ಮಡಿಕೇರಿ (ಜೂ. 30): ಪ್ರತಿಯೊಬ್ಬರಿಗೂ ಬಾಲ್ಯದಿಂದಲೇ ಸಾಕಷ್ಟು ಕನಸುಗಳಿರುತ್ತವೆ. ಕೆಲವರಿಗೆ ಅದು ಕನಸಾಗಿಯೇ ಉಳಿಯುತ್ತದೆ. ಆದರೆ, ಇನ್ನು ಕೆಲವರು ಅದನ್ನು ನನಸಾಗಿಸಿಕೊಳ್ಳುತ್ತಾರೆ. ಆದರೆ, ತನ್ನ ಕನಸಿನ ಬೆನ್ನತ್ತಿ ಹೊರಟ ಕೊಡಗಿನ ಮಡಿಕೇರಿಯ ಪುಣ್ಯ ಎಂಬ ಯುವತಿ ಭಾರತೀಯ ಸೇನೆಯ ಯುದ್ಧ ವಿಮಾನದ ಪೈಲಟ್ ಆಗಿದ್ದಾರೆ. ಈ ಮೂಲಕ ಫೈಟರ್ ಜೆಟ್ ಪೈಲಟ್ ಆಗಿ ಆಯ್ಕೆಯಾದ ಕೊಡಗಿನ ಮೊದಲ ಯುವತಿ ಎನಿಸಿಕೊಂಡಿದ್ದಾರೆ.
ಯುದ್ಧ ವಿಮಾನದ ಪೈಲಟ್ ಆಗುವುದೆಂದರೆ ಸುಲಭದ ಮಾತಲ್ಲ! ಅದರಲ್ಲೂ ಯುವತಿಯರು ಆ ಬಗ್ಗೆ ಪ್ರಯತ್ನ ಮಾಡುವುದೂ ಕಡಿಮೆಯೇ. ಆದರೆ, ಕೊಡಗಿನ ಮಡಿಕೇರಿ ತಾಲೂಕಿನ ನಂಜಪ್ಪ ಮತ್ತು ಅನು ದಂಪತಿಯ ಮಗಳು ಪುಣ್ಯ 9ನೇ ತರಗತಿ ಓದುತ್ತಿರುವಾಗಲೇ ತಾನು ಪೈಲಟ್ ಆಗಬೇಕೆಂಬ ಕನಸು ಕಂಡಿದ್ದರು. ಆ ಕನಸನ್ನು ನನಸಾಗಿಸಿಕೊಳ್ಳಲೇಬೇಕೆಂಬ ಆಸೆಯಿಂದ ಪ್ರಯತ್ನ ನಡೆಸಿದ ಪುಣ್ಯ ಭಾರತೀಯ ಸೇನೆಯಲ್ಲಿ ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ: ಗಂಟಲಲ್ಲಿ ಸಮೋಸ ಸಿಲುಕಿ ಬಿಕ್ಕು ಸಾವು
ಇಂಜಿನಿಯರಿಂಗ್ ಪದವಿ ಪಡೆದಿರುವ ಪುಣ್ಯ ಪೈಲಟ್ ಆಗಬೇಕೆಂದು ಹೈದರಾಬಾದ್ನಲ್ಲಿ ಒಂದು ವರ್ಷದ ಸೇನಾ ತರಬೇತಿ ಪಡೆದರು. 2019ರಲ್ಲಿ ಟ್ರೈನಿ ಪೈಲಟ್ ಆಗಿ ಭಾರತೀಯ ವಾಯುಸೇನೆಗೆ ಆಯ್ಕೆಯಾದರು. ಕೊನೆಗೂ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಯುದ್ಧ ವಿಮಾನದ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಮನಸು ಮಾಡಿದರೆ ಏನು ಬೇಕಾದರೂ ಸಾಧಿಸಲು ಸಾಧ್ಯ ಎಂಬುದನ್ನು ಕೊಡಗಿನ ಈ ಯುವತಿ ಸಾಬೀತುಪಡಿಸಿ, ಮಾದರಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ