Kolar Crime News: ಹಳೇ ಲವರ್ ಮೋಹಕ್ಕೆ ಬಿದ್ದು, ಹೆಂಡತಿಯನ್ನೇ ಕೊಲೆ ಮಾಡಿದ ಗಂಡ..!

ಪತ್ನಿಯನ್ನು ಪರಲೋಕಕ್ಕೆ ಕಳಿಸಲು ಹೊಂಚು ಹಾಕಿದ್ದ ಪಾಪಿ ಪತಿ ಶಂಕರ್, ಮೇ 30 ರಂದು ಆಕೆಯನ್ನು ಮಾಸ್ತಿ ಬಳಿಯ ದೇವರಹಳ್ಳಿ ಗ್ರಾಮದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಹೆಂಡತಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿ, ಶವವನ್ನು ಅಲ್ಲೇ ಕಲ್ಲುಬಂಡೆಯ  ಮಧ್ಯದಲ್ಲಿ ಬಿಸಾಡಿ ಬಂದಿದ್ದ. ಜೊತೆಗೆ ಏನು ತಿಳಿಯದಂತೆ ಸ್ಥಳದಿಂದ ಕಾಲ್ಕಿತ್ತು ತಮಿಳುನಾಡಿಗೆ ಹೋಗಿ ತಲೆಮರೆಸಿಕೊಂಡಿದ್ದ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೋಲಾರ(ಜೂ.27):  11 ವರ್ಷದ  ವಯಸ್ಸಿನಲ್ಲಿ ಅಪ್ಪ ಅಮ್ಮನ ಜೊತೆಗೆ ನಗುನಗುತಾ ದಿನ ಕಳೆಯಬೇಕಿದ್ದ  ಮಗು, ಈಗ ಇಳಿ ವಯಸ್ಸಿನಲ್ಲಿರೊ ಅಜ್ಜ ಅಜ್ಜಿಯ ಜೊತೆಗೆ ಇರಬೇಕಾದ ಅನಿವಾರ್ಯತೆ ಬಂದೊದಗಿದೆ. ಹೌದು ಹೆತ್ತಮ್ಮಳನ್ನ ಈ ಪುಟ್ಟ ಬಾಲಕಿ ಕಳೆದುಕೊಂಡಿದ್ದು, ಪತ್ನಿಯನ್ನ ಕೊಂದು ಪಾಪಿ ಅಪ್ಪನೂ ಜೈಲಿಗೆ ಹೋಗಿದ್ದಾನೆ.  ಇಂತಹ ದಾರುಣ ಘಟನೆ ನಡೆದಿರೋದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಪಾಕರಹಳ್ಳಿ ಗ್ರಾಮದಲ್ಲಿ,  ಕವಿತಾ ಹಾಗೂ ಶಂಕರ್, 2012 ರಲ್ಲಿ ತಂದೆ ತಾಯಿ ನೋಡಿದ ಶಂಕರ್​ನ್ನು ಕವಿತಾ ಅವರು ವಿವಾಹ ಆಗಿದ್ದರು. ಇವರಿಬ್ಬರ ಸುಂದರ ಸಂಸಾರಕ್ಕೆ ಒಂದು ಮುದ್ದಾದ ಹೆಣ್ಣು ಮಗುವು ಜನಿಸಿದ್ದು ಎಲ್ಲವೂ ಸರಿಯಾಗಿದೆ ಎನ್ನುವಷ್ಟರಲ್ಲಿ, ಗಂಡ ಶಂಕರ್ ಪತ್ನಿಯ ಪಾಲಿಗೆ ಯಮಧೂತನಾಗಿ ಇನ್ನಿಲ್ಲದಂತೆ ಕಾಡಲು ಆರಂಭಿಸಿದ್ದ.

ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸ್ತಿದ್ದ ಶಂಕರ್ ಮದುವೆಯಾದ ಎರಡು ವರ್ಷಕ್ಕೆ ತನ್ನ ಅಸಲಿ ಮುಖವನ್ನ ತೋರಿಲಸು ಶುರುಮಾಡಿದ್ದಾನೆ. ಪಾಕರಹಳ್ಳಿಯ ಮನೆಯಲ್ಲಿ ತಂದೆ ತಾಯಿಯೊಂದಿಗೆ ಇದ್ದ ಶಂಕರ್ , ಪತ್ನಿ ಕವಿತಾಳಿಗೆ ಅಕ್ಷರಶಃ ನರಕಯಾತನೆಯನ್ನೆ ತೋರಿಸಿದ್ದಾನೆ.  ಮನೆಯಲ್ಲಿ ಬಡತನ, ಅಪ್ಪ- ಅಮ್ಮ ಕೂಲಿ ನಾಲಿ ಮಾಡಿ ಮದುವೆ ಮಾಡಿದ್ದಕ್ಕೆ, ಗಂಡನನ್ನೆ ನಂಬಿದ್ದ ಕವಿತಾ, ಗಂಡನೇ ತನಗೆ ಸರ್ವಸ್ವ ಎಂದು ನಂಬಿದ್ದಳು,

ಆದರೆ ಮದುವೆಯಾದ ಎರಡು ವರ್ಷಕ್ಕೆ ಕುಡಿದು ತೇಲಾಡಲು ಶುರುಮಾಡಿದ ಶಂಕರ್ ಹೊಡೆಯೊದು, ಬಡಿಯೋದು ಆರಂಭಿಸಿದ. ಮನೆಗೆ ಹೊಗಿ ನಿಮ್ಮಪ್ಪನ ಹತ್ತಿರ ಹಣ ತೆಗೆದುಕೊಂಡು ಬಾ ಎಂದು ಕುಡಿದು ಹಿಂಸೆ ನೀಡುತ್ತಿದ್ದಕ್ಕೆ, ತವರು ಮನೆಯಾದ ಕೆಜಿಎಪ್ ತಾಲೂಕಿನ ನೀಲಗಿರಿ ಹಳ್ಳಿಯಲ್ಲೆ 2 ವರ್ಷ ತಂದೆ ತಾಯಿಯ ಜೊತೆಯಲ್ಲೆ ವಾಸವಿದ್ದರು. ಆದ್ರೆ ಈ ಮಧ್ಯೆ ಶಂಕರ್ ನನ್ನು ಸೇರಿಸಿ ತಂದೆ ಸೀನಪ್ಪ, ಹಾಗು ರತ್ನಮ್ಮರ ಮೇಲೂ ಡೌರಿ ಕೇಸ್ ದಾಖಲು ಮಾಡಿದ್ದರು, ಇದಕ್ಕೆ ಹೆದರಿದ ಶಂಕರ್ ಪತ್ನಿಯೊಂದಿಗೆ ನೆಟ್ಟಗೆ ಸಂಸಾರ ಮಾಡೋದಾಗಿ ಪೊಲೀಸರ ಎದುರು ತಪ್ಪೊಪ್ಪಿಕೊಂಡು, ನಂತರ ಹಳೇ ಚಾಳಿಯನ್ನೆ ಆರಂಭಿಸಿದ್ದಾನೆ. ಅದಾಗಿಯೂ ಮತ್ತೊಮ್ಮೆ ಗಂಡ ಶಂಕರ್ ಮೇಲಿನ ಪ್ರೀತಿಯಿಂದ ಸಂಸಾರ ಮಾಡಲು ತೆರಳಿದ ಕವಿತಾ ಇದೀಗ ಬಾರದ ಲೋಕಕ್ಕೆ ಹೋಗಿದ್ದಾಳೆ.

ಇದನ್ನೂ ಓದಿ:ಇಂದು ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ; ಕೋವಿಡ್​ ಹಿನ್ನೆಲೆ ಸರಳವಾಗಿ ಜಯಂತಿ ಆಚರಣೆ

24 ವರ್ಷದ ಕವಿತಾ ಶವವಾಗಿ ಪತ್ತೆಯಾಗಿದ್ದು, ಕೊಲೆಯ ಹಿಂದೆ ಮತ್ತೊಂದು ಹೆಣ್ಣಿನ ನೆರಳು ಬೆಳಕಿಗೆ ಬಂದಿದೆ. ಕಳೆದ 9 ವರ್ಷದ ಹಿಂದೆ ಪಾಕರಹಳ್ಳಿ ಗ್ರಾಮದಲ್ಲಿ ಮದುವೆಯಾಗಿದ್ದ ಶಂಕರ್ ಹಾಗು ಕವಿತಾ ದಂಪತಿಗಳು, ಹೆಣ್ಣಿನ ಕಡೆಯವರು ಶಕ್ತಿ ಮೀರಿ ಎಲ್ಲವನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟಿದ್ದಾರೆ, ಅಳಿಯ ಶಂಕರ್ ಶಂಕರ್ ಗಾರೆ ಕೆಲಸ ಮೇಸ್ತ್ರಿಯಾಗಿದ್ದು ಅವನ ಬಳಿ ಒಂದು ಬೈಕ್ ಇರಲಿಲ್ಲ. ಹೀಗಾಗಿ ಅಳಿಯನಿಗೆ ಒಂದು ಬೈಕ್, ಚೈನ್ ಉಂಗುರ, ಒಂದು ಲಕ್ಷ ಕ್ಯಾಶ್ ಸಹ , ಕವಿತಾಳ ತಂದೆ ವೆಂಕಟಮುನಿ ಡೌರಿ ರೂಪದಲ್ಲಿ ನೀಡಿದ್ದಾರೆ, ಇಷ್ಟಾದರು ಅಳಿಯನ ದನದಾಹ ತೀರಿಸಲು ಆಗಾಗ್ಗೆ ಕೈಲಾದಷ್ಟು ಹಣ ಲೆಕ್ಕವಿಲ್ಲದೆ ನೀಡಿದ್ದಾರೆ,

ಅಳಿಯನಿಗೆ ಇಷ್ಟು ಮಾಡಿದ್ದ ಮಾವನ ಶ್ರಮವೂ ವ್ಯರ್ಥವಾಗಿತ್ತು. ಇದ್ದಕ್ಕಿದ್ದಂತೆ ಮಗಳು ಕವಿತಾ ಹಾಗೂ ಅಳಿಯ ಶಂಕರ್ ನಾಪತ್ತೆಯಾಗಿದ್ದರು,  ಬಂಗಾರಪೇಟೆ ಪೊಲೀಸ್ ಠಾಣೆಗೆ ಜೂನ್ 4ರಂದು ವೃದ್ದ ದಂಪತಿ ದೂರು ನೀಡಲು ಬಂದಿದ್ದರು. ಆದರೆ ದೂರು ಪಡೆಯೋದಕ್ಕೂ ಮುಂಚೆ, ಕಳೆದ ಮೂರು ದಿನಗಳ ಹಿಂದೆ ಪತ್ತೆಯಾಗಿದ್ದ ಅಪರಿಚಿತ ಮಹಿಳೆಯರ ಶವಗಳ ಪೋಟೊಗಳನ್ನ ಬಂಗಾರಪೇಟೆ ಪೊಲೀಸರು, ಕವಿತಾಳ ಪೋಷಕರಿಗೆ ತೊರಿಸಿದ್ದು, ಪೋಟೋಗಳಲ್ಲಿ ತಮ್ಮ ಮಗಳನ್ನ ಗುರುತು ಹಿಡಿದ ತಂದೆ ವೆಂಕಟಮುನಿ ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. ದೂರು ನೀಡುವ ಮೂರು ದಿನ ಹಿಂದೆ ಅಂದರೆ, ಜೂನ್ 1 ರಂದು ಮಾಲೂರು ತಾಲೂಕಿನ ದೇವರಹಳ್ಳಿ ಗ್ರಾಮದ ಬಳಿಯ ನಿರ್ಜನ ಬೆಟ್ಟಗುಡ್ಡದ ಪ್ರದೇಶದಲ್ಲಿ ಅಪರಿಚಿತ ಮಹಿಳೆಯ ಶವವೊಂದು ಪತ್ತೆಯಾಗಿತ್ತು. ವಿಚಾರ ತಿಳಿದ ಕೂಡಲೇ ಎಚ್ಚೆತ್ತುಕೊಂಡ  ಮಾಲೂರಿನ ಮಾಸ್ತಿ ಠಾಣೆಯ ಪೊಲೀಸರು, ಶವದ ಪೋಟೊಗಳನ್ನ ಸಾಮಾಜಿಕ ಜಾಲತಾಣ ಹಾಗೂ ಸ್ಥಳೀಯ ಪತ್ರಿಕೆಯಲ್ಲಿ ಶವ ಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು,

ಮೃತ ಕವಿತಾಳ ಪೋಷಕರ ದೂರಿನ ಮೇರೆಗೆ ಪ್ರಕರಣವನ್ನು ಕೊಲೆ ಪ್ರಕರಣವಾಗಿ ದಾಖಲಿಸಿಕೊಂಡ ಮಾಸ್ತಿ ಪೊಲೀಸರು ಪ್ರಕರಣದ ‌ ಬೆನ್ನು ಹತ್ತಿದಾಗ ಅಲ್ಲಿ ಕೊಲೆ ಆರೋಪಿ ಬೇರೆ ಯಾರೂ ಅಲ್ಲಾ ಕವಿತಾಳ ಗಂಡ ಅನ್ನೋದು ಕವಿತಾಳ ಪೋಷಕರ ಹೇಳಿಕೆಯಿಂದ ತಿಳಿದುಬಂದಿತ್ತು, ಗಂಡನ ಸಹವಾಸ ಬೇಡವೆಂದು ಮಗಳನ್ನ ತವರು ಮನೆ ನೀಲಗಿರಿ ಹಳ್ಳಿಯಲ್ಲಿ ಇರಿಸಿದ್ದ ಕವಿತಾ, ಗಂಡನೇ ಬೇಕೆಂದು ಶಂಕರ್ ಜೊತೆಗೆ ವಾಸವಿದ್ದ.

ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ

ಶಂಕರ್ ಮನೆಯಲ್ಲೆ ಕೌಟುಂಬಿಕ ಕಲಹ ಸೃಷ್ಟಿಯಾಗಿ, ಇಬ್ಬರು ಪಾಕರಹಳ್ಳಿಯ ಮನೆಯಿಂದ ಹೊರಬಂದು, ಕಾಮಸಮುದ್ರ ಗ್ರಾಮದಲ್ಲಿ ಸಂಬಂಧಿಯೊಬ್ಬರ ಮನೆಯ ಮೇಲಿನ ರೂಮ್‍ನಲ್ಲಿ ಹೊಸ ಸಂಸಾರ ಆರಂಭಿಸಿದ್ದರು, ಆದರೆ ಪತ್ನಿಯನ್ನು ಪರಲೋಕಕ್ಕೆ ಕಳಿಸಲು ಹೊಂಚು ಹಾಕಿದ್ದ ಪಾಪಿ ಪತಿ ಶಂಕರ್, ಮೇ 30 ರಂದು ಆಕೆಯನ್ನು ಮಾಸ್ತಿ ಬಳಿಯ ದೇವರಹಳ್ಳಿ ಗ್ರಾಮದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಶವವನ್ನು ಅಲ್ಲೇ ಕಲ್ಲುಬಂಡೆಯ  ಮಧ್ಯದಲ್ಲಿ ಬಿಸಾಡಿ ಬಂದಿದ್ದ, ಜೊತೆಗೆ ಏನು ತಿಳಿಯದಂತೆ ಸ್ಥಳದಿಂದ ಕಾಲ್ಕಿತ್ತು ತಮಿಳುನಾಡಿಗೆ ಹೊಗಿ ತಲೆಮರೆಸಿಕೊಂಡಿದ್ದ. ಕೂಡಲೇ ಎಚ್ಚೆತ್ತುಕೊಂಡ ಮಾಸ್ತಿ ಠಾಣೆಯ ಪೊಲೀಸರು ಆರೋಪಿ ಶಂಕರ್‍ನನ್ನ ಬಂದಿಸಿ ವಿಚಾರಣೆ ನಡೆಸಿದಾಗ, ಪರ ಮಹಿಳೆಯ ಸಹವಾಸವೇ ಪತ್ನಿಯ ಕೊಲೆಗೆ ಕಾರಣವೆಂದು ತಿಳಿದುಬಂದಿದೆ.

ಪತ್ನಿಯ ಮುಗ್ದ ಪ್ರೀತಿಯನ್ನೆ ಬಂಡವಾಳ ಮಾಡಿಕೊಂಡ ನರಭಕ್ಷಕ ಪತಿ ಶಂಕರ್ ಹಣ ಹಣ ಎಂದು ಪತ್ನಿಗೆ ಮಾನಸಿಕವಾಗಿ, ದೈಹಿಕವಾಗಿ ಕೊಡಬಾರದ ಹಿಂಸೆಯನ್ನ ಕೊಟ್ಟಿದ್ದಾನೆ, ಕೊನೆಗೆ ಇನ್ನು ತವರು ಮನೆಯಿಂದ ಹಣ ತರಲ್ಲ ಎಂದು ತಿಳಿದಾಗ, ಇನ್ನು ಹಳೆಯ ಲವರ್ ಜೊತೆಗೆ ಜೀವನ ಮುನ್ನೆಡೆಸೋಕೆ ಅಡ್ಡಿಯಾಗಿದ್ದ ಪತ್ನಿಯನ್ನ, ಮಾಸ್ತಿಯ ದೇವರಹಳ್ಳಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೊಗಿ, ಚೂಡಿದಾರ್ ವೇಲ್‍ನಿಂದಲೇ ಕುತ್ತಿಗೆ ಹಿಸುಕಿ ಕೊಂದು ಪರಾರಿಯಾಗಿದ್ದಾನೆ, ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ್ದರಿಂದ ಮಾಸ್ತಿ ಪೊಲೀಸರೇ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ.

ದುಡ್ಡು ದುಡ್ಡು ಎನ್ನತ್ತಾ ಪತ್ನಿಯ ರಕ್ತ ಹೀರಿದ್ದ ಪಾಪಿ ಪತಿ ಶಂಕರ್ ಕೊನೆಗೆ ಹೆಂಡತಿಯ ಜೀವವನ್ನೆ ಹಿಂಡಿ ಜೈಲು ಸೇರಿದ್ದಾನೆ, ಇತ್ತ ಅಪ್ಪ ಅಮ್ಮನ ಪ್ರೀತಿಯೂ ಇಲ್ಲದೆ 11 ವರ್ಷದ ಮಗಳು ಒಬ್ಬೊಂಟಿಯಾಗಿದ್ದಾಳೆ, ಏನೇ ಆದರು ಮಗಳ ಬಾಳು ಬಂಗಾರವಾಗಲಿ ಎಂದು ಕೂಲಿ ನಾಲಿ ಮಾಡಿ ಲಕ್ಷ ಲಕ್ಷ ಅಳಿಯನಿಗೆ ಡೌರಿ ರೂಪದಲ್ಲಿ ನೀಡಿದ್ದ ಪೋಷಕರು ಇದೀಗ ನೋವಿನಲ್ಲೆ ದಿನಕಳೆಯುವಂತಾಗಿದೆ, ಒಟ್ಟಾರೆ ಸುಂದರ ಸಂಸಾರವನ್ನ ಬಿಟ್ಟು ಮೂರನೆಯವಳ ಮೋಹಕ್ಕೆ ಬಿದ್ದು ರಾಕ್ಷಸನಂತೆ ವರ್ತಿಸಿದ್ದ ಶಂಕರ್ ತನ್ನ ಜೀವನವನ್ನ ಕೈಯಾರೆ ತಾನೇ ಹಾಳು ಮಾಡಿಕೊಂಡಿದ್ದು, ಈಗ ಜೈಲಿನಲ್ಲಿ ಕಾಲಕಳೆಯುವಂತಾಗಿದೆ.
Published by:Latha CG
First published: