HOME » NEWS » State » KODAGU PEOPLE ENJOYED IN RURAL SPORTS BY PARTICIPATING LG

ಕೊಡಗು: ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿ ಎಂಜಾಯ್ ಮಾಡಿದ ನಗರವಾಸಿಗಳು

ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣ ಸಂಕ್ರಾಂತಿಯ ಸಂಭ್ರಮದಿಂದ ರಂಗು ರಂಗಾಗಿತ್ತು. ಐರಾವನ್ ಸಿನಿಮಾ ನಟ ಜಯರಾಂ ಕಾರ್ತಿಕ್, ಕಿರುತೆರೆ ನಟಿ ಕಾವ್ಯಶಾಸ್ತ್ರಿ ಹಾಗೂ ಚಿತ್ರಲಾ ಅವರು ಈ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ ಭಾಗವಹಿಸಿದ್ರು.

news18-kannada
Updated:January 24, 2021, 8:31 PM IST
ಕೊಡಗು: ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿ ಎಂಜಾಯ್ ಮಾಡಿದ ನಗರವಾಸಿಗಳು
ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿದ ಮಹಿಳೆಯರು
  • Share this:
ಕೊಡಗು(ಜ.24): ಎಲ್ಲಾ ಜಂಜಾಟಗಳನ್ನು ಬಿಟ್ಟು ಎಂಜಾಯ್ ಮಾಡೋದು ಅಂದ್ರೆ ಯಾರಿಗ್ತಾನೆ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಸಿನಿಮಾ ನಟ ನಟಿಯರೊಂದಿಗೆ ಸೇರಿ ಗ್ರಾಮೀಣ ಕ್ರೀಡೆಗಳನ್ನು ಆಡುತ್ತಾ ಸಂಕ್ರಾಂತಿ ಹಬ್ಬ ಆಚರಿಸುವುದು ಅಂದ್ರೆ ಕೇಳ್ಬೇಕಾ. ಆ ಖುಷಿಯಲ್ಲಿ ಇಡೀ ಊರಿನ ಜನ ತಮ್ಮನ್ನು ತಾವು ಮರೆತು ಚಿಕ್ಕಮಕ್ಕಳಾಗಿದ್ರು. ಆ ಸಂಭ್ರಮ ಹೇಗಿತ್ತು ಓದಿ.ಏಯ್ ನೀನು ಕಲ್ಲು ಸರಿ ಹಿಡಿಯಲಿಲ್ಲ, ನನ್ನದು ನಾಲ್ಕು ಆನೆ ಎನ್ನುತ್ತಾ ಸಂಭ್ರಮಿಸುತ್ತಿರುವ ಮಹಿಳೆಯರು, ಕಿರುತೆರೆ ನಟಿಯರೊಂದಿಗೆ ಥ್ರೋ ಬಾಲ್ ಆಡುತ್ತಿರುವ ಯುವತಿಯರು ಮತ್ತು ವೃದ್ಧೆಯರು. ನನ್ನ ಕಾಯಿಯೇ ಮೊದಲು ಹಣ್ಣಾಯಿತು ಎಂದು ಸಂಭ್ರಮಿಸುತ್ತಿರುವ ಗೃಹಿಣಿಯರು. ನಿನ್ನನ್ನ ಸೋಲಿಸಲೇ ಬೇಕು ಎಂದು ಬೀಜ ಹಾಕುತ್ತಾ ಅಳಿಗುಳಿ ಮನೆ ಆಡುತ್ತಾ ಸಂಭ್ರಮಿಸುತ್ತಿರುವ ಮಹಿಳೆಯರು. ಹೌದು ಇಂತಹ ಸಂಭ್ರಮ ಕಳೆಗಟ್ಟಿದ್ದು ಕೊಡಗು ಜಿಲ್ಲೆ ಕುಶಾಲನಗರದಲ್ಲಿ. ಇಲ್ಲಿನ ವಾಸವಿ ಯುವ ಮಂಡಳಿ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮದ ಕ್ಷಣಗಳಿವು.

ಹೌದು, ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣ ಸಂಕ್ರಾಂತಿಯ ಸಂಭ್ರಮದಿಂದ ರಂಗು ರಂಗಾಗಿತ್ತು. ಐರಾವನ್ ಸಿನಿಮಾ ನಟ ಜಯರಾಂ ಕಾರ್ತಿಕ್, ಕಿರುತೆರೆ ನಟಿ ಕಾವ್ಯಶಾಸ್ತ್ರಿ ಹಾಗೂ ಚಿತ್ರಲಾ ಅವರು ಈ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮಕ್ಕೆ ಭಾಗವಹಿಸಿದ್ರು. ಸಿಂಗಾರಗೊಂಡಿದ್ದ ಎತ್ತಿಗಾಡಿ ಏರಿ ಮೂವರು ಸಂಕ್ರಾಂತಿ ಸಂಭ್ರಮಕ್ಕೆ ಎಂಟ್ರಿಕೊಟ್ರು. ಬಳಿಕ ಅಪ್ಪಟ ಗ್ರಾಮೀಣ ಕ್ರೀಡೆಯಾದ ತೆಂಗಿನ ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆಯಲ್ಲಿ ಸ್ಥಳೀಯ ಜನರೊಂದಿಗೆ ಜಯರಾಂ ಕಾರ್ತಿಕ್ ಭಾಗವಹಿಸಿದ್ರು. ಅಷ್ಟೇ ಅಲ್ಲ ಕಿರುತೆರೆ ನಟಿ ಕಾವ್ಯಶಾಸ್ತ್ರಿ ಹಾಗೂ ಚಿತ್ರಲಾ ಕೂಡ ತೆಂಗಿನ ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿ ಎಂಜಾಯ್ ಮಾಡಿದ್ರು. ಆದರೆ ಇವರ್ಯಾರು ತೆಂಗಿನಕಾಯಿಗೆ ಕಲ್ಲು ಹೊಡೆಯಲಿಲ್ಲ.

ಜಲ್ಲಿಕಟ್ಟು ಸ್ಪರ್ಧೆ ವೇಳೆ ಹೋರಿಗಳ ದಾಳಿ; 30ಕ್ಕೂ ಹೆಚ್ಚು ಮಂದಿಗೆ ಗಾಯ; ಮೂವರ ಸ್ಥಿತಿ ಚಿಂತಾಜನಕ

ಸ್ಥಳೀಯ ಯುವಕರು ತೆಂಗಿನಕಾಯಿಗೆ ಸರಿಯಾಗಿ ಕಲ್ಲಿನಿಂದ ಹೊಡೆದು ಉಡೀಸ್ ಮಾಡಿ ಸಿಳ್ಳೆ ಹೊಡೆದು ಕೇಕೆ ಹಾಕಿದ್ರು. ಅಷ್ಟೆ ಅಲ್ಲ ವಯಸ್ಸಿನ ಬೇಧಭಾವವಿಲ್ಲದೆ ಯುವತಿರು, ಮಹಿಳೆಯರು ಆಡುತ್ತಿದ್ದ ಥ್ರೋಬಾಲ್ ಸ್ಪರ್ಧೆಯಲ್ಲಿ ಕಾವ್ಯಶಾಸ್ತ್ರಿ ಮತ್ತು ಚಿತ್ರಲಾ ಭಾಗವಹಿಸಿ ಎಂಜಾಯ್ ಮಾಡಿದ್ರು. ಇನ್ನು ಶಾಲಾ ವರಾಂಡದಲ್ಲಿ ನಡೆದ ಅಳಿಗುಳಿ ಮನೆ, ಚೌಕಾಬಾರ, ಆನೆಕಲ್ಲು, ಲೆಮನ್ ಇನ್ ದ ಸ್ಪೂನ್ ಗೇಮ್‍ಗಳಲ್ಲಿ ಪಟ್ಟಣದ ಮಹಿಳೆಯರು ಭಾಗವಹಿಸಿ ಸಂಭ್ರಮಿಸಿದ್ರು. ಸಂಕ್ರಾಂತಿಯಲ್ಲಿ ಭಕ್ಷ್ಯ ಭೋಜನಕ್ಕೆ ಬದಲಾಗಿ ಹುರುಳಿಕಾಳು ಸಾಂಬಾರ್, ಅದಕ್ಕೆ ಬೆಣ್ಣೆ ಮತ್ತು ಮುದ್ದೆ ಊಟವನ್ನು ಸಾರ್ವಜನಿಕರಿಗೆ ಏರ್ಪಡಿಸಲಾಗಿತ್ತು.

ಎಲ್ಲರೂ ಗ್ರಾಮೀಣ ಸೊಗಡಿನ ಊಟ ಸವಿದು ಸಖತ್ ಖುಷಿಪಟ್ರು. ನಟಿ ಕಾವ್ಯಶಾಸ್ತ್ರಿ, ನಮ್ಮ ಹಬ್ಬ ಆಚಾರಗಳು ಉಳಿಯಬೇಕಾದರೆ, ಇಂತಹ ಒಗ್ಗೂಡುವಿಕೆ ಆಗಲೇಬೇಕಾದ ಅಗತ್ಯವಿದೆ. ಇದೇ ಮೊದಲ ಬಾರಿಗೆ ಎತ್ತಿನ ಗಾಡಿ ಏರಿದ್ದು ಖುಷಿಯಾಗಿದೆ. ಅದರಲ್ಲೂ ತೆಂಗಿನಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆ ಅಂತು ಸಖತ್ ಮಜಾ ಇತ್ತು ಎಂದ್ರು. ಇನ್ನು ವಿವಿಧ ಜಾನಪದ ಕ್ರೀಡೆಗಳಲ್ಲಿ ಭಾಗವಹಿಸಿದ್ದ ಮಹಿಳೆಯರಂತು ನಾವು ಇಂದು ಎಲ್ಲವನ್ನು ಮರೆತು ಮಕ್ಕಳಾಗಿದ್ದೆವು ಎಂದು ಸ್ಪರ್ಧಿ ರಮ್ಯಾ ಸಂತಸ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಆಧುನಿಕತೆಯ ಅಬ್ಬರದೊಳಗೆ ಭಾರತೀಯ ಸಂಸ್ಕೃತಿಯೇ ಮೂಲೆಗುಂಪು ಆಗುತ್ತಿರುವ ನಗರ ಜೀವನದಲ್ಲಿ ಸಂಕ್ರಾಂತಿ ಸಂಭ್ರಮ, ಅಪ್ಪಟ ಗ್ರಾಮೀಣ ಸೊಗಡಿನ ಬದುಕನ್ನು ಅನಾವರಣಗೊಳಿಸಿದೆ ಎಂದು ಕಾರ್ಯಕ್ರಮ ಆಯೋಜಕ ಉಮಾಶಂಕರ್ ಹೇಳಿದರು.
Published by: Latha CG
First published: January 24, 2021, 8:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories