂಗಳವಾರ ಸಂಜೆ ಸುಮಾರು 4 ಗಂಟೆಗೆ ಕಿಶೋರ್ ತನ್ನ ಎಲ್ಲ ಗೆಳೆಯರಿಗೂ ಕೊನೆಯ ಸಂದೇಶ ಕಳುಹಿಸಿದ್ದಾನೆ. ವಾಟ್ಸಪ್ ಗ್ರೂಪ್ ನಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಫೋಟೋ ಸಹ ಹಾಕಿಕೊಂಡಿದ್ದನು. ಕಿಶೋರ್ ಕುಮಾರ್ ಮೆಸೇಜ್ ನೋಡುತ್ತಿದ್ದಂತೆ ಕುಟುಂಬಸ್ಥರು ಮತ್ತು ಸ್ನೇಹಿತರು ಕೆರೆಯ ವ್ಯಾಪ್ತಿಯಲ್ಲಿ ಹುಡುಕಾಟ ನಡೆಸಿದ್ದಾರೆ. ಕಿಶೋರ್ ಪತ್ತೆಯಾಗದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಇಂದು ಬೆಳಗ್ಗೆ ಕಿಶೋರ್ ಕುಮಾರ್ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ:  Gurukula; ಗುರುಕುಲ ಪದ್ದತಿ ಬಗ್ಗೆ‌ ಜಾಗೃತಿ ಮೂಡಿಸಲು ಯುವಕನ ಪಾದಯಾತ್ರೆ

ನಂದು ಬ್ಯಾನರ್ ಹಾಕಿ

ಆತ್ಮಹತ್ಯೆಗೂ ಮುನ್ನ ವಾಟ್ಸಪ್ ಗ್ರೂಪ್ ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದ ಕಿಶೋರ್ ಕುಮಾರ್ ಕೆಲ ಸಾಲುಗಳನ್ನು ಬರೆದುಕೊಂಡಿದ್ದನು. : ನಾನು ಸತ್ತ ಮೇಲೆ ನನ್ನ ಫೋಟೋ ಇರೋ ಬ್ಯಾನರ್ ಹಾಕಿ. ನಾನು ಸಾಯಲು ಹೋಗುತ್ತಿದ್ದೇನೆ. I am going to RIP, I miss You Friends ಎಂದು ಬರೆದಿದ್ದಾನೆ. ಆದ್ರೆ ಮೆಸೇಜ್ ಆತ್ಮಹತ್ಯೆಗೆ ಕಾರಣ ತಿಳಿಸಿಲ್ಲ.

ಕಾಲೇಜಿನಲ್ಲಿ ಪ್ರಾಂಶುಪಾಲರು ಹೊಡೆದಿದ್ರಾ?

ಕಿಶೋರ್ ಕುಮಾರ್ ಗೆ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಸುಬ್ರಮಣಿ ಹೊಡೆದಿದ್ದರು. ಇದರಿಂದ ಮಗ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಿಶೋರ್ ಕುಮಾರ್ ಪೋಷಕರು ಆರೋಪ ಮಾಡಿದ್ದಾರೆ. ಇನ್ನು ಪೋಷಕರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪ್ರಿನ್ಸಿಪಾಲ್ ಸುಬ್ರಮಣಿ, ವಿದ್ಯಾರ್ಥಿ ಕಿಶೋರ್  ಗೆ ಹೊಡೆದಿಲ್ಲ ಎಂದು ಪೋಷಕರ ಆರೋಪ ತಳ್ಳಿಹಾಕಿದ್ದಾರೆ. ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ:  ಸುಟ್ರೆ ಬೂದಿ ಆಗ್ತೀನಿ, ಹೂತ್ರೆ ಕೊಳೆತು ಹೋಗ್ತೀನಿ, ಅಂಗಾಂಗ ದಾನ ನೀಡಿ: ವಿಡಿಯೋ ಮಾಡಿ Engineering Student ಆತ್ಮಹತ್ಯೆ

ಹಾಸನದಲ್ಲಿ ಇಂಜಿನೀಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಸುಟ್ಟರೆ ಬೂದಿ ಆಗುತ್ತೇನೆ.ಮಣ್ಣಲ್ಲಿ ಹೂತರೆ ದೇಹ ಕೊಳೆತು ಹೋಗುತ್ತದೆ. ಹಾಗಾಗಿ ನನ್ನ ಅಂಗಾಂಗಗಳನ್ನು ದಾನ ಮಾಡಿ ಎಂದು ವಿಡಿಯೋ ಮಾಡಿದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಸಂದೇಶ್ ಆತ್ಮಹತ್ಯೆಗೆ ಶರಣಾಗಿರುವ ಇಂಜಿನಿಯರಿಂಗ್ ವಿದ್ಯಾರ್ಥಿ. ಇಂದಿನ ಶಿಕ್ಷಣ ವ್ಯವಸ್ಥೆ ಇದ್ರೂ ಇಲ್ಲದಂತಾಗಿದೆ. ಮುಖ್ಯಮಂತ್ರಿ, ಕುಲಪತಿಗಳು, ಎಲ್ಲ ಪಕ್ಷದ ಗಣ್ಯರು ಈ ವ್ಯವಸ್ಥೆ ಬದಲಾವಣೆಗೆ ಬೆಂಬಲ ಕೊಡಬೇಕೆಂದು ಸಂದೇಶ್ ಮನವಿ ಮಾಡಿಕೊಂಡಿದ್ದಾನೆ. ವಿಡಿಯೋ ತುಂಬೆಲ್ಲ ಶಿಕ್ಷಣ ವ್ಯವಸ್ಥೆ ಸುಧಾರಣೆ ಆಗಬೇಕೆಂದು ಯುವಕ ಆತ್ಮಹತ್ಯೆಗೆ ಮುನ್ನ ಒತ್ತಾಯಿಸಿದ್ದಾನೆ. ಸೂಸೈಡ್ ಮುನ್ನ ವಿಡಿಯೋವನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದನು. ನನ್ನ ಸಾವಿನ ಬಳಿಕ ಪೋಷಕರು ಕೊರಗುತ್ತ ಕುಳಿತುಕೊಳ್ಳದೇ ಅನಾಥ ಮಕ್ಕಳನ್ನು ಸಾಕಿ ಎಂದು ಮನವಿ ಮಾಡಿಕೊಂಡಿದ್ದನು.
Published by:Mahmadrafik K
First published: