ಬೆಳೆದ ತರಕಾರಿಗೆ ಇಲ್ಲ ಸೂಕ್ತ ದರ; ಬೆಂಬಲ ಬೆಲೆ ಆಗ್ರಹಿಸಿ ಕೋಲಾರ ರೈತರ ಪ್ರತಿಭಟನೆ

ಅತ್ಯಂತ ಬರಗಾಲ ಪೀಡಿತ ಪ್ರದೇಶವಾದ ಜಿಲ್ಲೆಗೆ ವಿದರ್ಭ ಮಾದರಿಯ ಪ್ಯಾಕೇಜ್ ಘೋಷಿಸಬೇಕು. ಜಿಲ್ಲೆಗೆ ಶಾಶ್ವತ ನೀರಾವರಿ, ಅನುದಾನ ಕಡಿತವಾಗಿರುವ ಹಣವನ್ನು ವಾಪಾಸ್ ಮಾಡಬೇಕೆಂದು ರೈತ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದರು

Seema.R | news18-kannada
Updated:March 2, 2020, 5:44 PM IST
ಬೆಳೆದ ತರಕಾರಿಗೆ ಇಲ್ಲ ಸೂಕ್ತ ದರ; ಬೆಂಬಲ ಬೆಲೆ ಆಗ್ರಹಿಸಿ ಕೋಲಾರ ರೈತರ ಪ್ರತಿಭಟನೆ
ತರಕಾರಿ ಸುರಿದು ಪ್ರತಿಭಟನೆ ನಡೆಸಿದ ವೈದ್ಯರು
  • Share this:
ಕೋಲಾರ(ಮಾ. 02): ನೀರಿಗೆ ಹಾಹಾಕಾರವಿದ್ದರೂ ತರಕಾರಿ ಬೆಳೆಯುವ ಮೂಲಕ ಇಲ್ಲಿನ ರೈತರು ಮಾದರಿಯಾಗಿದ್ದರು. ಆದರೆ, ಈಗ ಬೆಳೆದ ತರಕಾರಿಗೆ ಸೂಕ್ತ ಬೆಲೆ ಸಿಗದೇ, ರೈತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ಬೆಂಬಲ ಬೆಲೆಗೆ ಆಗ್ರಹಿಸಿ, ರಾಜ್ಯ ಸರ್ಕಾರದ ವಿರುದ್ಧ ವಿವಿಧ ರೈತಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಅತ್ಯಂತ ಬರಗಾಲ ಪೀಡಿತ ಪ್ರದೇಶವಾದ ಜಿಲ್ಲೆಗೆ ವಿದರ್ಭ ಮಾದರಿಯ ಪ್ಯಾಕೇಜ್ ಘೋಷಿಸಬೇಕು. ಜಿಲ್ಲೆಗೆ ಶಾಶ್ವತ ನೀರಾವರಿ, ಅನುದಾನ ಕಡಿತವಾಗಿರುವ ಹಣವನ್ನು ವಾಪಾಸ್ ಮಾಡಬೇಕೆಂದು ರೈತ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದರು.

ಈ ವೇಳೆ ತಾವು ಬೆಳೆದ ಬೆಲೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ತಾವು ಬೆಳೆದ ತರಕಾರಿಯನ್ನೇ ರಸ್ತೆಯಲ್ಲಿ ಸುರಿದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಯಥೇಚ್ಛವಾಗಿ ತರಕಾರಿ ಬೆಳೆದರೂ ತಮಗೆ ಯಾವುದೇ ಲಾಭ ಸಿಗುತ್ತಿಲ್ಲ. ಈ ಹಿನ್ನೆಲೆ ಸರ್ಕಾರ ಈ ಬಾರಿ ಬಜೆಟ್​ನಲ್ಲಿ ನಮಗೆ ವಿಶೇಷ ಅನುದಾನ ನೀಡಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.

ಕಳೆದ ಐದು ತಿಂಗಳಿನಿಂದ ರೈತರು ಹಾಕುತ್ತಿರುವ ಬಂಡಾವಳ ವಾಪಸ್ಸಾಗುತ್ತಿಲ್ಲ. ಬೆಳೆಗಳಿಗೆ ಬೆಂಬಲ ಬೆಲೆಯೂ ಇಲ್ಲದೇ, ಸೂಕ್ತ ಬೆಲೆ ಕೂಡ ಸಿಗದೆ ರೈತರು ಕಂಗಲಾಗಿದ್ದಾರೆ, ಇನ್ನಾದರೂ ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಬಜೆಟ್​ನಲ್ಲಿ ನಮಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದರು.

ಇದನ್ನು ಓದಿ: ಮುಳ್ಳಂದಿ ಬೇಟೆಯಾಡಿ ಸುಟ್ಟು ತಿಂದು, ಟಿಕ್ ಟಾಕ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಯುವಕರು

ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್​ ಶೋಬಿತಾ ಅವರಿಗೆ ವಿಶೇಷ ಮನವಿಯನ್ನು ಕೂಡ ಮಾಡಲಾಯಿತು.  ಪ್ರತಿಭಟನೆ ಹಿನ್ನೆಲೆ ರಸ್ತೆಯ ಮೇಲೆ ಸುರಿದ ತರಕಾರಿ ತೆಗೆದು ಕೊಳ್ಳಲು  ಸಾರ್ವಜನಿಕರು ಮುಗಿಬಿದ್ದ ಘಟನೆ ಕೂಡ ನಡೆಯಿತು.

(ವರದಿ : ರಘುರಾಜ್​)
First published: March 2, 2020, 5:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading