• Home
  • »
  • News
  • »
  • state
  • »
  • ಮೊದಲ ಬಾರಿಗೆ ಶಾಸಕರಾದವರು ಸಚಿವರಾಗಿರುವಾಗ ನನಗೆ ಆಸೆ ಇರುವುದಿಲ್ಲವೇ?; ಅಪ್ಪಚ್ಚು ರಂಜನ್

ಮೊದಲ ಬಾರಿಗೆ ಶಾಸಕರಾದವರು ಸಚಿವರಾಗಿರುವಾಗ ನನಗೆ ಆಸೆ ಇರುವುದಿಲ್ಲವೇ?; ಅಪ್ಪಚ್ಚು ರಂಜನ್

ಅಪ್ಪಚು ರಂಜನ್

ಅಪ್ಪಚು ರಂಜನ್

ದೇಶದಲ್ಲಿ ಕೊರೋನಾ ಸಮಸ್ಯೆ ಇರುವುದರಿಂದ ಸರ್ಕಾರ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಹೀಗಾಗಿ ಸುಮ್ಮನಾಗಿದ್ದೇನೆ. ಮುಂದೆ ನಾನೂ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತೇನೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.

  • Share this:

ಕೊಡಗು (ಮೇ 29): ಸಚಿವ ಸ್ಥಾನ ಸಿಗದ ಹಿರಿಯ ಶಾಸಕರಿಗೆ ಅಸಮಾಧಾನ ಇದ್ದೇ ಇರುತ್ತದೆ. ಮೊದಲ ಬಾರಿ ಶಾಸಕನಾದವನಿಗೆ ಸಚಿವ ಸ್ಥಾನ ಸಿಗುತ್ತದೆ. ಹೀಗಿರುವಾಗ ಐದೈದು ಬಾರಿ ಎಂಎಲ್‍ಎಗಳಾಗಿರುವ ನಮಗೆ ಸಚಿವ ಸ್ಥಾನದ ಆಕಾಂಕ್ಷೆ ಇರುವುದಿಲ್ಲವೇ? ಎಂದು ಪ್ರಶ್ನಿಸುವ ಮೂಲಕ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅಸಮಾಧಾನ ಹೊರಹಾಕಿದ್ದಾರೆ.


ನಾನೂ ಕೂಡ ಸಚಿವ ಆಕಾಂಕ್ಷಿಯೇ, ಲಾಬಿ ಮಾಡದಿದ್ದರೆ ಸಚಿವ ಸ್ಥಾನ ಸಿಗುವುದಿಲ್ಲ. ಸಚಿವ ಸ್ಥಾನ, ಅಧಿಕಾರಿ ಸಿಗಬೇಕಾದರೆ ಲಾಬಿ ಮಾಡಲೇಬೇಕು. ಅಷ್ಟಕ್ಕೂ ಲಾಬಿ ಮಾಡುವುದು ಪಕ್ಷ ವಿರೋಧಿ ಚಟುವಟಿಕೆ ಅಲ್ಲ ಎಂದು ಅವರು ಸಮರ್ಥಿಸಿಕೊಂಡರು. ನಾನು ಉಮೇಶ್ ಕತ್ತಿಯವರೊಂದಿಗಾಗಲಿ, ಬೇರೆ ಯಾರೊಂದಿಗೂ ಗುರುತಿಸಿಕೊಂಡಿಲ್ಲ. ಪ್ರತ್ಯೇಕವಾಗಿ ಯಾವ ಸಭೆಯನ್ನು ನಡೆಸಿಲ್ಲ. ಆದರೆ, ಸಚಿವ ಸಂಪುಟ ವಿಸ್ತರಣೆ ಮಾಡುವಾಗ ರಾಜ್ಯಾಧ್ಯಕ್ಷರು, ಸಿಎಂ ಇವರನ್ನು ನಾನು ನೇರವಾಗಿ ಭೇಟಿ ಮಾಡಿ ಲಾಬಿ ಮಾಡುತ್ತೇನೆ ಎಂದಿದ್ದಾರೆ.


ಸದ್ಯ ದೇಶದಲ್ಲಿ ಕೊರೋನಾ ಸಮಸ್ಯೆ ಇರುವುದರಿಂದ ಸರ್ಕಾರ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಹೀಗಾಗಿ ಸುಮ್ಮನಾಗಿದ್ದೇನೆ. ಮುಂದೆ ನಾನೂ ಕೂಡ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತೇನೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ನೇರವಾಗಿ  ಹೇಳಿದ್ದಾರೆ.


ಇದನ್ನೂ ಓದಿ: ಉಪ್ಪು, ರೊಟ್ಟಿ ತಿಂದು ನಮ್ಮೂರಲ್ಲೇ ಜೀವನ ಮಾಡ್ತೇವೆ: ವಲಸೆ ಕಾರ್ಮಿಕರ ಅಸಹಾಯಕತೆ

Published by:Sushma Chakre
First published: