news18-kannada Updated:December 9, 2020, 1:07 PM IST
ಕೋಡಿಹಳ್ಳಿ ಚಂದ್ರಶೇಖರ್
ಬೆಂಗಳೂರು(ಡಿ.09): ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮೇಲೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕೆಂಡಾಮಂಡಲ ಆಗಿದ್ದಾರೆ. ಇಂದು ಬಾರುಕೋಲು ಚಳುವಳಿ ನಡೆಸಲು ಮುಂದಾಗಿರುವ ಕೋಡಿಹಳ್ಳಿ, ಮಾಜಿ ಸಿಎಂ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಮಧ್ಯಾಹ್ನದವರೆಗೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯನ್ನು ವಿರೋಧಿಸಿದ್ದ ಜೆಡಿಎಸ್, ಬಳಿಕ ತನ್ನ ನಿಲುವನ್ನು ಬದಲಿಸಿತ್ತು. ಹೀಗಾಗಿ ರೈತ ಸಂಘಟನೆಗಳು ಮತ್ತು ಕನ್ನಡಪರ ಸಂಘಟನೆಗಳು ಎಚ್ಡಿಕೆ ವಿರುದ್ಧ ಕಿಡಿಕಾರಿವೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ರೈತಪರ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್, ಯಡಿಯೂರಪ್ಪನವರ ಜೊತೆ ನಿಮ್ಮ ಡೀಲ್ ಎಷ್ಟಕ್ಕೆ? ಎಷ್ಟು ಜನರನ್ನು ಮಾರಾಟಕ್ಕೆ ಇಟ್ಟಿದ್ದೀರಿ? ನೂರಕ್ಕೆ ನೀರು ಇದು ಡೀಲ್ ರಾಜಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.
ಭೂಸ್ವಾಧೀನ ಕಾಯ್ದೆ ಜಾರಿಗೆ ತಂದಿದ್ದು ಕುಮಾರಸ್ವಾಮಿ. ಕುಮಾರಸ್ವಾಮಿ ರೈತರ ಹೆಸರು ಹೇಳಿಕೊಂಡು ಅಚ್ಚುಕಟ್ಟಾಗಿ ಅಧಿಕಾರ ಅನುಭವಿಸಿದ್ದಾರೆ. ದೇವೇಗೌಡ್ರು ಕರೆದು ಬುದ್ದಿ ಹೇಳಬೇಕಿತ್ತು. ಕುಮಾರಸ್ವಾಮಿ ಪುಟಗೋಸಿ ರಾಜಕಾರಣ ಮಾಡೋಕೆ ಇರೋದು ಎಂದು ಹರಿಹಾಯ್ದರು.
‘ಬಣ್ಣ ಬದಲಾಯಿಸಿದ’ ಜೆಡಿಎಸ್ ವಿರುದ್ಧ ಕರವೇ ಆಕ್ರೋಶ; ರೈತರ ಚಾಟಿ ಜೊತೆಗೆ ಕರವೇ ಪ್ರತಿಭಟನೆ
ಇದು ಕುಮಾರಸ್ವಾಮಿಯವರ ಕೊನೆಯ ರಾಜಕಾರಣ. ಅವರು ರೈತರ ಬಾಯಿಗೆ ಮಣ್ಣು ಹಾಕಿದ್ದಾರೆ. ಅದನ್ನು ನಿಧಾನಕ್ಕೆ ಮಾಡಿದ್ರೆ ಏನು ಪ್ರಯೋಜನ? ರೈತರ ಸಾಲಮನ್ನಾ ಅವರ ಕಮಿಟ್ಮೆಂಟ್, ಅದನ್ನು ಮಾಡ್ಬೇಕಿತ್ತು ಅಷ್ಟೇ ಎಂದು ಕಿಡಿಕಾರಿದರು.
ಇನ್ನು, ರೈತ ಪ್ರತಿಭಟನೆ ಬಗ್ಗೆ ಮುಖ್ಯಮಂತ್ರಿಗಳು ನಿಜವಾಗ್ಲೂ ಮಾತಾಡ್ತಿದಾರಾ, ಸ್ಪಷ್ಟತೆ ಕೊಡ್ತಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಾತುಕತೆ ಏನಿದೆ? ಅವರ ವಾದ ಅವ್ರು ಬಿಡ್ತಿಲ್ಲ.ಮಾಡೋದೇ ಮಾಡ್ತಿದಾರೆ ಸಿಎಂ. ಚಳುವಳಿ ನಡೆಯುವಾಗಲೇ ಭೂಸುಧಾರಣಾ ಕಾಯ್ದೆ ಅಂಗೀಕಾರ ಯಾಕೆ ಮಾಡಿದ್ರು? ಎಂದು ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನಿಸಿದರು.
Published by:
Latha CG
First published:
December 9, 2020, 1:07 PM IST