Kodagu: ಅನಾಥಶ್ರಮದಿಂದ ಬೀದಿಗೆ ಬಿದ್ದ ವೃದ್ಧರ ಬದುಕು

ಮನೆಯನ್ನು ಖಾಲಿ ಮಾಡಿಸಿದ ಪರಿಣಾಮ ಬೇರೆ ಮನೆಯೂ ಸಿಗದೆ ವೃದ್ಧಾಶ್ರಮದ ಮೇಲ್ವಿಚಾರಕ ರಮೇಶ್ ತೊಂಡೂರಿನ ಖಾಸಗೀ ಕಾಫಿ ತೋಟವೊಂದರಲ್ಲಿ ಶೆಡ್ ನಿರ್ಮಿಸಿ ಆ ನೊಂದ ಜೀವಗಳಿಗೆ ನೆರಳು ನೀಡುವಂತಾಗಿದೆ.

ಸೂರಿಲ್ಲದೇ ಕಷ್ಟಪಡುತ್ತಿರುವ ವೃದ್ಧರು

ಸೂರಿಲ್ಲದೇ ಕಷ್ಟಪಡುತ್ತಿರುವ ವೃದ್ಧರು

  • Share this:
ಕೊಡಗು (ಜ. 11) : ಇಳಿ ವಯಸ್ಸಿನಲ್ಲಿ ಮಕ್ಕಳ ಆಶ್ರಯದಲ್ಲಿ, ಮೊಮ್ಮಕ್ಕಳೊಂದಿಗೆ ಪ್ರೀತಿಯಿಂದ ಕಾಲಕಳೆಯುತ್ತ ಇರಬೇಕಾಗಿದ್ದ 26 ವೃದ್ಧಜೀವಗಳು (Senior citizens), ತಮ್ಮ ಬದುಕಿಗೆ ಯಾರೂ ಇಲ್ಲದೆ ಅನಾಥಾಶ್ರಮವನ್ನೇ (orphanage) ನಂಬಿಕೊಂಡಿದ್ದವು. ಆದರೆ ಅನಾಥಾಶ್ರಮದ ಆ ಬೆಚ್ಚನೆಯ ಸೂರು ಕಳೆದುಕೊಂಡು ಅವರ ಬದುಕು ಇದೀಗ ಬೀದಿಗೆ ಬಿದ್ದಿದೆ. ಇಂತಹ ಕರುಣಾಜನಕ ಸ್ಥಿತಿಯನ್ನು ಅನುಭವಿಸುವಂತಾಗಿರುವುದು ಕೊಡಗು ಜಿಲ್ಲೆಯ ವಿಕಾಸ್ ಜನಸೇವಾ ಟ್ರಸ್ಟ್ ನ 26 ಅನಾಥ ವೃದ್ಧರು. ಹೌದು ಕುಶಾಲನಗರ ತಾಲೂಕಿನ ಸುಂಟಿಕೊಪ್ಪದ ಉಲುಗುಲಿಯ ಖಾಸಗಿ ಮನೆಯೊಂದರಲ್ಲಿ ಮಡಿಕೇರಿಯ ರಮೇಶ್ ಕಳೆದ ಏಳು ವರ್ಷಗಳಿಂದ ದಾನಿಗಳ ಸಹಾಯ ಪಡೆದು 26 ಅನಾಥ ಇಳಿವಯಸ್ಸಿನ ಜೀವಗಳಿಗೆ ಆಶ್ರಯ ನೀಡಿದ್ದರು. ಆ ಮೂಲಕ ಅವರ ಪಾಲನೆ, ಪೋಷಣೆ ಮಾಡುತ್ತಿದ್ದರು. ಆದರೆ ಮನೆಯ ಮಾಲೀಕ ಭರತ್ 2021 ರ ಡಿಸೆಂಬರ್ 25 ರಂದು ಈ ಅನಾಥಶ್ರಮವನ್ನು ತಮ್ಮ ಕಟ್ಟಡದಿಂದ ಖಾಲಿ ಮಾಡಿಸಿದ್ದಾರೆ.

ಶೆಡ್​​ನಲ್ಲಿ ವೃದ್ಧರ ಜೀವನ

ಮನೆ ಖಾಲಿ ಮಾಡುವಂತೆ ಕೆಲವು ತಿಂಗಳ ಹಿಂದೆಯೇ ಮನೆ ಖಾಲಿ ಮಾಡುವಂತೆ ಮಾಲೀಕ ಹೇಳಿದ್ದರಿಂದ ರಮೇಶ್ ಮನೆಗಾಗಿ ಸಾಕಷ್ಟು ಹುಡುಕಾಡಿದ್ದರು. ಮನೆಯನ್ನು ಖಾಲಿ ಮಾಡಿಸಿದ ಪರಿಣಾಮ ಬೇರೆ ಮನೆಯೂ ಸಿಗದೆ ವೃದ್ಧಾಶ್ರಮದ ಮೇಲ್ವಿಚಾರಕ ರಮೇಶ್ ತೊಂಡೂರಿನ ಖಾಸಗೀ ಕಾಫಿ ತೋಟವೊಂದರಲ್ಲಿ ಶೆಡ್ ನಿರ್ಮಿಸಿ ಆ ನೊಂದ ಜೀವಗಳಿಗೆ ನೆರಳು ನೀಡುವಂತಾಗಿದೆ. ಮರದ ಕಂಬಗಳನ್ನು ನೆಟ್ಟು, ಬಡಿಗೆಗಳನ್ನು ಕಟ್ಟಿ ಅದಕ್ಕೆ ಟಾರ್ಪಲ್ ಮುಚ್ಚಲಾಗಿದೆ. ಹೀಗೆ ನಿರ್ಮಿಸಿರುವ ಶೆಡ್ಡಿನೊಳಗೆ ಕಾಟ್ ಗಳನ್ನು ಹಾಕಿ ಹನ್ನೊಂದು ವೃದ್ದೆಯರಿಗೆ ಅದರೊಳಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಕೊರೆಯುವ ಚಳಿಯಲ್ಲಿ  ಕಂಗಾಲಾದ ವೃದ್ಧರು

ಚಳಿಗಾಲ ಇದಾಗಿದ್ದು, ಕೊಡಗಿನಲ್ಲಿ ಈತ ಮೈಕೊರೆಯುವ ಚಳಿ ಇದೆ. ಈ ಚಳಿಯಲ್ಲಿ ಹಿರಿಯ ಜೀವಗಳು ಪರದಾಡುವಂತಾಗಿದೆ. ಶೆಡ್ ಎದುರಿಗೆ ಒಂದು ಚಿಕ್ಕ ಮನೆಯನ್ನು ಬಾಡಿಗೆ ಪಡೆಯಲಾಗಿದ್ದು, ಅದರಲ್ಲಿ ಕೇವಲ ಎರಡೇ ಎರಡು ಕೊಠಡಿ ಇವೆ. ವಿವಿಧ ಅನಾರೋಗ್ಯದಿಂದ ಬಳಲುತ್ತಿರುವ ಒಂಭತ್ತು ವೃದ್ಧರು ಇರುವ ಕಾರಣ ಆ ಕೊಠಡಿಯಲ್ಲಿ ವೃದ್ಧರು ತುಂಗುತ್ತಿದ್ದಾರೆ. ಸಂಬಂಧಿಕರೆಂದು ಯಾರೂ ಇಲ್ಲದಿದ್ದರೂ ವೃದ್ಧಾಶ್ರಮವನ್ನೇ ತಮ್ಮ ಮನೆಯೆಂದು ಬದುಕುತ್ತಿದ್ದ ಈ ಬಡಜೀವಗಳು ಇದೀಗ ಅನಾಥಶ್ರಮದ ಸೂರು ಇಲ್ಲದೆ ಕಣ್ಣೀರು ಸುರಿಸುವಂತಾಗಿದೆ.

ಇದನ್ನು ಓದಿ: ರಾಜ್ಯದಲ್ಲಿ Weekend Curfew, Night Curfew ವಿಸ್ತರಣೆ.. ಎಲ್ಲಿಯವರೆಗೆ..?

ಶಾಶ್ವತ ಸೂರಿಗೆ ಮನವಿ 

ಸುಂಟಿಕೊಪ್ಪ ಸಮೀಪದ ಉಲುಗುಲಿಯ ಅನಾಥಶ್ರಮದಲ್ಲಿದ್ದ ಎಲ್ಲಾ ವಸ್ತುಗಳನ್ನು ತೊಂಡೂರಿನ ಶೆಡ್ಡಿನಲ್ಲಿ ಇರಿಸಲು ಜಾಗವಿಲ್ಲದೆ ಅವುಗಳನ್ನು ಹೊರಗೆ ಇರಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ ಕನಿಷ್ಠ ಅಡುಗೆ ಮಾಡಲು ಜಾಗವಿಲ್ಲದೆ ನಿತ್ಯ ಹೊರಗೆ ಅಡುಗೆ ಮಾಡಬೇಕಾದ ಚಿಂತಾಜನಕ ಸ್ಥಿತಿಯಲ್ಲಿ ಹಿರಿಯ ಜೀವಗಳು ಬದುಕು ದೂಡುವಂತಾಗಿದೆ.

ಇದನ್ನು ಓದಿ: ಮಹಾಕಾಳಿ ಪಾದದ ಬಳಿ ವ್ಯಕ್ತಿಯ ರುಂಡ ಪತ್ತೆ; ತೆಲಂಗಾಣದಲ್ಲೊಂದು ಭಯಾನಕ ಘಟನೆ

ಕಳೆದ ಏಳುವರ್ಷಗಳಿಂದ ಪದೇ ಪದೇ ಬಾಡಿಗೆ ಕಟ್ಟಡಗಳನ್ನು ಹುಡುಕಾಡಿ ವೃದ್ಧಾಶ್ರಮವನ್ನು ಪದೇ ಪದೇ ಬೇರೆ ಬೇರೆ ಕಟ್ಟಡಗಳಿಗೆ ಸ್ಥಳಾಂತರಿಸಿ ಬೇಸತ್ತು ಹೋಗಿದ್ದೇವೆ. ದಯಮಾಡಿ ದಾನಿಗಳು ಜನಪ್ರತಿನಿಧಿಗಳು ಶಾಶ್ವತ ಸೂರು ಒದಗಿಸಿಕೊಟ್ಟು ನೊಂದ ಜೀವಗಳ ಇಳಿವಯಸ್ಸಿನಲ್ಲಾದರೂ ನೆಮ್ಮದಿ ಬದುಕಿಗೆ ಅವಕಾಶ ಮಾಡಿ ಎನ್ನೋದು ವೃದ್ದಾಶ್ರಮದ ಮೇಲ್ವಿಚಾರಕ ರಮೇಶ್ ಅವರ ಮನವಿ.

ಈ ಕುರಿತು ಪ್ರತಿಕ್ರಿಯಿಸಿರುವ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ನಿವೇಶನಕ್ಕಾಗಿ ನಾನೂ ಕೂಡ ಎರಡು ಮೂರು ಕಡೆಗಳಲ್ಲಿ ಹುಡುಕಾಡಿದೆ. ಸೂಕ್ತವಾದ ನಿವೇಶನ ದೊರೆಯುತ್ತಿಲ್ಲ. ನಿವೇಶನ ದೊರೆತಲ್ಲಿ ಕಟ್ಟಡ ನಿರ್ಮಿಸಿಕೊಡಲಾಗುವುದು ಎಂದಿದ್ದಾರೆ. ಆದರೆ ರಮೇಶ್ ಸದ್ಯ ಯಾರಿಂದೆಲ್ಲಾ ಸಾಲ ಮಾಡಿ ಚಿಕ್ಕ ಜಾಗವನ್ನು ಖರೀದಿಸಿದ್ದೇವೆ. ದಾನಿಗಳು ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಿ ಎಂದು ಬೇಡುತ್ತಿದ್ದಾರೆ.
Published by:Seema R
First published: