ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಅನ್ನೋದು ನಿಗೂಢವಾಗಿದೆ. ಯುಗಾದಿ (Ugadi) ಹಬ್ಬದಂದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ (Congress Candidate List) ಬಿಡುಗಡೆ ಮಾಡುತ್ತೆ ಎಂದು ಹೇಳಲಾಗಿತ್ತು. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (KPCC President DK Shivakumar) ಪಟ್ಟಿ ಬಿಡುಗಡೆ ದಿನಾಂಕ ಮುಂದೂಡಿಕೆಯಾಗಿರೋದನ್ನು ಖಚಿತಪಡಿಸಿದ್ದರು. ಇತ್ತ ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರ ಹೆಸರನ್ನು ಸೇರ್ಪಡೆ ಮಾಡಲು ಹೈಕಮಾಂಡ್ (Congress High Command) ಕಸರತ್ತು ಮಾಡುತ್ತಿದೆ. ಈ ಹಿನ್ನೆಲೆ ಪಟ್ಟಿ ಬಿಡುಗಡೆ ವಿಳಂಬವಾಗ್ತಿದೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್ ನಿಯೋಗವೊಂದು ದೆಹಲಿಗೆ ಹೊರಟಿದೆ.
ಕಾಂಗ್ರೆಸ್ MLC ನಸೀರ್ ಅಹಮದ್ (Congress MLA Nasee Ahmad) ನೇತೃತ್ವದಲ್ಲಿ ದೆಹಲಿಗೆ ನಿಯೋಗ ತೆರಳಲು ನಿರ್ಧಾರ ಮಾಡಲಾಗಿದೆ.
ಕೋಲಾರ ತಾಲೂಕಿನ ಮುಸ್ಲಿಂ ನಾಯಕರನ್ನ ಒಳಗೊಂಡ ಈ ನಿಯೋಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲಿದೆ. ಭೇಟಿ ವೇಳೆ ಕೋಲಾರದಿಂದಲೇ ಸಿದ್ದರಾಮಯ್ಯ ಅವರಿಗೆ ಟಿಕೆಟ್ ನೀಡಬೇಕು ಎಂದು ನಿಯೋಗ ಒತ್ತಾಯಿಸಲಿದೆ.
ಇದನ್ನೂ ಓದಿ: Siddaramaiah: ಮಾಜಿ ಸಿಎಂಗೆ ಶುರುವಾಯ್ತು ಹೊಸ ತಲೆನೋವು; ಇತ್ತ ಕೋಲಾರದಲ್ಲಿ ಫ್ಯಾಮಿಲಿ ಅಸ್ತ್ರ ಪ್ರಯೋಗ
ಕೋಲಾರದಿಂದ ಹಿಂದೆ ಸರಿದಿದ್ಯಾಕೆ?
ದೆಹಲಿ ಪ್ರವಾಸದ ವೇಳೆ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಜೊತೆಗೆ ಪ್ರತ್ಯೇಕವಾಗಿ ಸಭೆ ನಡೆಸಿದ್ದರಂತೆ. ಈ ವೇಳೆ ಕೋಲಾರ ನಿಮಗೆ ಸುರಕ್ಷಿತ ಕ್ಷೇತ್ರವಲ್ಲ. ಆದ್ದರಿಂದ ಕ್ಷೇತ್ರ ಬದಲಿಸಿಕೊಳ್ಳಿ ಎಂದು ರಾಹುಲ್ ಗಾಂಧಿ ಸಲಹೆ ನೀಡಿದ್ದರಂತೆ.
ಈ ಸಲಹೆ ಬೆನ್ನಲ್ಲೇ ಕ್ಷೇತ್ರದ ಆಯ್ಕೆ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು ಎಂಬ ಹೇಳಿಕೆಯನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ