Kolar: ಆರು ವರ್ಷದ ಪ್ರೀತಿ, ಮದುವೆ ಮನೆಗೆ ಬರಬೇಕಿದ್ದ ವರ ನಾಪತ್ತೆ, ಕಾರಣವೇನು ಗೊತ್ತಾ?

ಪ್ರೀತಿಸಿದಾಕೆಯನ್ನು ಮದುವೆಯಾಗುವ ಅವಕಾಶವಿದ್ದರೂ ವರನೊಬ್ಬ ಆಕೆಯನ್ನು ಮದುವೆ ಮಂಟಪದಲ್ಲೇ ಬಿಟ್ಟು ಪರಾರಿಯಾದ ಘಟನೆ ಕೋಲಾರದಲ್ಲಿ ಬೆಳಕಿಗೆ ಬಂದಿದೆ. ಹೌದು ಆರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರೂ, ವರನೊಬ್ಬ ಯುವತಿಯನ್ನು ಮೋಸ ಮಾಡಿ ಪರಾರಿಯಾಗಿದ್ದಾನೆ.

ಆರು ವರ್ಷದ ಪ್ರೀತಿ, ಮದುವೆ ಮನೆಗೆ ಬರಬೇಕಿದ್ದ ವರ ನಾಪತ್ತೆ

ಆರು ವರ್ಷದ ಪ್ರೀತಿ, ಮದುವೆ ಮನೆಗೆ ಬರಬೇಕಿದ್ದ ವರ ನಾಪತ್ತೆ

  • Share this:
ಕೋಲಾರ(ಆ.19): ವರ್ಷಾನುಗಟ್ಟಲೇ ಪ್ರೀತಿಸಿ, ಮದುವೆಯಾಗಿ (Wedding) ನೆಮ್ಮದಿಯ ಬದುಕು ನಡೆಸುವವರು ಅನೇಕರಿದ್ದಾರೆ. ಮತ್ತೊಂದೆಡೆ ಪ್ರೀತಿಸಿದವರು ಸಿಗದಿದ್ದಾಗ ಎಲ್ಲಾ ಅಡೆ ತಡೆಗಳನ್ನು ಎದುರಿಸಿ ಬಯಸಿದವರನ್ನು ಮದುವೆಯಾದ ಉದಾಹರಣೆಗಳೂ ಹಲವಿದೆ. ಹೀಗಿರುವಾಗ ಪ್ರೀತಿಸಿದಾಕೆಯನ್ನು (Love) ಮದುವೆಯಾಗುವ ಅವಕಾಶವಿದ್ದರೂ ವರನೊಬ್ಬ ಆಕೆಯನ್ನು ಮದುವೆ ಮಂಟಪದಲ್ಲೇ ಬಿಟ್ಟು ಪರಾರಿಯಾದ ಘಟನೆ ಕೋಲಾರದಲ್ಲಿ (Kolar) ಬೆಳಕಿಗೆ ಬಂದಿದೆ. ಹೌದು ಆರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರೂ, ವರನೊಬ್ಬ ಯುವತಿಯನ್ನು ಮೋಸ ಮಾಡಿ ಪರಾರಿಯಾಗಿದ್ದಾನೆ. ಮೋಸಗೊಂಡ ವಧು ಸದ್ಯ ಲಗ್ನ ಪತ್ರಿಕೆ, ಹೊಸ ಸೀರೆಯೊಂದಿಗೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೊರೆ ಹೋಗಿದ್ದಾಳೆ.

ಹೌದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ಘಟನೆ ನಡೆದಿದೆ. ರಾಜಶೇಖರ್ ದಾಸ್ ಹಾಗು ದೀಪ ಎಂಬುವರ ಮದುವೆ ಆಗಸ್ಟ್ 18 ರಂದು ನಿಶ್ಚಯವಾಗಿತ್ತು. ಹೆಬ್ಬಣಿ ಗ್ರಾಮದ ಚನ್ನಕೇಶವ ದೇಗುಲದಲ್ಲಿ ಈ ಮದುವೆ ನಿಗದಿಯಾಗಿತ್ತು. ಆದರೆ ಆಗಸ್ಟ್ 17 ರಂದು ಆರತಕ್ಷತೆ ದಿನವೇ ಮದುಮಗ ಪರಾರಿಯಾಗಿದ್ದಾನೆ. ಇನ್ನು ಇಬ್ಬರೂ ಕಳೆದ 6 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂಬ ವಿಚಾರವೂ ಬಯಲಾಗಿದೆ. ಹೀಗಿದ್ದರೂ ವರ ಯಾಕೆ ತಾನು ಪ್ರೀತಿಸಿದ ಯುವತಿಗೆ ಮೋಸ ಮಾಡಿದ ಎಂಬುವುದೇ ಅನೇಕರನ್ನು ಕಾಡಿದ ಪ್ರಶ್ನೆ.

ಇದನ್ನೂ ಓದಿ: Love Zodiac: ಈ ರಾಶಿಯವ್ರು ಯಾವಾಗ್ಲೂ ಒಂದೇ ವ್ಯಕ್ತಿಯನ್ನು ಪ್ರೀತಿಸೋದಂತೆ ನೋಡಿ

ವರ ತಯುವತಿಯನ್ನು ನಂಬಿಸಿ ಮೋಸ ಮಾಡಿರುವ ಹಿಂದಿನ ಕಾರಣವೂ ಬಯಲಾಗಿದೆ. ವಧು ಹಾಗೂ ವರ ಇಬ್ಬರ ಜಾತಿ ಭಿನ್ನವಾಗಿದ್ದು, ಇದೇ ಕಾರಣದಿಂದ ವರ ಮೋಸ ಮಾಡಿ ಹೋಗಿದ್ದಾನೆ ಎನ್ನಲಾಗಿದೆ. ಸದ್ಯ ಪ್ರೀತಿಸಿದವನೊಂದಿಗೆ ಬದುಕುವ ಕನಸು ಕಂಡಿದ್ದ ವಧುವಿನ ಕನಸು ನುಚ್ಚು ನೂರಾಗಿದೆ. ವಧು ಲಗ್ನ ಪತ್ರಿಕೆ, ಹೊಸ ಸೀರೆಯೊಂದಿಗೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೊರೆ ಹೋಗಿದ್ದಾಳೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೇಮ ವೈಫಲ್ಯದಿಂದ ಹೊರಬರುವುದು ಹೇಗೆ?

ಪ್ರೀತಿ ಎಂಬ ಸಂಭಂದ ಅಚಾನಕ್ಕಾಗಿ ಮುರಿದು ಬಿದ್ದರೆ ಆಗುವ ನೋವು ಅಷ್ಟಿಷ್ಟಲ್ಲ. ಆ ಹ್ಯಾಂಗೋವರ್​ನಿಂದ ಹೊರ ಬರಲು ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ ಸಾಕಷ್ಟು ಜನರು ಕಳೆದುಕೊಂಡ ಪ್ರೀತಿಯನ್ನು ಮತ್ತೆ ಪಡೆಯಲು ಹಾತೊರೆಯುತ್ತಾರೆ. ಹಾಗಾಗಿ ಪ್ರೀತಿ ಕಳೆದುಕೊಂಡ ಯುವಕ-ಯುವತಿಯರು ಬ್ರೇಕ್​ ಅಪ್​ ನಂತರ ಕೆಲ ತಪ್ಪುಗಳನ್ನು ಮಾಡದೇ ಇದ್ದರೆ ಕಳೆದುಕೊಂಡಿರುವ ಪ್ರೀತಿಯನ್ನು ಮತ್ತೆ ಪಡೆಯಬಹುದು.

ಸಾಕಷ್ಟು ಪ್ರೇಮಿಗಳು ಬ್ರೇಕ್​ ಅಪ್​ ಮಾಡಿಕೊಂಡ ನಂತರ ತಮ್ಮ ಕಾಂಟ್ಯಾಕ್ಟ್​ ಲೀಸ್ಟ್​ನಲ್ಲಿರುವ ಹೆಸರನ್ನು ಡಿಲೀಟ್​ ಮಾಡುತ್ತಾರೆ. ಇಂತಹ ನಿರ್ಧಾರದಿಂದ ನಿಮ್ಮ ಪ್ರೀತಿ ಮತ್ತು ಪ್ರೀತಿಸುವವರು ಇನ್ನಷ್ಟು ದೂರವಾಗುತ್ತಾರೆ.

ಇದನ್ನೂ ಓದಿ: Love Breakup: ಎಂಟು ವರ್ಷದಿಂದ ಪ್ರೀತಿಸಿದವಳಿಂದ ಮೋಸ; ಪ್ರಿಯಕರ ಆತ್ಮಹತ್ಯೆ!

ನೀವು ಪೇಸ್ಬುಕ್​ ಮೆಸೆಂಜರ್​, ಇನ್​ಸ್ಟಾಗ್ರಾಂ, ವಾಟ್ಸ್​ಆ್ಯಪ್​ ಬಳಕೆ ಮಾಡುವಾಗ ಲಾಸ್ಟ್​​ ಸೀನ್​ ಹೈಡ್​ ಮಾಡದಿರಿ. ಯಾವುದೋ ಒಂದು ಸಂದೇಶದಿಂದ ನಿಮ್ಮ ಪ್ರೀತಿ ಮತ್ತೆ ಚಿಗುರೊಡೆಯಬಹುದು. ಆ ಕಾರಣಕ್ಕಾಗಿ ಸಾಮಾಜಿಕ ಜಾಲತಾಣವನ್ನು ಪರಿಶೀಲಿಸುತ್ತಿರಿ.

ಅನೇಕರು ತಮ್ಮ ಸ್ಮಾರ್ಟ್​ಫೋನ್​ನಲ್ಲಿ ಉಳಿದುಕೊಂಡಿರುವ ಹಳೇಯ ಫೋಟೊವನ್ನು ಡಿಲೀಟ್​ ಮಾಡುವುದಿಲ್ಲ. ಬ್ರೇಕ್​ಅಪ್​ ಆದ ನಂತರವೂ ಹಳೇಯ ಫೋಟೋವನ್ನು ನೋಡಿ ದುಖಿ:ಸುತ್ತಿರುತ್ತಾರೆ. ಮನಸ್ಸಿಗೆ ನೋವು ನೀಡುವ ಮತ್ತು ಹಳೇಯ ಪ್ರೀತಿಯನ್ನು ನೆನಪಿಸುವ ವಸ್ತುಗಳನ್ನು ದೂರವಿಡಲು ಪ್ರಯತ್ನಿಸಿ.
Published by:Precilla Olivia Dias
First published: