• Home
  • »
  • News
  • »
  • state
  • »
  • Kodimatha Swamiji: ದೊಡ್ಡ ಲೋಕ ಕಂಟಕವಿದೆ, ಮನುಷ್ಯ ಹುಚ್ಚನಂತೆ ಆಗುತ್ತಾನೆ! ಕೋಡಿಮಠ ಶ್ರೀಗಳಿಂದ ಭಯಾನಕ ಭವಿಷ್ಯ

Kodimatha Swamiji: ದೊಡ್ಡ ಲೋಕ ಕಂಟಕವಿದೆ, ಮನುಷ್ಯ ಹುಚ್ಚನಂತೆ ಆಗುತ್ತಾನೆ! ಕೋಡಿಮಠ ಶ್ರೀಗಳಿಂದ ಭಯಾನಕ ಭವಿಷ್ಯ

ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ

ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ

ಕಾರ್ತಿಕ, ಮಾರ್ಗಶಿರ ಮಾಸ, ಜನವರಿವರೆಗೂ ಲೋಕಕ್ಕೆ ಕಂಟಕವಿದೆ ಅಂತ ಶ್ರೀಗಳು ಹೇಳಿದ್ದಾರೆ. ಪ್ರಾಕೃತಿಕವಾಗಿ, ಪ್ರಾದೇಶಿಕವಾಗಿ, ಇರಬಹುದು, ಭೂಕಂಟಕ ಇರಬಹುದು, ರಾಜಬೀದಿ ಇರಬಹುದು ಅಲ್ಲೆಲ್ಲ ಅವಘಡ ಆಗುತ್ತವೆ ಎಂದಿದ್ದಾರೆ.

  • Share this:

ಹಾಸನ: ರಾಜ್ಯ, ದೇಶ, ಜಗತ್ತಿನ ರಾಜಕೀಯ, ಪ್ರಕೃತಿ ವಿಕೋಪ, ರೋಗ ರುಜಿನಗಳ ಕುರಿತಂತೆ ಭವಿಷ್ಯ (Predictions) ನುಡಿಯುವುದರಲ್ಲಿ ಸಿದ್ಧಹಸ್ತರಾಗಿರುವ ಕೋಡಿಮಠದ (Kodimatha) ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ (Dr. Sivananda Shivayogi Rajendra Mahaswamiji) ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಹಾಸನ (Hassan) ಜಿಲ್ಲೆಯ ಅರಸೀಕೆರೆ (Araseikere) ತಾಲ್ಲೂಕಿನ ಹಾರನಹಳ್ಳಿಯ (Haranahalli) ಕೋಡಿಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಒಂದು ಮಂಡಲ ಕಾಲ ಶ್ರೀಮಠದಲ್ಲಿ ತಾವು ಕೈಗೊಂಡಿರುವ ಮಹಾರುದ್ರ ಜಪಯಾಗದ ಶನಿವಾರದ ಪೂಜಾ ಕಾರ್ಯವನ್ನು ಮುಗಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಭಾಗದಿಂದ ಪ್ರಾರಂಭವಾಗಿ ಕಾರ್ತಿಕ ಮಾಸದ ಮಾರ್ಗಶಿರ, ಜನವರಿ ಪ್ರಥಮದಲ್ಲಿಯೂ ಲೋಕ‌ ಕಂಟಕವಿದೆ ಎಂದು ಹೇಳಿದ್ದಾರೆ.


ಕೋಡಿಮಠ ಸ್ವಾಮೀಜಿಯಿಂದ ಭಯಾನಕ ಭವಿಷ್ಯ


ಕೋಡಿಮಠದ ಸ್ವಾಮೀಜಿ ಮತ್ತೊಮ್ಮೆ ಭಯಾನಕ ಭವಿಷ್ಯ ನುಡಿದಿದ್ದಾರೆ. ಪ್ರಾಕೃತಿಕ ವಿಕೋಪಗಳ ಭೀತಿ ಒಂದೆಡೆಯಾದರೆ, ಮತ್ತೊಂದೆಡೆ ಮನುಷ್ಯ ಮನುಷ್ಯನನ್ನು ನಂಬದೇ ತನ್ನ ಮನಸ್ಥಿತಿಯ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚನಂತೆ ಆಗುತ್ತಾನೆ. ದೇಹದ ಆಶಕ್ತತೆಯಿಂದ ಹಾದಿ ಬೀದಿಯಲ್ಲಿ ಬಿದ್ದು ಸಾಯುವಂತ ಕಾಲ ಮುಂದಿನ ದಿನಗಳಲ್ಲಿ ಬರಲಿದೆ ಎಂದು ಹೇಳಿದ್ದಾರೆ.


“ಜನವರಿ ಪ್ರಥಮದಲ್ಲಿಯೂ ಲೋಕ ಕಂಟಕ”


ಕಾರ್ತಿಕ ಮಾರ್ಗಶಿರ, ಜನವರಿ ಪ್ರಥಮದಲ್ಲಿಯೂ ಲೋಕಕ್ಕೆ ಕಂಟಕವಿದೆ ಅಂತ ಶ್ರೀಗಳು ಹೇಳಿದ್ದಾರೆ. ಪ್ರಾಕೃತಿಕವಾಗಿ, ಪ್ರಾದೇಶಿಕವಾಗಿ, ಇರಬಹುದು, ಭೂಕಂಟಕ ಇರಬಹುದು, ರಾಜಬೀದಿ ಇರಬಹುದು ಅಲ್ಲೆಲ್ಲ ಅವಘಡ ಆಗುತ್ತವೆ ಎಂದಿದ್ದಾರೆ.


ಇದನ್ನೂ ಓದಿ: Actor Chetan: ನಟ ಚೇತನ್ ವಿರುದ್ಧ ದೈವನರ್ತಕರ ಆಕ್ರೋಶ, ಪಂಜುರ್ಲಿ ಮೊರೆ ಹೋಗಲು ನಿರ್ಧಾರ


“ಜನರು ದೈವ ಭಕ್ತಿಯಿಂದ ಇರಬೇಕು”


ಜಾಗತಿಕ ದೋಷ, ರಾಷ್ಟ್ರೀಯ ದೋಷವೂ ಹೆಚ್ಚಾಗಿದೆ. ಎರಡು, ಮೂರು ತಿಂಗಳು ಮನುಷ್ಯರು ದೈವ, ಭಕ್ತಿಯಿಂದ, ನಂಬಿಕೆಯಿಂದ ಇರುವುದು ಬಹಳ ಮುಖ್ಯ. ಈ ಎಲ್ಲದರಿಂದ ಮನುಷ್ಯ ಮುಕ್ತನಾಗಬೇಕಾದರೆ ದೈವದ ಮೇಲೆ ಭಕ್ತಿ ಜಪ ತಪಗಳ ಮೂಲಕ ಭಗವಂತನೆಡೆಗೆ ಮುಖ ಮಾಡಿದರೆ ಭವಿಷ್ಯದಲ್ಲಿ ಸಂಭವಿಸುವ ದುಷ್ಪರಿಣಾಮದಿಂದ ಪಾರಾಗಲು ಸಾಧ್ಯವಾಗಲಿದೆ ಎಂದು ಸ್ವಾಮೀಜಿ ಹೇಳಿದರು. ಕಾರ್ತಿಕದವರೆಗೂ ಮಳೆ ಇರುತ್ತೆ. ಮಠದಲ್ಲಿ ಜನವರಿಯವರೆಗೂ ಬೆಳಿಗ್ಗೆ, ಸಂಜೆ, ಮಹಾರುದ್ರಜಪವನ್ನು ಪ್ರಾರಂಭ ಮಾಡಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.


ಭೂಮಿ ನಡುಗಿತು, ಮೇಘ ಅಬ್ಬರಿಸಿತು, ನೀರು ತಲ್ಲಣಗೊಂಡಿತು


ಈ ಹಿಂದೆ ಕೋಡಿಹಳ್ಳಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಕಾರ್ತಿಕ ಮಾಸದ ಭವಿಷ್ಯ ನುಡಿದಿದ್ದು, ಪ್ರಕೃತಿಯ ವಿಕೋಪದ ಎಚ್ಚರಿಕೆ ನೀಡಿದ್ದರು.


“ದೇಶದಲ್ಲಿ ಅಶಾಂತಿ ನಿರ್ಮಾಣವಾಗಲಿದೆ”


ಕೋಡಿ ಮಠದ ಶ್ರೀಗಳು ಮುಂಬರುವ ಕಾರ್ತಿಕ ಮಾಸದಲ್ಲಿ ಕೆಡಕುಗಳು ನಡೆಯಲಿವೆ ಎಂದು ಭವಿಷ್ಯ ನುಡಿದಿದ್ದಾರೆ. ಭೂಮಿ ನಡುಗಿತು, ಮೇಘ ಅಬ್ಬರಿಸಿತು, ನೀರು ತಲ್ಲಣಗೊಂಡಿತು ಎಂದು ಭವಿಷ್ಯ ನುಡಿದಿದ್ದು, ರಾಜ್ಯದ ಜನರಲ್ಲಿ ಆತಂಕ ಹೆಚ್ಚಳ ಮಾಡಿದೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಧರ್ಮ ಸಂಘರ್ಷಗಳು ನಡೆಯುತ್ತಿವೆ. ಇದಕ್ಕೆ ಕಾರಣ ಜ್ಞಾನದ ಕೊರತೆ.  ಈ ಜ್ಞಾನದ ಕೊರತೆಯಿಂದಾಗಿ ದೇಶದಲ್ಲಿ ಅಶಾಂತಿ ನಿರ್ಮಾಣವಾಗುತ್ತಿದೆ ಎಂದಿದ್ದರು.


ಇದನ್ನೂ ಓದಿ: Cauvery: ಜೀವನದಿಯ ಉಳಿವಿಗಾಗಿ ಕಾವೇರಿ ಆರತಿ


ನಾನು ಹೇಳಿದ ಭವಿಷ್ಯ ನಿಜವಾಗಿದೆ ಎಂದಿರುವ ಶ್ರೀಗಳು


ತಾನು ಹೇಳಿದ್ದ ಭವಿಷ್ಯ ನಿಜವಾಗಿದೆ ಅಂತ ಶ್ರೀಗಳು ಹೇಳಿದ್ದಾರೆ. ಜಗತ್ತಿನ ಭೂಪಟದಿಂದ ಒಂದು ದೇಶ ಅಳಿಸಿಹೋಗುತ್ತದೆ ಎಂದು ತಾನು ಹೇಳಿದ್ದು ತಾಲಿಬಾನ್ ವಿಚಾರಕ್ಕೆ ಅಂತೆ. ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡು ಇಡೀ ವಿಶ್ವಕ್ಕೆ ತಲೆನೋವಾಗಿದ್ದಾರೆ ಎಂದು ಶ್ರೀಗಳು ವಿಶ್ಲೇಷಿಸಿದ್ಧಾರೆ. ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ಬರಲಿವೆ. ನಾಲ್ಕೈದು ವರ್ಷದೊಳಗೆ ಕೊರೋನಾದಿಂದ ಜಗತ್ತು ಮುಕ್ತವಾಗುತ್ತದೆ ಎಂದೂ ಅವರು ಭವಿಷ್ಯ ಹೇಳಿದ್ದಾರೆ.

Published by:Annappa Achari
First published: