ನಿಮ್ಮ ಪರಿಚಯಸ್ಥರ ಮಗ ಎಂದು ಹೇಳಿಕೊಂಡು Call ಮಾಡ್ತಾನೆ; ನಂತರ Accountನಲ್ಲಿದ್ದ ಹಣಕ್ಕೆ ಬೀಳುತ್ತೆ ಕನ್ನ!

ಕುಶಾಲನಗರ ತಾಲ್ಲೂಕಿನ ಹಲವೆಡೆ ಹಲವರ ಬಳಿ 20 ಸಾವಿರದಿಂದ 70 ಸಾವಿರದವರೆಗೆ ಹಣ ಕೇಳಿ ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ.  

ನಕಲಿ ಕರೆ ಮೂಲಕ ಹಣ ವಂಚನೆ

ನಕಲಿ ಕರೆ ಮೂಲಕ ಹಣ ವಂಚನೆ

  • Share this:
ಕೊಡಗು : ಮನೆಗೆ ಕನ್ನ (House Theft) ಹಾಕೋದು ನೋಡಿರ್ತೀರಿ, ಪಿಕ್ ಪಾಕೆಟ್ (Pickpocket) ಮಾಡೋದು ಕೇಳಿರ್ತೀರಿ. ಆದ್ರೆ ಇಲ್ಲಿ ಪರಿಚಯಸ್ಥರ ಹೆಸರು ಹೇಳಿಕೊಂಡು, ರಾಜಕೀಯ ಮುಖಂಡರ (Political Leaders) ಹೆಸರು ಹೇಳಿಕೊಂಡು ಕೇವಲ ಫೋನ್ ಕಾಲ್ (Fake Call) ಮೂಲಕವೇ ಲಕ್ಷಾಂತರ ರೂಪಾಯಿ ಹಣ ಲಪಟಾಯಿಸಿದ್ದಾನೆ ಭೂಪ.  ಅಪರಿಚಿತ ವ್ಯಕ್ತಿಯೊಬ್ಬ ಕೇವಲ ಫೋನ್ ಕಾಲ್ ಮೂಲಕವೇ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಹಲವೆಡೆ ಹಲವರ ಬಳಿ 20 ಸಾವಿರದಿಂದ 70 ಸಾವಿರದವರೆಗೆ ಹಣ ಕೇಳಿ ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ.  

ಪರಿಚಯಸ್ಥರಂತೆ ಕರೆ ಮಾಡಿ ಯಾಮಾರಿಸ್ತಾನೆ 

ಪೆಟ್ರೋಲ್ ಬಂಕ್ ಮಾಲೀಕರಿಗೆ ಕರೆ ಮಾಡಿರುವ ಅಪರಿಚಿತ 'ಅಣ್ಣಾ ನಾನು ಕಲ್ಲುಕೋರೆ ಮುತ್ತಣ್ಣನ ಮಗ. ಗಾಡಿ ಸಮಸ್ಯೆ ಆಗಿದೆ, ಅರ್ಜೆಂಟಾಗಿ 70 ಸಾವಿರ ಬೇಕು. ಇನ್ನು ಅರ್ಧಗಂಟೆಯಲ್ಲಿ ಕೊಟ್ಟುಬಿಡ್ತೇನೆ. ಆಟೋ ಡ್ರೈವರ್ ಬರ್ತಾನೆ, ಅವನ ಹತ್ತಿರ ಕೊಡಿ ಅಂತ ಹೇಳಿದ್ದಾನೆ.' ಇದನ್ನು ನಂಬಿದ ಪವನ್ ಕುಮಾರ್ ಎನ್ನುವವರು ನನ್ನ ಹತ್ತಿರ ಅಷ್ಟಿಲ್ಲ, 65 ಸಾವಿರ ಇದೆ ಕೊಡ್ತೇನೆ ಅಂತ ಹೇಳಿ ಆಟೋ ಡ್ರೈವರ್ ಜೊತೆ ಕೊಟ್ಟು ಕಳುಹಿಸಿದ್ದಾರೆ. ಹಣ ಈಸ್ಕೊಂಡು ಬಂದ ಆಟೋ ಡ್ರೈವರ್ ತನ್ನ ಆಟೋ ಬಾಡಿಗೆ ಸಣ್ಣ ಅಮೌಂಟ್ ಇಟ್ಟುಕೊಂಡು ಉಳಿದ ಹಣವನ್ನು ಅಪರಿಚಿತ ಕಳುಹಿಸಿದ್ದ ಅಕೌಂಟ್ ನಂಬರಿಗೆ ಜಮಾ ಮಾಡಿದ್ದಾನೆ. ಇಷ್ಟಾದರೂ ಯಾರಿಗೂ ಎಲ್ಲೂ ಡೌಟ್ ಬಂದಿಲ್ಲ.

ಕರೆ ಮಾಡಿ ಹಣ ಕೇಳೋದೇ ಇವನ ಬ್ಯುಸಿನೆಸ್​ 

ಎಲ್ಲಕ್ಕಿಂತ ಮೊದಲು ಫರ್ಟಿಲೈಸರ್ ಅಂಗಡಿಯಲ್ಲಿ ಕೆಲಸ ಮಾಡುವ ಪ್ರಜ್ವಲ್ ಎಂಬ ಹುಡುಗನಿಗೆ ಕರೆ ಮಾಡಿರುವ ಅಪರಿಚಿತ ನಾನು ಮುತ್ತಣ್ಣನ ಮಗ. ನನಗೆ 20 ಸಾವಿರ ರೂಪಾಯಿ ಅಗತ್ಯವಿದೆ ಎಂದು ಕೇಳಿದ್ದಾನೆ'. ಪ್ರಜಲ್ ಈಗ ಓನರ್ ಇಲ್ಲ, ಹಣ ಇಲ್ಲ ಎಂದಿದ್ದಾನೆ. ಅಷ್ಟು ಹೇಳಿದ್ರು, ಅಪರಿಚಿತ ಮಾತ್ರ ನಾನು ಇದೇ ಅಂಗಡಿಯಲ್ಲೇ ಅಲ್ವಾ ಎಲ್ಲಾ ಔಷಧಿ ಗೊಬ್ಬರಗಳನ್ನು ತೆಗೆದುಕೊಳ್ಳೋದು. ಇನ್ನರ್ಧ ಗಂಟೆಯಲ್ಲಿ ವಾಪಸ್ ಕೊಟ್ಟು ಬಿಡ್ತೇನೆ ಕೊಡು ಅಂತಾ ದುಂಬಾಲು ಹಾಕಿದ್ದಾನೆ. ಇದನ್ನು ನಂಬಿದ ಯುವಕ ವ್ಯಾಪಾರ ಮಾಡಿದ ದುಡ್ಡು ಇಲ್ಲ. ಆದರೆ ನನ್ನ ಸಂಬಳದ ಹಣ ಮಾತ್ರ ಇದೆ ಎಂದು ತನ್ನ ಸಂಬಳದ 12 ಸಾವಿರವನ್ನು ಆಟೋ ಡ್ರೈವರ್ ಒಬ್ಬರ ಬಳಿ ಕೊಟ್ಟು ಕಳುಹಿಸಿದ್ದಾನೆ. ಆದರೆ ಎರಡು ದಿನವಾದರೂ ಹಣ ವಾಪಸ್ ಬರದಿದ್ದಾಗ ಅಪರಿಚಿತ ಕಾಲ್ ಮಾಡುತ್ತಿದ್ದ ನಂಬರ್ ಗೆ ಕರೆ ಮಾಡಿ ಹಣ ಕೊಡುವಂತೆ ಒತ್ತಾಯಿಸಿದ್ದಾನೆ. ಆಗ ಅವನು ನೀನು ಆಟೋ ಡ್ರೈವರ್ ಒಬ್ಬನನ್ನು ಕಳುಹಿಸು ಹಣ ಸಿಗುತ್ತದೆ ಎಂದು ಹೇಳಿದ್ದಾನೆ.

ಬ್ಯಾಂಕಿನ ಸಿಸಿಟಿವಿಯಲ್ಲಿ ಸೆರೆ

ಅಪರಿಚಿತ ಹೇಳಿದಂತೆ ಆಟೋ ಚಾಲಕ ನಂಜರಾಯಪಟ್ಟಣದ ಸಹಕಾರ ಬ್ಯಾಂಕಿಗೆ ಹೋಗಿ ಮುಖ್ಯಾಧಿಕಾರಿ ಜಗದೀಶ್ ಅವರಿಗೆ ಫೋನ್ ಕೊಟ್ಟಿದ್ದಾರೆ. ಆಗ 'ಅಂಕಲ್ ನಾನು ರತೀಶ್ ಅವರ ಮಗ ನಿಶು. ನಾನು ಯಾರದೋ ಲಾಯರ್ ಕಾರಿಗೆ ಆ್ಯಕ್ಸಿಡೆಂಟ್ ಮಾಡಿದ್ದೇನೆ. ಕೇಸ್ ಬೇಡ ಅಂತ ಸೆಟ್ಲುಮೆಂಟ್ ಮಾಡಿಕೊಂಡಿದ್ದೇನೆ. ನನ್ನ ಹತ್ತಿರವೂ ಸ್ವಲ್ಪ ಹಣವಿದೆ. ಇನ್ನು 20 ಸಾವಿರ ಸಾಲ್ಟೇಜ್ ಆಗಿದೆ. ಅಪ್ಪನಿಗೆ ಏನೂ ಹೇಳೋದಕ್ಕೆ ಹೋಗ್ಬೇಡಿ. ಇನ್ನೇನು ಸ್ವಲ್ಪಹೊತ್ತಿನಲ್ಲೇ ಬಂದು ವಾಪಸ್ ಕೊಟ್ಟು ಬಿಡ್ತೇನೆ, ಕೊಡಿ ಅಂಕಲ್' ಅಂತ ತಾನು ಕಳುಹಿಸಿದ್ದ ಆಟೋ ಡ್ರೈವರ್ ಫೋನ್ ಮುಖಾಂತರ ನಂಜರಾಯಪಟ್ಟಣದ ಸಹಕಾರ ಬ್ಯಾಂಕ್ ಮುಖ್ಯಾಧಿಕಾರಿ ಜೊತೆಗೆ ಆ ಖತರ್ನಾಕ್ ಮಾತನಾಡಿದ್ದಾನೆ. ಹಿಂದೆ ಮುಂದೆ ಯೋಚನೆ ಮಾಡದೆ ತನ್ನ ಬಳಿ ಇದ್ದ 22 ಸಾವಿರ ಹಣವನ್ನು ಅಲ್ಲಿಗೆ ಬಂದಿದ್ದ ಆಟೋ ಚಾಲಕನ ಜೊತೆಗೆ ಸಹಕಾರ ಬ್ಯಾಂಕ್ ಮುಖ್ಯಾಧಿಕಾರಿ ಜಗದೀಶ್ ಕೊಟ್ಟು ಕಳುಹಿಸಿದ್ದಾರೆ. ಅದೆಲ್ಲವೂ ಸಹಕಾರ ಬ್ಯಾಂಕಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Mangaluru: ಯುವಕ-ಯುವತಿಯನ್ನು ಹಿಂಬಾಲಿಸಿ ನೈತಿಕ ಪೊಲೀಸ್ ಗಿರಿ; ಆರು ಜನರ ಬಂಧನ

ಡ್ರೈವರ್  ಆ ಹಣವನ್ನು ಪ್ರಜ್ವಲ್ ಗೆ ತಂದುಕೊಟ್ಟಿದ್ದಾನೆ. ಪ್ರಜ್ವಲ್ ತನ್ನ 12 ಸಾವಿರ ರೂಪಾಯಿ ಇಟ್ಟುಕೊಂಡು 10 ಸಾವಿರ ರೂಪಾಯಿಯನ್ನು ಅಪರಿಚಿತನ ಅಕೌಂಟ್ ಗೆ ಹಾಕಿದ್ದಾನೆ. ಇದಾದ ಕೆಲವೊತ್ತಿನ ಬಳಿಕ ಬ್ಯಾಂಕಿನ ಮುಖ್ಯಾಧಿಕಾರಿ ಜಗದೀಶ್ ಗೆ ಅನುಮಾನ ಬಂದು ವಿಚಾರಿಸಿದಾಗ ಇದೆಲ್ಲವೂ ಯಾರೋ ಕಿಡಿಗೇಡಿ ಮಾಡಿರುವ ದೋಖಾ ಎನ್ನೋದು ಗೊತ್ತಾಗಿದೆ. ಹೀಗೆ ಎಲ್ಲರ ಬಳಿ ಹಣ ವಸೂಲಿ ಮಾಡಿದ ಆತ ಬಳಿಕ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಒಟ್ಟಿನಲ್ಲಿ ಪರಿಚಯಸ್ಥರ ಮಗನ ಹೆಸರು ಹೇಳಿಕೊಂಡು ಲಕ್ಷಾಂತರ ರೂಪಾಯಿ ಹಣ ದೋಚಿದ್ದರೆ, ಫೋನ್ ಕಾಲ್ ನಂಬಿ ಹಣಕೊಟ್ಟವರು ಕಂಗಾಲಾಗಿದ್ದಾರೆ.
Published by:Kavya V
First published: