ಕೊಡವ ಸಂಪ್ರದಾಯದಂತೆ ಸಲಿಂಗ ವಿವಾಹವಾದ ಯುವಕನ ವಿರುದ್ಧ ಆಕ್ರೋಶ 

ಶರತ್ ಪೊನ್ನಪ್ಪ ವಿರುದ್ಧ ತೀವ್ರ ಟೀಕಾಪ್ರಹಾರವೇ ಹರಿದಿದೆ. ಇನ್ನು ಕೊಡವ ಸಾಂಪ್ರದಾಯಿಕ ತೊಡುಗೆ ಮತ್ತು ಓಲಗಗಳನ್ನು ಬಳಸಿರುವುದಕ್ಕೆ ಕೊಡವ ಮುಖಂಡರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.

ಶರತ್ ಪೊನ್ನಪ್ಪ

ಶರತ್ ಪೊನ್ನಪ್ಪ

  • Share this:
ಮಡಿಕೇರಿ (ಅ.8): ಕೊಡಗಿನ ಸಂಪ್ರದಾಯ ಆಚರಣೆಗಳಿಗೆ ತನ್ನದೇ ಆದ ವಿಶೇಷ ಪ್ರಾತಿನಿಧ್ಯವಿದೆ. ಆದರೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಕೊಡಗಿನ ಯುವಕನೊಬ್ಬ ಕೊಡವ ಸಂಪ್ರದಾಯದಂತೆ ಸಲಿಂಗ ವಿವಾಹವಾಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೌದು, ಕೊಡಗಿನ ಶರತ್ ಪೊನ್ನಪ್ಪ ಉತ್ತರ ಭಾರತದ ಸಂದೀಪ್ ದೋಸಾಂಜ್ ಎಂಬಾತನನ್ನು ಕೊಡಗಿನ ಸಂಪ್ರದಾಯದಂತೆ ವಿವಾಹವಾಗಿ ಟೀಕೆಗೆ ಗುರಿಯಾಗಿದ್ದಾರೆ. ಕೊಡಗಿನ ಮೂಲದವನಾದ ಶರತ್ ಪೊನ್ನಪ್ಪ ಕಳೆದ 10 ವರ್ಷಗಳಿಂದ ಅಮೆರಿಕಾದ ಕ್ಯಾಲಿಪೋರ್ನಿಯಾದಲ್ಲೇ ಉದ್ಯೋಗ ನಿರತನಾಗಿದ್ದ. ಈ ವೇಳೆ ಉತ್ತರ ಭಾರತದವನಾದ ಸಂದೀಪ್ ದೋಸಾಂಜ್ ಎಂಬಾತನ ಪರಿಚಯವಾಗಿದೆ. ಪರಿಚಯ ಮೋಹಕ್ಕೆ ತಿರುಗಿ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ.

ಕಾನೂನಿನಲ್ಲಿ ಸಲಿಂಗ ವಿವಾಹಕ್ಕೆ ಅವಕಾಶ ಇದೇ ಆದರೂ ಕೊಡವ ಪೊಷಾಕು, ಕೊಡವ ಓಲಗಗಳನ್ನು ಬಳಸಿಕೊಂಡು ಕೊಡವರ ಸಂಪ್ರದಾಯದಂತೆ ವಿವಾಹವಾಗಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಸೆಪ್ಟೆಂಬರ್ 26 ರಂದು ಈ ಇಬ್ಬರು ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಅಲ್ಲದೆ ವಿವಾಹದ ಬಳಿಕ ರಿಸೆಪ್ಷನ್ ಕೂಡ ಆಚರಣೆ ಮಾಡಿಕೊಂಡಿದ್ದಾರೆ.

ಮದುವೆ ಮತ್ತು ರಿಸೆಪ್ಷನ್ ನಲ್ಲಿ ಕೊಡಗು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ವಿವಾಹವಾಗಿದ್ದಾರೆ. ಶರತ್ ಪೊನ್ನಪ್ಪ ಅಷ್ಟೇ ಅಲ್ಲ ಸಂದೀಪ್ ದೋಸಾಂಜ್ ನಿಗೂ ಕೂಡ ಕೊಡವ ಸಾಂಪ್ರಾದಯಿಕ ಉಡುಗೆ ತೊಡಿಸಲಾಗಿದೆ. ಈ ವೇಳೆ ಇಬ್ಬರು ಅದ್ಧೂರಿಯಾಗಿ ಫೋಟೋ ಶೂಟ್ ಕೂಡ ಮಾಡಿಕೊಂಡಿಸಿಕೊಂಡಿದ್ದಾರೆ. ಮದುವೆಗೆ ಸ್ನೇಹಿತರು, ಹಿತೈಷಿಗಳು ಭಾಗವಹಿಸಿ ಹಾರೈಸಿದ್ದಾರೆ.

ಈ ಎಲ್ಲಾ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇವರ ಮದುವೆಯ ವಿಡಿಯೋಗಳನ್ನು ನೋಡಿದ ಕೊಡವರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಜಾಲತಾಣದಲ್ಲೂ ಶರತ್ ಪೊನ್ನಪ್ಪ ವಿರುದ್ಧ ತೀವ್ರ ಟೀಕಾಪ್ರಹಾರವೇ ಹರಿದಿದೆ. ಇನ್ನು ಕೊಡವ ಸಾಂಪ್ರದಾಯಿಕ ತೊಡುಗೆ ಮತ್ತು ಓಲಗಗಳನ್ನು ಬಳಸಿರುವುದಕ್ಕೆ ಕೊಡವ ಮುಖಂಡರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ತಮ್ಮ ಆಚರಣೆ, ಉಡುಗೆ ತೊಡುಗೆಗಳಿಗೂ ವಿಶೇಷ ಗೌರವವಿದೆ. ಅದನ್ನು ಈ ಮದುವೆಯಲ್ಲಿ ಬಳಸಿಕೊಂಡು ಅಪಮಾನ ಮಾಡಲಾಗಿದೆ ಎಂದು ಕೊಡವ ಮುಖಂಡ ಎಂ.ಬಿ. ದೇವಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Published by:zahir
First published: