Election 2023: ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಾ ಸಿದ್ದರಾಮಯ್ಯ? ಏನಿದು ಬಿಸಿ ಬಿಸಿ ಚರ್ಚೆ

ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕ ಹಾಗೂ ಎರಡೂ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟಬಹುದು ಎಂಬುದು ನಾಯಕರ ಅಭಿಪ್ರಾಯವಾಗಿದೆ.

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಕೋಲಾರ ಕಾಂಗ್ರೆಸ್ ನಾಯಕರು

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಕೋಲಾರ ಕಾಂಗ್ರೆಸ್ ನಾಯಕರು

  • Share this:
ಕೋಲಾರ ವಿಧಾನಸಭಾ ಕ್ಷೇತ್ರದಿಂದ (Kolar Assembly Constituency) 2023ರ ಚುನಾವಣೆಗೆ ಸ್ಪರ್ಧಿಸುವಂತೆ ಮಾಜಿ ಸಿಎಂ ಸಿದ್ದರಾಮಯ್ಯರಿಗೆ (Former CM Siddaramaiah), ಈಗಾಗಲೇ ಕೋಲಾರ ಮತ್ತು ಚಿಕ್ಕಬಳ್ಳಾಪುರ (Kolar And Chikkaballapur) ಎರಡೂ ಜಿಲ್ಲೆಯ ಕೈ ಹಿರಿಯ ನಾಯಕರು, ಶಾಸಕರು, ಮಾಜಿ ಶಾಸಕರಿಂದ ಮನವಿ ಮಾಡಿದ್ದಾರೆ, ಮೊನ್ನೆ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಭೇಟಿಯಾಗಿ ಒಕ್ಕೂರಲ ಮನವಿ ಸಲ್ಲಿಸಿದ್ದಾರೆ. ನಿಯೋಗದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೃಷ್ಣಬೈರೇಗೌಡ, ಮಾಜಿ ಸಚಿವ ಶಿವಶಂಕರ ರೆಡ್ಡಿ ನೇತೃತ್ವದಲ್ಲಿ ಮುಖಂಡರು ತೆರಳಿದ್ದರು. ಈ ವೇಳೆ ಮಾಜಿ ಸಚಿವ ಎಚ್.ಸಿ ಮಹದೇವಪ್ಪ, ಶಾಸಕ ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಶ್ರೀನಿವಾಸಗೌಡ, ವಿ ಮುನಿಯಪ್ಪ, ಶರತ್ ಬಚ್ಚೇಗೌಡ, ಎಂಎಲ್ ಸಿ ಅನಿಲ್ ಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದ ಗೌಡ ಹಾಗೂ ದಲಿತ ಮುಖಂಡರು ಭಾಗವಹಿಸಿದ್ದರು.

ಕೋಲಾರದಲ್ಲಿ ಸ್ಪರ್ಧೆ ವಿಚಾರವಾಗಿ ನಾಯಕರ ಮನವಿಗೆ ಸಿದ್ದರಾಮಯ್ಯ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎನ್ನಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದ ಜನರು ತಮ್ಮನ್ನ ತಿರಸ್ಕರಿಸಿದ್ದರು. ಆದರೆ ಮತ್ತೊಮ್ಮೆ ರಾಜಕೀಯ ಜನ್ಮ ನೀಡಿದ್ದು ಬಾದಾಮಿ ಕ್ಷೇತ್ರದ ಮತದಾರರು. ಹಾಗಾಗಿ ನನ್ನ ಮುಂದಿನ ಚುನಾವಣೆ ನಡೆಯ ಬಗ್ಗೆ ಮತದಾರರು ಮುಖಂಡರ ಜೊತೆಗೆ ಚರ್ಚಿಸಿ ಕ್ಷೇತ್ರದ ಆಯ್ಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವೆ ಎಂದಿದ್ದಾರೆ.

ಇದನ್ನೂ ಓದಿ:  Belagavi: ಜಿಪಂ, ತಾಪಂ ಚುನಾವಣೆ ದಿನಾಂಕ, ಮೀಸಲಾತಿ ಘೋಷಣೆ ಮುನ್ನವೇ ಆಕಾಂಕ್ಷಿಗಳಿಂದ ಟಿಕೆಟ್ ಫೈಟ್ ಶುರು

ಸಿದ್ದರಾಮಯ್ಯ ಸ್ಪರ್ಧೆ ವಿಚಾರದಿಂದ ಬಿಜೆಪಿ ಪಾಳಯದಲ್ಲಿ ನಡುಕ
ಮಾಜಿ ಸಿದ್ದರಾಮಯ್ಯರನ್ನ ಕೋಲಾರಕ್ಕೆ ಕರೆತರುವ ಹರಸಾಹಕ್ಕೆ ಕೈ ಹಾಕಿದವರಲ್ಲಿ ರಮೇಶ್ ಕುಮಾರ್, ಶಿವಶಂಕರರೆಡ್ಡಿ, ಕೃಷ್ಣಬೈರೇಗೌಡ ಮಂಚೂಣಿಯಲ್ಲಿದ್ದಾರೆ.

ಕ್ಷೇತ್ರ ಬಿಟ್ಟುಕೊಡಲು ಇವರೆಲ್ಲ ಸಿದ್ಧ

ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧೆ ಮಾಡಿದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕ ಹಾಗೂ ಎರಡೂ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟಬಹುದು ಎಂಬುದು ನಾಯಕರ ಅಭಿಪ್ರಾಯವಾಗಿದೆ.

ಸಿದ್ದರಾಮಯ್ಯ ಅವರಿಗೊಸ್ಕರ ಟಿಕೆಟ್ ಆಕಾಂಕ್ಷಿಗಳು ಕ್ಷೇತ್ರ ಬಿಟ್ಟು ಕೊಡಲು ಸಿದ್ದರಾಗಿದ್ದಾರೆ, ಮಾಜಿ ಶಾಸಕರಾದ ಕೊತ್ತೂರು ಮಂಜುನಾಥ್, ಹಾಲಿ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ, ಮಂಜುನಾಥ್, ಗೋವಿಂದಗೌಡ ಸೇರಿದಂತೆ ಇನ್ನು ಹಲವರು ಕ್ಷೇತ್ರ ತ್ಯಾಗಕ್ಕೆ ಮುಂದಾಗಿದ್ದಾರೆ. ಆದರೆ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮೊದಲೇ ಬಿಜೆಪಿ ಪಾಳಯದಲ್ಲಿ ನಡುಕ ಎದುರಾದಂತಿದೆ.

ಪಕ್ಷ ಸಂಘಟನೆಯ ಪ್ಲಾನ್ ಮಾಡಿರುವ ಕಾಂಗ್ರೆಸ್

ಸಿದ್ದರಾಮಯ್ಯ ಅವರಂತಹ ಮಾಸ್ ಕಾಂಗ್ರೆಸ್ ಲೀಡರ್ ಕೋಲಾರಕ್ಕೆ ಆಗಮಿಸಿದರೆ, ಜಿಲ್ಲೆಯಲ್ಲಿ 4 ಇರುವ ಕೈ ಶಾಸಕರ ಸಂಖ್ಯೆಯನ್ನ 6ಕ್ಕೆ ಏರಿಸಲು ಹಾಗೂ ನಂತರ ಬರುವ ಲೋಕಸಭೆ ಚುನಾವಣೆಯಲ್ಲಿ ಕೈ ಅಭ್ಯರ್ಥಿಯನ್ನ ಗೆಲ್ಲಿಸುವ ಲೆಕ್ಕಾಚಾರವು ಕಾಂಗ್ರೆಸ್ ನಲ್ಲಿದೆ. ಇದೇ ವಿಚಾರವಾಗಿ ಬಿಜೆಪಿ ನಾಯಕರಿಗೆ ನಡುಕ ಉಂಟಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಹಿನ್ನೆಲೆ ಸಿದ್ದರಾಮಯ್ಯ ಅವರನ್ನ ಹರಕೆ ಕುರಿ ಮಾಡಲು ಕೋಲಾರಕ್ಕೆ ಕರೆತರುತ್ತಿರುವುದಾಗಿ ಜಿಲ್ಲಾ ಬಿಜೆಪಿ ಮಾದ್ಯಮ ಪ್ರಮುಖ, ಕೆಂಬೋಡಿ ನಾರಾಯಣಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ವೈರಲ್ ಮಾಡಿದ್ದಾರ. ಇದಕ್ಕೆ ಸಿದ್ದರಾಮಯ್ಯ ಬೆಂಬಲಿಗರು ಕಿಡಿಕಾರಿದ್ದು, ದೊಡ್ಡ ನಾಯಕನ ಆಗಮನದ ಭಯದಿಂದ ಬಿಜೆಪಿ ಹೀಗೆಲ್ಲ ಪ್ರಚಾರ ಮಾಡುತ್ತಿದೆ ಎಂದಿದ್ದಾರೆ.

ಇದನ್ನು ಓದಿ:  GST Rate Hike: ಊಟದ ತಟ್ಟೆಯಲ್ಲಿನ ಆಹಾರ ಕಿತ್ತುಕೊಳ್ತಿರೋದು ಬಡವರ ಹತ್ಯೆಗೆ ಸಮ: ಸಿದ್ದರಾಮಯ್ಯ ಆಕ್ರೋಶ

ವರ್ತೂರು ಪ್ರಕಾಶ್ ಆಡಿಯೋ ವೈರಲ್

ಕೋಲಾರಕ್ಕೆ ಸಿದ್ದರಾಮಯ್ಯ ಎಂಟ್ರಿ ಕೊಡುವ ಸಾಧ್ಯತೆ ಹಿನ್ನೆಲೆ ಮಾಜಿ ಸಚಿವ ವರ್ತೂರು ಪ್ರಕಾಶ್ ಆಡಿಯೋ ವೈರಲ್ ಆಗಿದೆ. ತಮ್ಮ ಮುಖಂಡರೊಂದಿಗೆ ಮಾತನಾಡಿರುವ ವರ್ತೂರು ಪ್ರಕಾಶ್, ಸಾಯಲಿ ಬದುಕಲಿ ಮುಸ್ಲಿಂ ಜನರೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಸಪೋರ್ಟ್ ಮಾಡೋದು.

ಹಾಗಂತ ಮುಸ್ಲಿಂ ಮತಗಳಿಂದ ಶಾಸಕರಾಗಕ್ಕೆ ಆಗುತ್ತಾ? ಮುಸ್ಲಿಂ ಅಭ್ಯರ್ಥಿಯಾದ್ರೆ 90 ರಷ್ಟು ವೋಟ್ ಬೀಳುತ್ತೆ, ಅದೆ ಹಿಂದೂ ಅಭ್ಯರ್ಥಿಯಾದರೆ 20 ಪರ್ಸೆಂಟ್ ಬರುತ್ತೆ. ಚುನಾವಣೆಯಲ್ಲಿ ಗೆಲ್ಲಬೇಕಾದರೆ ಪ್ರತಿ ಹಳ್ಳಿಯಲ್ಲೂ ಶೇಕಡಾ 50 ರಷ್ಟು ವೋಟ್ ಬರಬೇಕು.

ಕೋಲಾರದ ಯಾವುದೇ ಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷ ಇಲ್ಲ. ಇಲ್ಲಿರೋ ನಾಯಕರು ಯಾರಾದ್ರು 2 ಸಾವಿರ ಜನ ಸೇರಿಸಿ ಕಾರ್ಯಕ್ರಮ ಮಾಡಲಾಗಲ್ಲ. ಆದರೆ ಜನರನ್ನು ಸೇರಿಸಿ ತೋರಿಸಲಿ ಎಂದು ಸವಾಲ್ ವರ್ತೂರು ಪ್ರಕಾಶ್ ಸವಾಲು ಹಾಕಿದ್ದಾರೆ.
Published by:Mahmadrafik K
First published: