Kolar: ಅನ್ನದಾತರ ಸತತ ಹೋರಾಟದಿಂದ ಉಳಿಯಿತು 33 ಎಕರೆ ಸರ್ಕಾರಿ ಜಾಗ, ರೈತರು ಗೆದ್ದ ಕಥೆಯೇ ರೋಚಕ

ಎಷ್ಟೇ ಪ್ರಭಾವಿಗಳು ಪ್ರಭಾವ ಬೀರಿದರೂ ಅನ್ನದಾತರು ಜಗ್ಗಲಿಲ್ಲ, ಬಗ್ಗಲಿಲ್ಲ. ಕೊನೆಗೂ ಸತತ ಹೋರಾಟ ಮಾಡಿ 33 ಎಕರೆ ಸರ್ಕಾರಿ ಗೋಮಾಳದ ಜಾಗವನ್ನು ಉಳಿಸಿಕೊಂಡಿದ್ದಾರೆ.

ಸರ್ಕಾರದ ಸೂಚನಾ ಫಲಕ

ಸರ್ಕಾರದ ಸೂಚನಾ ಫಲಕ

  • Share this:
ಕೋಲಾರ: ಜಗತ್ತಿನ ಅನ್ನದಾತ ಅಂತ ಕರೆಯಲ್ಪಡುವ ರೈತರು (Farmers) ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ಈ ಘಟನೆಯೇ ನಿದರ್ಶನ. ಇಲ್ಲಿ ಸರ್ಕಾರಿ ಜಮೀನು (Government Land) ಸರ್ಕಾರದ ಕೈತಪ್ಪಿ ಹೋಗೋ ಸಾಧ್ಯತೆಯಿತ್ತು. ಅದು ತುಂಡು ಭೂಮಿಯೇನಲ್ಲ, ಬರೋಬ್ಬರಿ 33 ಎಕರೆ (33 Acres) ಸರ್ಕಾರಿ ಭೂಮಿ. ರೈತರ ಗೋಮಾಳದ ಉಪಯೋಗಕ್ಕೆ ಅಂತ ಇಟ್ಟಿದ್ದ ಭೂಮಿ ಮೇಲೆ ಪ್ರಭಾವಿಗಳ ಕಣ್ಣು ಬಿದ್ದಿತ್ತು. ಆದರೆ ಅಷ್ಟರಲ್ಲಿ ರೈತರೆಲ್ಲ ಎಚ್ಚೆತ್ತಿದ್ದರು. ನೇಗಿಲ ಯೋಗಿಗಳೆಲ್ಲ ಒಗ್ಗಟ್ಟಾಗಿದ್ದರು. ಏನೇ ಆಗಲಿ, ಯಾರೇ ಬೆದರಿಕೆ ಹಾಕಲಿ, ಎಂಥದ್ದೇ ಪ್ರಭಾವಿಗಳು ಕೇಳಲಿ, ಈ ಜಮೀನು ಬಿಟ್ಟು ಕೊಡುವುದಿಲ್ಲ ಅಂತ ಪಟ್ಟು ಹಿಡಿದರು. ಮನೆಯಲ್ಲಿ ಕೈಕಟ್ಟಿ ಕೂರದೇ, ಹೋರಾಟಕ್ಕೆ (Fight) ಮುಂದಾದರು. ಇಂದು ಅಂತಿಮವಾಗಿ ಅನ್ನದಾತರಿಗೆ ಗೆಲುವಾಗಿದೆ(Victory). ಸರ್ಕಾರದ ಕೈತಪ್ಪಿ ಹೋಗುತ್ತಿದ್ದ 33 ಎಕರೆ ಗೋಮಾಳದ ಭೂಮಿ ಸೇಫ್ ಆಗಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ…

33 ಎಕರೆ ಗೋಮಾಳ ಕೈ ತಪ್ಪುವ ಭೀತಿ ಎದುರಾಗಿತ್ತು

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಟಿ. ಕುರುಬರಹಳ್ಳಿ ಗ್ರಾಮದ ರೈತರು ಇಂದು ವಿಜಯದ ನಗೆ ಬೀರಿದ್ದಾರೆ. ಟಿ. ಕುರುಬರಹಳ್ಳಿ ಗ್ರಾಮದ ಸರ್ವೆ ನಂ.36 ರಲ್ಲಿ 33 ಎಕರೆ ಗೋಮಾಳ ಜಮೀನನ್ನು ಅನಾದಿಕಾಲದಿಂದಲೂ ಗ್ರಾಮದ ಸುತ್ತ ಮುತ್ತಲಿನ ಜಾನುವಾರುಗಳಿಗಾಗಿ ಮೀಸಲಿಡಲಾಗಿದೆ. ಕುರುಬರಹಳ್ಳಿ ಗ್ರಾಮದಲ್ಲಿ ಬಹುತೇಕ ಜನರದ್ದು ಕುರಿ ಮೇಯಿಸುವುದು ಮೂಲ ವೃತ್ತಿ.

ಈ ಗ್ರಾಮದ ಗ್ರಾಮಸ್ಥರು ಜಾನುವಾರುಗಳನ್ನು ಕುರಿ, ಮೇಕೆ ಮೇಯಿಸಲು ಇದೇ 33 ಎಕರೆ ಭೂಮಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಸತತ ಐದು ವರ್ಷಗಳ ಕಾಲ ಹೋರಾಟ ಮಾಡಿದ್ದಾರೆ. ಮಾತ್ರವಲ್ಲದೆ ಜಾಗವನ್ನು ಉಳಿಸಿಕೊಂಡಿದ್ದಾರೆ.

ಸರ್ಕಾರಿ ಜಾಗದ ಮೇಲೆ ಸುತ್ತಮುತ್ತಲಿನ ಪ್ರಭಾವಿಗಳ ಕಣ್ಣು

ಟಿ. ಕುರುಬರಹಳ್ಳಿ ಗ್ರಾಮದಲ್ಲಿ 33 ಎಕರೆ ಸರ್ಕಾರಿ ಭೂಮಿ ಕುರಿಗಳಿಗಾಗಿ ಮೀಸಲಿಟ್ಟಿರೋದು ಪ್ರಭಾವಿಗಳ ಕಣ್ಣು ಕುಕ್ಕಿಸುತ್ತಿತ್ತು. ಇದನ್ನು ಮುಗ್ಧ ರೈತರಿಂದ ವಶಪಡಿಸಿ, ಲಾಭ ಮಾಡಿಕೊಳ್ಳಬೇಕು ಅಂತ ಅದೆಷ್ಟೋ ಪ್ರಭಾವಿಗಳು ಯೋಜನೆ ಹಾಕಿಕೊಂಡಿದ್ದರು. ಆದರೆ ಅದು ರೈತರಿಗೆ ಗೊತ್ತಾಗಿ, ದೊಡ್ಡ ಮಟ್ಟದಲ್ಲಿ ವಿರೋಧ ಮಾಡಿದ್ದರು.

ಇದನ್ನೂ ಓದಿ: Self Defence: ‘ಒನಕೆ ಓಬವ್ವ'ನಂತೆ ಆಗ್ತಾರೆ ಹೆಣ್ಮಕ್ಕಳು, ಸರ್ಕಾರದಿಂದ ವಿದ್ಯಾರ್ಥಿನಿಯರಿಗೆ ಟ್ರೇನಿಂಗ್

ರೈತರನ್ನೇ ಜೈಲಿಗೆ ಹಾಕಿಸಿದ್ದ ಪ್ರಭಾವಿಗಳು

ರೈತರು ಮುಗ್ಧರು, ತಮ್ಮ ಪ್ರಭಾವದ ಮುಂದೆ ಅವರ ಆಟ ನಡೆಯೋದಿಲ್ಲ ಅಂತ ಭೂಗಳ್ಳರು ಅಂದು ಕೊಂಡಿದ್ದರು. ಗೋಮಾಳ ಸ್ವಾಧೀನ ಮಾಡಿಕೊಳ್ಳಲು ನಕಲಿ ದಾಖಲೆಯನ್ನೂ ಸೃಷ್ಟಿಸಿಕೊಂಡಿದ್ದರು. ಆದರೆ ಅವರ ಲೆಕ್ಕಾಚಾರವೆಲ್ಲ ಉಲ್ಟಾ ಆಗಿತ್ತು. ಗೋಮಾಳದ ಭೂಮಿ ತಮ್ಮ ಕೈತಪ್ಪುತ್ತಿದೆ ಅಂತ ಅರಿವಾಗುತ್ತಿದ್ದಂತೆ ಗ್ರಾಮದ ರೈತರೆಲ್ಲ ಎಚ್ಚೆತ್ತು, ಭಾರೀ ವಿರೋಧ ಮಾಡಿದರು. ಆಗ ಹಲವು ರೈತರ ವಿರುದ್ಧ ದೂರು ನೀಡಿ, ಜೈಲಿಗೂ ಹಾಕಿಸಲಾಗಿತ್ತು. 

ಸತತ 5 ವರ್ಷಗಳ ಹೋರಾಟಕ್ಕೆ ಸಿಕ್ಕಿತು ಗೆಲುವು

ಪ್ರಭಾವಿಗಳ ಯಾವುದೇ ಪ್ರಭಾವಕ್ಕೆ ಇಲ್ಲಿನ ರೈತರು ಬೆದರಲೇ ಇಲ್ಲ. ಯಾವುದೇ ಕೇಸ್ ಹಾಕಿದರೂ ಅದನ್ನು ಕಾನೂನಾತ್ಮಕವಾಗಿಯೇ ಗೆದ್ದರು. ಇದೀಗ ರೈತರ ಹೋರಾಟಕ್ಕೆ ಜಯ ಸಿಕ್ಕಿದೆ. ಒಂದಲ್ಲ, ಎರಡಲ್ಲ, ಬರೋಬ್ಬರಿ 5 ವರ್ಷಗಳ ಕಾಲ ಅನ್ನದಾತರು ಹೋರಾಡಿದ್ದರು. ಅವರೆಲ್ಲರ ಒಗ್ಗಟ್ಟಿನ ಹೋರಾಟಕ್ಕೆ ಇದೀಗ ಫಲ ಸಿಕ್ಕಿದೆ. ಇದೀಗ 33 ಎಕರೆ ಸರ್ಕಾರಿ ಗೋಮಾಳದ ಜಾಗ ರೈತರಿಗೆ ಧಕ್ಕಿದೆ.

ಇದನ್ನೂ ಓದಿ: Sparrow: ಗುಬ್ಬಚ್ಚಿಯ 11ನೇ ದಿನದ ಕಾರ್ಯ ನೆರವೇರಿಸಿದ ಗ್ರಾಮಸ್ಥರು; ಪೆಂಡಾಲ್ ಹಾಕಿ ಬಾಡೂಟ ಹಾಕಿಸಿದ್ರು

ಸೂಕ್ತ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ಮನವಿ

ಸದ್ಯದ ಪರಿಸ್ಥಿತಿಯಲ್ಲೇನೋ ರೈತರು ಗೆದ್ದಿದ್ದಾರೆ. ಆದರೆ ಹಣ, ಅಧಿಕಾರ ಹಾಗೂ ರಾಜಕೀಯ ಬಲ ಇರುವ ಪ್ರಭಾವಿಗಳು ಸುಮ್ಮನೆ ಕೂರುತ್ತಾರೆ ಅಂತ ಹೇಳೋದಕ್ಕೆ ಆಗುವುದಿಲ್ಲ. ಹೀಗಾಗಿ ಈ ಭೂಮಿಗೆ ಸೂಕ್ತ ರಕ್ಷಣೆ ನೀಡುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Published by:Annappa Achari
First published: