ಯುವತಿಯೊಂದಿಗೆ ಪರಾರಿಯಾಗಿದ್ದ ಕೋಲಾರದ ಅವಧೂತ ಬಂಧನ; ಬಯಲಾಯ್ತು ಸ್ವಾಮೀಜಿಯ ಅಸಲಿ ಮುಖ

ರಾಜೇಂದ್ರ ಎಂಬ ಹೆಸರಿನ ಈತ ಕಾವಿ ತೊಟ್ಟು ದತ್ತಾತ್ರೇಯ ಅವಧೂತ ಎಂದು ಹೆಸರಿಟ್ಟುಕೊಂಡು ಮಾಡರ್ನ್​ ಸ್ವಾಮೀಜಿಯಾಗಿದ್ದ. ಯುವತಿಯೊಂದಿಗೆ ನಾಪತ್ತೆಯಾಗಿದ್ದ ಈತನ ಮೇಲೆ ಯುವತಿಯ ಪೋಷಕರು ಕಿಡ್ನಾಪ್ ಕೇಸ್ ದಾಖಲಿಸಿದ್ದರು.

ಕೋಲಾರ ಹೊಳಲಿ ಮಠದ ದತ್ತಾತ್ರೇಯ ಅವಧೂತ ಸ್ವಾಮೀಜಿ

ಕೋಲಾರ ಹೊಳಲಿ ಮಠದ ದತ್ತಾತ್ರೇಯ ಅವಧೂತ ಸ್ವಾಮೀಜಿ

  • Share this:
ಕೋಲಾರ (ಮಾ. 5): ಕಳೆದ ವಾರ ತಮ್ಮ ಮಠದ ಭಕ್ತೆಯಾದ 19 ವರ್ಷದ ಯುವತಿ ಜೊತೆ ಪರಾರಿಯಾಗಿದ್ದ ಕೋಲಾರದ ಹೊಳಲಿ ಸೇವಾಶ್ರಮದ ಪೀಠಾಧಿಪತಿ ದತ್ತಾತ್ರೇಯ ಅವಧೂತ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುರುಡೇಶ್ವರದ ಲಾಡ್ಜ್​ನಲ್ಲಿ ಯುವತಿಯೊಂದಿಗೆ ಉಳಿದುಕೊಂಡಿದ್ದ ಸ್ವಾಮೀಜಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ಹೊಳಲಿಯಲ್ಲಿ ನೂತನವಾಗಿ ಆರಂಭವಾದ ಮಠಕ್ಕೆ ಪೀಠಾಧ್ಯಕ್ಷರಾಗಿ ಇದೇ ವರ್ಷ ಸಂಕ್ರಾಂತಿಯಂದು ದತ್ತಾತ್ರೇಯ ಅವಧೂತ ಸ್ವಾಮೀಜಿ ಅಧಿಕಾರ ಸ್ವೀಕರಿಸಿದ್ದರು. ಪಾದಪೂಜೆಗೆ ಬರುತ್ತಿದ್ದ ಅದೇ ಗ್ರಾಮದ 19 ವರ್ಷದ ಯುವತಿಯೊಂದಿಗೆ ಆಪ್ತರಾಗಿದ್ದ ಸ್ವಾಮೀಜಿ ಪರಾರಿಯಾಗಿದ್ದರು. ಹೊಳಲಿ ಗ್ರಾಮದಲ್ಲಿರುವ ಭೀಮಲಿಂಗೇಶ್ವರ ದೇವಾಲಯದ ಆಡಳಿತ ಮಂಡಳಿಯ ನೆರವಿನಿಂದ ಸ್ವಾಮೀಜಿ ಹೊಳಲಿ ಗ್ರಾಮದಲ್ಲಿ ನೂತನವಾಗಿ ಸೇವಾಶ್ರಮ ಪೀಠ ಸ್ಥಾಪಿಸಿದ್ದರು.

ಇದನ್ನೂ ಓದಿ: 19 ವರ್ಷದ ಯುವತಿ ಜೊತೆ ಅವಧೂತ ಪರಾರಿ, ತಿರುಪತಿಯಲ್ಲಿ ಮದುವೆಯಾದ ದತ್ತಾತ್ರೇಯ ಸ್ವಾಮೀಜಿ

ದತ್ತಾತ್ರೇಯ ಅವಧೂತ ಸ್ವಾಮೀಜಿ ಎಂದು ಹೆಸರಿಟ್ಟುಕೊಂಡು ಸಂಕ್ರಾಂತಿ ಹಬ್ಬದ ದಿನ ಸ್ವಾಮೀಜಿ ಪೀಠವೇರಿದ್ದರು. ಫೆ. 25ರಂದು ನಾಪತ್ತೆಯಾಗಿದ್ದ ಸ್ವಾಮೀಜಿ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ನಂತರ ಯುವತಿಯ ಮನೆಯವರಿಗೆ ತಾವೇ ಫೋನ್ ಮಾಡಿ 'ನಾನು ನಿಮ್ಮ ಮಗಳನ್ನು ತಿರುಪತಿಯಲ್ಲಿ ಮದುವೆಯಾಗಿದ್ದೇನೆ. ಯಾರೂ ಪೊಲೀಸರಿಗೆ ದೂರು ನೀಡಬೇಡಿ' ಎಂದು ಹೇಳಿದ್ದರು. ಆದರೆ, ತಾನು ಆಕೆಯನ್ನು ಮದುವೆಯಾಗಿರುವ ಬಗ್ಗೆ ಯಾವುದೇ ಸಾಕ್ಷಿಗಳನ್ನೂ ನೀಡಿರಲಿಲ್ಲ. ತಮ್ಮ ಮಗಳನ್ನು ಸ್ವಾಮೀಜಿ ಅಪಹರಿಸಿದ್ದಾರೆಂದು ಯುವತಿಯ ಕುಟುಂಬಸ್ಥರು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಇದನ್ನೂ ಓದಿ: ಕೊರೋನಾ ಬಗ್ಗೆ ಕೋಡಿ ಮಠ ಭವಿಷ್ಯ; ಇಡೀ ಜಗತ್ತನ್ನೇ ಆವರಿಸುವ ಖಾಯಿಲೆಗೆ ಭಾರತದ ಮಂತ್ರಶಕ್ತಿಯಲ್ಲಿದೆಯಂತೆ ಪರಿಹಾರ!

ಆ ದೂರಿನ ಅನ್ವಯ ಸ್ವಾಮೀಜಿಗಾಗಿ ಹುಡುಕಾಟ ನಡೆಸಿದ್ದ ಕೋಲಾರ ಗ್ರಾಮಾಂತರ ಪೊಲೀಸರು ಅವಧೂತ ಸ್ವಾಮೀಜಿಯನ್ನು ಬುಧವಾರ ಮುರುಡೇಶ್ವರದಲ್ಲಿ ಬಂಧಿಸಿದ್ದಾರೆ. ರಾಜೇಂದ್ರ ಎಂಬ ಹೆಸರಿನ ಈತ ಕಾವಿ ತೊಟ್ಟು ದತ್ತಾತ್ರೇಯ ಅವಧೂತ ಎಂದು ಹೆಸರಿಟ್ಟುಕೊಂಡು ಮಾಡರ್ನ್​ ಸ್ವಾಮೀಜಿಯಾಗಿದ್ದರು. ನಾಪತ್ತೆಯಾಗಿದ್ದ 19 ವರ್ಷದ ಯುವತಿ ಮತ್ತು ಸ್ವಾಮೀಜಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ದತ್ತಾತ್ರೇಯ ಅವಧೂತರ ಮೇಲೆ ಯುವತಿಯ ಪೋಷಕರು ಕಿಡ್ನಾಪ್ ಕೇಸ್ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಇವರಿಬ್ಬರ ಪತ್ತೆಗಾಗಿ ಕೋಲಾರ ಎಸ್​ಪಿ ಕಾರ್ತಿಕ್ ರೆಡ್ಡಿ ವಿಶೇಷ ತಂಡ ರಚಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಲಾಡ್ಜ್​ನಲ್ಲಿ ಯುವತಿಯೊಂದಿಗೆ ಉಳಿದುಕೊಂಡಿದ್ದ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.

(ವರದಿ: ರಘುರಾಜ್)
First published: