HOME » NEWS » State » KOLAR CRIME KOLAR MAN MURDERS WOMAN IN HER SHOP AFTER PURCHASING CRICKET BAT CRIME NEWS SCT RRK

Kolar Crime: ಕೋಲಾರದಲ್ಲಿ ಮಹಿಳೆಯ ಬರ್ಬರ ಹತ್ಯೆ; ಕ್ರಿಕೆಟ್ ಬ್ಯಾಟ್ ಕೊಳ್ಳುವ ನೆಪದಲ್ಲಿ ಬಂದು ಕೊಲೆ

Kolar Murder News: 29 ವರ್ಷದ ನೀಲವೇಣಿ ಕೊಲೆಯಾದ ಗೃಹಿಣಿಯಾಗಿದ್ದು, ಕೋಲಾರದ ಮಹಾಲಕ್ಷ್ಮಿ ಲೇಔಟ್ ನಲ್ಲಿ ಮಧ್ಯಾಹ್ನ ಫ್ಯಾನ್ಸಿ ಸ್ಟೋರ್​ಗೆ ಆಗಮಿಸಿದ ಓರ್ವ ವ್ಯಕ್ತಿ  ಕೊಲೆ ಮಾಡಿ ಪರಾರಿಯಾಗಿದ್ದಾನೆ.

news18-kannada
Updated:April 22, 2021, 7:59 AM IST
Kolar Crime: ಕೋಲಾರದಲ್ಲಿ ಮಹಿಳೆಯ ಬರ್ಬರ ಹತ್ಯೆ; ಕ್ರಿಕೆಟ್ ಬ್ಯಾಟ್ ಕೊಳ್ಳುವ ನೆಪದಲ್ಲಿ ಬಂದು ಕೊಲೆ
ಸಾಂದರ್ಭಿಕ ಚಿತ್ರ
  • Share this:
ಕೋಲಾರ (ಏ. 22): ಕ್ರಿಕೆಟ್ ಬ್ಯಾಟ್ ಕೊಳ್ಳುವ ನೆಪದಲ್ಲಿ ಮಹಿಳೆಯನ್ನು ಅಪರಿಚಿತ ವ್ಯಕ್ತಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕೋಲಾರ ನಗರದ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ.  29 ವರ್ಷದ ನೀಲವೇಣಿ ಕೊಲೆಯಾದ ಗೃಹಿಣಿಯಾಗಿದ್ದು, ನಿನ್ನೆ ಮಧ್ಯಾಹ್ನ ಫ್ಯಾನ್ಸಿ ಸ್ಟೋರ್​ಗೆ ಆಗಮಿಸಿದ ಓರ್ವ ವ್ಯಕ್ತಿ  ಕೊಲೆ ಮಾಡಿ ಪರಾರಿಯಾಗಿದ್ದಾನೆ. ಇನ್ನು ಕೊಲೆಯ ನಂತರ  ಮಹಿಳೆಯ ಚೈನ್ ಕದ್ದಿರುವ ಆರೋಪಿ, ಬ್ಯಾಟ್​ನಿಂದ ಹೊಡೆದು, ಮೂಟೆಯಲ್ಲಿ ಮೃತದೇಹ ಇಟ್ಟು ಹೋಗಿದ್ದಾನೆ. ಆರೋಪಿ ರಾಜಾರೋಷವಾಗಿ ಬಂದು ಹೋಗಿರುವ  ದೃಶ್ಯಗಳು ಪಕ್ಕದ ಮಳಿಗೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ನಂತರ ಸಂಬಂಧಿಕರು ನಿನ್ನೆಯೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ನೀಲವೇಣಿಯವರನ್ನು ದಾಖಲಿಸಿದರು. ಆದರೆ,  ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ಕೋಲಾರದ ಆರ್. ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಮೃತ ಮಹಿಳೆಯ ಶವ ಪರೀಕ್ಷೆ ನಡೆದಿದ್ದು, ಈ ಸಂಬಂಧ ಕೋಲಾರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ‌. ಮಂಗಳವಾರ ಬೆಳಗ್ಗೆ 11 ಗಂಟೆಗೆ ಜನರು ಓಡಾಡುವ ವೇಳೆಯಲ್ಲೇ ಮೃತ ನೀಲವೇಣಿ ಅವರ ಪತಿ ಮಳಿಗೆಯಲ್ಲಿ ಇಲ್ಲದ್ದನ್ನು ಗಮನಿಸಿದ ಆಗಂತುಕ ಮಳಿಗೆಯ ಒಳಗೆ ಪ್ರವೇಶಿಸಿದ್ದು, ಕ್ರಿಕೆಟ್ ಬೇಕೆಂದು  ನೀಲವೇಣಿಯವರನ್ನು ಕೇಳಿದ್ದಾನೆ. ಮಳಿಗೆಯಲ್ಲಿದ್ದ ಬ್ಯಾಟ್ ಅಲ್ಲದೆ ಇನ್ನು ಬೇರೆ ಬಗೆಯ ಬ್ಯಾಟ್ ನೋಡಲು ಮಳಿಗೆ ಹಿಂಬದಿಯ ಗೋದಾಮಿಗೆ ಮಹಿಳೆಯನ್ನ ಕರೆಸಿಕೊಂಡು ಹೋಗಿದ್ದಾರೆ. ಆಗ ಆಕೆಯ ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಸರವನ್ನು ಕಸಿದುಕೊಳ್ಳಲು ಯತ್ನಿಸಿದ್ದು, ಇದಕ್ಕೆ ಮಹಿಳೆ ವಿರೋಧಿಸಿದ್ದಕ್ಕೆ ಬ್ಯಾಟ್​ನಿಂದಲೇ ತಲೆಗೆ ಬಲವಾಗಿ ಹೊಡೆದು, ಚಾಕುವಿನಿಂದ ಕತ್ತು ಕತ್ತರಿಸಿ 40  ಗ್ರಾಂ ಸರದೊಂದಿಗೆ ಸ್ಥಳದಿಂದ ತೆರಳಿದ್ದಾನೆ.



ಇದನ್ನೂ ಓದಿ: 15 ದಿನಗಳ ಬಳಿಕ ಸಾರಿಗೆ ನೌಕರರ ಮುಷ್ಕರ ಅಂತ್ಯ: ಹೈಕೋರ್ಟ್ ಸೂಚನೆ ಬೆನ್ನಲ್ಲೇ ಕೋಡಿಹಳ್ಳಿ ಚಂದ್ರಶೇಖರ್ ಘೋಷಣೆ

ಮೃತ  ನೀಲವೇಣಿ ಕಳೆದ 14 ವರ್ಷಗಳ ಹಿಂದೆ ಎಲ್ ಐ ಸಿ ಏಜೆಂಡ್ ಟಿ. ಜೇಮ್ಸ್ ‌ಅವರನ್ನು ಮದುವೆಯಾಗಿ ಎರಡು ಗಂಡು, ಎರಡು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ. ಜೀವನೋಪಾಯಕ್ಕಾಗಿ ಮಹಾಲಕ್ಷ್ಮಿ ಲೇ ಔಟ್ ನಲ್ಲಿ ಕಳೆದ ಹಲವು ವರ್ಷಗಳಿಂದ ಫ್ಯಾನ್ಸಿ ಸ್ಟೋರ್ ವೊಂದನ್ನು ಹಾಕಿಕೊಂಡಿದ್ದು,  ಪ್ರತಿ ದಿನ ನಾಗನಾಯಕನ ಹಳ್ಳಿಯಿಂದ ಗಂಡ ಹೆಂಡತಿ ಬಂದು ಕೆಲಸ ಮುಗಿಸಿಕೊಂಡು ಮತ್ತೆ ಗ್ರಾಮಕ್ಕೆ ವಾಪಸ್ಸು ತೆರಳುತ್ತಿದ್ದರು. ನಿನ್ನೆಯೂ ಸಹ ಪತಿ ಜೀಮ್ಸ್ ನೀಲವೇಣಿಯನ್ನು ಸ್ಟೋರ್ ನಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದಾರೆ. ಪತ್ನಿ ನೀಲವೇಣಿ ಪೋನ್ ತೆಗೆದಿಲ್ಲ. ಇದರಿಂದ  ಜೇಮ್ಸ್ ಪಕ್ಕದ ಅಂಗಡಿಗೆ ಪೋನ್ ಮಾಡಿ ಪತ್ನಿ ಯನ್ನು ಕರೆಯುವಂತೆ ಹೇಳಿದ್ದಾರೆ. ಆದರೆ ಪತ್ನಿ ಅಂಗಡಿಯಲ್ಲಿ ಇಲ್ಲದೆ ಇರುವ ವಿಚಾರ ಕೇಳಿ ಆತಂಕಗೊಂಡ ಜೇಮ್ಸ್,  ಸ್ಟೋರ್ ಬಳಿ ಬಂದು ಸ್ಟೋರ್ ನ ಹಿಂಬದಿಯಲ್ಲಿರುವ ಗೋದಾಮಿನಲ್ಲಿ ನೀಲವೇಣಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದನ್ನು ಕಂಡು ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆ ಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾರೆ.

ಇನ್ನು, ಹಾಡಹಗಲೇ ಈ ರೀತಿ ಕೃತ್ಯ ಎಸಗಿರುವ ಆರೋಪಿಯನ್ನು ಬಂಧಿಸಬೇಕು, ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂಬುದು ಸಂಬಂಧಿಕರ ಆಗ್ರಹವಾಗಿದೆ. ಕೋಲಾರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು, ಆದಷ್ಟು ಬೇಗ ಆರೋಪಿಯನ್ನ ಬಂದಿಸುವುದಾಗಿ ಕೋಲಾರ ಎಸ್ಪಿ  ಕಾರ್ತಿಕ್ ರೆಡ್ಡಿ  ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಾರೆ ಜೀವನೋಪಾಯಕ್ಕಾಗಿ ಊರು ಬಿಟ್ಟು ಊರಿಗೆ ಬಂದಿದ್ದ ನೀಲವೇಣಿ ಕಥೆ ದುರಂತದಲ್ಲಿ ಅಂತ್ಯಗೊಂಡಿದ್ದು,  ಸತ್ಯಾಸತ್ಯತೆ ಪೊಲೀಸರ ತನಿಖೆಯಿಂದಲೇ ಹೊರ ಬರಬೇಕಾಗಿದೆ.
Published by: Sushma Chakre
First published: April 22, 2021, 7:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories