Kodagu Rains: ಕೊಡಗಿನಲ್ಲಿ ಈ ವರ್ಷವೂ ಪ್ರವಾಹ, ಭೂಕುಸಿತ ಸಾಧ್ಯತೆ, ಅಪಾಯದಲ್ಲಿ 44 ಗ್ರಾಮ

ಈ ಬಾರಿ ಮುಂಗಾರಿಗೂ ಮುನ್ನವೇ ಸಾಕಷ್ಟು ಮಳೆ (Rain) ಸುರಿದಿರುವುದು ಜಿಲ್ಲೆಯಲ್ಲಿ ಈ ಬಾರಿ ಮತ್ತೆ ಪ್ರವಾಹ ಮತ್ತು ಭೂಕುಸಿತ (Landslide) ಆಗುವ ಎಲ್ಲಾ ಸಾಧ್ಯತೆಗಳು ಇವೆ. ಹೀಗಾಗಿಯೇ ಕೊಡಗು ಜಿಲ್ಲಾಡಳಿತ ಕೂಡ ಕಳೆದ ಮೂರು ವರ್ಷಗಳ ಆಧಾರದಲ್ಲಿ 44 ಗ್ರಾಮಗಳಿಗೆ ಪ್ರವಾಹ (Floor) ಎದುರಾಗಬಹುದು.

ಕೊಡಗಿನಲ್ಲಿ ಭೂಕುಸಿತ

ಕೊಡಗಿನಲ್ಲಿ ಭೂಕುಸಿತ

  • Share this:
ಕೊಡಗು(ಮೇ.23): ಕಳೆದ ವರ್ಷ ಸಾಕಷ್ಟು ಮಳೆ ಸುರಿದಿದ್ದರೂ 2018 ರಿಂದ 2020 ರವರೆಗೆ ಸಂಭವಿಸಿದ್ದ ಪ್ರವಾಹ (Flood), ಭೂಕುಸಿತದಂತೆ (Landslide) ಕೊಡಗು (Kodagu) ಜಿಲ್ಲೆಯಲ್ಲಿ ಎಲ್ಲೂ ದೊಡ್ಡ ಮಟ್ಟದ ಅಪಾಯಗಳು (Danger) ಎದುರಾಗಿರಲಿಲ್ಲ. ಹೀಗಾಗಿ ಕಳೆದ ವರ್ಷದ ಮಳೆಗಾಲ ಮುಗಿಯುತ್ತಿದ್ದಂತೆ ಜಿಲ್ಲೆಯ ಜನರು ಕಂಟಕ ಮುಗಿಯಿತು ಎಂದು ನಿಟ್ಟುಸಿರು ಬಿಟ್ಟಿದ್ದರು. ಆದರೆ ಈ ಬಾರಿ ಮುಂಗಾರಿಗೂ ಮುನ್ನವೇ ಸಾಕಷ್ಟು ಮಳೆ (Rain) ಸುರಿದಿರುವುದು ಜಿಲ್ಲೆಯಲ್ಲಿ ಈ ಬಾರಿ ಮತ್ತೆ ಪ್ರವಾಹ ಮತ್ತು ಭೂಕುಸಿತ (Landslide) ಆಗುವ ಎಲ್ಲಾ ಸಾಧ್ಯತೆಗಳು ಇವೆ. ಹೀಗಾಗಿಯೇ ಕೊಡಗು ಜಿಲ್ಲಾಡಳಿತ ಕೂಡ ಕಳೆದ ಮೂರು ವರ್ಷಗಳ ಆಧಾರದಲ್ಲಿ 44 ಗ್ರಾಮಗಳಿಗೆ ಪ್ರವಾಹ (Floor) ಎದುರಾಗಬಹುದು.

ಹಾಗೆಯೇ 43 ಗ್ರಾಮಗಳಲ್ಲಿ ಭೂಕುಸಿತ ಆಗಬಹುದು ಎಂದು ಅಂದಾಜಿಸಿದೆ. ಇದು ಜಿಲ್ಲೆಯ ಜನರು ಒಂದಷ್ಟು ಆತಂಕಪಡುವಂತೆ ಮಾಡಿದೆ. ಪ್ರವಾಹ ಅಥವಾ ಭೂಕುಸಿತ ಎದುರಾದಲ್ಲಿ ಅದನ್ನು ನಿಭಾಯಿಸಲು ಜಿಲ್ಲೆಯಲ್ಲಿ (District) ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳಿಂದ ಹಿಡಿದು ಜಿಲ್ಲಾ ಮಟ್ಟದ ಅಧಿಕಾರಿಗಳವರೆಗೆ ಎಲ್ಲರೂ ಫುಲ್ ಅಲರ್ಟ್ (Alert) ಆಗಿರುವಂತೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್ ಹೇಳಿದ್ದಾರೆ.

44 ಗ್ರಾಮಗಳಲ್ಲಿ ಪ್ರವಾಹವಾಗುವ ಸಾಧ್ಯತೆ

ಜಿಲ್ಲೆಯಲ್ಲಿ 44 ಗ್ರಾಮಗಳಲ್ಲಿ ಪ್ರವಾಹವಾಗುವ ಸಾಧ್ಯತೆ ಇದ್ದು, 43 ಗ್ರಾಮಗಳಲ್ಲಿ ಭೂಕುಸಿತ ಆಗುವ ಸಾಧ್ಯತೆಗಳಿವೆ. ಅಂತಹ ಗ್ರಾಮಗಳನ್ನು ಈಗಾಗಲೇ ಗುರುತ್ತಿಸಲಾಗಿದ್ದು, ಅಂತಹ ಪರಿಸ್ಥಿತಿ ಎದುರಾದರೆ ಆ ಗ್ರಾಮಗಳ ಜನರಿಗೆ ಮಳೆಗಾಲ ಆರಂಭವಾಗುವಷ್ಟರಲ್ಲಿ ನೊಟೀಸ್ ನೀಡಲಾಗುವುದು. ಕಳೆದ ವರ್ಷಗಳಂತೆ ಕಾಳಜಿ ಕೇಂದ್ರಗಳನ್ನು ತೆರೆದು ಅಲ್ಲಿ ರಕ್ಷಣೆ ನೀಡಲಾಗುವುದು ಎಂದು ಹೇಳಿದ್ದಾರೆ.

ಜನರನ್ನು ಸ್ಥಳಾಂತರ ಮಾಡುವುಕ್ಕೆ ಚಿಂತನೆ

ಇದು ಜಿಲ್ಲೆಯ ಜನರು ಮತ್ತೆ ದಂಗು ಬಡಿಯುವಂತೆ ಮಾಡಿದೆ. ಜಿಲ್ಲಾಡಳಿತವೇನೋ ಪ್ರವಾಹ ಮತ್ತು ಭೂಕುಸಿತದ ಸಾಧ್ಯತೆ ಇರುವ ಗ್ರಾಮಗಳ ಜನರನ್ನು ಸ್ಥಳಾಂತರ ಮಾಡುವುಕ್ಕೆ ಚಿಂತಿಸುತ್ತಿದೆ. ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆ ಭೂಕುಸಿತ ಮತ್ತು ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡ ನೂರಾರು ಸಂತ್ರಸ್ಥರ ಕುಟುಂಬಗಳಿಗೆ ಇಂದಿಗೂ ಮನೆ, ಪರಿಹಾರವನ್ನು ಕೊಟ್ಟಿಲ್ಲ.

ಇದನ್ನೂ ಓದಿ: ವಿಪಕ್ಷಗಳಿಗೆ ಸಂಗೊಳ್ಳಿ ರಾಯಣ್ಣನ ಪಾಠ ಬೇಡ, ಟಿಪ್ಪು ಬಗ್ಗೆ ಐದು ಪುಟ ಪಾಠ ಬೇಕು: ಬಿ.ಸಿ.ನಾಗೇಶ್ ವ್ಯಂಗ್ಯ

ಸಂತ್ರಸ್ಥ ಕುಟುಂಬಗಳ ಪೈಕಿ 70 ಕ್ಕೂ ಹೆಚ್ಚು ಕುಟುಂಬಗಳಿಗೆ ಇಂದಿಗೂ ಮನೆ ವಿತರಣೆ ಮಾಡಿಲ್ಲ

2018 ರಲ್ಲಿ ಮನೆ ಕಳೆದುಕೊಂಡಿದ್ದ ಸಂತ್ರಸ್ಥ ಕುಟುಂಬಗಳ ಪೈಕಿ 70 ಕ್ಕೂ ಹೆಚ್ಚು ಕುಟುಂಬಗಳಿಗೆ ಇಂದಿಗೂ ಮನೆ ವಿತರಣೆ ಮಾಡಿಲ್ಲ. ಕೆ.ನಿಡುಗಣೆ ಪಂಚಾಯಿತಿ ವ್ಯಾಪ್ತಿಯ ಆರ್ ಟಿ ಓ ಕಚೇರಿ ಬಳಿ ಇಂದಿಗೂ ಮನೆಗಳ ಕಾಮಗಾರಿ ಮುಂದುವರಿದಿದೆ. ಮತ್ತೊಂದೆಡೆ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 80 ಕ್ಕೂ ಹೆಚ್ಚು ಸಂತ್ರಸ್ಥ ಕುಟುಂಬಗಳಿಗೆ ಅಭ್ಯತ್ ಮಂಗಲ ಬಳಿ ನಿವೇಶನ ಗುರುತ್ತಿಸಿ ಎರಡು ವರ್ಷಗಳಾದರೂ ಇಂದಿಗೂ ಹಂಚಿಕೆ ಮಾಡಿಲ್ಲ.

ಇದನ್ನೂ ಓದಿ: Karnataka Legislative Council Election: ಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ, ಡಿ ಕೆ ಶಿವಕುಮಾರ್​ಗೆ ಡಿಚ್ಚಿ ಕೊಟ್ಟ ಸಿದ್ದರಾಮಯ್ಯ!

ಆದರೆ ಮತ್ತೆ ಪ್ರವಾಹ ಭೂಕುಸಿತ ಆಗುವ ಸಾಧ್ಯತೆ ಇದ್ದು ಮನೆ ಖಾಲಿ ಮಾಡಿಸುತ್ತೇವೆ ಎಂದು ಜಿಲ್ಲಾಡಳಿತ ಹೇಳುತ್ತಿದೆ. ಹೀಗಾದರೆ ಜನರು ಎಲ್ಲಿಗೆ ಹೋಗಬೇಕು, ಅವರಿಗೆ ಶಾಶ್ವತ ಸೂರು ಬೇಡವೆ. ಸರ್ಕಾರಕ್ಕೆ ಅಥವಾ ಜಿಲ್ಲಾಡಳಿತಕ್ಕೆ ಮಾನವೀಯತೆ ಎನ್ನುವುದು ಇಲ್ಲವೇ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ ಗಣೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published by:Divya D
First published: