Kolar Crime News: ಅತ್ತೆ ಮನೆಯವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗಳು

 ಕಳೆದ ನವೆಂಬರ್ ನಲ್ಲಿ ಮೃತ ನಂದಿತಾ ಅವರ ಪತಿ ಮೂತಿ೯ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಬೆಂಗಳೂರಿನ ಹೊರಮಾವಿನಲ್ಲಿ ಮೂರು ಅಂತಸ್ತಿನ ಸ್ವಂತ ಮನೆ ಸಹ ಇದೆ. ಆದರೆ ಅದಿನ್ನು ಮೂತಿ೯ ತಾಯಿ ಅಚ್ಚಮ್ಮ ಹೆಸರಿನಲ್ಲೇ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋಲಾರ(ಮಾ.04): ಗಂಡನನ್ನು ಕಳೆದುಕೊಂಡು 3 ತಿಂಗಳು ಕಳೆಯುಷ್ಟರಲ್ಲೇ ಹೆಂಡತಿ- ಮಗಳು  ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಕೋಲಾರ ತಾಲೂಕಿನ ನರಸಾಪುರ ಕೆರೆಯಲ್ಲಿ ನಡೆದಿದೆ. ಬೆಂಗಳೂರಿನ ಹೊರಮಾವು ಮೂಲದ 42 ವರ್ಷದ‌ ನಂದಿತಾ  ಹಾಗೂ 21 ವರ್ಷದ  ಪ್ರಗತಿ  ಎನ್ನುವ ತಾಯಿ ಮಕ್ಕಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಮಂಗಳವಾರ ರಾತ್ರಿ 9 ಗಂಟೆ ವೇಳೆಗೆ ಇಬ್ಬರೂ ಕೈಗಳಿಗೆ ದುಪ್ಪಟ ಕಟ್ಟಿಕೊಂಡು ನರಸಾಪುರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇನ್ನು ತಾಯಿ ಮಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ,  13 ಪುಟಗಳ ಸುದೀರ್ಘವಾದ ಡೆತ್ ನೋಟ್​​ನ್ನು ಸಹ ಇಂಗ್ಲೀಷ್​ನಲ್ಲಿ ಮಗಳು ಪ್ರಗತಿ  ಬರೆದಿಟ್ಟಿದ್ದಾಳೆ.  ಅಜ್ಜಿಯ ಮನೆಯವರ ಕಿರುಕುಳದಿಂದ ನಾವಿಬ್ಬರೂ ಮನನೊಂದು ಆತ್ಮಹತ್ಯೆ ಮಾಡಿಕೊಳುತ್ತಿದ್ದೇವೆ ಅಂತ ಉಲ್ಲೇಖ ಮಾಡಿದ್ದಾರೆ.

ಕಳೆದ ನವೆಂಬರ್ ನಲ್ಲಿ ಮೃತ ನಂದಿತಾ ಅವರ ಪತಿ ಮೂತಿ೯ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಬೆಂಗಳೂರಿನ ಹೊರಮಾವಿನಲ್ಲಿ ಮೂರು ಅಂತಸ್ತಿನ ಸ್ವಂತ ಮನೆ ಸಹ ಇದೆ. ಆದರೆ ಅದಿನ್ನು ಮೂತಿ೯ ತಾಯಿ ಅಚ್ಚಮ್ಮ ಹೆಸರಿನಲ್ಲೇ ಇದೆ. ಇದೀಗ ನಾವೇಕೆ ಹೊರಗಿನಿಂದ ಬಂದಿರುವ ನಂದಿತಾಳಿಗೆ ಒಂದು ಮನೆ ಬಿಟ್ಟುಕೊಡಬೇಕು ಅಂತ ಮೂರ್ತಿಯವರ ಸಹೋದರರಾದ ಗಿರೀಶ್, ಹರೀಶ್ ಮತ್ತು ತಾಯಿ ಅಚ್ಚಮ್ಮ ಸೇರಿಕೊಂಡು, ನಂದಿತಾ ಹಾಗೂ ಮಗಳು ಪ್ರಗತಿಗೆ ಇನ್ನಿಲ್ಲದ ಮಾನಸಿಕ ಹಿಂಸೆ ನೀಡುತ್ತಿದ್ದರಂತೆ. "ನಿನ್ನ ಗಂಡ ಬದುಕಿದ್ದಾಗ ನನ್ನ ಬಳಿ ಹಣ ತೆಗೆದುಕೊಂಡಿದ್ದ" ಹಣವನ್ನ ವಾಪಸ್ಸು ಕೊಡಿ ಎಂದು ಗಂಡನ ಸಹೋದರರು ಪೀಡಿಸುತ್ತಿದ್ದರಂತೆ.

Ramesh Jarkiholi Sex CD Case: ರಮೇಶಣ್ಣ ತಪ್ಪು ಮಾಡಿಲ್ಲ, ಹಾಗೆ ಮಾಡಿದ್ದರೆ ಗಲ್ಲಿಗೇರಿಸಲಿ; ಜಾರಕಿಹೊಳಿ ಬೆನ್ನಿಗೆ ನಿಂತ ಶಾಸಕ ರಾಜೂಗೌಡ

ಮೂರು ತಿಂಗಳ ಹಿಂದೆಯಷ್ಟೇ ಗಂಡನನ್ನು ಕಳೆದುಕೊಂಡಿದ್ದ ನಂದಿತಾ ಹಾಗೂ ಮಗಳು ಪ್ರಗತಿ, ಪ್ರತಿದಿನ ಕಣ್ಣಿರಲ್ಲೇ ಕೈ ತೊಳೆಯುವಂತಾಗಿತ್ತು. ಆದರೂ  ಇದ್ಯಾವುದೇ ವಿಚಾರವನ್ನು ತನ್ನ ತವರು ಮನೆಯವರಿಗೆ ನಂದಿತಾ ಅವರು ತಿಳಿಸಿರಲ್ಲಿಲ್ಲವಂತೆ. ಬೆಂಗಳೂರಿನ ಕ್ರಿಸ್ತ ಜಯಂತಿ ಕಾಲೇಜಿನಲ್ಲಿ ಬಿಎಸ್ಇ ವಿದ್ಯಾಬ್ಯಾಸ ಮಾಡುತಿದ್ದ ಮಗಳು ಪ್ರಗತಿ, ಓದೋದರಲ್ಲಿ ಮುಂಚೂಣಿಯಲ್ಲಿದ್ದರು. ಆದರೆ ತನ್ನ ತಂದೆ ಇಲ್ಲ ಅನ್ನೋ ನೋವಿನ ಜೊತೆಗೆ,  ಅಜ್ಜಿ ಮನೆಯವರು ಪ್ರತಿನಿತ್ಯ ನೀಡುತ್ತಿದ್ದ ಕಾಟವನ್ನು ತಾಳಲಾರದೇ,  ತಂದೆ ಹೋಗಿರೋ ಜಾಗಕ್ಕೆ ನಾವು ಹೋಗೋಣ ಅಂತ ತಾಯಿ ನಂದಿತಾರಿಗೆ ಮನವೊಲಿಸಿದ್ದಾರೆ.

ಬಳಿಕ ಕೋಲಾರದ ನರಸಾಪುರ ಕೆರೆಯ ಬಳಿ ಮಂಗಳವಾರ ಸಂಜೆ 7.30  ರ ಸುಮಾರಿಗೆ ಬಂದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಂಗಿ ಪೂರ್ಣಿಮಾ ಗೆ ವಾಟ್ಸಾಪ್ ಮೂಲಕ ನಂದಿತಾ ಮೆಸೇಜ್ ಮಾಡಿದ್ದಾರೆ. ನಂತರ  ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ಒಬ್ಬರಿಗೊಬ್ಬರು ತಮ್ಮ ಕೈಗಳಿಗೆ ದುಪ್ಪಟ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ  ನಂದಿತಾ ಅವರ ತಾಯಿ ನಂಜಮ್ಮ, ಮದುವೆ ಸಮಯದಲ್ಲಿ ಒಡವೆ, ಸೈಟು, ಹಣ ಎಲ್ಲವನ್ನು ವರದಕ್ಷಿಣೆಯಾಗಿ ನೀಡಿದ್ದೇವೆ, ಆದರೂ ಹಣಕ್ಕಾಗಿ ಪೀಡಿಸುತ್ತಿದ್ದರು, ಅತ್ತೆ ಮನೆಯವರ ಚಿತ್ರ ಹಿಂಸೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗಿದ್ದು, ಕಿರುಕುಳ ನೀಡಿದವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.

ಒಟ್ಟಿನಲ್ಲಿ ಪ್ರತಿ ಸಮಸ್ಯೆಗೂ ಒಂದಿಲ್ಲೊಂದು ಪರಿಹಾರ ಇದ್ದೇ ಇರುತ್ತೆ. ಈ ರೀತಿ ದುಡುಕಿ ಆತ್ಮಹತ್ಯೆ ಮಾಡಿಕೊಂಡು,  ವಯಸ್ಸಾದ ತಂದೆ ತಾಯಿಯನ್ನು ನೋವಿಗೆ ದೂಡಿರೋದು ಮಾತ್ರ ನೋವಿನ ಸಂಗತಿ. ಈ ಸಂಬಂಧ ವೇಮಗಲ್ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ದೂರು ದಾಖಲಿಸಿದ್ದು, ಕಾನೂನು ಕ್ರಮಕ್ಕೆ ನೊಂದವರು ಆಗ್ರಹಿಸಿದ್ದಾರೆ.
Published by:Latha CG
First published: