HOME » NEWS » State » KOLAR FARMERS IN TROUBLE DUE TO LOCK DOWN AND NO PRICE TO CAPSICUM CROP RRK LG

ಲಾಕ್​ಡೌನ್​ ತಂದ ಸಂಕಷ್ಟ; ಕ್ಯಾಪ್ಸಿಕಂ ಬೆಳೆಗೆ ಸೂಕ್ತ ಬೆಲೆಯಿಲ್ಲದೆ ರೈತನಿಂದಲೇ ಬೆಳೆ ನಾಶ

ರೈತ ಅಂಬರೀಶ್ ಅವರ ತೋಟದಲ್ಲಿದ್ದ ನೂರಾರು ಕ್ಯಾಪ್ಸಿಕಂ ಗಿಡಗಳನ್ನು ಕೈಯಿಂದಲೇ ಕಿತ್ತು ಬಿಸಾಡಿದ್ದಾರೆ. ಚೆನ್ನೈ ಸೇರಿದಂತೆ ಹಲವೆಡೆಯಿಂದ ದಳ್ಳಾಳಿಗಳು ತರಕಾರಿ ಕೊಳ್ಳಲು ಮುಂದೆ ಬಾರದ ಕಾರಣ ರೈತರ ತರಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ. ಈ ಬಗ್ಗೆ ಮಾತನಾಡಿದ ರೈತ ಅಂಬರೀಶ್,  ಸರ್ಕಾರ ರೈತರ ನೆರವಿಗೆ ಧಾವಿಸಿ ಬೆಂಬಲ ಬೆಲೆ ಘೋಷಿಸಬೇಕೆಂದು  ಆಗ್ರಹಿಸಿದ್ದಾರೆ.

news18-kannada
Updated:April 29, 2021, 8:50 AM IST
ಲಾಕ್​ಡೌನ್​ ತಂದ ಸಂಕಷ್ಟ; ಕ್ಯಾಪ್ಸಿಕಂ ಬೆಳೆಗೆ ಸೂಕ್ತ ಬೆಲೆಯಿಲ್ಲದೆ ರೈತನಿಂದಲೇ ಬೆಳೆ ನಾಶ
ಕ್ಯಾಪ್ಸಿಕಂ ಬೆಳೆ ನಾಶ ಮಾಡುತ್ತಿರುವ ರೈತರು
  • Share this:
ಕೋಲಾರ(ಏ.29): ಬಯಲುಸೀಮೆ ಕೋಲಾರ ಜಿಲ್ಲೆಯಲ್ಲಿ ಮತ್ತೊಮ್ಮೆ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊರೋನಾ ಲಾಕ್​​ಡೌನ್ ವೇಳೆ ಬೆಳೆನಾಶ ಮಾಡಿದ್ದ ರೈತರೀಗ ಮತ್ತೊಮ್ಮೆ ಬೆಳೆನಾಶಕ್ಕೆ ಮುಂದಾಗಿದ್ದಾರೆ

ಕಟಾವಿಗೆ ಬಂದಿರುವ ಒಂದೂವರೆ ಎಕರೆ ಪ್ರದೇಶದಲ್ಲಿ ಬೆಳೆದಿರುವ ಕ್ಯಾಪ್ಸಿಕಂ ಬೆಳೆಯನ್ನ ರೈತನೇ ತೋಟದಿಂದ ಕಿತ್ತೆಸೆದಿರುವ  ಘಟನೆ, ಕೋಲಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ನಡೆದಿದೆ. ಯುವ ರೈತ ಅಂಬರೀಶ್ ಎನ್ನುವರು ಸುಮಾರು 4 ಲಕ್ಷ ಖರ್ಚ ಮಾಡಿ,  ತಮ್ಮ ಸ್ವಂತ ತೋಟದಲ್ಲಿ ಕ್ಯಾಪ್ಸಿಕಂ ಬೆಳೆ ಬೆಳೆದಿದ್ದು, ನಿರ್ದಿಷ್ಟ ಗುರಿಯ  ಬೆಲೆ ಸಿಗದ ಕಾರಣ ತೋಟದಲ್ಲಿದ್ದ ಬೆಳೆಯನ್ನ, ನೋಡಿಕೊಳ್ಳಲಾಗದೆ ಕಿತ್ತೆಸೆದಿದ್ದಾರೆ. ಕೊರೋನಾ ಪ್ರಭಾವದಿಂದಾಗಿ ರೈತರು ಬೆಳೆದಿರುವ ತರಕಾರಿಗಳಿಗೆ ಈಗಾಗಲೇ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ.

ಈ ಮಧ್ಯೆ ಕ್ಯಾಪ್ಸಿಕಂ ಬೆಳೆಗೆ ಒಂದು ಕೆಜಿಗೆ 5-6 ರೂಪಾಯಿ ಬೆಲೆ ‌ತೋಟದಲ್ಲಿ ಸಿಗುತ್ತಿದೆ. ಇದರಿಂದಾಗಿ ಬೆಳೆಯನ್ನ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡಿದರೂ ವಾಹನದಿಂದ ರವಾನಿಸುವ ಖರ್ಚು ಸಿಗಲ್ಲ ಎಂದು ಬೆಳೆನಾಶಕ್ಕೆ ರೈತನೇ ಮುಂದಾಗಿದ್ದಾನೆ. ರೈತ ಅಂಬರೀಶ್ ಅವರ ತೋಟದಲ್ಲಿದ್ದ ನೂರಾರು ಕ್ಯಾಪ್ಸಿಕಂ ಗಿಡಗಳನ್ನು ಕೈಯಿಂದಲೇ ಕಿತ್ತು ಬಿಸಾಡಿದ್ದಾರೆ. ಚೆನ್ನೈ ಸೇರಿದಂತೆ ಹಲವೆಡೆಯಿಂದ ದಳ್ಳಾಳಿಗಳು ತರಕಾರಿ ಕೊಳ್ಳಲು ಮುಂದೆ ಬಾರದ ಕಾರಣ ರೈತರ ತರಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ. ಈ ಬಗ್ಗೆ ಮಾತನಾಡಿದ ರೈತ ಅಂಬರೀಶ್,  ಸರ್ಕಾರ ರೈತರ ನೆರವಿಗೆ ಧಾವಿಸಿ ಬೆಂಬಲ ಬೆಲೆ ಘೋಷಿಸಬೇಕೆಂದು  ಆಗ್ರಹಿಸಿದ್ದಾರೆ.

CoronaVirus: ಕೊಪ್ಪಳ ಜಿಲ್ಲೆಗೆ ಹಿಂದಿರುಗುತ್ತಿರುವ ವಲಸಿಗರ ಕೋವಿಡ್​ ಪರೀಕ್ಷೆಯಾಗುತ್ತಿಲ್ಲ; ಆತಂಕದಲ್ಲಿ ಜನ ಸಾಮಾನ್ಯರು

ಕೋಲಾರದಲ್ಲಿ ಒಂದೇ ದಿನ 1194 ಕೇಸ್

ಏಪ್ರಿಲ್ 28 ರಂದು ಆರೋಗ್ಯ ಇಲಾಖೆಯ ಹೆಲ್ತ್ ಬುಲೆಟೆನ್ ಪ್ರಕಾರ, ಕೋಲಾರದಲ್ಲಿ 1194 ಹೊಸ ಕೊರೋನಾ ಕೇಸ್ ಪತ್ತೆಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ  4 ಮಂದಿ  ಸೋಂಕಿತರು ಸಾವನ್ನಪ್ಪಿದ್ದಾರೆ.  ಜಿಲ್ಲೆಯಲ್ಲಿ 17,131 ಮಂದಿ ಒಟ್ಟು ಪ್ರಕರಣವಿದ್ದು, 15,625 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಒಟ್ಟು  3285 ಸಕ್ರಿಯ ಕೇಸ್ ಇದ್ದು, ಇದುವರೆಗೂ  221 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ ಎಂದು ಕೋಲಾರ ಜಿಲ್ಲಾ ಆರೋಗ್ಯ ಇಲಾಖೆಯ ಹೆಲ್ತ್ ಬುಲಿಟೆನ್ ನಲ್ಲಿ ನೀಡಿರುವ ಮಾಹಿತಿಯಲ್ಲಿದೆ‌.
Youtube Video
ಒಟ್ಟಿನಲ್ಲಿ ಕಳೆದ ಮೂರು ವಾರದಿಂದ ಜಿಲ್ಲೆಯಲ್ಲಿ ಶೇಖಡಾ 14 ರಷ್ಟು ಸೋಂಕಿನ ಪ್ರಮಾಣ ಹೆಚ್ಚಿದ್ದು, ಸಾವಿನ ಸಂಖ್ಯೆಯು ನಿರಂತರವಾಗಿ ಹೆಚ್ಚುತ್ತಲೇ ಇದೆ, ಇ‌ನ್ನು ಕಳೆದ ಕೊರೋನಾ ಲಾಕ್ ಡೌನ್ ವೇಳೆ ಅಕ್ಷರಶಃ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಿದ್ದ ಕಾರಣ ನಷ್ಟದ ಸುಳಿಯಲ್ಲಿ ಸಿಲುಕಿದ್ದರು.  ಇನ್ನೇನು ಈ ವರ್ಷ ಕೊರೊನಾ ಮಧ್ಯೆಯೂ ಹಾಕಿದ ಬೆಳೆಗೆ ಸೂಕ್ತ ಬೆಲೆ ಸಿಗುತ್ತದೆ ಎಂದು ಭಾವಿಸಿದ್ದ ರೈತರು ಮತ್ತೊಮ್ಮೆ ಹೊಡೆತ ತಿನ್ನುವಂತಾಗಿದೆ. ಭಾಗಶಃ ಎಲ್ಲಾ ತರಕಾರಿ ಹಾಗೂ ಹೂವಿನ ಬೆಲೆಯು ಪಾತಾಳಕ್ಕೆ ಕುಸಿದಿದ್ದು ಬಂಡವಾಳ ಹಾಕಿದ್ದ ರೈತರ ಸ್ಥಿತಿ  ಚಿಂತಾಜನವಾಗಿದೆ. ಇನ್ನಾದರೂ ಸದ್ಯದ ರೈತರ  ಪರಿಸ್ಥಿತಿಯನ್ನ ಅರ್ಥೈಸಿಕೊಂಡು ಸರ್ಕಾರ ರೈತರ ಸಂಕಷ್ಟಕ್ಕೆ ಧಾವಿಸಬೇಕೆಂದು ಆಗ್ರಹಿಸಿದ್ದಾರೆ.
Published by: Latha CG
First published: April 29, 2021, 8:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories