ಕೋಲಾರ: ನಮ್ಮ ಮಗಳು ಕಾಣೆಯಾಗಿ 15 ದಿನ ಆಯ್ತು. ದಯವಿಟ್ಟು ಹುಡುಕಿ ಕೊಡಿ ಎಂದು ಪೋಷಕರು ಕಣ್ಣೀರು ಹಾಕುತ್ತಿರುವ ಘಟನೆ ಕೋಲಾರ ತಾಲೂಕಿನ ನರಸಾಪುರ (Narasapur, Kolar) ಗ್ರಾಮದಲ್ಲಿ ನಡೆದಿದೆ. 17 ವರ್ಷದ ಅಪ್ರಾಪ್ತೆಯನ್ನುಮೂರು ಮದುವೆಯಾಗಿರುವ ಆಟೋ ಚಾಲಕ ಪುಸಲಾಯಿಸಿ ಕರೆದುಕೊಂಡು ಹೋಗಿ 15 ದಿನಗಳು ಕಳೆದಿವೆ. ಪೋಷಕರು ದೂರು ಸಲ್ಲಿಸಿದ್ರೂ ಇಬ್ಬರು ಇನ್ನು ಪತ್ತೆಯಾಗಿಲ್ಲ. ನರಸಾಪುರ ಗ್ರಾಮದ ಚಪಲಚೆನ್ನಿಗರಾಯ ಆಲಿಯಾಸ್ ಸಂತೋಷ್ ಎನ್ನುವ ಆಟೋ ಡ್ರೈವರ್ (Auto Driver), ನಿತ್ಯ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಆಕೆಯನ್ನು ಕೆರೆದುಕೊಂಡು ಪರಾರಿಯಾಗಿದ್ದಾನೆ.
ಇದೇ ಡಿಸೆಂಬರ್ 5ರಂದು ಕೆಲಸಕ್ಕೆಂದು ಹೋದ 17 ವರ್ಷದ ಬಾಲಕಿ ಮತ್ತೆ ವಾಪಸ್ ಬಂದಿಲ್ಲ. ಎಲ್ಲಿ ಹೋಗಿದ್ದಾಳೆ ಎಂದು ಪರಿಶೀಲನೆ ನಡೆಸಿದಾಗ ಬಾಲಕಿಯನ್ನು ಆಟೋ ಡ್ರೈವರ್ ಆದ ಸಂತೋಷ್ ಆಕೆಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ ಅನ್ನೋದು ತಿಳಿದು ಬಂದಿದೆ.
ವಿಷಯ ತಿಳಿದ ಕೂಡಲೇ ಅಪ್ರಾಪ್ತ ಬಾಲಕಿಯ ಪೋಷಕರು ವೇಮಗಲ್ ಪೊಲೀಸ್ ಠಾಣೆಗೆ (Vemagal Police Station) ದೂರು ನೀಡಿದ್ದು ಮಗಳನ್ನು (Daughter) ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ. ಆದರೆ ಅಪ್ರಾಪ್ತೆ ನಾಪತ್ತೆಯಾಗಿ 15 ದಿನ ಕಳೆದರೂ ಮೊಮ್ಮಗಳ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ ಎಂದು ಅಜ್ಜಿ ಫಾತಿಮಾ ಹಾಗೂ ಪೋಷಕರು ನಿತ್ಯ ಕಣ್ಣೀರಲ್ಲೇ ದಿನ ಕಳೆಯುತ್ತಿದ್ದಾರೆ.
ಮೂವರು ಹೆಂಡತಿಯರ ಮುದ್ದಿನ ಗಂಡ ಈ ಆಟೋ ಡ್ರೈವರ್
ಈ ಆಟೋರಾಜ ಯಾರು ಎಂಬುದನ್ನ ನೋಡುವುದಾದರೆ, ನರಸಾಪುರ ಗ್ರಾಮದಲ್ಲೆ ಆಟೋ ಓಡಿಸಿಕೊಂಡಿದ್ದ ಸಂತೋಷ್, ನಿತ್ಯ ಕೂಲಿ ಕೆಲಸದವರನ್ನು ಕೆರೆದುಕೊಂಡು ಹೋಗುತ್ತಿದ್ದನು. ಅದರಲ್ಲಿ ಈ ಬಾಲಕಿ ಹಾಗೂ ಆಕೆಯ ಅಜ್ಜಿ ಫಾತಿಮಾ ಕೂಡಾ ನಿತ್ಯ ಕೂಲಿ ಕೆಲಸಕ್ಕೆ ಹೋಗಿ ಬರುತ್ತಿದ್ದರು.
ಈ ವೇಳೆ ಆಕೆಯನ್ನು ಪುಸಲಾಯಿಸಿರುವ ಸಂತೋಷ್ ಡಿಸೆಂಬರ್ 5 ರಂದು, ಅಪ್ರಾಪ್ತ ಬಾಲಕಿಯ ಅಜ್ಜಿ ಆನಾರೋಗ್ಯದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗಿರಲಿಲ್ಲ. ಈ ವೇಳೆ ಆಕೆಯನ್ನು ಕೆರೆದುಕೊಂಡು ನಾಪತ್ತೆಯಾಗಿದ್ದಾನೆ.
ಮೂವರು ಪತ್ನಿಯರಲ್ಲಿ ಒಬ್ಬಾಕೆ ಸಾವು
ಇನ್ನೂ ಸಂತೋಷ್ ಹೀಗೆ ಮಾಡಿರುವುದು ಇದೇ ಮೊದಲೇನಲ್ಲ. ಈ ಮೊದಲು ಇದೇ ರೀತಿ ಹುಡುಗಿರಯನ್ನ ಪುಸಲಾಯಿಸಿ ಈಗಾಗಲೇ ಮೂರು ಜನರನ್ನು ಮದುವೆಯಾಗಿದ್ದಾನಂತೆ. ಅದರಲ್ಲಿ ಒಬ್ಬ ಹೆಂಡತಿ ಮೃತಪಟ್ಟಿದ್ದು, ಉಳಿದ ಇಬ್ಬರು ಇವನೊಂದಿಗೆ ಸಂಸಾರ ಮಾಡಲಾರದೇ ಬಿಟ್ಟು ಹೋಗಿದ್ದಾರೆ.
ಪತಿ ವಿರುದ್ಧ ದೂರು ದಾಖಲಿಸಿದ 3ನೇ ಪತ್ನಿ
ಇನ್ನು ಸೀಮಾ ಎಂಬವರು ಸಂತೋಷ್ನ ಮೂರನೇ ಪತ್ನಿ. ಸೀಮಾ ವೇಮಗಲ್ ಪೊಲೀಸ್ ಠಾಣೆಯಲ್ಲಿ ಪತಿ ಸಂತೋಷ್ ಅಪ್ರಾಪ್ತೆ ಬಾಲಕಿ ಜೊತೆ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.
ಆಟೋ ಚಾಲಕನ ಬಂಧನಕ್ಕೆ ಆಗ್ರಹ
ಸದ್ಯ ಅಪ್ರಾಪ್ತ ಬಾಲಕಿಯೊಂದಿಗೆ ನಾಪತ್ತೆಯಾಗಿರುವ ಸಂತೋಷ್, ಆಕೆಯೊಂದಿಗೆ ಇರುವ ಕೆಲವು ಪೋಟೋಗಳನ್ನು ನರಸಾಪುರ ಗ್ರಾಮದ ಸ್ನೇಹಿತರಿಗೆ ಕಳಿಸಿದ್ದಾನೆ. ಹಾಗಾಗಿ ನಮ್ಮ ಹುಡುಗಿಯನ್ನು ಕಿಡ್ನಾಪ್ ಮಾಡಿರುವ ಸಂತೋಷನನ್ನು ಬಂಧಿಸಬೇಕು. ನಮ್ಮ ಹುಡುಗಿಯನ್ನು ಹುಡುಕಿಕೊಡಿ ಎನ್ನುವುದು ತಂದೆ ನಯಾಜ್ ಹಾಗೂ ತಾಯಿ ಜಬೀನಾ ಆಗ್ರಹವಾಗಿದೆ.
ಒಟ್ಟಿನಲ್ಲಿ ಈ ಚಪಲ ಚೆನ್ನಿಗರಾಯ ಓಡಿಸೋದು ಆಟೋ ಆದರೂ ಶೋಕಿಗೇನು ಕಮ್ಮಿಯಿಲ್ಲ. ಬಡ ಕುಟುಂಬದ ಹುಡುಗಿಯರ ಜೀವನದ ಜೊತೆ ಚೆಲ್ಲಾಟ ಆಡುವ ಕೆಲಸ ಮುಂದುವರಿಸಿದ್ದಾನೆ.
ಇದನ್ನೂ ಓದಿ: Crime News: 4ನೇ ತರಗತಿ ವಿದ್ಯಾರ್ಥಿಯನ್ನ ಮೊದಲ ಮಹಡಿಯಿಂದ ಎಸೆದು ಕೊಲೆಗೈದ ಶಿಕ್ಷಕ, ಶಿಕ್ಷಕಿ ಸ್ಥಿತಿ ಗಂಭೀರ
ಇದೀಗ ಅಪ್ರಾಪ್ತ ಬಾಲಕಿಯನ್ನು ಮೋಡಿ ಮಾಡಿ, ಅವರ ಜೀವನದ ಜೊತೆಗೆ ಚೆಲ್ಲಾಟವಾಡುವ ಇಂಥಹ ಶೋಕಿಲಾಲರಿಗೆ ಪೊಲೀಸರು ಸರಿಯಾದ ಪಾಠ ಕಲಿಸಬೇಕು. ಇಲ್ಲವಾದಲ್ಲಿ ಇನ್ನಷ್ಟು ಅಮಾಯಕರ ಜೀವನದ ಚೆಲ್ಲಾಟ ಆಡುವುದರಲ್ಲಿ ಅನುಮಾನವಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ