‘ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ರಾಜ್ಯದ ಮುಂದಿನ ಮುಖ್ಯಮಂತ್ರಿ’ - ಕೋಲಾರ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಕೆ. ಚಂದ್ರಾರೆಡ್ಡಿ

ಡಿ.ಕೆ ಶಿವಕುಮಾರ್​ ಹೆಸರಿನಲ್ಲಿ ಕೋಲಾರಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಕೆ. ಚಂದ್ರಾರೆಡ್ಡಿ ಮಾತಾಡಿದರು. ಇದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗಲಿದ್ಧಾರೆ ಎಂದು ಭವಿಷ್ಯ ನುಡಿದು ಕಾರ್ಯಕರ್ತರನ್ನು ಹುರಿದುಂಬಿಸಿದರು.

news18-kannada
Updated:September 5, 2020, 3:56 PM IST
‘ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ರಾಜ್ಯದ ಮುಂದಿನ ಮುಖ್ಯಮಂತ್ರಿ’ - ಕೋಲಾರ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಕೆ. ಚಂದ್ರಾರೆಡ್ಡಿ
ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಕೆ. ಚಂದ್ರಾರೆಡ್ಡಿ
  • Share this:
ಕೋಲಾರ(ಸೆ.05): ಮಾರಕ ಕೊರೋನಾ ವೈರಸ್​ನಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​​ ಗುಣಮುಖರಾದ ಕಾರಣ ಕೋಲಾರದ ಅಧಿದೇವತೆ ಕೋಲಾರಮ್ಮ ದೇಗುಲದಲ್ಲಿ ಕಾಂಗ್ರೆಸ್ಸಿಗರು ವಿಶೇಷ ಪೂಜೆ ಮಾಡಿಸಿದರು. ಕೋಲಾರ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಕೆ. ಚಂದ್ರಾರೆಡ್ಡಿ ನೇತೃತ್ವದಲ್ಲಿ ಸಲ್ಲಿಸಿದ ಈ ವಿಶೇಷ ಪೂಜೆಯಲ್ಲಿ ಡಿ.ಕೆ ಶಿವಕುಮಾರ್​​ ಅಭಿಮಾನಿಗಳು ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು. ಇದೇ ವೇಳೆ ಕೋಲಾರಮ್ಮ ದೇವಸ್ಥಾನದ ಎದುರು ಸುಮಾರು 501 ತೆಂಗಿನಕಾಯಿ ಹೊಡೆದು ಡಿ.ಕೆ ಶಿವಕುಮಾರ್​​ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗಲಿ ಎಂದು ಪ್ರಾರ್ಥಿಸಿದರು. ಹಾಗೆಯೇ ಡಿ.ಕೆ ಶಿವಕುಮಾರ್​​ಗೆ ಜಯವಾಗಲಿ ಎಂಬ ಘೋಷಣೆಗಳು ಕೂಡ ಅಭಿಮಾನಿಗಳಿಂದ ಮೊಳಗಿದವು.

ಡಿ.ಕೆ ಶಿವಕುಮಾರ್​ ಹೆಸರಿನಲ್ಲಿ ಕೋಲಾರಮ್ಮನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಕೆ. ಚಂದ್ರಾರೆಡ್ಡಿ ಮಾತಾಡಿದರು. ಇದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗಲಿದ್ಧಾರೆ ಎಂದು ಭವಿಷ್ಯ ನುಡಿದು ಕಾರ್ಯಕರ್ತರನ್ನು ಹುರಿದುಂಬಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರವು ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಕೊರೋನಾ ವೈರಸ್​​​​ ತಡೆಗಟ್ಟಲು ಸರ್ಕಾರ ತೆಗೆದುಕೊಂಡ ಕ್ರಮಗಳು ಯಾವು ಫಲಿಸದ ಕಾರಣ ಇಂದು ಜನ ಆರ್ಥಿಕವಾಗಿ ಹಿಂದುಳಿಯಬೇಕಾಗಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಆಡಳಿತದ ವೈಫಲ್ಯ ಎಂದು ಚಂದ್ರಾರೆಡ್ಡಿ ಗಂಭೀರ ಆರೋಪ ಎಸಗಿದರು.

ಇದನ್ನೂ ಓದಿ: ಬೆಂಗಳೂರು ಡ್ರಗ್ಸ್ ದಂಧೆ; ರಾಗಿಣಿ ಸೇರಿ 12 ಮಂದಿ ಮೇಲೆ ದಾಖಲಾದ ಎಫ್ಐಆರ್​ನಲ್ಲಿ ಇಲ್ಲ ರವಿಶಂಕರ್ ಹೆಸರು

ಇನ್ನು, ಕಾಂಗ್ರೆಸ್​ ಪಕ್ಷವು ಮುಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಡಿ.ಕೆ ಶಿವಕುಮಾರ್​​​ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಲಿದ್ಧಾರೆ ಎಂದರು ಚಂದ್ರಾರೆಡ್ಡಿ. ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಮತ್ತೊಮ್ಮೆ ಮುಖ್ಯಮಂತ್ರಿ ಆಗುವುದಾಗಿ ಇಂಗಿತ ವ್ಯಕ್ತಪಡಿಸಿದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಚಂದ್ರಾರೆಡ್ಡಿ, ಇಬ್ಬರು ಕಾಂಗ್ರೆಸ್​ನ ಹಿರಿಯ ನಾಯಕರು. ಇಬ್ಬರು ಮುಖ್ಯಮಂತ್ರಿಯಾಗಲಿದ್ಧಾರೆ ಎಂದು ಹೇಳುವ ಮೂಲಕ ಜಾರಿಕೊಂಡರು.
Published by: Ganesh Nachikethu
First published: September 5, 2020, 3:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading