ಕೋಲಾರ: ನಮ್ಮ ದೇಶದಲ್ಲಿ (Country), ನನ್ನ ಜಾತಿಯಿಂದ (Caste) ನಾನೇ ಮೊದಲ ಶಾಸಕ (MLA). ನಾನು ಸಚಿವ ಸ್ಥಾನದ ಆಕಾಂಕ್ಷಿ, ಸಚಿವ ಸ್ಥಾನಕ್ಕೆ ಮನವಿ ಮಾಡಿದ್ದೇನೆ. ಬೈರಾಗಿ ಸಮಾಜದಿಂದ (Bairagi Community) ಇದುವರೆಗೂ ಯಾರೂ ಶಾಸಕರಾಗಿ ಚುನಾವಣೆಯಲ್ಲಿ (Elections) ಸ್ಪರ್ಧೆ ಮಾಡಿ ಗೆದ್ದಿಲ್ಲ. ಇವತ್ತಿಗೂ ನನ್ನ ಸಮಾಜದ ಜನ ಗುಡಿಸಲಲ್ಲಿ ಹಾಗೂ ಮರಗಳ ಕೆಳಗೆ ಜೀವನ ನಡೆಸುತ್ತಿದ್ದಾರೆ ಎಂದು ನ್ಯೂಸ್ 18 ಕನ್ನಡಕ್ಕೆ ಕೋಲಾರ (Kolar) ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ (Kothur Manjunath) ಹೇಳಿದ್ದಾರೆ.
ಕೋಲಾರದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಹಿನ್ನಲೆಯಲ್ಲಿ ಸಂತಸ ವ್ಯಕ್ತಪಡಿಸಿ ಮಾತನಾಡಿದ ಕೊತ್ತೂರು ಮಂಜುನಾಥ್, ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ಗೆ ಮನವಿ ಮಾಡಿದ್ದೇನೆ, ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ.
ಸಂವಿಧಾನದಲ್ಲಿ ಹೇಳಿರುವಂತೆ ಸಮಾನತೆ ಜಾರಿಗೆ ತರುವುದೆ ನನ್ನ ಗುರಿ, ಕೋಲಾರದಲ್ಲಿ ನಾನು 40 ಸಾವಿರ ಲೀಡ್ ನಲ್ಲಿ ಗೆಲ್ಲುವ ನಿರೀಕ್ಷೆ ಇತ್ತು, 33 ಸಾವಿರ ಲೀಡ್ ಸಿಕ್ಕಿದೆ. ನಾನು ಹೇಳಿರುವಂತೆ ಕೋಲಾರ ತಾಲೂಕು ಅಭಿವೃದ್ಧಿಗೆ ಶ್ರಮಿಸುವೆ. ನಮ್ಮದೆ ಸರ್ಕಾರ ಬಂದಿದೆ, ನಾವು ಕೆಲಸ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದ್ದಾರೆ.
ಇನ್ನು, ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಸ್ಥಾನಕ್ಕೆ ಫೈಟ್ ಮುಂದುವರೆದಿದೆ. ಭರ್ಜರಿ ಬಹುಮತದೊಂದಿಗೆ ಅಧಿಕಾರ ಹಿಡಿದಿರುವ ಕಾಂಗ್ರೆಸ್ನಲ್ಲಿ ಸಿಎಂ ಆಯ್ಕೆ ಜಗಳ ನಡೆಯುತ್ತಿದೆ. ಆ ಕಡೆ ಸಿದ್ದರಾಮಯ್ಯ, ಈ ಕಡೆ ಡಿ.ಕೆ ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದರೆ ಇಬ್ಬರ ಜಗಳ ಮೂರನೇಯವರಿಗೆ ಲಾಭ ತಂದು ಕೊಡುತ್ತಾ ಎಂಬ ಚರ್ಚೆ ಶುರುವಾಗಿದೆ. ಸಮುದಾಯಕ್ಕೊಬ್ಬ ನಾಯಕ ನಾನೂ ಸಿಎಂ ಆಗಬೇಕು ಅಂತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ