• Home
  • »
  • News
  • »
  • state
  • »
  • Kolar: ಕಗ್ಗಂಟಾದ ಕೋಲಾರ ಕೈ ಅಭ್ಯರ್ಥಿ ಆಯ್ಕೆ: ಜಿಲ್ಲಾ ಕಾಂಗ್ರೆಸ್ ಭಿನ್ನಮತ, ಕೈ ಕೈ ಮಿಲಾಯಿಸಲು ಮುಂದಾದ ಬಣಗಳು!

Kolar: ಕಗ್ಗಂಟಾದ ಕೋಲಾರ ಕೈ ಅಭ್ಯರ್ಥಿ ಆಯ್ಕೆ: ಜಿಲ್ಲಾ ಕಾಂಗ್ರೆಸ್ ಭಿನ್ನಮತ, ಕೈ ಕೈ ಮಿಲಾಯಿಸಲು ಮುಂದಾದ ಬಣಗಳು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ   ಹಿರಿಯ ಮುಖಂಡ ವೀರಪ್ಪ ಮೊಯ್ಲಿ, ಕೆ. ಹೆಚ್​​ ಮುನಿಯಪ್ಪ, ರಾಮಲಿಂಗಾರೆಡ್ಡಿ  ನೇತೃತ್ವದಲ್ಲಿ ಅಭಿಪ್ರಾಯ ಸಂಗ್ರಹ ನಡೆಯಿತು, ಈ ವೇಳೆ ಕಮಿಟಿಯ ಸದಸ್ಯರ ಎದುರಲ್ಲು ಕಾಂಗ್ರೆಸ್​ನಲ್ಲಿನ ಗುಂಪುಗಾರಿಕೆ ಹೊರಗೆ ಬಂದಿದೆ.

  • Share this:

    ಕೋಲಾರ(ಡಿ.31): ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳಷ್ಟೆ ಬಾಕಿಯಿದೆ, ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ತಮ್ಮದೇ ಆದ ತಯಾರಿಯಲ್ಲಿ ತೊಡಗಿದ್ದು, ಕಾಂಗ್ರೆಸ್ ಟಿಕೆಟ್ ಗಾಗಿ  ಆಕಾಂಕ್ಷಿಗಳು  ಅರ್ಜಿ ಸಲ್ಲಿಸಿದ್ದು, ಅಭಿಪ್ರಾಯ ಸಂಗ್ರಹಿಸಲು  ಕಾಂಗ್ರೆಸ್ ಸ್ಕ್ರೀನಿಂಗ್​ ಕಮಿಟಿ ಎದುರು ಅಭ್ಯರ್ಥಿಗಳು ಹಾಜರಾಗಿದ್ದರು. ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ   ಹಿರಿಯ ಮುಖಂಡ ವೀರಪ್ಪ ಮೊಯ್ಲಿ, ಕೆ. ಹೆಚ್​​ ಮುನಿಯಪ್ಪ, ರಾಮಲಿಂಗಾರೆಡ್ಡಿ  ನೇತೃತ್ವದಲ್ಲಿ ಅಭಿಪ್ರಾಯ ಸಂಗ್ರಹ ನಡೆಯಿತು, ಈ ವೇಳೆ ಕಮಿಟಿಯ ಸದಸ್ಯರ ಎದುರಲ್ಲು ಕಾಂಗ್ರೆಸ್​ನಲ್ಲಿನ ಗುಂಪುಗಾರಿಕೆ ಹೊರಗೆ ಬಂದಿದೆ.


    ವಿಶೇಷವಾಗಿ ಕೋಲಾರ ವಿಧಾನಸಭಾ ಕ್ಷೇತ್ರವಾಗಿ ಸಿದ್ದರಾಮಯ್ಯ ಪರವಾದ ಹಾಗೂ ವಿರುದ್ದವಾದ ಘೋಷಣೆಗಳನ್ನು ಕೂಗಲಾಯಿತು, ಒಂದು ಗುಂಪು ಸಿದ್ದರಾಮಯ್ಯಗೆ ಟಿಕೆಟ್  ಕೊಡಿ ಎಂದರೆ, ಇನ್ನೊಂದು ಗುಂಪು ಸ್ಥಳೀಯರನ್ನು ಅಭ್ಯರ್ಥಿಯನ್ನಾಗಿ ಮಾಡಿ ಎಂಬ ಘೋಷಣೆ ಕೂಗಿದರು. ಇನ್ನು ಈ ವೇಳೆ ಎರಡೂ ಗುಂಪುಗಳ ಹಾಗೂ ಎಲ್ಲಾ ಅಭ್ಯರ್ಥಿಗಳ ಅಭಿಪ್ರಾಯ ಸಂಗ್ರಹ ಮಾಡಿ, ನಮ್ಮ ಹೈಕಮಾಂಡ್​ಗೆ ನೀಡೋದು ನಮ್ಮ ಕೆಲಸ ಎಂದು ಸ್ಕ್ರೀನಿಂಗ್​ ಕಮಿಟಿ ಮುಖ್ಯಸ್ಥ ವೀರಪ್ಪ ಮೊಯ್ಲಿ ಹೇಳಿದರು. ಇದಕ್ಕೂ ಮೊದಲು ಸಭೆಗೆ ಮಾಜಿ ಸಂಸದ ಕೆ. ಎಚ್. ಮುನಿಯಪ್ಪ ಆಗಮಿಸಿದ ವೇಳೆಯೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೆಂಬಲಿಗರು, ಸಿದ್ದರಾಮಯ್ಯ ಪರವಾಗಿ ಘೋಷಣೆ ಹಾಕಿದರು. ಕೆ. ಎಚ್. ಮುನಿಯಪ್ಪ ಬೆಂಬಲಿಗರು, ಮುನಿಯಪ್ಪ ಪರವಾಗಿ ಘೋಷಣೆಗಳನ್ನು ಹಾಕಿದರು.


    ಸಭೆಯಲ್ಲಿ ಪ್ರಮುಖವಾಗಿ ಕೋಲಾರ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಶ್ರೀನಿವಾಸಪುರ, ಮಾಲೂರು, ಬಂಗಾರಪೇಟೆ, ಕೆಜಿಎಫ್​, ಕ್ಷೇತ್ರಗಳಲ್ಲಿ ಹಾಲಿ ಕಾಂಗ್ರೆಸ್ ಶಾಸಕರಿದ್ದು,  ಮುಳಬಾಗಿಲು ಹಾಗೂ ಕೋಲಾರ ಕ್ಷೇತ್ರಗಳಿಗೆ ಆಕಾಂಕ್ಷಿಗಳ ಪಟ್ಟಿ ಜೋರಾಗಿದೆ. ಈ ನಿಟ್ಟಿನಲ್ಲಿ ಮುಳಬಾಗಿಲು ಕ್ಷೇತ್ರದಲ್ಲಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್​ ಪ್ರಬಲ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದು, ಕಮಿಟಿ ಎದುರು ಬಂದು ತಮ್ಮ ಅಭಿಪ್ರಾಯ ಸಲ್ಲಿಸಿದರು.  ಉಳಿದಂತೆ ಸುಮಾರು 10 ಕ್ಕೂ ಹೆಚ್ಚು ಜನ ಆಕಾಂಕ್ಷಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು, ಇನ್ನು ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡ್ತಾರೆ ಅನ್ನೋ ವಿಚಾರ ಇನ್ನೂ ನಿಗೂಢವಾಗಿದೆ.


    ಈ ನಡುವೆಯೂ ಸಿ. ಆರ್​. ಮನೋಹರ್​, ಬ್ಯಾಲಹಳ್ಳಿ ಗೋವಿಂದಗೌಡ, ಚಿಕ್ಕರಾಯಪ್ಪ, ಎಲ್​.ಎ.ಮಂಜುನಾಥ್​, ಸೇರಿದಂತೆ ಎಂಟು ಜನರು ಅರ್ಜಿ ಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ಒಂದು ಗುಂಪು ಸ್ತಳೀಯರಿಗೆ ಆದ್ಯತೆ ನೀಡಬೇಕು ಎಂಬ ಕೂಗು ಕೇಳಿ ಬಂದಿತ್ತು.  ಇದೇ ವಿಚಾರವಾಗಿ ಸ್ಕ್ರೀನಿಂಗ್ ಕಮಿಟಿ ಸದಸ್ಯರು ಹೊರಡುವಾಗಲು ರಮೇಶ್ ಕುಮಾರ್ ಹಾಗು ಕೆಎಚ್ ಮುನಿಯಪ್ಪ ಬಣದ ಕಾರ್ಯಕರ್ತರು ಪರಸ್ಪರ ಘೋಷಣೆ, ಜೈಕಾರ ಹಾಕಿದ್ದು ಇದರಿಂದ ಗೊಂದಲದಿಂದ ಜೋರಾಗಿ ಗದ್ದಲ ಉಂಟಾಗಿ ಪರಸ್ಪರ ಕೈ ಕೈ ಮಿಲಾಯಿಸುವ ಪ್ರಸಂಗವೂ ನಡೆಯಿತು.


    ಒಟ್ಟಾರೆ ಕೋಲಾರ ಜಿಲ್ಲೆಅ ಕಾಂಗ್ರೆಸ್​ ನಲ್ಲಿ ಸದ್ಯ ಎಲ್ಲವೂ ಸರಿಯಿಲ್ಲ, ಮಾಜಿ ಸಿಎಂ  ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಾರೆ ಅನ್ನುವ ವಿಚಾರಕ್ಕೆ, ಈಗಾಗಲೇ ಕೋಲಾರ ವಿಧಾನಸಭಾ ಕ್ಷೇತ್ರ ರಾಜ್ಯ ರಾಜಕೀಯದ ಕೇಂದ್ರ ಬಿಂದುವಾಗಿದೆ. ಇನ್ನು ಸಿದ್ದರಾಮಯ್ಯ ಅವರ ನಿರ್ಧಾರ ನಿಗೂಢವಾಗಿದೆ.  ಆದರೆ  ಕೆಲವು ಆಕಾಂಕ್ಷಿಗಳಿಗೆ ತಾವು ಇಷ್ಟು ವರ್ಷ ಸೇವೆ ಮಾಡಿ ಈಗ ಮೂಲೆ ಗುಂಪಾಗುತ್ತೇವೆ ಅನ್ನೋ ಆತಂಕವೂ ಕಾಡುತ್ತಿದೆ.


    ಕೋಲಾರ ಚಿಕ್ಕಬಳ್ಳಾಪುರದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ, ಕೋಲಾರ ಟಿಕೆಟ್ ಆಕಾಂಕ್ಷಿಗಳಲ್ಲಿ ಪ್ರಬಲ ಪೈಪೋಟಿ ನೀಡುತ್ತಿದ್ದು, ಇತರೆ ಕೈ ಶಾಸಕರು ಸಿದ್ದರಾಮಯ್ಯ ಪರವಾಗಿ ಬ್ಯಾಟ್ ಮಾಡುತ್ತಿದ್ದು, ಗೋವಿಂದ ಗೌಡರ ಅಸಮಾಧಾನಕ್ಕು ಕಾರಣವಾಗಿದೆ. ಆದರೆ ರಮೇಶ್ ಕುಮರ್ ಹಾಗೂ ಕೆ. ಎಚ್. ಮುನಿಯಪ್ಪ ಬಣಗಳ ನಡುವೆ ವೈಮನಸ್ಸು ಹೆಚ್ಚಾಗಿದ್ದು,  ಎದುರಾಳಿಗಳನ್ನು ಬಗ್ಗು ಬಡಿಯಲು ಸಿದ್ದರಾಮಯ್ಯ ಬ್ರಹ್ಮಾಸ್ತ್ರ ಎನ್ನುವ ಲೆಕ್ಕಾಚಾರ ರಮೇಶ್ ಕುಮಾರ್ ಅಂಡ್ ಟೀಂನದ್ದು  ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

    Published by:Precilla Olivia Dias
    First published: