HOME » NEWS » State » KODIHALLI CHANDRASHEKAR ASKS CM BS YEDIYURAPPA TO PENDING PAYMENT OF SUGARCANE FACTORIES BAGALKOTE LG

ಕಬ್ಬು ಬಿಲ್ ಕೊಡಿ ಎಂದು ಹೇಳುವುದಕ್ಕೆ ಧೈರ್ಯ ಇಲ್ಲವೇ ಸಿಎಂ ಯಡಿಯೂರಪ್ಪನವರೇ?; ಕೋಡಿಹಳ್ಳಿ ಚಂದ್ರಶೇಖರ್ ಕಿಡಿ

ಸರ್ಕಾರಗಳು ದಿನದಿಂದ ದಿನಕ್ಕೆ ರೈತರನ್ನು ಮರೆಯುತ್ತಿವೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆಯಿಂದ ಮುಂದಿನ 10ವರ್ಷದಲ್ಲಿ  ಹಳ್ಳಿಯಿಂದ 50ಕೋಟಿ ಜನರನ್ನು ಆಚೆ ತಳ್ಳಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

news18-kannada
Updated:October 19, 2020, 9:42 AM IST
ಕಬ್ಬು ಬಿಲ್ ಕೊಡಿ ಎಂದು ಹೇಳುವುದಕ್ಕೆ ಧೈರ್ಯ ಇಲ್ಲವೇ ಸಿಎಂ ಯಡಿಯೂರಪ್ಪನವರೇ?; ಕೋಡಿಹಳ್ಳಿ ಚಂದ್ರಶೇಖರ್ ಕಿಡಿ
ಸಭೆ
  • Share this:
ಬಾಗಲಕೋಟೆ (ಅಕ್ಟೋಬರ್ 18) : ನಿಮ್ಮ ಯೋಗ್ಯತೆ ಚೆಕ್ ಮಾಡಿಕೊಳ್ಳಿ ಯಡಿಯೂರಪ್ಪನವರೇ. ನಿಮ್ಮ ಶಿಷ್ಯರು ಬಹಳ‌ ಜನ  ಸಕ್ಕರೆ ಕಾರ್ಖಾನೆ ಮಾಲೀಕರಿದ್ದಾರೆ. ಬರಗಾಲ, ಪ್ರವಾಹ, ಕೊರೋನಾದಿಂದ ರೈತರಿಗೆ ನಷ್ಟದ ಮೇಲೆ ನಷ್ಟ ಆಗಿದೆ. 24ಗಂಟೆಯೊಳಗೆ ಬಾಕಿ ಬಿಲ್ ಚುಫ್ತಾ ಮಾಡಿ ಅಂತ ಹೇಳುವುದಕ್ಕೆ ಧೈರ್ಯ ಇಲ್ವಾ ಮಿಸ್ಟರ್​​ ಯಡಿಯೂರಪ್ಪನವರೆ ಎಂದು ಮುಧೋಳದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ನಗರದಲ್ಲಿ ರಾಜ್ಯ ರೈತ ಸಂಘ,ಹಸಿರು ಸೇನೆ, ಹಾಗೂ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಪ್ರಸಕ್ತ ಹಂಗಾಮಿಗೆ ಕಬ್ಬು ದರ, ಹಾಗೂ ಬಾಕಿ ಬಿಲ್ ಗೆ ಆಗ್ರಹಿಸಿ ಬೃಹತ್ ರೈತರ ಸಭೆ ನಡೆಯಿತು. ಸಭೆಯಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ಕಾರಗಳು ದಿನದಿಂದ ದಿನಕ್ಕೆ ರೈತರನ್ನು ಮರೆಯುತ್ತಿವೆ. ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆಯಿಂದ ಮುಂದಿನ 10ವರ್ಷದಲ್ಲಿ  ಹಳ್ಳಿಯಿಂದ 50ಕೋಟಿ ಜನರನ್ನು ಆಚೆ ತಳ್ಳಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ಕೊರೋನಾ ಹೋಗಿದೆ, ಯಾರು ಭಯಪಡಬೇಡಿ. ಯಾರೂ ಹೆದರಿಕೊಂಡು ಜೀವ ಬಿಡಬೇಡಿ. ವೈರಾಣು ನೂರು ವರ್ಷಕ್ಕೆ, ಇನ್ನೂರು ವರ್ಷಕ್ಕೆ ಭೂಮಿ ಮೇಲೆ ಬರ್ತಾನೆ ಇದೆ. ನಮಗೆ ಗೊತ್ತಾಗ್ತಿಲ್ಲ, ಅದು ಹೋಗ್ತಾನೆ ಇತ್ತು. ಈಗಲೂ ಕೊರೋನಾ ಬಂದಿದೆ, ಎಪ್ಪತ್ತೈದು ಭಾಗ ಹೋಗಾಗಿದೆ ಎಂದು ಮುಧೋಳದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಾತ್ಸಾರದ ಮಾತುಗಳನ್ನಾಡಿದ್ದಾರೆ.

ಕೋಲಾರದ ಬಂಗಾರಪೇಟೆ ಟಿಎಪಿಎಂಸಿ ಚುನಾವಣೆ:ಕಾಂಗ್ರೆಸ್​-ಬಿಜೆಪಿ ಮೇಲುಗೈ; ಜೆಡಿಎಸ್​​ಗೆ ತೀವ್ರ ಮುಖಭಂಗ

ಇನ್ನು ಸಭೆಯಲ್ಲಿ ಪ್ರಸಕ್ತ ಹಂಗಾಮಿಗೆ ಕಬ್ಬಿಗೆ 3500ದರ ನಿಗದಿಪಡಿಸಿಬೇಕು. ಜೊತೆಗೆ ಬಾಕಿ ಬಿಲ್ ಪಾವತಿಸುವರೆಗೂ ಕಾರ್ಖಾನೆಗಳಿಗೆ ಕಬ್ಬು ಪೂರೈಸೋದಿಲ್ಲವೆಂದು ಕಬ್ಬು ಬೆಳೆಗಾರರು ರೈತರ  ಬೃಹತ್ ಬಹಿರಂಗ ಸಭೆಯಲ್ಲಿ ಹಕ್ಕೊತ್ತಾಯ ಮಂಡಿಸಿದ್ದಾರೆ. ಸಭೆಯಲ್ಲಿ ಐದುನೂರಕ್ಕೂ ಹೆಚ್ಚು  ರೈತರು ಭಾಗಿಯಾಗಿದ್ದರು. ಆದರೆ ಸಭೆಯಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತು. ರೈತರು ಹಸಿರು ಶಾಲು ಬೀಸುವ ಮೂಲಕ ಕಬ್ಬಿಗೆ ದರ ನಿಗದಿಯಾಗಬೇಕೆಂದು ಎಚ್ಚರಿಕೆ ನೀಡಿದರು.

ಶುಗರ್ಸ್ ಲಾಬಿ ನೆಲದಲ್ಲಿ ರೈತರ ಶಕ್ತಿ ಪ್ರದರ್ಶನ

ಉತ್ತರ ಕರ್ನಾಟಕದಲ್ಲಿ ಮುಧೋಳ ಕಬ್ಬು ಬೆಳೆಗಾರರ ಹೋರಾಟದಿಂದ ಗಮನ ಸೆಳೆದಿದೆ. ಜೊತೆಗೆ ಅತೀ ಹೆಚ್ಚು ಕಬ್ಬು ಬೆಳೆಯಲಾಗುತ್ತೆ. ಸಕ್ಕರೆ ಕಾರ್ಖಾನೆಗಳ ವಿರುದ್ಧ ರೈತರು ಪ್ರತಿ ವರ್ಷ ಬಾಕಿ ಬಿಲ್, ದರ ನಿಗದಿಗಾಗಿ ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರೆ. ಆದರೆ ಸಕ್ಕರೆ ಕಾರ್ಖಾನೆಗಳ ಲಾಬಿಯಿಂದ ರೈತರಿಗೆ ಸರಿಯಾಗಿ ಬೆಲೆ, ಬಾಕಿ ಬಿಲ್ ದೊರೆಯುತ್ತಿಲ್ಲ‌‌. ಹೀಗಾಗಿ ಕಬ್ಬು ಬೆಳೆಗಾರರು ಬೃಹತ್ ಬಹಿರಂಗ ಸಭೆ ಮೂಲಕ ಸರ್ಕಾರ, ಶುಗರ್ಸ್ ಲಾಬಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಇನ್ನು ಸಭೆಯಲ್ಲಿ  ಪ್ರಸಕ್ತ ಹಂಗಾಮಿಗೆ  ಪ್ರತಿ ಟನ್ ಕಬ್ಬಿಗೆ  3500ದರ ನಿಗದಿ ಮಾಡಬೇಕು. ಬಾಕಿ ಬಿಲ್ ಕೊಡ್ಬೇಕು ಅಲ್ಲಿಯವರೆಗೂ ಕಾರ್ಖಾನೆಗಳಿಗೆ ಕಬ್ಬು  ಪೂರೈಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು‌ ‌.ಜೊತೆಗೆ ರೈತರು ಸಕ್ಕರೆ ಕಾರ್ಖಾನೆ ಹಾಗೂ ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶನ ಮಾಡಿದರು. ಈ ಮೂಲಕ ಕಬ್ಬು ದರ ನಿಗದಿ, ಬಾಕಿ ಬಿಲ್ ಕೊಡದಿದ್ದರೆ ಸಕ್ಕರೆ ಕಾರ್ಖಾನೆ ಆರಂಭಿಸುವುದಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ‌.
Youtube Video

ಸಭೆಯಲ್ಲಿ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬ್ಳೆ,ರೈತ ಮುಖಂಡರಾದ ಸುಭಾಶ್ ಶಿರಬೂರ, ಕೆಟಿ ಪಾಟೀಲ್, ದಯಾನಂದ ಪಾಟೀಲ್ ಸೇರಿದಂತೆ ರೈತರು,ರೈತ ಮುಖಂಡರು ಭಾಗಿಯಾಗಿದ್ದರು.
Published by: Latha CG
First published: October 19, 2020, 9:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories