• Home
  • »
  • News
  • »
  • state
  • »
  • Kodimatha Swamiji: 2023ರ ಚುನಾವಣೆ ಬಗ್ಗೆ ಕೋಡಿಮಠ ಸ್ವಾಮೀಜಿ ಭವಿಷ್ಯ! ಈ ಬಾರಿಯೂ ಸಮ್ಮಿಶ್ರ ಸರ್ಕಾರ ಫಿಕ್ಸಾ?

Kodimatha Swamiji: 2023ರ ಚುನಾವಣೆ ಬಗ್ಗೆ ಕೋಡಿಮಠ ಸ್ವಾಮೀಜಿ ಭವಿಷ್ಯ! ಈ ಬಾರಿಯೂ ಸಮ್ಮಿಶ್ರ ಸರ್ಕಾರ ಫಿಕ್ಸಾ?

ಕೋಡಿಮಠ ಸ್ವಾಮೀಜಿ

ಕೋಡಿಮಠ ಸ್ವಾಮೀಜಿ

ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ (assembly elections), ವಿಶ್ವದಾದ್ಯಂತ ಹೆಚ್ಚುತ್ತಿರುವ ಕೊರೊನಾ (Corona) ಸೋಂಕಿನ ಭೀತಿ, ಸಂಕ್ರಾಂತಿ ಭವಿಷ್ಯ (Sankranthi Predictions) ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ? ಸಮ್ಮಿಶ್ರ ಸರ್ಕಾರ ಬರುತ್ತದೆಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • Karnataka, India
  • Share this:

ಹೊಸಪೇಟೆ, ವಿಜಯನಗರ: ಭವಿಷ್ಯ (Predictions) ಹೇಳುವುದರಲ್ಲೇ ಪ್ರಖ್ಯಾತಿ ಪಡೆದ ಹಾಸನ (Hassan) ಜಿಲ್ಲೆಯ ಕೋಡಿಮಠದ (Kodimatha) ಪೀಠಾಧ್ಯಕ್ಷ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ (Dr. Sivananda Shivayogi Rajendra Mahaswamiji) ಇದೀಗ ಮತ್ತೊಂದು ಭವಿಷ್ಯ ನುಡಿದಿದ್ದಾರೆ. ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ (assembly elections), ವಿಶ್ವದಾದ್ಯಂತ ಹೆಚ್ಚುತ್ತಿರುವ ಕೊರೊನಾ (Corona) ಸೋಂಕಿನ ಭೀತಿ, ಸಂಕ್ರಾಂತಿ ಭವಿಷ್ಯ (Sankranthi Predictions) ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ವಿಜಯನಗರ (Vijayanagar) ಜಿಲ್ಲೆಯ ಹೊಸಪೇಟೆಯಲ್ಲಿ (Hospet) ಬಿಜೆಪಿ ನಾಯಕಿ ರಾಣಿ ಸಂಯುಕ್ತಾ ನಿವಾಸಕ್ಕೆ ಭೇಟಿ ನೀಡಿದ ಸ್ವಾಮೀಜಿ, ಅಲ್ಲಿ ಪಾದಪೂಜೆ ಸ್ವೀಕರಿಸಿದರು. ಬಳಿಕ ಮಾತನಾಡಿದ ಕೋಡಿಮಠದ ಶ್ರೀಗಳು, ಒಲೆ ಹೊತ್ತಿ ಉರಿದರೆ ನಿಲ್ಲಬಹುದು, ಧರೆ ಹೊತ್ತಿ ಉರಿದರೆ ನಿಲ್ಲದು ಎಂದು ಮಾರ್ಮಿಕವಾಗಿ ಭವಿಷ್ಯ ನುಡಿದ್ದಾರೆ.


ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು


2023 ಕ್ಕ ಜಾಗತಿಕ ಮಟ್ಟದಲ್ಲಿ ದೊಡ್ಡ ರೀತಿಯ ಸಮಸ್ಯೆ ಎದುರಾಗಲಿದೆ ಅಂತ ಕೋಡಿಮಠದ ಶ್ರೀಗಳು ಹೇಳಿದ್ದಾರೆ. ಸಾಧು ಸಂತರಿಗೆ ಸಮಸ್ಯೆಯಾಗುತ್ತದೆ. ಜಾಗತಿಕವಾಗಿ ಬಹಳ ದೊಡ್ಡ ಸಮಸ್ಯೆ ಕಾಡುತ್ತದೆ, ಎರಡು ಮೂರು ದೊಡ್ಡ- ದೊಡ್ಡ ತಲೆಗಳು ಉರುಳುತ್ತವೆ ಅಂತ ಆತಂಕಕಾರಿ ಭವಿಷ್ಯ ಹೇಳಿದ್ದಾರೆ.




“ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಲ್ಲ, ಒಂದು ಪಕ್ಷಕ್ಕೆ ಮಾತ್ರ ಅಧಿಕಾರ”


ಇನ್ನು ಕರ್ನಾಟಕ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಬಗ್ಗೆಯೂ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಅಂದಿದ್ದಾರೆ.


ಇದನ್ನೂ ಓದಿ: Kodi Mutt Swamiji: ಒಲೆ ಹೊತ್ತು ಉರಿದ್ರೆ ಅಡುಗೆ, ಆದ್ರೆ ಭೂಮಿ ಹೊತ್ತು ಉರಿದ್ರೆ ಏನಾಗುತ್ತೆ? ಕೋಡಿಮಠ ಶ್ರೀಗಳಿಂದ ಮತ್ತೊಂದು ಭವಿಷ್ಯ


ಕೊರಾನಾ ಬಗ್ಗೆ, ಮಳೆ ಬೆಳೆ ಬಗ್ಗೆ ಶ್ರೀಗಳು ಹೇಳಿದ್ದೇನು?


ಇನ್ನು ಈಗಾಗಲೇ ಹೆಚ್ಚುತ್ತಿರುವ ಕೊರೊನಾ ಸೋಂಕಿನ ಬಗ್ಗೆಯೂ ಶ್ರೀಗಳು ಮಾತನಾಡಿದ್ದಾರೆ. ಕೊರೊನಾ ಬಂದ್ರೂ ಕೂಡ ಅಂತಹ ತೊಂದರೆಯಾಗಲ್ಲ. ಸಂಕ್ರಾಂತಿ, ಯುಗಾದಿಯ ಬಳಿಕ ಮತ್ತೆ ಮಳೆಯಾಗುತ್ತದೆ. ಮಳೆಯಿಂದ ಕಳೆದ ಬಾರಿ ಹೇಗೆ ಆಯಿತೋ ಹಾಗೇ ಆಗುತ್ತದೆ. ಸಂಕ್ರಾಂತಿಗೆ ಇನ್ನೂ ಎರಡು ದಿನಗಳಿವೆ, ಸಂಕ್ರಾಂತಿ ಭವಿಷ್ಯ, ಯುಗಾದಿ ಭವಿಷ್ಯ ಆಯಾ ಕಾಲಕ್ಕೆ ಹೇಳಬೇಕಿದೆ ಅಂತ ಶ್ರೀಗಳು ಹೇಳಿದ್ದಾರೆ.




ಪಕ್ಷ ಒಡೆಯುತ್ತದೆ ಎಂದಿದ್ದ ಶ್ರೀಗಳು!
ಈ ಹಿಂದೆ ಬೆಂಗಳೂರಿನಲ್ಲಿ ಭವಿಷ್ಯ ನುಡಿದಿದ್ದ ಶ್ರೀಗಳು, ಕರ್ನಾಟಕ ರಾಜಕೀಯ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲಾ ಪಕ್ಷಗಳು ಒಡೆಯುತ್ತದೆ ಎಂದು ನಾನು ಹಿಂದೆಯೇ ಹೇಳಿದ್ದೇನೆ. ಇದೀಗ ಈ ಮಾತುಗಳು ನಿಜವಾಗುತ್ತಿದೆ ಎಂದಿದ್ದರು. ಅಷ್ಟಕ್ಕೂ ಈ ಮಾತಿನ ಹಿನ್ನೆಲೆ ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪಿಸುತ್ತಿರುವುದನ್ನು ಮುಂದಿಟ್ಟುಕೊಂಡು ಹೇಳಿದ್ದಾರೆ ಎನ್ನಲಾಗಿತ್ತು.


ಒಲೆ ಹೊತ್ತಿ ಉರಿದರೆ ನಿಲ್ಲಬಹುದು, ಧರೆ ಹೊತ್ತಿ ಉರಿದರೆ ನಿಲ್ಲದು


ನಂತರ ಒಲೆ ಹೊತ್ತಿ ಉರಿದರೆ ಅಡುಗೆ ಆಗುತ್ತದೆ ಆದರೆ ಭೂಮಿ ಹೊತ್ತಿ ಉರಿದರೆ ಏನಾಬಹುದು ಎಂದು ಹೇಳುವ ಮೂಲಕ ಎಲ್ಲರಲ್ಲಿಯೂ ಗೊಂದಲ ಮೂಡಿಸಿದ್ದರು. ಅಲ್ಲದೇ ಈ ಬಗ್ಗೆ ಮುಂದೆ ಭವಿಷ್ಯದಲ್ಲಿ ಹೇಳುತ್ತೇವೆ ಎಂದು ತಮ್ಮ ಉತ್ತರವನ್ನು ಕಾಯ್ದಿರಿಸಿದ್ದರು. ಕೋಡಿ ಮಠ ಶ್ರೀಗಳ ಈ ಹೇಳಿಕೆ ಜನರ ಮನಸ್ಸಿನಲ್ಲಿ ಆತಂಕವನ್ನು ಸೃಷ್ಟಿಸಿತ್ತು.


ಇದನ್ನೂ ಓದಿ: Kodimatha Swamiji: ದೊಡ್ಡ ಲೋಕ ಕಂಟಕವಿದೆ, ಮನುಷ್ಯ ಹುಚ್ಚನಂತೆ ಆಗುತ್ತಾನೆ! ಕೋಡಿಮಠ ಶ್ರೀಗಳಿಂದ ಭಯಾನಕ ಭವಿಷ್ಯ


ದೊಡ್ಡ ಲೋಕ ಕಂಟಕವಿದೆ, ಮನುಷ್ಯ ಹುಚ್ಚನಂತೆ ಆಗುತ್ತಾನೆ!


ಕಾರ್ತಿಕ ಮಾರ್ಗಶಿರ, ಜನವರಿ ಪ್ರಥಮದಲ್ಲಿಯೂ ಲೋಕಕ್ಕೆ ಕಂಟಕವಿದೆ ಅಂತ ಶ್ರೀಗಳು ಈ ಹಿಂದೆ ಹೇಳಿದ್ದರು. ಪ್ರಾಕೃತಿಕವಾಗಿ, ಪ್ರಾದೇಶಿಕವಾಗಿ, ಇರಬಹುದು, ಭೂಕಂಟಕ ಇರಬಹುದು, ರಾಜಬೀದಿ ಇರಬಹುದು ಅಲ್ಲೆಲ್ಲ ಅವಘಡ ಆಗುತ್ತವೆ ಅಂತ ಹೇಳಿದ್ದರು.

Published by:Annappa Achari
First published: