ಕೋಲಾರ: ಗ್ರಾ.ಪಂ. ಕಚೇರಿಯಲ್ಲಿ ಆಕಸ್ಮಿಕ ಅಗ್ನಿ ಅವಘಡ; ದಾಖಲೆ ನಾಶಪಡಿಸಲು ಪಿಡಿಒ ಕೈವಾಡವೆಂದು ಗ್ರಾಮಸ್ಥರ ಆರೋಪ

ಸ್ಥಳಕ್ಕೆ ಪಿಡಿಒ ಶಂಕರಪ್ಪ ಹಾಗೂ  ಪಂಚಾಯಿತಿ ಅಧ್ಯಕ್ಷ್ಯರು ಭೇಟಿ‌ ನೀಡಿದ್ದು, ಈ ಸಂಬಂಧ  ಶ್ರೀನಿವಾಸಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಗ್ರಾಮಸ್ಥರು, ಪಂಚಾಯಿತಿ ಅಕ್ರಮಗಳನ್ನ ಪ್ರಶ್ನಿಸಿದ್ದಕ್ಕೆ ಬೆಂಕಿ ಅವಘಡ ಸೃಷ್ಟಿಸಿದ್ದಾರೆಂದು ಆರೋಪಿಸಿದ್ದಾರೆ.

 ಗ್ರಾ.ಪಂ. ಕಚೇರಿ

ಗ್ರಾ.ಪಂ. ಕಚೇರಿ

  • Share this:
ಕೋಲಾರ(ಮಾ.20): ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಉಂಟಾದ ಆಕಸ್ಮಿಕ ಅಗ್ನಿಯಿಂದ ದಾಖಲೆಗಳು ಸುಟ್ಟು  ಭಸ್ಮವಾಗಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದಿದೆ. ಇತ್ತೀಚೆಗಷ್ಟೇ  ಯಾರೊಬ್ಬರ ಅನುಮತಿಯನ್ನು ಪಡೆಯದೆ, ಪಿಡಿಒ ಶಂಕರಪ್ಪ ಅವರು ಏಕಾಏಕಿ  ಸಮುದಾಯ ಭವನಕ್ಕೆ ಗ್ರಾ.ಪಂ. ಕಚೇರಿಯನ್ನ ವರ್ಗಾವಣೆ ಮಾಡಿದ್ದರು ಎಂಬ ಆರೋಪ ಕೇಳಿ  ಬಂದಿತ್ತು.  ಇದೀಗ ಶುಕ್ರವಾರ ಬೆಳಗ್ಗೆ 5 ಗಂಟೆ ವೇಳೆಯಲ್ಲಿ ಕಚೇರಿ ಒಳಗೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಅವಘಡದಿಂದ ಒಂದು ಕಂಪ್ಯೂಟರ್,  ನರೇಗಾ ದಾಖಲೆಗಳು ಹಾಗೂ ಇತರೆ ಕಾಮಗಾರಿಗಳ ದಾಖಲೆಗಳು ಸುಟ್ಟು ಭಸ್ಮವಾಗಿವೆ, ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರು ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ಯಾವುದೆ ಪ್ರಯೋಜನ ಆಗಿಲ್ಲ ಎಂದು ತಿಳಿದುಬಂದಿದೆ.

ಇನ್ನು ಈ ಅಗ್ನಿ ಅವಘಡದ ಹಿಂದೆ ಪಿಡಿಒ ಶಂಕರಪ್ಪ ಅವರ ಕೈವಾಡ ಇದೆಯೆಂದು ಗ್ರಾಮಸ್ಥರು ನೇರವಾಗಿ ಆರೋಪಿಸಿದ್ದಾರೆ.  ಪಂಚಾಯಿತಿ ಯಲ್ಲಿ  45 ಲಕ್ಷ ಅನುದಾನ ದುರ್ಬಳಕೆ ಆಗಿದೆಯೆಂದು ಪ್ರಶ್ನಿಸಿ ಆರ್ ಟಿಐ ಮೂಲಕ ಗ್ರಾಮಸ್ಥರು ಅರ್ಜಿ ಸಲ್ಲಿಸಿದ್ದರು, ಆದರೆ ಕಾಮಗಾರಿ ನಡೆದಿರುವ ಮಾಹಿತಿಯನ್ನು ಮಾತ್ರ ಪಂಚಾಯಿತಿ ಅಭಿವೃದ್ಧಿ   ಅಧಿಕಾರಿ ಶಂಕರಪ್ಪ ನೀಡದೆ  ಸತಾಯಿಸಿದ್ದಾರೆ ಎಂದು ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿರುವ ಗ್ರಾಮಸ್ತರಾದ ಬೈರೆಡ್ಡಿ, ರಮಾಂಜಿ ಹಾಗೂ ರಾಧಾಕೃಷ್ಣ ಎನ್ನುವರು  ಆರೋಪಿಸಿದ್ದಾರೆ. ಇನ್ನು ಗ್ರಾಮಸ್ಥರ ಆರೋಪವನ್ನ ಪಿಡಿಒ ಶಂಕರಪ್ಪ ತಳ್ಳಿಹಾಕಿದ್ದು ಎಲ್ಲಾ ಮಾಹಿತಿಯು ಭದ್ರವಾಗಿದೆ. ದಾಖಲೆಗಳು ಸುಟ್ಟಿಲ್ಲ ಎಂದು ತಿಳಿಸಿದ್ದಾರೆ.

ಕಂದಾಯ ಸಚಿವರ ಸ್ವಾಗತಕ್ಕೆ ಮದುವಣಗಿತ್ತಿಯಂತೆ ಶೃಂಗಾರಗೊಂಡ ಛಬ್ಬಿ ಹಳ್ಳಿ; ಆರ್​ ಅಶೋಕ್​ ಗ್ರಾಮ ವಾಸ್ತವ್ಯಕ್ಕೆ ಸಕಲ ಸಿದ್ಧತೆ

ಸ್ಥಳಕ್ಕೆ ಪಿಡಿಒ ಶಂಕರಪ್ಪ ಹಾಗೂ  ಪಂಚಾಯಿತಿ ಅಧ್ಯಕ್ಷ್ಯರು ಭೇಟಿ‌ ನೀಡಿದ್ದು, ಈ ಸಂಬಂಧ  ಶ್ರೀನಿವಾಸಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಗ್ರಾಮಸ್ಥರು, ಪಂಚಾಯಿತಿ ಅಕ್ರಮಗಳನ್ನ ಪ್ರಶ್ನಿಸಿದ್ದಕ್ಕೆ ಬೆಂಕಿ ಅವಘಡ ಸೃಷ್ಟಿಸಿದ್ದಾರೆಂದು ಆರೋಪಿಸಿದ್ದಾರೆ.

ಗ್ರಾಮ ಪಂಚಾಯಿತಿ ಕಾಮಗಾರಿಗಳ ತನಿಖೆಗೆ ಗ್ರಾಮಸ್ಥರ ಆಗ್ರಹ

ಚಲ್ದಿಗಾನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯನ್ನ ಪುನರ್ ನಿರ್ಮಾಣ ಮಾಡಲು,  ಪಕ್ಕದಲ್ಲೇ ಇರುವ  ಸಮುದಾಯ ಭವನಕ್ಕೆ ಪಂಚಾಯಿತಿ ಕಚೇರಿಯನ್ನ ಸ್ತಳಾಂತರ ಮಾಡಲಾಗಿದೆ ಎನ್ನುವುದು ಪಿಡಿಒ ಶಂಕರಪ್ಪ ಅವರ ಪ್ರತಿಕ್ರಿಯೆ ಆಗಿದೆ, ಆದರೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ದ ಸ್ತಳೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಲಕ್ಷಾಂತರ ರೂಪಾಯಿ ಪಂಚಾಯ್ತಿಯಲ್ಲಿದ್ದ ಹಣವನ್ನ ಯಾವುದೆ ಕಾಮಗಾರಿಯು ನಡೆಸದೆ ಬಳಸಲಾಗಿದೆ ಎಂದು ಆರೋಪಿಸಿದ್ದಾರೆ, ಸದ್ಯ ಕಡತಗಳು ಏನೂ ಆಗಿಲ್ಲ ಎಂದು ಪಿಡಿಒ ಶಂಕರಪ್ಪ ಅವರು ಪ್ರತಿಕ್ರಿಯೆ ನೀಡಿದ್ದು, ಸಾರ್ವಜನಿಕರು ಆರ್ಟಿಐ ಅಡಿ ಹಾಕಿರುವ ಎಲ್ಲಾ ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸೂಕ್ತ ತನಿಖೆಗೆ ಆಗ್ರಹ ಮಾಡಿರುವ ಗ್ರಾಮಸ್ಥರು ಬೆಂಕಿ ಬಿದ್ದಿರುವ ಪ್ರಕರಣವನ್ನ, ಗಂಭೀರವಾಗಿ ಪರಿಗಣಿಸಿ, ಜಿಲ್ಲಾ ಪಂಚಾಯಿತಿ ಸಿಇಒ ಅವರು ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
Published by:Latha CG
First published: