• Home
  • »
  • News
  • »
  • state
  • »
  • Kodagu: ಹಿಮಪಾತದಲ್ಲಿ ಸಿಲುಕಿ ಕೊಡಗಿನ ವೀರಯೋಧ ಅಲ್ತಾಫ್ ಅಹ್ಮದ್ ಹುತಾತ್ಮ

Kodagu: ಹಿಮಪಾತದಲ್ಲಿ ಸಿಲುಕಿ ಕೊಡಗಿನ ವೀರಯೋಧ ಅಲ್ತಾಫ್ ಅಹ್ಮದ್ ಹುತಾತ್ಮ

ಹವಾಲ್ದಾರ್ ಅಲ್ತಾಫ್ ಅಹ್ಮದ್

ಹವಾಲ್ದಾರ್ ಅಲ್ತಾಫ್ ಅಹ್ಮದ್

AOC ರೆಜಿಮೆಂಟ್ ನಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಅಲ್ತಾಫ್ ಅವರು ಕಾಶ್ಮೀರದಲ್ಲಿ ಕರ್ತವ್ಯಲ್ಲಿರುವಾಗ ಹಿಮಪಾತದಲ್ಲಿ ಸಿಲುಕಿದ್ದರು. ಅವರನ್ನು ರಕ್ಷಿಸುವ ಕಾರ್ಯ ಭಾರತೀಯ ಸೇನೆಯಿಂದ ನಡೆದಿತ್ತಾದರೂ, ಅದು ಫಲ ನೀಡದೆ ವೀರಮರಣವನ್ನಪ್ಪಿದ್ದಾರೆ.

  • Share this:

ಕೊಡಗು : ಗಡಿಗಳಲ್ಲಿ (Border) ಶತ್ರುಗಳ ಗುಂಡಿಗೆ ಎದೆಯೊಡ್ಡಿ ಹಗಲು ರಾತ್ರಿ ತಾಯ್ನಾಡಿಗಾಗಿ ದುಡಿಯುವ ಸೈನಿಕರ (Soldiers) ಸಾಹಸ, ಕೆಚ್ಚೆದೆ ಎಂದೆಂದಿಗೂ ಅವಿರತವಾಗಿರುತ್ತದೆ. ಹೀಗೆ ಅವಿರತ ಹೋರಾಟದಲ್ಲಿದ್ದ ಯೋಧರ ನಾಡು ಕೊಡಗಿನ (Kodagu) ವೀರ ಯೋಧ  ಅಲ್ತಾಫ್ ಅಹ್ಮದ್ (37) ಅವರು ಬುಧವಾರ ಮುಂಜಾನೆ ಶ್ರೀನಗರದಲ್ಲಿ ನಡೆದ ಹಿಮಪಾತದಲ್ಲಿ (Heavy Snow Fall) ವೀರ ಮರಣವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.  ವೀರಾಜಪೇಟೆಯ ಮೀನುಪೇಟೆ ನಿವಾಸಿಗಳಾದ ದಿ. ಉಮ್ಮರ್ ಮತ್ತು ಆಶೀಯಾ ದಂಪತಿಗಳ ಪುತ್ರ ಇವರು. ಕೊಡಗಿನಲ್ಲಿ ಹುಟ್ಟಿ ಬೆಳೆದು ,  ದ್ವಿತೀಯ ಪಿಯುಸಿವರೆಗೆ ವಿದ್ಯಾಭ್ಯಾಸ ಮಾಡಿದ್ದ ಅಲ್ತಾಫ್ ಅಹ್ಮದ್ ಅವರು 19 ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರಿದ್ದರು. ಎಒಸಿ ರೆಜಿಮೆಂಟ್ ನಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಅಲ್ತಾಫ್ ಅವರು ಕಾಶ್ಮೀರದಲ್ಲಿ ಕರ್ತವ್ಯಲ್ಲಿರುವಾಗು ಹಿಮಪಾತದಲ್ಲಿ ಸಿಲುಕಿದ್ದರು. ಅವರನ್ನು ರಕ್ಷಿಸುವ ಕಾರ್ಯ ಭಾರತೀಯ ಸೇನೆಯಿಂದ ನಡೆದಿತ್ತಾದರೂ ಅದು ಫಲ ನೀಡದೆ ವೀರಮರಣವನ್ನಪ್ಪಿದ್ದಾರೆ.
ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದೆ ವೀರ ಯೋಧ 


ಕಳೆದ ಕೆಲವು ವರ್ಷಗಳ ಹಿಂದೆಯಷ್ಟೇ ಅಲ್ತಾಫ್ ಅವರು ವಿರಾಜಪೇಟೆ ಸಮೀಪದ  ಎಡಪಾಲದ ಹುಡುಗಿಯನ್ನು ವರಿಸಿದ್ದರು. ಅಲ್ತಾಫ್ ಅಹಮ್ಮದ್ ವಿರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ಶಾಲಾ ಶಿಕ್ಷಣವನ್ನು ಪೂರೈಸಿದ್ದರು. ಸೇನಾ ನೇಮಕಾತಿ ರ್‍ಯಾಲಿಯಲ್ಲಿ ಪಾಲ್ಗೊಂಡು ಸೇನೆಗೆ ಆಯ್ಕೆಗೊಂಡಿದ್ದರು .ದಿ. ಉಮ್ಮರ್ ಮತ್ತು ಆಶೀಯಾ ದಂಪತಿಗಳ ಮೂವರು ಮಕ್ಕಳ ಪೈಕಿ ಹಿರಿಯರಾದ ಆಲ್ತಾಫ್ ಅಹಮ್ಮದ್ ಅವರಿಗೆ ಇಬ್ಬರು ಸಹೋದರಿಯರಿದ್ದಾರೆ. ಪತ್ನಿ ,  ಮಗಳು ಹಾಗೂ ಮಗನನ್ನು ಅಗಲಿದ್ದಾರೆ. ಪತ್ನಿ ಹಾಗೂ ಮಕ್ಕಳು ಕೇರಳದ ಮಟ್ಟನೂರಿನಲ್ಲಿರುವ ಯೋಧ ಅಲ್ತಾಫ್ ಅಹಮದ್ ಅವರ ಸಹೋದರಿಯೊಂದಿಗೆ ನೆಲೆಸಿದ್ದಾರೆ. ತಾಯಿ ಆಶಿಯಾ ಅವರು ಸಮೀಪದ ಚೆನ್ನಯ್ಯನಕೋಟೆಯಲ್ಲಿ ನೆಲೆಸಿರುವ ಮತ್ತೋರ್ವ ಸಹೋದರಿಯೊಂದಿಗೆ ನೆಲೆಸಿದ್ದರು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ಧಾರೆ.


ಇದನ್ನೂ ಓದಿ: Hijab Hearing: ಆಧಾರ್ ಕಾರ್ಡ್​​​ನಲ್ಲಿ ಹಿಜಾಬ್ ಧರಿಸದ ಫೋಟೋ ಇದೆ: ಹೈಕೋರ್ಟ್​​ನಲ್ಲಿ ವಾದ-ಪ್ರತಿವಾದ


ಹಿಜಾರ್‌,  ಕೇಸರಿ ಎಂದು ಹೊಡೆದಾಡದಿರಿ ಎಂದಿದ್ದ ಯೋಧ 


ಬುಧವಾರ ಬೆಳಿಗ್ಗೆ ಕೂಡ ಅಲ್ತಾಫ್ ಅಹಮದ್ ಅವರು ತಮ್ಮ ತಾಯಿಗೆ ವಿಡಿಯೋ ಕರೆ ಮಾಡಿ ಮಾತನಾಡಿದ್ದಾರೆ. ಬಳಿಕ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಹುತಾತ್ಮ ಯೋಧನ ಮೃತದೇಹ ಶುಕ್ರವಾರ ಆಗಮಿಸುವ ನಿರೀಕ್ಷೆಯಿದೆ. ಯೋಧ ಫೆ.14ರಂದು ಮಾಡಿದ್ದ ಆಡಿಯೋ ಎಲ್ಲೆಡೆ ವೈರಲ್‌ ಆಗಿದೆ. ‘ಗೆಳೆಯರೇ ಇಂದು ಪ್ರೇಮಿಗಳ ದಿನಾಚರಣೆ. ದೇಶ ಬಗ್ಗೆಯೂ ಕಾಳಜಿ ವಹಿಸಿ. ಯೋಧರು ದೇಶಕ್ಕಾಗಿ ತ್ಯಾಗ ಮಾಡುತ್ತಿದ್ಧಾರೆ. ನೀವು ಹಿಜಾರ್‌ ಹಾಗೂ ಕೇಸರಿ ಎಂದು ಹೊಡೆದಾಡದಿರಿ. ದೇಶಪ್ರೇಮವಿದ್ದರೆ, ದಯವಿಟ್ಟು ನಿಮ್ಮ ಮಕ್ಕಳಲ್ಲು ದೇಶಪ್ರೇಮವನ್ನು ಬೆಳೆಸಿ ಉತ್ತಮ ಭವಿಷ್ಯದ ದಾರಿಯನ್ನು ತೋರಿಸಿ’ ಎಂದು ಮನವಿ ಮಾಡಿದ್ದಾದ್ದರು.
ವೀರ ಯೋಧನಿಗೊಂದು ಸಲಾಂ.. 


ಮಾಹಿತಿ ದೊರೆಯುತ್ತಿದ್ದಂತೆ ಹುತಾತ್ಮ ಯೋಧನ ಪತ್ನಿ ಮಕ್ಕಳು ಸಹಿತ ಕುಟುಂಬದವರು ಚೆನ್ನಯ್ಯನಕೋಟೆಯಲ್ಲಿನ ಅಲ್ತಾಫ್ ಅಹಮದ್ ಅವರ ಸಹೋದರಿಯ ಮನೆಗೆ ಧಾವಿಸಿದ್ದಾರೆ. ಹುತಾತ್ಮ ಯೋಧನ ಮೃತದೇಹ ಶುಕ್ರವಾರ ಆಗಮಿಸುವ ನಿರೀಕ್ಷೆಯಿದ್ದು, ಬಳಿಕ ವಿರಾಜಪೇಟೆ ಪಟ್ಟಣದಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿದೆ. ‘ಅಲ್ತಾಫ್ ಅಹಮದ್ ಅವರು ದೇಶ ಸೇವೆಯ ಕನಸನ್ನು ಬಾಲ್ಯದಿಂದಲೇ ಕಂಡಿದ್ದರು. ಈ ಉದ್ದೇಶದಿಂದಲೇ ಶಾಲಾ ದಿನಗಳಲ್ಲಿ ಎನ್‌ಸಿಸಿ ಸೇರಿದ್ದರು’ ಎಂದು ಅವರ ಶಾಲಾ ಸಹಪಾಠಿ  ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಆಗಸ್ಟಿನ್ ಬೆನ್ನಿ ತಿಳಿಸಿದ್ದಾರೆ. ದೇಶಕ್ಕಾಗಿ ಪ್ರಾಣ ತೊರೆದ ವೀರ ಯೋಧನಿಗೆ ಹೆಮ್ಮಯ ಸಲಾಂ. ಕನ್ನಡದ ನೆಲದ ವೀರ ಪುತ್ರನ ಆತ್ಮಕ್ಕೆ ಶಾಂತಿ ಕೋರೋಣ.

Published by:Kavya V
First published: