HOME » NEWS » State » KODI HALLI CHANDRASHEKHAR SLAMS AT MINISTER BC PATIL IN FARMERS PROTEST ISSUE MAK

Farmers Protest: ರೈತರು ಭಯೋತ್ಪಾಕರೇ, ಹೊಟ್ಟೆಗೆ ಅನ್ನ ತಿನ್ನೋ ಜನ ಆಡೋ ಮಾತುಗಳೇ ಇವು?; ಕೋಡಿಹಳ್ಳಿ ಚಂದ್ರಶೇಖರ್​ ಕಿಡಿ

ಕೊಪ್ಪಳದಲ್ಲಿ ಹೇಳಿಕೆ ನೀಡಿದ್ದ ಸಚಿವ ಬಿ.ಸಿ. ಪಾಟೀಲ್, ಇದು ರೈತರ ಪ್ರತಿಭಟನೆಯಲ್ಲ ಬದಲಿಗೆ ಭಯೋತ್ಪಾದಕರ ಕೃತ್ಯ. ಇದರ ಹಿಂದೆ ಕಲಿಸ್ತಾನಿಗಳು ಮತ್ತು ಕಾಂಗ್ರೆಸ್​ ಕೈವಾಡವಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

news18-kannada
Updated:January 26, 2021, 6:04 PM IST
Farmers Protest: ರೈತರು ಭಯೋತ್ಪಾಕರೇ, ಹೊಟ್ಟೆಗೆ ಅನ್ನ ತಿನ್ನೋ ಜನ ಆಡೋ ಮಾತುಗಳೇ ಇವು?; ಕೋಡಿಹಳ್ಳಿ ಚಂದ್ರಶೇಖರ್​ ಕಿಡಿ
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​.
  • Share this:
ಬೆಂಗಳೂರು (ಜನವರಿ 26); "ಬಿಜೆಪಿ ನಾಯಕರು ರೈತರಿಗೆ ಪಾಕಿಸ್ತಾನ, ಖಲಿಸ್ತಾನಿಗಳ ಬೆಂಬಲ ಇದೆ ಅಂತ ಬೊಬ್ಬೆ ಇಡೋಕೆ‌ ಶುರುಮಾಡಿದ್ದಾರೆ. ರೈತರನ್ನೇ ದೇಶದ್ರೋಹಿಗಳು ಅಂತ ಕರೆಯೋ ಕಾಲ ಬಂದಿದೆ. ರೈತರಿಗೆ ಪಾಕಿಸ್ತಾನದ ನಂಟು ಅಂತ ಆರೋಪ ಹೊರಿಸುತ್ತಿದ್ದಾರೆ. ಇದು ಹೊಟ್ಟೆಗೆ ಅನ್ನ ತಿನ್ನೋ ಜನರು ಆಡೋ ಮಾತುಗಳೇ? ನಿಮಗೆ ಎಲ್ಲಿಲ್ಲದ ದುರಹಂಕಾರ ಬರೋಕೆ ಕಾರಣ ರೈತರೇ. ಹೊತ್ತು ಬಿತ್ತು ಅನ್ನ ಹಾಕಿದ್ದೀವಲ್ವಾ.? ಅದಕ್ಕೆ ಹೀಗೆ ಮಾತನಾಡುತ್ತಿದ್ದೀರ. ಇನ್ನೂ ನಮ್ಮ ಕೃಷಿ ಮಂತ್ರಿಗೆ ನೆಟ್ಟಗೆ ಮಾತಾಡೋಕೆ ಬರಲ್ಲ. ಇಂಥವರನ್ನು ಯಡಿಯೂರಪ್ಪ ಕ್ಯಾಬಿನೆಟ್​ನಲ್ಲಿ ಇಟ್ಟುಕೊಂಡಿದ್ದಾರೆ. ರೈತರು ಹೋರಾಟ ಮಾಡಿದ್ರೆ ಅಂಥವರ ವಿರುದ್ಧ ಹರಕಲು ಬಾಯಿ ಸಚಿವರನ್ನು ಮುಂದೆ ಬಿಡ್ತಾರೆ. ಯಡಿಯೂರಪ್ಪನವರೇ ಎಚ್ಚರಿಕೆ ಇರಲಿ, ನಿಮ್ಮ ಸಚಿವರು ಬೇಕಾ ಬಿಟ್ಟಿ ಮಾತನಾಡಿದರೆ ನಿಮ್ಮ ಮರಿಯಾದೆಯನ್ನು ನೀವೇ ಕಳೆದುಕೊಳ್ತೀರಿ" ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಇಂದು ದೇಶದಾದ್ಯಂತ ರೈತ ಹೋರಾಟ ಹಮ್ಮಿಕೊಳ್ಳಲಾಗಿದೆ. ದೆಹಲಿಯಲ್ಲಿ ರೈತರು ಕೆಂಪುಕೋಟೆಯನ್ನು ವಶಕ್ಕೆ ಪಡೆದಿದ್ದಾರೆ. ಇದರ ಬೆನ್ನಿಗೆ ಕೊಪ್ಪಳದಲ್ಲಿ ಹೇಳಿಕೆ ನೀಡಿದ್ದ ಸಚಿವ ಬಿ.ಸಿ. ಪಾಟೀಲ್, "ಇದು ರೈತರ ಪ್ರತಿಭಟನೆಯಲ್ಲ ಬದಲಿಗೆ ಭಯೋತ್ಪಾದಕರ ಕೃತ್ಯ. ಇದರ ಹಿಂದೆ ಕಲಿಸ್ತಾನಿಗಳು ಮತ್ತು ಕಾಂಗ್ರೆಸ್​ ಕೈವಾಡವಿದೆ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಸಚಿವರ ಈ ಹೇಳಿಕೆಗೆ ರಾಜ್ಯದ ವಿವಿಧ ರೈತ ಸಂಘಟನೆಗಳು ಇಂದು ಒಂದಾಗಿ ಸಂಯುಕ್ತ ಹೋರಾಟ ಕರ್ನಾಟಕ ಹೆಸರಿನಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಮಾವೇಶದಲ್ಲಿ ಕಿಡಿಕಾರಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​, "ರೈತ ಹೋರಾಟಗಾರರು ಸ್ವಾಭಿಮಾನಿಗಳು. ಆದರೆ, ಕೆಲ ಬಿಜೆಪಿ ನಾಯಕರು ರೈತರನ್ನು ಭಯೋತ್ಪಾದಕರಿಗೆ ಹೋಲಿಸುತ್ತಿದ್ದಾರೆ. ರೈತ ಹೋರಾಟಗಾರರಿಗೆ ಖಲಿಸ್ತಾನಿಗಳ ಮತ್ತು ಪಾಕಿಸ್ತಾನಿಗಳ ಸಹಾಯವಿದೆ ಎಂದು ಆಧಾರವಿಲ್ಲದೆ ಬೊಬ್ಬೆ ಹೊಡೆಯುತ್ತಿದ್ದಾರೆ.

ಅಸಲಿಗೆ ಇದು ಹೊಟ್ಟೆಗೆ ಅನ್ನ ತಿನ್ನೋ ಜನರು ಆಡೋ ಮಾತುಗಳೇ? ನಿಮಗೆ ಎಲ್ಲಿಲ್ಲದ ದುರಹಂಕಾರ ಬರೋಕೆ ಕಾರಣ ರೈತರೇ. ಹೊತ್ತು ಬಿತ್ತು ಅನ್ನ ಹಾಕಿದ್ದೀವಲ್ವಾ.? ಅದಕ್ಕೆ ನಮ್ಮದೇ ಅನ್ನ ತಿಂದು ನಮ್ಮನ್ನೇ ಭಯೋತ್ಪಾದಕರು ಎಂದು ಹೀಯಾಳಿಸುತ್ತೀರಾ? ಮಾಜಿ ಪ್ರಧಾನಿ ದಿವಂಗತ ಇಂದಿರ ಗಾಂಧಿಯೂ ರೈತರಿಗೆ ಅನ್ಯಾಯ ಮಾಡಿದ್ದಾರೆ. ಈಗ ಅದನ್ನೇ ನರೇಂದ್ರ ಮೋದಿಯೂ ಮಾಡ್ತುದ್ದಾರೆ ರೈತರ ಕತ್ತು ಹಿಡಿದು ಹೊರಗೆ ತಳ್ಳೋ ದೃಶ್ಯಗಳನ್ನು ನಾವಿಂದು ನೋಡುತ್ತಿದ್ದೇವೆ. ಮೋದಿಯವರ ಮಂಕಿಬಾತ್ ನಲ್ಲಿ‌ ಒಂದು ಮಾತಾದಾರೂ ರೈತರ ಬಗ್ಗೆ ಮಾತಾಡಿದ್ದಾರಾ..?" ಎಂದು ಕೋಡಿಹಳ್ಳಿ ಚಂದ್ರಶೇಕರ್​ ಕಿಡಿಕಾರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ವಾಗ್ದಾಳಿ ನಡೆಸಿರುವ ಕೋಡಿಹಳ್ಳಿ ಚಂದ್ರಶೇಖರ್​, "ಈ ಸರ್ವಾಧಿಕಾರಿಯ ಧೋರಣೆ ಇನ್ಮುಂದೆ ನಡೆಯಲ್ಲ ಮೋದಿಯವರೇ. ಸ್ವಲ್ಪ ಹದ್ದುಬಸ್ತಿನಲ್ಲಿ ಇರೋದು ನಿಮಗೆ ಒಳ್ಳೆಯದು. ಈಸ್ಟ್ ಕಂಪೆನಿಯಿಂದ ದೇಶದವನ್ನು ವಾಪಾಸ್ ಪಡೆಯಲು ಬಹಳ ಹೋರಾಟ ನಡೆದಿದೆ. ಈಗ ನೀವು ತಿರುಗಿ ಕಾರ್ಪೋರೇಟ್ ಕಂಪೆನಿಗಳಿಗೆ ವಾಪಾಸ್ ಕೊಡಲು ಹೊರಟಿದ್ದೀರಾ..? ಮೋದಿಯವರೇ ನಿಮ್ಮ ಅಪ್ಪನದ್ದಲ್ಲ ದೇಶ... ನಮ್ಮ ಅಪ್ಪಂದಿರು ದುಡಿದು ಬೆವರು ಹರಿಸಿದ ದೇಶ ಇದು. ಹೀಗಾಗಿ ನಿಮ್ಮ ಹಿಟ್ಲರ್ ಆಡಳಿತವನ್ನು ನಿಲ್ಲಿಸಿ. ಇಲ್ಲದಿದ್ದರೆ, ಅನುಭವಿಸುತ್ತೀರಿ" ಎಂದು ಕಿಡಿಕಾರಿದ್ದಾರೆ.

ಗೋಹತ್ಯೆ ಕಾಯ್ದೆ ವಿರುದ್ಧವೂ ಆಕ್ರೋಶ ಹೊರಹಾಕಿರುವ ಕೋಡಿಹಳ್ಳಿ ಚಂದ್ರಶೇಖರ್, "ಜಾನುವಾರು ಹತ್ಯೆ ಕಾಯ್ದೆಗಳನ್ನು ತಂದಿದ್ದಾರೆ. ನಾವು ಹಸು ಹತ್ತುಗಳನ್ನು ಪೂಜೆ ಮಾಡುವವರೇ. ಆದರೆ, ಅದನ್ನು ಹತ್ಯೆ ಮಾಡಬೇಡಿ ಅಂದ್ರೆ ನಮ್ಮ ಜೀವನ ಏನಾಗಬೇಡ..? ಹಸು ಗಳ ಪೋಷಣೆ ಮಾಡ್ತೀವಿ, ಅದಕ್ಕೆ ಮುಲಾಮು ಹಚ್ಚ್ತೀವಿ, ಅದನ್ನೆ ನೋಡಿಕೊಳ್ತೀವಿ. ಹಾಗಾಗಿ ನಿಮ್ಮ ಗೋ ಹತ್ಯೆ ನಿಷೇಧ ಅನ್ನೋದೆಲ್ಲಾ ಬೇಡ. ವಿಧಾನಸೌದದಲ್ಲಿ ಕೂತು ಕಾನೂನು ಪಾಸ್ ಮಾಡಿದರೆ ಅದನ್ನು ನಾವು ಒಪ್ಪಿಕೊಳ್ಳುವುದಿಲ್ಲ" ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Farmers Protest: ಇದು ರೈತ ಹೋರಾಟವಲ್ಲ, ಭಯೋತ್ಪಾದಕರ ಕೃತ್ಯ ಇದರ ಹಿಂದೆ ಕಲಿಸ್ತಾನಿಗಳ ಕೈವಾಡವಿದೆ; ಸಚಿವ ಬಿ.ಸಿ. ಪಾಟೀಲ್ಇದೇ ಸಂದರ್ಭದಲ್ಲಿ ದೆಹಲಿ ರೈತ ಹೋರಾಟದ ಬಗ್ಗೆಯೂ ಮಾತನಾಡಿರುವ ಅವರು, "ದೆಹಲಿಯಲ್ಲಿ ರೈತರು ಜಗತ್ತಿನ ಇತಿಹಾಸದಲ್ಲಿ ಮರೆಯಾಗದೆ ಉಳಿಯುವಂತಹ ದಾಖಲೆ ಮಾಡಿದ್ದಾರೆ. ಲಕ್ಷಾಂತರ ಟ್ರ್ಯಾಕ್ಟರ್ ಗಳನ್ನು ತಂದು ಚಳುವಳಿ ಮಾಡಿದ್ದಾರೆ. ಇದು ರೈತರ ಇತಿಹಾಸದಲ್ಲೇ ಅತಿ ದೊಡ್ಡ ಹೋರಾಟ. ದೆಹಲಿಯಲ್ಲಿ ಅಹಿತಕರ ಘಟನೆ ನಡೆದಿದೆ. ದೆಹಲಿಯಲ್ಲಿ ರೈತರು ಅಕ್ಷಮ್ಯ ಅಪರಾಧ ಮಾಡಿದ್ದಾರೆ ಅಂತ ಸುದ್ದಿ ಹಬ್ಬಿದೆ. ಆದರೆ, ತಾಳ್ಮೆಗೆ ಇತಿಮಿತಿ ಅನ್ನೋದು ಇರುತ್ತದೆ.

ಆದರೆ ತಾಳ್ಮೆಯ ಕಟ್ಟೆ ಹೊಡೆದರೆ ಏನಾಗುತ್ತೆ ಅನ್ನೋದಕ್ಕೆ ದೆಹಲಿಯ ರೈತರ ಹೋರಾಟ ಉದಾಹರಣೆ. ರೈತರ ವಿರೋಧಿ ಕಾಯ್ದೆಗಳನ್ನು ವಾಪಾಸ್ ಪಡೆಯಿರಿ. ಕಾನೂನುಗಳನ್ನು ಅಮಾನಾತು ಮಾಡಿದ್ದೇವೆ ಅಂತ ಹೇಳಿ. ಆಗ ಎಲ್ಲವೂ ತಣ್ಣಗಾಗಲಿದೆ, ಇಲ್ಲದಿದ್ದರೆ ಈ ರೈತ ಹೋರಾಟ ನಿಲ್ಲುವುದಿಲ್ಲ" ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
Published by: MAshok Kumar
First published: January 26, 2021, 6:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories