Kodimutt Shri: ಜಲಗಂಡಾಂತರ ಕಾಡುತ್ತೆ, ಕೊರೊನಾ ಇನ್ನೂ ಹೆಚ್ಚಾಗುತ್ತೆ: ಕೋಡಿಮಠದ ಸ್ವಾಮೀಜಿ ಭವಿಷ್ಯ

ಆಶ್ವೀಜ ಮಾಸ ನಂತರ ಸಂಕ್ರಾಂತಿ ಒಳಗೆ ದೊಡ್ಡ ಅವಘಡ ಆಗಲಿದೆ.ರಾಷ್ಟ್ರ ಮಟ್ಟದ ದೊಡ್ಡ ಅವಘಡ ಆಗಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಸ್ವಾಮೀಜಿ ಭವಿಷ್ಯ ನುಡಿದರು.

ಕೋಡಿಮಠ ಶ್ರೀ

ಕೋಡಿಮಠ ಶ್ರೀ

  • Share this:
ಕೋಲಾರ : ರಾಜ್ಯದಲ್ಲಿ ಕೊರೊನಾ 2ನೇ ಅಲೆ ತಗ್ಗಿದೆಯಾದರೂ ಡೆಲ್ಟಾ ಪ್ಲಸ್​​, 3ನೇ ಅಲೆ ಭೀತಿ ಶುರುವಾಗಿದೆ. ಇನ್ನು ಮುಂಗಾರು ಅಬ್ಬರದಿಂದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಕರ್ನಾಟಕಕ್ಕೆ ನೂತನ ಸಾರಥಿಯಾಗಿ ಬಸವರಾಜ ಬೊಮ್ಮಾಹಿ ಆಡಳಿತನ ಚುಕ್ಕಣಿ ಹಿಡಿದಿದ್ದಾರೆ. ಆದರೆ ಸಂಪುಟ ಇನ್ನೂ ರಚನೆಯಾಗಿಲ್ಲ. ಈ ಅನಿಶ್ಚಿತತೆ ಮಧ್ಯೆ ಅರಸೀಕೆರೆ ಹಾರನಹಳ್ಳಿಯ ಕೋಡಿ ಮಠದ ಸ್ವಾಮೀಜಿ ನುಡಿದಿರುವ ಭವಿಷ್ಯ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ರಾಜ್ಯದಲ್ಲಿ ಜಲಗಂಡಾಂತರಗಳು ಹೆಚ್ಚಾಗುತ್ತವೆ. ಕೊರೊನಾ ಮತ್ತೆ ಜನರನ್ನು ಕಾಡುತ್ತೆ ಎಂಬ ಕೋಡಿಹಳ್ಳಿ ಶ್ರೀ ಭವಿಷ್ಯ ಅವರ ಭಕ್ತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಆಶ್ವೀಜ ಮಾಸ ನಂತರ ಸಂಕ್ರಾಂತಿ ಒಳಗೆ ದೊಡ್ಡ ಅವಘಡ ಆಗಲಿದೆ.ರಾಷ್ಟ್ರ ಮಟ್ಟದ ದೊಡ್ಡ ಅವಘಡ ಆಗಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಸ್ವಾಮೀಜಿ ಭವಿಷ್ಯ ನುಡಿದರು. ಮಠಾಧೀಶರು, ನಾಯಕರು ಬೀದಿಗೆ ಬಂದು ಹೋರಾಟ ಮಾಡಿದ್ರು. ರಾಜ ಮಹರಾಜರಿಂದ ಗುರುಗಳಿಗೆ ಬೆಲೆ ಇದೆ. ಆದ್ರೆ ಗುರುಗಳಿಗೆ ನೋವಾಗುವಂತೆ ನಡೆದುಕೊಂಡಿದ್ದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಕೆಂದ್ರದ ನಾಯಕರು ಬಂದು ಗುರುಗಳಿಗೆ ಆಶ್ವಾಸನೆ ಕೊಡಬಹುದಿತ್ತು.ಆದ್ರೆ ಮಠಾಧೀಶರಿಗೆ ಅಗೌರವ ತೋರಿದ್ದೀರ. ಮಠಾಧೀಶರು ರಾಜಕಾರಣ ಮಾಡಿಲ್ಲ, ಬದಲಾಗಿ ಇದು ಸಂದರ್ಭ ಅಲ್ಲ ಎಂದ್ರು. ಹಿಂದೆ ರಾಜರ ಕಾಲದಲ್ಲಿ ಸಿಂಹಾಸನದ ಪಕ್ಕ ಕೂರುತ್ತಿದ್ರು‌. ಶ್ರೀರಾಮಚಂದ್ರ, ಪಾಂಡವರು, ಅತಿರಥ ಮಹಾರಾಜರು ಗುರುಗಳ ಸಲಹೆ ಪಡೆಯುತ್ತಿದ್ರು.  ದ್ರೆ ಮಠಾದೀಶರ ಅಹವಾಲನ್ನು ಆಲಿಸಲೇ ಇಲ್ಲ ಇದು ಬೇಸರ ತಂದಿದೆ ಎಂದರು.

ಹಿಂದೂ ರಾಷ್ಟ್ರ ಎಂದ್ರೆ ಖಾವಿ, ಅದಕ್ಕೆ ಬೆಲೆ ಇಲ್ಲದಂಗೆ ಮಾಡಿದ್ರು. ಸ್ವಾಮೀಜಿಗಳು ಮಾಡಿದ್ದು ಸರಿಯಲ್ಲ ಎಂದು ಸಮರ್ಥನೆ ಮಾಡಿಲ್ಲ, ನಾನು ಒಪ್ಪುವುದು ಇಲ್ಲ. ಹಿಂದುತ್ವ ಅಂತಿರ ಅದರ ಮೇಲೆ ಅಧಿಕಾರ ತೆಗೆದುಕೊಂಡ್ರಿ. ಬಿಜೆಪಿ, ಕಾಂಗ್ರೇಸ್ ಪ್ರಶ್ನೆ ಅಲ್ಲ, ಮಠಾದೀಶರಿಗೆ ಅವಮಾನ ಮಾಡಿದ್ದೀರ. ಕೇಂದ್ರದ ನಾಯಕರು ಬಂದು ತೀರ್ಮಾನ ಮಾಡಬಹುದಿತ್ತು. ಈ ಸಂಸ್ಕೃತಿ ಬೆಳೆಯಬಾರದು, ಖಾವಿಗಳಿಗೆ ಈ ದೇಶದಲ್ಲಿ ಏನು ಬೆಲೆ ಇದೆ ಎಂದು ಆಕ್ರೋಶದಿಂದ ಪ್ರಶ್ನಿಸಿದರು. ಇನ್ನು ನೂತನ ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ಈಗಲೇ ಏನೂ ಹೇಳುವುದು ಸರಿಬರಲ್ಲ ಎಂದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: