ಪಾಕಿಸ್ತಾನಕ್ಕೆ ಟೊಮೆಟೊ ರಫ್ತು ಬಂದ್​; ಕೋಲಾರ ಎಪಿಎಂಸಿ ಮಾರುಕಟ್ಟೆಯ ದಿಟ್ಟ ನಿರ್ಧಾರ

ಮುಂಬರುವ ಜೂನ್ ತಿಂಗಳಿಂದ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಸಂಪ್ರದಾಯದಂತೆ ಸಾವಿರಾರು ಟನ್ ಟೊಮೆಟೊ ಆವಕವಾಗಲಿದ್ದು, ಈ ವೇಳೆಯಲ್ಲಿ ವಿದೇಶಗಳಿಗೆ ಟೊಮೆಟೊ ರಫ್ತಾಗುತ್ತದೆ. ಆ ವೇಳೆ ಪಾಕಿಸ್ತಾನದಲ್ಲಿ ಹವಾಮಾನ ವೈಪರೀತ್ಯದಿಂದ ಟೊಮೆಟೊ ಲಭ್ಯತೆ ಇರುವುದಿಲ್ಲ.

Latha CG | news18
Updated:February 23, 2019, 4:12 PM IST
ಪಾಕಿಸ್ತಾನಕ್ಕೆ ಟೊಮೆಟೊ ರಫ್ತು ಬಂದ್​; ಕೋಲಾರ ಎಪಿಎಂಸಿ ಮಾರುಕಟ್ಟೆಯ ದಿಟ್ಟ ನಿರ್ಧಾರ
ಸಾಂದರ್ಭಿಕ ಚಿತ್ರ
Latha CG | news18
Updated: February 23, 2019, 4:12 PM IST
 ರಘುರಾಜ್

ಕೋಲಾರ,(ಫೆ.23): ಪುಲ್ವಾಮಾ ದಾಳಿಯಲ್ಲಿ 40 ಕ್ಕೂ ಹೆಚ್ಚು ಸೈನಿಕರನ್ನು ಬಲಿತೆಗದುಕೊಂಡ ಪಾಕಿಸ್ತಾನಕ್ಕೆ ಬುದ್ಧಿಕಲಿಸಲು ಕೋಲಾರ ಎಪಿಎಂಸಿ ಮಾರುಕಟ್ಟೆ ನಿರ್ಧರಿಸಿದೆ. ಕೋಲಾರದಿಂದ ಪಾಕಿಸ್ತಾನಕ್ಕೆ ಟೊಮೆಟೊ ರಫ್ತು ಬಂದ್​ ಮಾಡಲು ಏಷ್ಯಾದ ಬೃಹತ್​ ಮಾರುಕಟ್ಟೆ ನಿರ್ಧಾರ ಮಾಡಿದೆ.

ಚಿನ್ನದ ನಾಡು ಕೋಲಾರದ ಎಪಿಎಂಸಿ ಮಾರುಕಟ್ಟೆ ಏಷ್ಯಾದಲ್ಲಿಯೇ 2 ನೇ ಅತಿದೊಡ್ಡ ಟೊಮೆಟೊ ವಹಿವಾಟು ನಡೆಯುವ ಕೇಂದ್ರ. ಜೊತೆಗೆ ಚಿನ್ನದ ನಾಡಿನ ರೈತರ ಬೆನ್ನೆಲುಬು ಸಹ ಹೌದು. ಇಲ್ಲಿಂದ ನಿತ್ಯ ಶ್ರೀಲಂಕಾಲ, ಮಲೇಶಿಯಾ, ಬಾಂಗ್ಲಾದೇಶ, ಪಾಕಿಸ್ತಾನಕ್ಕೆ ಟೊಮೆಟೊ ನೂರಾರು ಲೋಡ್‍ಗಟ್ಟಲೆ ರಫ್ತಾಗುತ್ತಿತ್ತು. ಆದರೆ ಇನ್ಮುಂದೆ ಪಾಕಿಸ್ತಾನಕ್ಕೆ ಮಾತ್ರ ಟೊಮೆಟೊ ರಫ್ತು ಮಾಡದಿರಲು ಎಪಿಎಂಸಿ ಮಾರುಕಟ್ಟೆ ಮಂಡಿ ಮಾಲೀಕರು ತೀರ್ಮಾನಿಸಿದ್ದಾರೆ. ಪುಲ್ವಾಮ ದಾಳಿಯಿಂದ ನಮ್ಮ ದೇಶದ 42 ಯೋಧರು ಹುತಾತ್ಮರಾಗಿದ್ದು ಪಾಕಿಸ್ತಾನದಲ್ಲಿ ಉಗ್ರವಾದದಿಂದ ಎಂದು ಎಪಿಎಂಸಿ ಮಂಡಿ ಮಾಲೀಕರು ಕಿಡಿಕಾರಿದ್ದಾರೆ.

ಮುಂದಿನ ಜೂನ್ ತಿಂಗಳಿಂದ ಪಾಕಿಸ್ತಾನ ದೇಶಕ್ಕೆ ಟೊಮೆಟೊ ರಪ್ತು ಮಾಡುವ ಮಂಡಿ ಮಾಲೀಕರು ಆಗಮಿಸಲಿದ್ದಾರೆ. ಇನ್ಮುಂದೆ ಗುಜರಾತ್, ಮುಂಬೈ ದಳ್ಳಾಳಿಗಳಿಗೆ ಟೊಮೆಟೊ ಮಾರಾಟ ಮಾಡದಿರಲು ಮಾರುಕಟ್ಟೆ ಮಾಲೀಕರು ಒಕ್ಕೊರಲು ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಮಂಡಿ ಮಾಲೀಕರು ಹಾಗೂ ವ್ಯಾಪಾರಸ್ಥರು, ಭಯೋತ್ಪಾದನೆ ನಿರ್ಮೂಲನೆವರೆಗೆ ಪಾಕಿಸ್ತಾನಕ್ಕೆ ಟೊಮೆಟೊ ರಫ್ತು ಮಾಡಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮುಂಬರುವ ಜೂನ್ ತಿಂಗಳಿಂದ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ಸಂಪ್ರದಾಯದಂತೆ ಸಾವಿರಾರು ಟನ್ ಟೊಮೆಟೊ ಆವಕವಾಗಲಿದ್ದು, ಈ ವೇಳೆಯಲ್ಲಿ ವಿದೇಶಗಳಿಗೆ ಟೊಮೆಟೊ ರಫ್ತಾಗುತ್ತದೆ. ಆ ವೇಳೆ ಪಾಕಿಸ್ತಾನದಲ್ಲಿ ಹವಾಮಾನ ವೈಪರೀತ್ಯದಿಂದ ಟೊಮೆಟೊ ಲಭ್ಯತೆ ಇರುವುದಿಲ್ಲ. ಇದರಿಂದ ಕೋಲಾರ ಮಾರುಕಟ್ಟೆಯಿಂದ ಹೆಚ್ಚಿಗೆ ಟೊಮೆಟೊ ಖರೀದಿ ಮಾಡಲು ದಳ್ಳಾಳಿಗಳು ಮುಂದು ಬರುತ್ತಾರೆ.  ಹೀಗಾಗಿ ಗುಜರಾತ್, ಮುಂಬೈ ಟೊಮೆಟೊ ದಳ್ಳಾಳಿಗಳಿಗೂ ಟೊಮೆಟೊ ಮಾರಾಟ ಮಾಡದಿರಲು ಎಪಿಎಂಸಿ ಮಾರುಕಟ್ಟೆ ವ್ಯಾಪಾರಸ್ಥರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಇನ್ನೂ ವ್ಯಾಪಾರಸ್ಥರ ಈ ನಿರ್ಧಾರಕ್ಕೆ ಬೆಂಬಲ ವ್ಯಕ್ತವಾಗಿದೆ. ಇನ್ಮುಂದೆ ಪಾಕಿಸ್ತಾನಕ್ಕೆ ಯಾವುದೇ ತರಕಾರಿಗಳನ್ನು ರಫ್ತು ಮಾಡದಂತೆ ಕೇಂದ್ರ ಸರ್ಕಾರಕ್ಕೆ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.

 ರಣಹೇಡಿಗಳಂತೆ ಉಗ್ರರನ್ನು ಮುಂದಿಟ್ಟು ಕಪಟ ನಾಟಕವಾಡುತ್ತಿರುವ ಪಾಕಿಸ್ತಾನದ ವಿರುದ್ದ ಈಗಾಗಲೇ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ. ಎರಡು ದೇಶಗಳ ಮಧ್ಯೆ ಉದ್ದದ ಕಾರ್ಮೋಡ ಆವರಿಸಿದೆ. ಈ ಮಧ್ಯೆ ಕೋಲಾರದಲ್ಲಿ ಟೊಮೆಟೊ ದರ ಕುಸಿತದ ಮಧ್ಯೆಯೂ ವ್ಯಾಪಾರದ ನಿರ್ಧಾರವನ್ನು ಬದಿಗಿಟ್ಟು, ದೇಶದ ಹಿತಕ್ಕಾಗಿ ಪಾಕಿಸ್ತಾನದೊಂದಿಗಿನ ಸಂಬಂಧ ಕಡಿದುಕೊಳ್ಳುವ ಎಪಿಎಂಸಿ ಮಂಡಿ ಮಾಲೀಕರ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
First published:February 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...