ಬಳ್ಳಾರಿ (ಜೂ 11): ಕೊರೊನಾ (Corona) ಕುರಿತು ಕೋಡಿಮಠದ ಶ್ರೀಗಳು (Kodihalli Swamiji) ಎಚ್ಚರಿಕೆಯ ಭವಿಷ್ಯ ನುಡಿದ್ದಾರೆ. ಇನ್ನು ಒಂದುವರೆ ವರ್ಷದಲ್ಲಿ ಕೊರೊನಾ ಕಾಲ ಕೊನೆಯಾಗುತ್ತೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ (prediction) ನುಡಿದಿದ್ದಾರೆ. ಆದರೆ, ಹೋಗುವಾಗ ವಿಶೇಷ ಕಷ್ಟ ಕೊಟ್ಟು ಹೋಗುತ್ತೆ. ಕೋವಿಡ್ ಗಾಳಿಯ ಮೂಲಕವೂ ಬರಬಹುದು. ಉಸಿರಾಟದ ತೊಂದರೆಯಾಗಿ ಪ್ರಾಣ ಹಾನಿಯಾಗಹುದು. ಈ ಬಗ್ಗೆ ಮುಂಜಾಗ್ರತೆ (Precaution) ವಹಿಸಿಬೇಕು' ಎಂದು ಸಲಹೆ (Tips) ನೀಡಿದ್ದಾರೆ.
ಮತ್ತಷ್ಟು ಜೋರಾಗಲಿದೆ ಮುಂಗಾರು
ಮಳೆ ಬಗ್ಗೆ ಭವಿಷ್ಯ ನುಡಿದ ಶ್ರೀಗಳು, ಈ ಹಿಂದೆ ಕೆಂಡಾಮಂಡಲ ಆಗುತ್ತೆ ಎಂದಿದ್ದೆ. ಮಲೆನಾಡು ಬಯಲಾಗುತ್ತೆ, ಬಯಲು ಮಲೆನಾಡಾಗುತ್ತೆ ಎಂದಿದ್ದೆ. ಈಗ ಎಲ್ಲ ಕಡೆ ನೀರು ಕೆಂಡಾಮಂಡಲ ಆಗ್ತಾ ಇದೆ. ಮುಂಗಾರುಮಳೆ ಇನ್ನೂ ಜಾಸ್ತಿಯಾಗುವ ಲಕ್ಷಣ ಕಾಣ್ತಾ ಇದೆ. ಈ ಬಾರಿ ದೊಡ್ಡ ನಗರಗಳಿಗೆ ತೊಂದರೆ ಹೆಚ್ಚಾಗಲಿದೆ ಎಂದಿದ್ದಾರೆ.
ರಾಜಕೀಯದ ಬಗ್ಗೆಯೂ ಶ್ರೀಗಳ ಭವಿಷ್ಯ
ರಾಜಕೀಯದ ಬಗ್ಗೆಯೂ ಭವಿಷ್ಯ ನುಡಿದಿರುವ ಶ್ರೀಗಳು, ರಾಜಕೀಯ ಅಸ್ಥಿರತೆ ಕಾಡುತ್ತೆ ಅಂತಾ ಮೊದಲೇ ಹೇಳಿದ್ದೆ. ಗುಂಪುಗಳಾಗ್ತವೆ ಅಂದಿದ್ದೆ. ಅದನ್ನು ಈಗ ಕಂಡುಕೊಂಡಿದ್ದೀರ. ದೇಶದಲ್ಲಿ ಅವಘಢ ಆಗುತ್ತೆ ಎಂದಿದ್ದೆ. ಅದು ಈಗ ಪ್ರಾರಂಭವಾಗಿದೆ. ಪೈಗಂಬರರನ್ನು ಅವಹೇಳನ ಮಾಡಿ, ಜಗತ್ತಿನಾದ್ಯಂತ ಸಮಸ್ಯೆ ಶುರುವಾಗಿದೆ. ಮುಂದೆ ಇದರಿಂದ ದೊಡ್ಡ ಅಪಾಯವೂ ಇದೆ ಎಂದು ಶ್ರೀಗಳು ಹೇಳಿದರು.
ಇದನ್ನೂ ಓದಿ: BMTC ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್; ಶೇ.35ರಷ್ಟು ಬಿಎಂಟಿಸಿ ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ
ಹಿಂದೆ ಧರ್ಮ ದಂಗಲ್ ಬಗ್ಗೆ ಭವಿಷ್ಯ ನುಡಿದ ಶ್ರೀಗಳು
ಹಿಜಾಬ್‌ನಿಂದ ಆರಂಭವಾಗಿರುವ ಜಾತಿ ವೈಷ್ಯಮ್ಯದ ಬಗ್ಗೆ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೊಗಿ ರಾಜೇಂದ್ರ ಸ್ವಾಮೀಜಿಗಳು ಇದೇ ಮೊದಲ ಬಾರಿಗೆ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಯುಗಾದಿಯ ಸಂದರ್ಭದಲ್ಲಿ ವರ್ಷದ ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀಗಳು ಮಾರ್ಮಿಕವಾಗಿ ಧಾರ್ಮಿಕ ಕಲಹದ ಬಗ್ಗೆ ಮಾತನ್ನಾಡಿದ್ದರು. ಜೊತೆಗೆ, ಈ ವರ್ಷ ಭಯಾನಕವಾಗಿರಲಿದೆ ಎಂದೂ ಶ್ರೀಗಳು ನುಡಿದಿದ್ದರು.
ಮಾನವೀಯ ಮೌಲ್ಯಕ್ಕೆ ಬೆಲೆ ಕೊಡಬೇಕಾಗುತ್ತದೆ
ಹಾಸನ ಜಿಲ್ಲೆ ಬೇಲೂರಿನಲ್ಲಿ ನಡೆದ ಶಾಂತಿ ಸೌಹಾರ್ದ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಕೋಡಿಮಠದ ಶ್ರೀಗಳು, "ಮಾನವೀಯ ಮೌಲ್ಯಕ್ಕೆ ಬೆಲೆ ಕೊಡಬೇಕಾಗುತ್ತದೆ. ಅದಿಲ್ಲದಿದ್ದರೆ ಅದು ಅಧರ್ಮವಾಗುತ್ತದೆ" ಎಂದು ಹೇಳಿದ್ದಾರೆ. "ಭಾರತದ ಈ ಸಂವತ್ಸರದಲ್ಲಿ ಬಹುದೊಡ್ಡ ಅವಘಡ ನಡೆಯುತ್ತದೆ. ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುತ್ತಾರೆ. ಮುಂಗಾರು ಚೆನ್ನಾಗಿ ಆಗುತ್ತದೆ, ಹಿಂಗಾರು ಕಡಿಮೆ"ಎಂದು ಕೋಡಿಮಠದ ಶ್ರೀಗಳು ಕೆಲವು ದಿನಗಳ ಹಿಂದೆ ಯುಗಾದಿ ಭವಿಷ್ಯವನ್ನು ನುಡಿದಿದ್ದರು. ಸದ್ಯ ನಡೆಯುತ್ತಿರುವ ಧರ್ಮ ದಂಗಲ್ ಬಗ್ಗೆ ಕೋಡಿಶ್ರೀಗಳು ಹೇಳಿದ್ದೇನು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ
ಇದನ್ನೂ ಓದಿ: Karnataka Lokayukta: ಭ್ರಷ್ಟರೇ ಹುಷಾರ್! ಕರ್ನಾಟಕಕ್ಕೆ ಸದ್ಯದಲ್ಲೇ ಬರ್ತಾರೆ ಹೊಸ ಲೋಕಾಯುಕ್ತರು
ಮನುಷ್ಯನ ಅಭಿವೃದ್ದಿಯು ಮಾನವೀಯ ಮೌಲ್ಯವನ್ನು ಒಳಗೊಂಡಿರುತ್ತದೆ "ಮನುಷ್ಯನ ಅಭಿವೃದ್ದಿಯು ಮಾನವೀಯ ಮೌಲ್ಯವನ್ನು ಒಳಗೊಂಡಿರುತ್ತದೆ. ಧರ್ಮ ಎನ್ನುವುದು ಕಿತ್ತಳೆ ಹಣ್ಣಿನಂತೆ, ಒಳಗೆ ತೊಳೆಗಳು ಸಣ್ಣದು, ದೊಡ್ಡದಾಗಿರುತ್ತದೆ. ಮೇಲೆ ಸಿಪ್ಪೆ ಎಲ್ಲವನ್ನೂ ಸುತ್ತಿಕೊಂಡು ಇರುತ್ತದೆ. ಸಣ್ಣ ತೊಳೆ, ದೊಡ್ಡ ತೊಳೆ, ಎರಡನ್ನೂ ರಕ್ಷಿಸುತ್ತದೆ. ಎಲ್ಲಾ ಹಣ್ಣುಗಳಿಗೂ ತೊಳೆಗಳಿದ್ದರೂ, ಕಿತ್ತಳೆ ಹಣ್ಣು ಎನ್ನುವುದು ಜಗತ್ತು ಇದ್ದಂತೆ"ಎಂದು ಮಾರ್ಮಿಕವಾಗಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ಶ್ರೀಗಳು, ಮತೀಯ ಅಶಾಂತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಿಪ್ಪೆ ಎನ್ನುವುದು ಧರ್ಮ, ತೊಳೆಗಳು ಜಾತಿ ಇದ್ದಂತೆ "ಸಿಪ್ಪೆ ಎನ್ನುವುದು ಧರ್ಮ, ತೊಳೆಗಳು ಜಾತಿ ಇದ್ದಂತೆ. ಈ ಜಗತ್ತಿನಲ್ಲಿ ಹಲವು ಧರ್ಮಗಳಿವೆ, ಅವರವರು ಅವರ ಧರ್ಮವನ್ನು ಪಾಲಿಸಿಕೊಂಡು ಇರಲಿ, ಆದರೆ ಶಾಂತಿ, ಸಹಬಾಳ್ವೆ, ಸಮಾಧಾನ ಬಹಳ ಮುಖ್ಯವಾಗುತ್ತದೆ. ಎಲ್ಲರೂ ಆತ್ಮಾವಲೋಕನ ಮಾಡಿಕೊಂಡರೆ, ಈಗ ನಡೆಯುತ್ತಿರುವುದು ಯಾವುದು ಸರಿ, ಯಾವುದು ತಪ್ಪು ಎನ್ನುವುದು ಅರ್ಥವಾಗುತ್ತದೆ. ಎಲ್ಲಾ ಜಾತಿ, ಧರ್ಮದವರು ಒಟ್ಟಾಗಿ ಬಾಳಬೇಕಾಗುತ್ತದೆ"ಎಂದು ಕೋಡಿಮಠದ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ