HOME » NEWS » State » KOLAR DC MANJUNATH FAKE TRANSFORM ORDER VIRAL IN SOCIAL MEDIA SESR

ದಿಢೀರ್​ ವರ್ಗಾವಣೆಯಾದ ಕೋಲಾರ ಜಿಲ್ಲಾಧಿಕಾರಿ; ಸಾಮಾಜಿಕ ಜಾಲತಾಣದಲ್ಲಿ ಗೊಂದಲ ಮೂಡಿಸಿದ ಸರ್ಕಾರದ ಆದೇಶ ಪ್ರತಿ

ಈ ಕುರಿತು ಮಾತನಾಡಿದಜಿಲ್ಲಾಧಿಕಾರಿ ಮಂಜುನಾಥ್​​, ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಯಾರೋ ದುರುದ್ದೇಶಪೂರ್ವಕವಾಗಿ ಮಾಡಿರುವ ಕೃತ್ಯ ಇದು ಎಂದು ಸ್ಪಷ್ಟನೆ ನೀಡಿದರು. 

Seema.R | news18-kannada
Updated:February 14, 2020, 4:46 PM IST
ದಿಢೀರ್​ ವರ್ಗಾವಣೆಯಾದ ಕೋಲಾರ ಜಿಲ್ಲಾಧಿಕಾರಿ; ಸಾಮಾಜಿಕ ಜಾಲತಾಣದಲ್ಲಿ ಗೊಂದಲ ಮೂಡಿಸಿದ ಸರ್ಕಾರದ ಆದೇಶ ಪ್ರತಿ
ಜಿಲ್ಲಾಧಿಕಾರಿ ಮಂಜುನಾಥ್​​
  • Share this:
ಕೋಲಾರ  (ಫೆ.14): ಕಳೆದ ಕೆಲ ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿದ್ದ ಜಿಲ್ಲಾಧಿಕಾರಿ ಜೆ ಮಂಜುನಾಥ್​ ಅವರನ್ನು ದಿಢೀರ್​ ವರ್ಗಾವಣೆ ಮಾಡಲಾಗಿದೆ ಎಂದು ಸರ್ಕಾರದ ಆದೇಶ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಜಿಲ್ಲೆಯ ಜನರು ಮತ್ತು ಅಧಿಕಾರಿಗಳಲ್ಲಿ ಗೊಂದಲ ಮೂಡಿಸಿದೆ.

ಜಿಲ್ಲಾಧಿಕಾರಿ ಜೆ ಮಂಜುನಾಥ್​ ಅವರನ್ನು ವರ್ಗಾವಣೆ ಮಾಡಿ ಈ ಸ್ಥಾನಕ್ಕೆ ಚಿತ್ರದುರ್ಗ ಹಾಲಿ ಜಿಲ್ಲಾ ಪಂಚಾಯತಿ ಸಿಇಒ ಸತ್ಯಭಾಮ ಅವರನ್ನು ನೇಮಕ ಮಾಡಲಾಗಿದೆ. ಸರ್ಕಾರದಿಂದಲೇ ಈ ಆದೇಶ ಹೊರ ಬಿದಿದ್ದು, ಇದಕ್ಕೆ ಸಿಎಂ ಬಿಎಸ್​ ಯಡಿಯೂರಪ್ಪ  ಅವರು ಕೂಡ ಸಹಿ ಮಾಡಿದ್ದಾರೆ ಎಂಬ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಈ ಆದೇಶ ಪ್ರತಿಯಿಂದ ಜಿಲ್ಲೆಯ ಅಧಿಕಾರಿಗಳಲ್ಲಿ ಕೂಡ ಗೊಂದಲ ಮೂಡಿತ್ತು. ಬಳಿಕ ಈ ಕುರಿತು ವಿಚಾರಣೆ ನಡೆಸಿದಾಗ ಇದು ಸುಳ್ಳು ಎಂಬುದು ತಿಳಿದು ಬಂದಿದೆ. ಈ ಕುರಿತು ಮಾತನಾಡಿದ ಅವರು, ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ ಎಂದಿದ್ದಾರೆ.

  

ಗುರುವಾರ ಬಿಬಿಎಂಪಿ ಆಯುಕ್ತರು ಸೇರಿದಂತೆ ಅನೇಕ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿತ್ತು. ಆದರೆ, ಕಾರಣಾಂತರದಿಂದ ಈ ಆದೇಶವನ್ನು ಸರ್ಕಾರ ತಕ್ಷಣಕ್ಕೆ ಹಿಂಪಡೆದಿದ್ದು, ಗೊಂದಲಕ್ಕೆ ಕಾರಣವಾಗಿದೆ.ಇದನ್ನು ಓದಿ: ಹಾಲು ಖರೀದಿ ದರ 2 ರೂ ಹೆಚ್ಚಿಸಿದ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ

ಐಎಎಸ್​ ಅಧಿಕಾರಿಗಳ ತರಬೇತಿಗಾಗಿ ಮಂಜುನಾಥ್​ ಫೆ.17ರಂದಿ ಮಾರ್ಚ್​ 13ರವೆಗೆ ಮಸ್ಸೂರಿಗೆ ಒಂದು ತಿಂಗಳ ಶಿಬಿರಕ್ಕೆ ಹೋಗುತ್ತಿದ್ದಾರೆ. ಈ ವೇಳೆ ಜಿಲ್ಲಾಪಂಚಾಯತಿ ಸಿಇಒ ಎಚ್​ ವಿ ದರ್ಶನ್​ ಹೆಚ್ಚುವರಿ ಕಾರ್ಯ ನಿರ್ವಹಿಸಲಿದ್ದಾರೆ.

ಶಹಬ್ಬಾಸ್​ಗಿರಿ ಪಡೆದ ಅಧಿಕಾರಿ

ಜಿಲ್ಲೆಯಲ್ಲಿ ಒಂದೂವರೆ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಂಜುನಾಥ್​ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಹಾಗೂ ಎರಡು ಬೃಹತ್​ ಉದ್ಯೋಗ ಮೇಳ ಸೇರಿದಂತೆ ಜಿಲ್ಲೆಯ ಹಲವಾರು ಜನಪರ ಕಾರ್ಯಗಳನ್ನು ಜಾರಿಗೆ ತಂದಿದ್ದಾರೆ. ಅವರ ಕಾರ್ಯಕ್ಕೆ ಮೆಚ್ಚಿ ಜಿಲ್ಲಾ ಉಸ್ತುವಾರಿ ಸಚಿವ ಎಚ್​ ನಾಗೇಶ್ ಹಾಗೂ ಶಾಸಕರು ಅವರ ಕಾರ್ಯಕ್ಕೆ ಮೆಚ್ಚಿ ಬಹಿರಂಗವಾಗಿಯೇ ಶಹಬ್ಬಾಸ್​ಗಿರಿ ನೀಡಿದ್ದರು.

(ವರದಿ: ರಘುರಾಜ್​)
First published: February 14, 2020, 4:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories