Kodava: ಕೊಡಗು ಜಿಲ್ಲೆಯಾದ್ಯಂತ ಸಂಭ್ರಮದಿಂದ ನಡೆದ ಕೈಲ್ ಪೊಳ್ದ್

ಬೇಟೆಯ ಪ್ರತೀಕವಾಗಿ ಪುರುಷರು ಮಹಿಳೆಯರಾದಿಯಾಗಿ ಎಲ್ಲರೂ ತಂಗಿನ ಕಾಯಿಗೆ ಗುಂಡು ಹಾರಿಸುವ ಮೂಲಕ ತಮ್ಮ ಬೇಟೆಯ ಆಚರಣೆಯನ್ನು ವ್ಯಕ್ತಪಡಿಸಿದರು. ಕೊನೆಯಲ್ಲಿ ಎಲ್ಲರೂ ಕೊಡವ ಸಾಂಪ್ರದಾಯಕ ಓಲಗಕ್ಕೆ ಸಾಮೂಹಿಕ ನೃತ್ಯ (Kodava Dance) ಮಾಡಿ ಸಂಭ್ರಮಿಸಿದರು.

ಕೊಡವರು

ಕೊಡವರು

  • Share this:
ಕೊಡಗು: ಕೃಷಿ ಚಟುವಟಿಕೆಗಳನ್ನು (Agriculture Activities) ಪೂರೈಸಿ ಆಯುಧಗಳನ್ನು ಸ್ವಚ್ಛಗೊಳಿಸಿದ ಕೊಡವರು (Kodavas)ಅವುಗಳನ್ನು ಒಂದೆಡೆ ಇಟ್ಟು ಭಕ್ತಿ ಭಾವದಿಂದ ಪೂಜಿಸಿದರು. ಆ ಮೂಲಕ ಕೈಲ್ ಪೊಳ್ದ್ (Kail Polda) ಅನ್ನು ಸಂಭ್ರಮದಿಂದ ಆಚರಿಸಿದರು. ಕೊಡವ ನ್ಯಾಷಲ್ ಕೌನ್ಸಿಲ್ (Kodava National Council) ಸಂಘಟನೆಯಿಂದ ನಡೆದ ಸಾರ್ವತ್ರಿಕ ಕೈಲ್ ಪೊಳ್ದ್ ಹಬ್ಬ ಸಂಭ್ರಮ ಸಡಗರದಿಂದ ಮಡಿಕೇರಿ (Madikeri) ಹೊರವಲಯದ ಖಾಸಗಿ ರೆಸಾರ್ಟಿನ ಮಂದ್‍ನಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು. ಮೊದಲು ನೆಲ್ಲಕ್ಕಿಯಲ್ಲಿ ಕೋವಿ, ಕತ್ತಿಗಳನ್ನು ಶುದ್ಧಗೊಳಿಸಿ ಇರಿಸಿ ಕಡುಂಬಟ್ಟು, ಪಂದಿಕರಿಯ ಎಡೆಯಿಟ್ಟು ನೆಲ್ಲಕ್ಕಿಗೆ ಅಕ್ಕಿ ಹಾಕಿ ಶ್ರದ್ಧಾಭಕ್ತಿಯಿಂದ ಪೂಜಿಸಿದ್ರು. ಬಳಿಕ ದುಡಿಕೊಟ್ಟುಪಾಟ್ ನೊಂದಿಗೆ ಕೋವಿ ಮತ್ತು ಒಡಿಕತ್ತಿಗಳನ್ನು ಹೆಗಲಿಗೇರಿಸಿ ಮೂರು ಸುತ್ತು ಮೆರವಣಿಗೆ ನಡೆಸಿದರು. ಬೇಟೆಯ (Hunting) ಸಂಕೇತವಾಗಿ ಕೊಡವ ನ್ಯಾಷಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಬಾಳೆ ಕಡಿದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ನೆಲ, ಜಲ ಸಂಸ್ಕೃತಿ ಮತ್ತು ನಾಡನ್ನು ರಕ್ಷಿಸುವಂತೆ ಇಬ್ಬರು ಯುವಕರಿಗೆ ದೀಕ್ಷೆ ನೀಡಿ ಅವರಿಂದಲೂ ಬಾಳೆ ಕಡಿಸಿದರು. ನಂತರ ಕೊಡವ ಸಾಂಪ್ರದಾಯಕ ಉಡುಗೆ (Kodava Traditional Dress) ತೊಟ್ಟ ಪುರುಷರು ಮೊದಲಿಗೆ ಚವರಿ ಆಟ್, ಕತ್ತಿಯಾಟ್ ಮತ್ತು ಪರಿಯಕಳಿ ಸೇರಿದಂತೆ ವಿವಿಧ ಕೊಡವ ಕಲೆಗಳನ್ನು (Kodava Arts) ಪ್ರದರ್ಶಿಸಿದರು.

ಸಾಮೂಹಿಕ ನೃತ್ಯ ಮಾಡಿ ಸಂಭ್ರಮ

ಬೇಟೆಯ ಪ್ರತೀಕವಾಗಿ ಪುರುಷರು ಮಹಿಳೆಯರಾದಿಯಾಗಿ ಎಲ್ಲರೂ ತಂಗಿನ ಕಾಯಿಗೆ ಗುಂಡು ಹಾರಿಸುವ ಮೂಲಕ ತಮ್ಮ ಬೇಟೆಯ ಆಚರಣೆಯನ್ನು ವ್ಯಕ್ತಪಡಿಸಿದರು. ಕೊನೆಯಲ್ಲಿ ಎಲ್ಲರೂ ಕೊಡವ ಸಾಂಪ್ರದಾಯಕ ಓಲಗಕ್ಕೆ ಸಾಮೂಹಿಕ ನೃತ್ಯ (Kodava Dance) ಮಾಡಿ ಸಂಭ್ರಮಿಸಿದರು.

ಇದನ್ನೂ ಓದಿ:  IT BT Shock: ಒಂದೇ ಮಳೆಗೆ ಸಿಲಿಕಾನ್ ಸಿಟಿ ಬರ್ಬಾದ್! 255 ಕೋಟಿ ನಷ್ಟ, ಐಟಿ ಕಂಪೆನಿಗಳಿಂದ ಬೆಂಗಳೂರು ತೊರೆಯುವ ಎಚ್ಚರಿಕೆ

ನಮ್ಮ ಹೋರಾಟ ನಿರಂತರ

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಎನ್.ಯು ನಾಚಪ್ಪ, ಜಗತ್ತಿನಲ್ಲೇ ಶ್ರೇಷ್ಠವಾಗಿರುವ ನಮ್ಮ ದೇಶದ ಸಂವಿಧಾನದಲ್ಲಿಯೇ ಅತ್ಯಂತ ಚಿಕ್ಕ ಸಮುದಾಯವಾಗಿರುವ ಕೊಡವರನ್ನು ರಕ್ಷಿಸುವುದು, ಅವರ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಕ್ಕೆ ಅವಕಾಶ ನೀಡಿದೆ. ಅವುಗಳನ್ನು ಯಥವತ್ತಾಗಿ ಜಾರಿ ಮಾಡುವಂತೆ ನಮ್ಮ ಸಂಘಟನೆ ಹಲವು ವರ್ಷಗಳಿಂದ ನಿರಂತರವಾಗಿ ಓಡಾಡುತ್ತಲೇ ಬಂದಿದೆ. ಅದು ಸಾಧ್ಯವಾಗಿಲ್ಲ, ಅವುಗಳೆನ್ನೆಲ್ಲಾ ಯಥವತ್ತಾಗಿ ಜಾರಿಯಾಗುವ ತನಕ ನಮ್ಮ ಹೋರಾಟ ನಿರಂತರವಾಗಿ ಮುಂದುವರಿದಿರುತ್ತದೆ ಎಂದು ಹೇಳಿದರು.

ಹೆಚ್ ವಿಶ್ವನಾಥ್ ಭಾಗಿ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ (BJP MLC H Vishwanath) ಅವರು ಮಾತನಾಡಿ, ಕೊಡವರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಪಕ್ಷಗಳು ಅವರ ಭಾಷೆ, ಸಂಸ್ಕೃತಿ ಅವರ ವಿಶೇಷ ಹಕ್ಕುಗಳನ್ನು ರಕ್ಷಿಸುವಲ್ಲಿ ಸೋತಿವೆ. ಕೊಡಗು (Kodagu) ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸುವಲ್ಲಿ ಕೈಚೆಲ್ಲಿವೆ. ಕೊಡಗಿನ ಶಾಸಕರಿಗೆ ಸಚಿವ ಸ್ಥಾನ ಕೊಡುವುದಕ್ಕೂ ಸರ್ಕಾರಗಳು ಹಿಂದು ಮುಂದು ನೋಡುತ್ತವೆ. ಹೀಗಾದರೆ ಕೊಡಗಿನ ಗಂಭೀರ ಸಮಸ್ಯೆಗಳನ್ನು ಗಟ್ಟಿಯಾಗಿ ಪ್ರತಿಪಾದಿಸುವುದು ಹೇಗೆ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ:  Dakshina Kannada: ಭೂಮಿಯಿಂದ ಚಿಮ್ಮುತ್ತೆ ಬಿಸಿನೀರಿನ ತೀರ್ಥ, ಇದರಿಂದ ಸ್ನಾನ ಮಾಡಿದ್ರೆ ಚರ್ಮರೋಗ ಮಾಯ!

ಕೊಡಗಿಗೆ ಪ್ರತ್ಯೇಕ ಸಂಸದರ ಸ್ಥಾನ ಅಗತ್ಯ

ಕೊಡಗು ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳಿದ್ದು, ಇಲ್ಲಿನ ನೆಲ ಜಲ ಸಂಸ್ಕೃತಿ ಉಳಿಯಬೇಕಾದರೆ ಪ್ರತ್ಯೇಕ ಸಂಸದರ ಸ್ಥಾನ ಅಗತ್ಯವಾಗಿದೆ. ಕೆಲವು ರಾಜ್ಯಗಳಲ್ಲಿ ಕೇವಲ 2.5 ಲಕ್ಷ ಮತದಾರರಿದ್ದರೂ ಅಲ್ಲಿಗೆ ಪ್ರತ್ಯೇಕ ಸಂಸತ್ ಕ್ಷೇತ್ರ ನೀಡಲಾಗಿದೆ. ಪ್ರತ್ಯೇಕ ಸ್ಥಾನವಿದ್ದರೆ ಆಯಾ ಜಿಲ್ಲೆಗಳ ಗಂಭೀರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರತಿನಿಧಿಸಲು ಅವಕಾಶವಿದೆ ಎಂದು ಎಚ್. ವಿಶ್ವನಾಥ್ ಅಭಿಪ್ರಾಯಪಟ್ಟರು.
Published by:Mahmadrafik K
First published: