ಪ್ರವಾಸಿಗರಿಂದ ಮತ್ತೊಮ್ಮೆ ಕೊಡಗಿಗೆ ಕೊರೋನಾಘಾತ..?

ಕಳೆದ ತಿಂಗಳ ಅಂಕಿ ಅಂಶಗಳ ಪ್ರಕಾರ ಮಡಿಕೇರಿ ತಾಲೂಕಿನಲ್ಲಿ ಶೇ.46 ರಷ್ಟು ಕೊರೋನಾ ಪ್ರಕರಣಗಳು ಏರಿಕೆಯಾಗಿವೆ. ಹಾಗೆಯೇ ಸೋಮವಾರಪೇಟೆ ತಾಲೂಕಿನಲ್ಲಿ ಶೇ.42 ರಷ್ಟು ಹೆಚ್ಚಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಡಿಕೇರಿ: ದೇಶದಲ್ಲಿ ಕೋವಿಡ್ ಬಂದೇ ಇಲ್ಲವೇನೋ ಎನ್ನುವ ಹಾಗೇ ಜನರು ಕೊರೋನಾವನ್ನು ಮರೆತು ಬಿಟ್ಟಿದ್ದಾರೆ. ಹೌದು, ವಾರಾಂತ್ಯ ಬಂದರೆ ಸಾಕು ಕೊಡಗಿನ ಪ್ರವಾಸಿ ತಾಣಗಳು ತುಂಬಿ ತುಳುಕುತ್ತವೆ. ಆದರೆ ಇತ್ತೀಚೆಗೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ಮಾತ್ರ ಕೋವಿಡ್ ಎಂಬುದೇ ಇಲ್ಲ ಎಂಬಂತೆ ಎಲ್ಲವನ್ನೂ ಮರೆತು ಎಂಜಾಯ್ ಮಾಡುತ್ತಿದ್ದಾರೆ. ಮಡಿಕೇರಿ ಸಮೀಪದ ಅಬ್ಬಿಫಾಲ್ಸ್​ಗೆ ನಿತ್ಯ ಬರುತ್ತಿರುವ ಸಾವಿರಾರು ಪ್ರವಾಸಿಗರು ಸಾಮಾಜಿಕ ಅಂತರವಿರಲಿ, ಕನಿಷ್ಠ ತಮ್ಮ ತಮ್ಮ ಸೇಫ್ಟಿಗಾಗಿಯೂ ಮಾಸ್ಕ್ ಧರಿಸದೇ ಆರಾಮಾಗಿ ಸುತ್ತಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.

ದೇಶದಲ್ಲಿ ಕೊರೊನಾ ಎರಡನೇ ಅಲೆ ಹರಡುತ್ತಿದೆ. ಯುಕೆಯಿಂದ ರೂಪಾಂತರಿ ಕೊರೋನಾ ಕೂಡ ಹರಡುತ್ತಿದೆ ಎನ್ನುವುದನ್ನು ಪ್ರವಾಸಿಗರು ಮರೆತು ಸುತ್ತಾಡುತ್ತಿದ್ದಾರೆ. ಇಲ್ಲಿಗೆ ಬರುವ ಪ್ರವಾಸಿಗರಿಂದ, ಪ್ರವಾಸಿ ತಾಣಗಳಲ್ಲಿ ಕೆಲಸ ಮಾಡುತ್ತಿರುವ ಕೊಡಗಿನ ಜನತೆಗೂ ಕೊರೋನಾ ಹರಡಲು ಕಾರಣವಾಗುತ್ತಾ ಎನ್ನುವ ಆತಂಕ ಶುರುವಾಗಿದೆ. ಇಲ್ಲ ಪ್ರವಾಸಿ ತಾಣಗಳಿಗೆ ಬರುವ ಸಾವಿರಾರು ಪ್ರವಾಸಿಗರು ಬೇರೆ ಬೇರೆ ಪ್ರವಾಸಿಗರಿಗೆ ರೋಗ ಹರಡಿ ಹೋಗಿಬಿಡುತ್ತಾರಾ ಎನ್ನೋ ಭಯ ಕೂಡ ಮನೆಮಾಡಿದೆ. ಆದರೆ ಪ್ರವಾಸಿಗರು ಮಾತ್ರ ಇದ್ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ.ನಾವು ಮಾಸ್ಕ್ ಧರಿಸಿದ್ದೇವೆ, ಬರುವವರಿಂದ ಅಂತರ ಕಾಯ್ದುಕೊಂಡಿದ್ದೇವೆ ಎನ್ನುತ್ತಲೇ ಆರಾಮಾಗಿ ಓಡಾಡಿಕೊಂಡಿರುವುದು ಮಾತ್ರ ಆಶ್ಚರ್ಯ. ಪ್ರವಾಸಿತಾಣಗಳಿಗೆ ಬರುತ್ತಿರುವ ಪ್ರವಾಸಿಗರು ಒಬ್ಬೇ ಒಬ್ಬರೂ ಮಾಸ್ಕ್ ಧರಿಸಿಲ್ಲ. ತಾವಾಯಿತು, ತಮ್ಮ ಎಂಜಾಯ್ಮೆಂಟ್ ಆಯ್ತು ಅಂತ ಸಂಭ್ರಮಿಸುತ್ತಿದ್ದಾರೆ. ಪ್ರವಾಸಿತಾಣಗಳಲ್ಲಿ ಯಾವೊಬ್ಬ ಸಿಬ್ಬಂದಿ ಕೂಡ ಅಲ್ಲಿದ್ದು, ಕೊರೋನಾ ರೂಲ್ಸ್ ಬ್ರೇಕ್ ಮಾಡುತ್ತಿರುವವರಿಗೆ ಕನಿಷ್ಠ ಸೂಚನೆಯನ್ನೂ ನೀಡುವವರಿಲ್ಲ.ಡಿಸೆಂಬರ್ ನಾಲ್ಕನೆ ವಾರದಲ್ಲಿ ಕೊಡಗು ಜಿಲ್ಲೆಯಲ್ಲಿ ಕೇವಲ ಒಂದಂಕಿಯ ಒಳಗೆ ಬರುತ್ತಿದ್ದ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇತ್ತೀಚೆಗೆ ಎರಡಂಕಿಯನ್ನು ದಾಟುತ್ತಿದೆ. ಅಷ್ಟೇ ಅಲ್ಲ, ಕೊರೋನಾದಿಂದ ಕಳೆದ ಎರಡು ವಾರದಲ್ಲಿ ಐವರು ಅಸುನೀಗಿದ್ದಾರೆ. ಆದರೆ ಪ್ರವಾಸಿಗರು ಮಾತ್ರ ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳುತ್ತಿಲ್ಲ. ಇನ್ನು ಜಿಲ್ಲಾಡಳಿತವಾಗಲಿ ಅಥವಾ ಪ್ರವಾಸೋದ್ಯಮ ಇಲಾಖೆಯಾಗಲಿ ಪ್ರವಾಸ ತಾಣಗಳಿಗೆ ಬರುತ್ತಿರುವ ಪ್ರವಾಸಿಗರ ಬಗ್ಗೆಯಾಗಲಿ ಯಾವುದೇ ಮೇಲ್ವಿಚಾರಣೆ ಮಾಡುತ್ತಿಲ್ಲ.

ಇದರಿಂದ ಪ್ರವಾಸಿಗರು ಸಹ ಕೋವಿಡ್ ನಿಯಮಗಳನ್ನು ಸಂಪೂರ್ಣ ಗಾಳಿಗೆ ತೂರಿ ಓಡಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಸರ್ಕಾರವೇನೋ ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದು ಬಿಟ್ಟರೆ, ಆ ಬಳಿಕ ಕೊರೋನಾ ಹರಡುವಿಕೆ ಬಗ್ಗೆ ಯಾವುದೇ ನೀತಿ ನಿರ್ದೇಶನಗಳಿಲ್ಲ. ಹೀಗಾಗಿಯೇ ಕೊಡಗಿನ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ಸಾಮಾಜಿಕ ಅಂತರ ಅಥವಾ ಮಾಸ್ಕ್ ಗಳು ಇಲ್ಲದೆ ಸುತ್ತಾಡುತ್ತಿದ್ದಾರೆ.

ಇನ್ನು ಕಳೆದ ತಿಂಗಳ ಅಂಕಿ ಅಂಶಗಳ ಪ್ರಕಾರ ಮಡಿಕೇರಿ ತಾಲೂಕಿನಲ್ಲಿ ಶೇ.46 ರಷ್ಟು ಕೊರೋನಾ ಪ್ರಕರಣಗಳು ಏರಿಕೆಯಾಗಿವೆ. ಹಾಗೆಯೇ ಸೋಮವಾರಪೇಟೆ ತಾಲೂಕಿನಲ್ಲಿ ಶೇ.42 ರಷ್ಟು ಹೆಚ್ಚಾಗಿದೆ. ಇದು ಹೀಗೆ ಮುಂದುವರೆದರೆ ಕೊಡಗು ಜಿಲ್ಲೆಗೆ ಕೊರೋನಾ ಮಹಾಮಾರಿ ಮತ್ತೊಮ್ಮೆ ಅಘಾತ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.
Published by:zahir
First published: