ಕೊಡಗಿನಲ್ಲಿ ಭಾರೀ ಮಳೆ: ಭೂಕುಸಿತ ಆತಂಕದಲ್ಲಿ ಸ್ಥಳೀಯರು

ಮಡಿಕೇರಿ ತಾಲ್ಲೂಕಿನ ಬಲ್ಲಮಾವುಟಿ, ಬಾಗಮಂಡಲ ವ್ಯಾಪ್ತಿಯಲ್ಲಿ ಬರೋಬ್ಬರಿ 170 ಮಿಲಿ ಮೀಟರ್ ಮಳೆ 12 ಗಂಟೆ ಅವಧಿಯಲ್ಲಿ ಸುರಿದಿದೆ. ಹೀಗಾಗಿ 100 ಮಿಲಿ ಮೀಟರ್​​ಗೂ ಅಧಿಕ ಮಳೆ ಸುರಿದಿರುವ ಪ್ರದೇಶದಲ್ಲಿ ಭೂಕುಸಿತವಾಗುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ.

ಭೂ ಕುಸಿತಕ್ಕೊಳಗಾಗಿರುವ ಸ್ಥಳವನ್ನು ವೀಕ್ಷಿಸುತ್ತಿರುವ ಅಧಿಕಾರಿಗಳು.

ಭೂ ಕುಸಿತಕ್ಕೊಳಗಾಗಿರುವ ಸ್ಥಳವನ್ನು ವೀಕ್ಷಿಸುತ್ತಿರುವ ಅಧಿಕಾರಿಗಳು.

  • Share this:
ಕೊಡಗು(ಆ.04): ಕೊಡಗು ಜಿಲ್ಲೆಯಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಭೂಕುಸಿತ ಆತಂಕ ಎದುರಾಗಿದೆ. ಮಡಿಕೇರಿ ಬಾಗಮಂಡಲ ಬಲ್ಲಮಾವುಟಿ, ಗಾಳಿಬೀಡು, ಗರ್ವಾಲೆ, ಕಿರಂಗದೂರು ಸೇರಿದಂತೆ ಜಿಲ್ಲೆಯ ಮೂರು ತಾಲ್ಲೂಕುಗಳ 15 ಕ್ಕೂ ಹೆಚ್ಚು ಭಾಗಗಳಲ್ಲಿ ಕಳೆದ 12 ಗಂಟೆಗಳ ಅವಧಿಯಲ್ಲಿ 100 ಮಿಲಿ ಮೀಟರ್​​ಗೂ ಹೆಚ್ಚು ಮಳೆ ಸುರಿದಿದೆ.

ಮಡಿಕೇರಿ ತಾಲ್ಲೂಕಿನ ಬಲ್ಲಮಾವುಟಿ, ಬಾಗಮಂಡಲ ವ್ಯಾಪ್ತಿಯಲ್ಲಿ ಬರೋಬ್ಬರಿ 170 ಮಿಲಿ ಮೀಟರ್ ಮಳೆ 12 ಗಂಟೆ ಅವಧಿಯಲ್ಲಿ ಸುರಿದಿದೆ. ಹೀಗಾಗಿ 100 ಮಿಲಿ ಮೀಟರ್​​ಗೂ ಅಧಿಕ ಮಳೆ ಸುರಿದಿರುವ ಪ್ರದೇಶದಲ್ಲಿ ಭೂಕುಸಿತವಾಗುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ.

ಬಾಗಮಂಡಲ ತಲಕಾವೇರಿ ವ್ಯಾಪ್ತಿಯಲ್ಲಿ ಕಳೆದ 12 ಗಂಟೆ ಅವಧಿಯಲ್ಲಿ 170 ಮಿಲಿ ಮೀಟರ್​​ಗೂ ಹೆಚ್ಚು ಮಳೆ ಸುರಿದಿದೆ. ಜಿಲ್ಲೆಯಾದ್ಯಂತ ಭಾರೀ ಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಬಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಬಾಗಮಂಡಲ ತ್ರಿವೇಣಿ ಸಂಗಮ ತುಂಬಿ ಹರಿಯುತ್ತಿದೆ. ಮಳೆ ಹೀಗೆ ಮುಂದುವರಿದಲ್ಲಿ ತ್ರಿವೇಣಿ ಸಂಗಮ ಭರ್ತಿಯಾಗಿ, ಮುಳುಗಡೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ, ಮೈಸೂರು ಪ್ರವಾಸ; ಇಲ್ಲಿದೆ ಸಿದ್ದರಾಮಯ್ಯ ಟ್ರಾವೆಲ್​ ಹಿಸ್ಟರಿ

ಹಳ್ಳ ಕೊಳ್ಳಗಳಲೆಲ್ಲಾ ಭಾರೀ ಪ್ರಮಾಣದ ನೀರು ಹರಿಯುತ್ತಿದೆ. ತಗ್ಗು ಪ್ರದೇಶದ ಹೊಲಗದ್ದೆಗಳಲೆಲ್ಲಾ ನೀರು ತುಂಬಿ ಕೆರೆಗಳಂತೆ ಆಗಿವೆ. ಈಗಾಗಲೇ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, 115 ಮಿಲಿ ಮೀಟರ್​​​​ನಿಂದ 204 ಮಿಲಿ ಮೀಟರ್​​​ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿಯೇ ಇದೇ ತಿಂಗಳ 8 ನೇ ತಾರೀಖಿನ ಬೆಳಿಗ್ಗೆ 8 ಗಂಟೆವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
Published by:Ganesh Nachikethu
First published: